Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಮಾಹೆ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಅವರಿಗೆ ಎಫ್‌ಐಸಿಸಿಐ ‘ಲೆಜೆಂಡರಿ ಇನ್‌ಸ್ಟಿಟ್ಯೂಷನ್ ಬಿಲ್ಡರ್ ಅವಾರ್ಡ್ 2026’ ಗೌರವ

Dhrishya News by Dhrishya News
10/10/2026
in ಮುಖಪುಟ
0
ಮಾಹೆ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಅವರಿಗೆ ಎಫ್‌ಐಸಿಸಿಐ ‘ಲೆಜೆಂಡರಿ ಇನ್‌ಸ್ಟಿಟ್ಯೂಷನ್ ಬಿಲ್ಡರ್ ಅವಾರ್ಡ್ 2026’ ಗೌರವ
0
SHARES
1
VIEWS
Share on FacebookShare on Twitter

ಮಣಿಪಾಲ, ಅಕ್ಟೋಬರ್ 10, 2026: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಉತ್ಕೃಷ್ಟ ಸಂಸ್ಥೆ ಸ್ಥಾನಮಾನ ಹೊಂದಿರುವ ಪರಿಗಣಿತ ವಿಶ್ವವಿದ್ಯಾಲಯ (ಮಾಹೆ) ಕುಲಾಧಿಪತಿಗಳಾದ ಡಾ. ರಾಮದಾಸ್ ಎಂ. ಪೈ ಅವರು ಫೆಡರೇಷನ್ ಆಫ್ ಇಂಡಿಯನ್ ಛೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್ಐಸಿಸಿಐ) ನೀಡುವ ಪ್ರತಿಷ್ಠಿತ ‘ಲೆಜೆಂಡರಿ ಇನ್‌ಸ್ಟಿಟ್ಯೂಷನ್ ಬಿಲ್ಡರ್ ಪ್ರಶಸ್ತಿ 2026’ಗೆ ಭಾಜನರಾಗಿದ್ದಾರೆ.

ನವದೆಹಲಿಯಲ್ಲಿ ಇತ್ತೀಚೆಗೆ ನಡೆದ 21ನೇ (ಎಫ್ ಐಸಿಸಿಐ) ಉನ್ನತ ಶಿಕ್ಷಣ ಶೃಂಗಸಭೆಯ ಅಂಗವಾಗಿ ಆಯೋಜಿಸಲಾದ 12ನೇ ಎಫ್‌ಐಸಿಸಿಐ ಉನ್ನತ ಶಿಕ್ಷಣ ಶ್ರೇಷ್ಠತಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಸರ್ಕಾರದ ಮಾಜಿ ಸಚಿವರಾದ ಡಾ. ಮುರಳಿ ಮನೋಹರ ಜೋಶಿ ಅವರು ಪ್ರಶಸ್ತಿ ಪ್ರದಾನ ಮಾಡಿದರು., ಡಾ. ರಾಮದಾಸ್‌ ಎಂ. ಪೈ ಅವರ ಪರವಾಗಿ ಮಾಹೆಯ ಕುಲಪತಿ ಡಾ. ಶರತ್‌ ಕೆ. ರಾವ್‌ ಅವರು ಈ ಗೌರವವನ್ನು ಸ್ವೀಕರಿಸಿದರು.

ಶಿಕ್ಷಣ, ಆರೋಗ್ಯ ಸೇವೆ, ಸಂಶೋಧನೆ ಹಾಗೂ ಸಮಾಜಪರ ಕಾರ್ಯಗಳ ಮೂಲಕ ಸದೃಢ ರಾಷ್ಟ್ರನಿರ್ಮಾಣಕ್ಕೆ ಡಾ. ರಾಮದಾಸ್ ಎಂ. ಪೈ ಅವರು ನೀಡಿರುವ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಶೈಕ್ಷಣಿಕ, ಆರೋಗ್ಯಸೇವಾ ಸಂಸ್ಥೆಗಳ ನಿರ್ಮಾತೃಗಳಲ್ಲಿ ಅಗ್ರಪಂಕ್ತಿಯ ಮನ್ನಣೆ ಪಡೆದಿರುವ ಡಾ. ರಾಮದಾಸ್‌ ಪೈ ಅವರು, ಮಣಿಪಾಲಕ್ಕೆ ಜಾಗತಿಕ ಮಟ್ಟದ ಸ್ಥಾನಮಾನವನ್ನು ದೊರಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಾ. ರಾಮದಾಸ ಪೈ ಅವರು 2018ರಲ್ಲಿ ಎಫ್‌ಐಸಿಸಿಐ ಯ ಜೀವಮಾನ ಸಾಧನೆ’ ಪ್ರಶಸ್ತಿಗೆ ಪಾತ್ರರಾಗಿರುವುದು ಇಲ್ಲಿ ಉಲ್ಲೇಖನೀಯವಾಗಿದೆ.

Dr. Ramdas M. Pai, Padma Bhushan awardee and Chancellor of MAHE, was honoured with the FICCI Legendary Institution Builder Award 2026 at the 21st FICCI Higher Education Summit in New Delhi. Former Union Minister Shri Murli Manohar Joshi presented the award, which was received on Dr. Pai’s behalf by Dr. Sharath K. Rao, Vice Chancellor, MAHE.

ಮಣಿಪಾಲದ ಮಹಾಶಿಲ್ಪಿ ಡಾ. ತೋನ್ಸೆ ಮಾಧವ ಅನಂತ ಪೈಯವರ ಪುತ್ರನಾಗಿ ಜನಿಸಿದ ಡಾ. ರಾಮದಾಸ ಪೈಯವರು ತಮ್ಮ ತಂದೆಯವರ ಕರ್ತೃತ್ವ ಶಕ್ತಿಯಿಂದ ಪ್ರೇರಣೆ ಪಡೆದವರು. ಶಿಕ್ಷಣ ಮತ್ತು ಆರೋಗ್ಯಸೇವೆಯ ಮೂಲಕ ಸಾಮಾಜಿಕ ಸುಧಾರಣೆ ಸಾಧ್ಯ ಎಂಬ ಅಚಲ ವಿಶ್ವಾಸದಲ್ಲಿ ಕಾರ್ಯಪ್ರವೃತ್ತರಾಗಿದ್ದ ಡಾ. ಮಾಧವ ಪೈಯವರ ದಾರ್ಶನಿಕ ವ್ಯಕ್ತಿತ್ವದ ಮಾರ್ಗದರ್ಶನದಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾಗಿ ಡಾ. ರಾಮದಾಸ ಪೈ ವೃತ್ತಿಜೀವನ ಆರಂಭಿಸಿದರು. ಶಿಕ್ಷಣ ಸಂಸ್ಥೆಗಳನ್ನು ಮತ್ತು ವೈದ್ಯಕೀಯ ಸಂಸ್ಥೆಗಳನ್ನು ಕಟ್ಟುವ ತೀರ್ಥರೂಪರ ಕಾಯಕದಲ್ಲಿ ಕೈ ಜೋಡಿಸಿದರು. 1979ರಲ್ಲಿ ಡಾ. ಮಾಧವ ಪೈಯವರ ನಿಧನದ ಬಳಿಕ ಮಣಿಪಾಲ ಸಮೂಹ ಸಂಸ್ಥೆಗಳ ವಿಸ್ತರಣೆಯ ನೇತೃತ್ವ ವಹಿಸಿ, ತಮ್ಮ ದೂರದೃಷ್ಟಿ, ದೃಢಸಂಕಲ್ಪ ಮತ್ತು ಕ್ರಿಯಾಶೀಲತೆಯಿಂದ ಶೈಕ್ಷಣಿಕ ವಿಭಾಗಗಳು, ಆರೋಗ್ಯ ಸೇವಾಸಂಸ್ಥೆಗಳನ್ನು ವಿಸ್ತರಿಸಿದರು. ಡಾ. ರಾಮದಾಸ ಪೈಯವರ ಪ್ರಯತ್ನದ ಫಲವಾಗಿ ಮಣಿಪಾಲ ಸಮೂಹ ಸಂಸ್ಥೆಗಳು ನೇಪಾಳ, ಮಲೇಷ್ಯಾ, ಸಂಯುಕ್ತ ಅರಬ್ ಎಮಿರೇಟ್ಸ್ ಹಾಗೂ ಆಂಟಿಗುವಾಕ್ಕೆ ವಿಸ್ತರಣೆಗೊಂಡವು. ಡಾ. ಪೈಯವರು ಮಣಿಪಾಲ ಫೌಂಡೇಶನ್ ಮೂಲಕ ಅವರು ಸಮಾಜಸೇವಾ ಉಪಕ್ರಮಗಳು ಸಾಮುದಾಯಿಕ ಅಭಿವೃದ್ಧಿಗೆ ಕಾರಣವಾಗಿದ್ದು, ಶಿಕ್ಷಣ, ಆರೋಗ್ಯ ಸೇವೆ, ಅಭಿವೃದ್ಧಿ ಹಾಗೂ ಅಗತ್ಯ ಸೇವೆಗಳಿಂದ ವಂಚಿತವಾಗಿರುವ ಸಮುದಾಯಗಳು ಈ ಉಪಕ್ರಮಗಳ ಫಲಾನುಭವಿಗಳಾಗಿವೆ. ಶಿಕ್ಷಣ, ವೈದ್ಯಕೀಯ, ತಂತ್ರಜ್ಞಾನ ಕ್ಷೇತ್ರಗಳ ಬೃಹತ್‌ ಸಂಸ್ಥೆಯಾಗಿ ರೂಪುಗೊಂಡ ಮಣಿಪಾಲ್‌ ಅಕಾಡೆಮಿ ಆಫ್‌ ಹೈ ಯರ್‌ ಎಜುಕೇಶನ್‌ (ಮಾಹೆ) ಸಂಸ್ಥೆಯು 1993 ರಲ್ಲಿ ಡೀಮ್ಡ್‌ ಟು ಬಿ ಯೂನಿವರ್ಸಿಟಿ ಸ್ಥಾನಮಾನ ಗಳಿಸಿರುವುದು ಮತ್ತು 2020ರಲ್ಲಿ ಇನ್‌ಸ್ಟಿಟ್ಯೂಟ್‌ ಆಫ್‌ ಎಮಿನೆನ್ಸ್‌ ಮಾನ್ಯತೆಯನ್ನು ಪಡೆದಿರುವುದು ಡಾ. ರಾಮದಾಸ ಪೈಯವರ ನಾಯಕತ್ವದ ಫಲವಾಗಿದೆ. ಪ್ರತಿವರ್ಷ ಮಾಹೆಯು ತನ್ನ ಶೈಕ್ಷಣಿಕ ಗುಣಮಟ್ಟದ ಮೂಲಕ ಜಾಗತಿಕ ಮಟ್ಟದ ಶ್ರೇಯಾಂಕದಲ್ಲಿ ಏರಿಕೆ ಕಾಣುತ್ತಿರುವುದು ಕೂಡ ಗಮನಾರ್ಹ ಸಂಗತಿಯಾಗಿದೆ.
ಡಾ. ರಾಮದಾಸ್‌ ಪೈಯವರು ಎಫ್‌ಐಸಿಸಿಐ ಪ್ರಶಸ್ತಿಗೆ ಭಾಜನರಾಗಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಮಾಹೆಯ ಕುಲಪತಿ ಡಾ. ಶರತ್ ಕೆ ರಾವ್ ಅವರು ಜ್ಞಾನಪ್ರಸರಣ, ಆರೋಗ್ಯ ಸೇವೆ, ಸಂಶೋಧನೆ ಮತ್ತು ಸೇವಾಬದ್ಧತೆಯ ಮೂಲಕ ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡುವ ಸಂಸ್ಥೆಗಳ ನಿರ್ಮಾತೃನ ಬದುಕಿನ ಬದ್ಧತೆಗೆ ಸಂದ ಗೌರವವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಡಾ. ಪೈ ಅವರು ಈ ಹಿಂದೆ ಪದ್ಮಭೂಷಣ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳಿಗೆ ಪಾತ್ರರಾಗಿದ್ದು, ಭಾರತ ಮತ್ತು ವಿದೇಶಗಳಲ್ಲಿಯೂ ಹಲವು ಮನ್ನಣೆಗಳಿಗೆ ಪಾತ್ರರಾಗಿದ್ದಾರೆ.

ದೂರದೃಷ್ಟಿ, ನಾಯಕತ್ವ ಹಾಗೂ ನಿರಂತರ ಪ್ರಯತ್ನಗಳಿಂದ ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಶಾಶ್ವತ ಸ್ಥಾನಮಾನ ಹೊಂದಿರುವ ಸಂಸ್ಥೆಗಳನ್ನು ಸ್ಥಾಪಿಸಿರುವ ಸಾಧಕ ವ್ಯಕ್ತಿಗಳನ್ನು ಗುರುತಿಸಿ ಎಫ್‌ಐಸಿಸಿಐ ‘ಲೆಜೆಂಡರಿ ಇನ್‌ಸ್ಟಿಟ್ಯೂಷನ್ ಬಿಲ್ಡರ್ ಅವಾರ್ಡ್ 2026’ ನೀಡಿ ಗೌರವಿಸುತ್ತದೆ.

Previous Post

ಉಡುಪಿ ದಸರಾ 2026: ಇಂದು ಸಂಜೆ ವಿದ್ಯುದ್ದೀಪಾಲಂಕಾರ ಉದ್ಘಾಟನೆ 

Next Post

ಭಾರತದ 25 ವರ್ಷಗಳ ಜಲ ಆಡಳಿತ ಪಯಣ: ಗುಜರಾತ್‌ನಿಂದ ಆರಂಭಿಸಿ ರಾಷ್ಟ್ರಮಟ್ಟದ ಸಾಧನೆ ಬಿಂಬಿಸುವ ನೂತನ ಅಧ್ಯಯನ ವರದಿ ಬಿಡುಗಡೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಭಾರತದ 25 ವರ್ಷಗಳ ಜಲ ಆಡಳಿತ ಪಯಣ: ಗುಜರಾತ್‌ನಿಂದ ಆರಂಭಿಸಿ ರಾಷ್ಟ್ರಮಟ್ಟದ ಸಾಧನೆ ಬಿಂಬಿಸುವ ನೂತನ ಅಧ್ಯಯನ ವರದಿ ಬಿಡುಗಡೆ

ಭಾರತದ 25 ವರ್ಷಗಳ ಜಲ ಆಡಳಿತ ಪಯಣ: ಗುಜರಾತ್‌ನಿಂದ ಆರಂಭಿಸಿ ರಾಷ್ಟ್ರಮಟ್ಟದ ಸಾಧನೆ ಬಿಂಬಿಸುವ ನೂತನ ಅಧ್ಯಯನ ವರದಿ ಬಿಡುಗಡೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಭಾರತದ 25 ವರ್ಷಗಳ ಜಲ ಆಡಳಿತ ಪಯಣ: ಗುಜರಾತ್‌ನಿಂದ ಆರಂಭಿಸಿ ರಾಷ್ಟ್ರಮಟ್ಟದ ಸಾಧನೆ ಬಿಂಬಿಸುವ ನೂತನ ಅಧ್ಯಯನ ವರದಿ ಬಿಡುಗಡೆ

ಭಾರತದ 25 ವರ್ಷಗಳ ಜಲ ಆಡಳಿತ ಪಯಣ: ಗುಜರಾತ್‌ನಿಂದ ಆರಂಭಿಸಿ ರಾಷ್ಟ್ರಮಟ್ಟದ ಸಾಧನೆ ಬಿಂಬಿಸುವ ನೂತನ ಅಧ್ಯಯನ ವರದಿ ಬಿಡುಗಡೆ

10/10/2026
ಮಾಹೆ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಅವರಿಗೆ ಎಫ್‌ಐಸಿಸಿಐ ‘ಲೆಜೆಂಡರಿ ಇನ್‌ಸ್ಟಿಟ್ಯೂಷನ್ ಬಿಲ್ಡರ್ ಅವಾರ್ಡ್ 2026’ ಗೌರವ

ಮಾಹೆ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಅವರಿಗೆ ಎಫ್‌ಐಸಿಸಿಐ ‘ಲೆಜೆಂಡರಿ ಇನ್‌ಸ್ಟಿಟ್ಯೂಷನ್ ಬಿಲ್ಡರ್ ಅವಾರ್ಡ್ 2026’ ಗೌರವ

10/10/2026
ಉಡುಪಿ ದಸರಾ 2026: ಇಂದು ಸಂಜೆ ವಿದ್ಯುದ್ದೀಪಾಲಂಕಾರ ಉದ್ಘಾಟನೆ 

ಉಡುಪಿ ದಸರಾ 2026: ಇಂದು ಸಂಜೆ ವಿದ್ಯುದ್ದೀಪಾಲಂಕಾರ ಉದ್ಘಾಟನೆ 

10/10/2026
ಕಾರ್ಕಳ ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿ ಮಹಿಳಾ ಮೋರ್ಚಾ ಖಂಡನೆ; ಜಿಲ್ಲಾಧಿಕಾರಿಗೆ ಮನವಿ

ಕಾರ್ಕಳ ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿ ಮಹಿಳಾ ಮೋರ್ಚಾ ಖಂಡನೆ; ಜಿಲ್ಲಾಧಿಕಾರಿಗೆ ಮನವಿ

10/10/2026

Recent News

imunify-bot-check