Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಉಡುಪಿ :ಸ್ವಚ್ಛತೆಗೆ ಆದ್ಯತೆ ನೀಡಿದಲ್ಲಿ ಮಾತ್ರ ನಾವು ಉತ್ತಮ ಆರೋಗ್ಯ ಹೊಂದಲು ಸಾಧ್ಯ: ಜಿಲ್ಲಾಧಿಕಾರಿ ಕೆ ವಿದ್ಯಾ ಕುಮಾರಿ..!!

Dhrishya News by Dhrishya News
01/10/2023
in ಕರಾವಳಿ, ಮುಖಪುಟ, ಸುದ್ದಿಗಳು
0
0
SHARES
11
VIEWS
Share on FacebookShare on Twitter

ಉಡುಪಿ :ಅಕ್ಟೋಬರ್ 01:ದ್ರಶ್ಯ ನ್ಯೂಸ್ : ನಮ್ಮ ಉತ್ತಮ ಆರೋಗ್ಯಕ್ಕೆ ವೈಯಕ್ತಿಕ ಸ್ವಚ್ಛತೆ, ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛತೆ ಸೇರಿದಂತೆ ಎಲ್ಲಾ ರೀತಿಯ ಸ್ವಚ್ಛತೆ ಬಹಳ ಅವಶ್ಯಕ . ನಮ್ಮ ದೈನಂದಿನ ಜೀವನದಲ್ಲಿ ಶುಚಿತ್ವಕ್ಕೆ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ ಕೆ. ವಿದ್ಯಾ ಕುಮಾರಿ ಅವರು ತಿಳಿಸಿದರು.

ಅವರು ಇಂದು ಉಡುಪಿ ತಾಲ್ಲೂಕಿನ ಬಡ ನಿಡಿಯೂರು ಹಾಗೂ ಕೆಮ್ಮಣ್ಣು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸರೆ ಬೀಚ್ ನಲ್ಲಿ ಮಹಾತ್ಮ ಗಾಂಧೀಜಿಯವರ ಜನ್ಮದಿನ ಸ್ಮರಣಾರ್ಥ ವಾಗಿ ಆಯೋಜಿಸಲಾಗಿರುವ ಸ್ವಚ್ಛತಾ ಹೀ ಸೇವಾ ಆಂದೋಲನ ಅಂಗವಾಗಿ ನಡೆದ ಬೃಹತ್ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ ಮಾತನಾಡುತ್ತಿದ್ದರು.

ಸ್ವಚ್ಛತೆ ಸ್ವಸ್ಥ ಸಮಾಜದ ಮೂಲಾಧಾರವಾಗಿದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡಾಗ ಮಾತ್ರ ನಾವು ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದರು.

ನಾವು ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು. ಬಳಸಿದ ಪ್ಲಾಸ್ಟಿಕ್ ನ್ನು ಅಲ್ಲಲ್ಲಿ ಎಸೆಯುವ ಬದಲು ವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕು. ಇಲ್ಲವಾದಲ್ಲಿ ನಮ್ಮ ಪರಿಸರಕ್ಕೆ ಸೇರಿ ಮಾನವ ಸೇರಿದಂತೆ ಜೀವಸಂಕುಲಗಳ ಅವನತಿಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗಿ ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟು ಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ .ಹೆಚ್ ಮಾತನಾಡಿ ಇಂದು ಬೀಚ್ ಸ್ವಚ್ಛತೆಯಲ್ಲಿ ಅಪರ ಪ್ರಮಾಣದ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಸಂಗ್ರಹಣೆ ಮಾಡಿದ್ದೇವೆ ಇದಕ್ಕೆಲ್ಲ ಕಾರಣ ತ್ಯಾಜ್ಯವನ್ನು ಎಲ್ಲಂದರಲ್ಲಿ ಹಾಕಿರುವುದು ,ತ್ಯಾಜ್ಯವನ್ನು ಸೂಕ್ತ ಜಾಗದಲ್ಲಿ ಹಾಕಿದ್ದಲ್ಲಿ ಈಗೆ ಅಗುತ್ತಿರಲಿಲ್ಲ, ನಾವು ಮನೆಯಲ್ಲಿ ಉತ್ಪತ್ತಿ ಮಾಡುವ ಕಸವನ್ನು ವಿಂಗಡಿಸಿ ಗ್ರಾಮ ಪಂಚಾಯಿತಿ ವಾಹನಕ್ಕೆ ನೀಡಿದಲ್ಲಿ ಈ ತರಹ ಬೀಚ್ ನಲ್ಲಿ ಕಸ ಬಂದು ಸೇರುವುದು ತಪ್ಪುತ್ತದೆ ಆದ್ದರಿಂದ ಮನೆಯ ಕಸವನ್ನು ವ್ಯವಸ್ಥೆತವಾಗಿ ನಿರ್ವಹಣೆ ಮಾಡಬೇಕು ಎಂದರು.

ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ ಸ್ವಚ್ಛತಾ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಮುಖ್ಯ ಯೋಜನಾಧಿಕಾರಿ, ಶ್ರೀನಿವಾಸ್ ರಾವ್, ಕೆಮ್ಮಣ್ಣು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಸುಮ ರವೀಂದ್ರ, ಬಡನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯಶೋಧ ಆಚಾರ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ಬೀಚ್ ಸ್ವಚ್ಛತಾ ಶ್ರಮದಾನದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು,ಸಾರ್ವಜನಿಕರು, ವಿದ್ಯಾರ್ಥಿಗಳು, ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.

Previous Post

ರಾಜ್ಯೋತ್ಸವ ಪ್ರಶಸ್ತಿ ಆನ್ ಲೈನ್ ಮೂಲಕ ನಾಮ ನಿರ್ದೇಶನಕ್ಕೆ ಅವಕಾಶ..!! 

Next Post

ಉಡುಪಿ:ಯಕ್ಷಗಾನ ಕಲಾರಂಗ ರಿ. ವತಿಯಿಂದ ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾಪೋಷಕ್ ವಿನಮ್ರ ಸಹಾಯ ವಿತರಣೆ ಕಾರ್ಯಕ್ರಮ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಉಡುಪಿ:ಯಕ್ಷಗಾನ ಕಲಾರಂಗ ರಿ. ವತಿಯಿಂದ ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾಪೋಷಕ್ ವಿನಮ್ರ ಸಹಾಯ ವಿತರಣೆ ಕಾರ್ಯಕ್ರಮ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ ಬನ್ನಂಜೆಯಲ್ಲಿ ಪ್ರೊಫೆಷನಲ್ ಸೆಟ್‌ಅಪ್ ಹೊಂದಿರುವ ಬ್ಯೂಟಿ ಪಾರ್ಲರ್ ಮಾರಾಟಕ್ಕೆ..!!

ಉಡುಪಿ ಬನ್ನಂಜೆಯಲ್ಲಿ ಪ್ರೊಫೆಷನಲ್ ಸೆಟ್‌ಅಪ್ ಹೊಂದಿರುವ ಬ್ಯೂಟಿ ಪಾರ್ಲರ್ ಮಾರಾಟಕ್ಕೆ..!!

18/03/2026
ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಪ್ಟಿಕ್ ಡಿಸ್ಕ್ ಮತ್ತು ರೆಟಿನಾ ಪರೀಕ್ಷೆಯ ಕುರಿತು ಪ್ರಾಯೋಗಿಕ ತರಬೇತಿ

ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಪ್ಟಿಕ್ ಡಿಸ್ಕ್ ಮತ್ತು ರೆಟಿನಾ ಪರೀಕ್ಷೆಯ ಕುರಿತು ಪ್ರಾಯೋಗಿಕ ತರಬೇತಿ

18/03/2026
ಮಾಹೆಗೆ ಪ್ರತಿಷ್ಠಿತ ಬಿಎಸ್‌ಎಲ್‌-3 ಪ್ರಯೋಗಾಲಯ ಪ್ರಮಾಣೀಕರಣ

ಮಾಹೆಗೆ ಪ್ರತಿಷ್ಠಿತ ಬಿಎಸ್‌ಎಲ್‌-3 ಪ್ರಯೋಗಾಲಯ ಪ್ರಮಾಣೀಕರಣ

18/03/2026
ಕುಕ್ಕಿಕಟ್ಟೆ ಕಾಲುವೆ ದುರ್ಗಂಧ ಸಮಸ್ಯೆ ಪರಿಹಾರ – ನಗರಾಡಳಿತದಿಂದ ತುರ್ತು ಕ್ರಮ..!

ಕುಕ್ಕಿಕಟ್ಟೆ ಕಾಲುವೆ ದುರ್ಗಂಧ ಸಮಸ್ಯೆ ಪರಿಹಾರ – ನಗರಾಡಳಿತದಿಂದ ತುರ್ತು ಕ್ರಮ..!

18/03/2026

Recent News

ಉಡುಪಿ ಬನ್ನಂಜೆಯಲ್ಲಿ ಪ್ರೊಫೆಷನಲ್ ಸೆಟ್‌ಅಪ್ ಹೊಂದಿರುವ ಬ್ಯೂಟಿ ಪಾರ್ಲರ್ ಮಾರಾಟಕ್ಕೆ..!!

ಉಡುಪಿ ಬನ್ನಂಜೆಯಲ್ಲಿ ಪ್ರೊಫೆಷನಲ್ ಸೆಟ್‌ಅಪ್ ಹೊಂದಿರುವ ಬ್ಯೂಟಿ ಪಾರ್ಲರ್ ಮಾರಾಟಕ್ಕೆ..!!

18/03/2026
ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಪ್ಟಿಕ್ ಡಿಸ್ಕ್ ಮತ್ತು ರೆಟಿನಾ ಪರೀಕ್ಷೆಯ ಕುರಿತು ಪ್ರಾಯೋಗಿಕ ತರಬೇತಿ

ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಪ್ಟಿಕ್ ಡಿಸ್ಕ್ ಮತ್ತು ರೆಟಿನಾ ಪರೀಕ್ಷೆಯ ಕುರಿತು ಪ್ರಾಯೋಗಿಕ ತರಬೇತಿ

18/03/2026
ಮಾಹೆಗೆ ಪ್ರತಿಷ್ಠಿತ ಬಿಎಸ್‌ಎಲ್‌-3 ಪ್ರಯೋಗಾಲಯ ಪ್ರಮಾಣೀಕರಣ

ಮಾಹೆಗೆ ಪ್ರತಿಷ್ಠಿತ ಬಿಎಸ್‌ಎಲ್‌-3 ಪ್ರಯೋಗಾಲಯ ಪ್ರಮಾಣೀಕರಣ

18/03/2026
ಕುಕ್ಕಿಕಟ್ಟೆ ಕಾಲುವೆ ದುರ್ಗಂಧ ಸಮಸ್ಯೆ ಪರಿಹಾರ – ನಗರಾಡಳಿತದಿಂದ ತುರ್ತು ಕ್ರಮ..!

ಕುಕ್ಕಿಕಟ್ಟೆ ಕಾಲುವೆ ದುರ್ಗಂಧ ಸಮಸ್ಯೆ ಪರಿಹಾರ – ನಗರಾಡಳಿತದಿಂದ ತುರ್ತು ಕ್ರಮ..!

18/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved