Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಮಂಗಳೂರು : ಮಂಗಳಾ ಸಭಾಂಗಣದಲ್ಲಿಯೇ ವಿವಿ ಗಣೇಶೋತ್ಸವ: ಹಿಂದೂ ಸಮಾಜದ ಹೋರಾಟಕ್ಕೆ ಸಿಕ್ಕ ಜಯ- ಶಾಸಕ ವೇದವ್ಯಾಸ ಕಾಮತ್..!!

Dhrishya News by Dhrishya News
19/09/2023
in ಕರಾವಳಿ, ಸುದ್ದಿಗಳು
0
0
SHARES
16
VIEWS
Share on FacebookShare on Twitter

ಮಂಗಳೂರು : ಸೆಪ್ಟೆಂಬರ್ 19 : ದೃಶ್ಯ ನ್ಯೂಸ್ : ಮಂಗಳೂರು ವಿಶ್ವವಿದ್ಯಾಲಯದ ಗಣೇಶೋತ್ಸವ ವಿಚಾರದಲ್ಲಿ ವಿನಾಕಾರಣ ಉಂಟಾಗಿದ್ದ ಗೊಂದಲಕ್ಕೆ ನಂಬಂಧಿಸಿ ಈ ಹಿಂದಿನಂತೆ ಗಣೇಶೋತ್ಸವ ಮುಂದುವರಿಸಿಕೊಂಡು ಹೋಗುವಂತೆ ಬಂದಿರುವ ಆದೇಶವು ಇಷ್ಟು ದಿನ ವಿವಾದ ಸೃಷ್ಟಿಸಿ ಜನರ ದಿಕ್ಕು ತಪ್ಪಿಸಲು ಯತ್ನಿಸಿದ್ಧವರಿಗೆ ಸ್ಪಷ್ಟ ಸಂದೇಶವಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.

ಯಾವುದೇ ಗೊಂದಲಕ್ಕೂ ಆಸ್ಪದ ನೀಡದೇ ಈ ಹಿಂದಿನಂತೆ ಗಣೇಶೋತ್ಸವ ನಡೆಸುವ ಬಗ್ಗೆ ಬಂದಿರುವ ಆದೇಶವು ಇಡೀ ಹಿಂದೂ ಸಮಾಜದ ಹೋರಾಟಕ್ಕೆ ಸಿಕ್ಕಿರುವ ಗೆಲುವಾಗಿದೆ. ಕಾಂಗ್ರೆಸ್ ಸರ್ಕಾರ ಸದಾ ಹಿಂದೂ ಧರ್ಮದ ಆಚರಣೆಗಳಿಗೆ ಮಾತ್ರ ನಿರ್ಬಂಧಗಳನ್ನು ಹೇರುವ ಮೂಲಕ ಗೊಂದಲ ಸೃಷ್ಟಿಸುವ ಕೆಲಸವನ್ನು ಹಿಂದೆಯೂ ಮಾಡಿತ್ತು. ಈಗಲೂ ಅದನ್ನೇ ಮುಂದುವರಿಸುತ್ತಿದೆ.

ಕೆಲವರು ವೇದವ್ಯಾಸ್ ಕಾಮತ್ ಅವರು ಹೊರಗಿನಿಂದ ಬಂದು ಈ ಸಮಸ್ಯೆಯನ್ನು ಸೃಷ್ಟಿಸಿದರು. ಎಂದು ಹೇಳುತ್ತಿದ್ದಾರೆ, ಆದರೆ ಆರಂಭದಲ್ಲಿಯೇ ಈ ಹಿಂದಿನಂತೆ ಗಣೇಶೋತ್ಸವ ಮುಂದುವರಿಸಿಕೊಂಡು ಹೋಗಿದ್ದರೆ ನಾನೂ ಸೇರಿದಂತೆ ಯಾವ ಹೊರಗಿನ ವ್ಯಕ್ತಿಗಳೂ ಸಹ ಈ ವಿಷಯದಲ್ಲಿ ವಿಶ್ವವಿದ್ಯಾನಿಲಯಕ್ಕೆ ಬರುವ ಪ್ರಮೇಯವೇ ಇರುತ್ತಿರಲಿಲ್ಲ, ಇಷ್ಟೊಂದು ಚರ್ಚೆಗಳ ಅಗತ್ಯವೂ ಇರುತ್ತಿರಲಿಲ್ಲ.

ವಾಸ್ತವದಲ್ಲಿ, ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿದ್ದ ಗಣೇಶೋತ್ಸವವನ್ನೇ ನಿಲ್ಲಿಸುವ ಹುನ್ನಾರದ ಭಾಗವಾಗಿ ಇಲ್ಲಸಲ್ಲದ ಗೊಂದಲ ಸೃಷ್ಟಿಸಿ ಸರಕಾರಕ್ಕೆ ಪತ್ರ ಬರೆಯಲಾಗಿತ್ತು. ಆದರೆ ಹಿಂದೂ ಸಮಾಜದ ತೀವ್ರ ವಿರೋಧ ಹಾಗೂ ಪ್ರತಿಭಟನೆಗೆ ಮಣಿದು ಕೊನೆಗೂ ಇದೀಗ ಬಂದಿರುವ ಆದೇಶದಂತೆ ವಿಶ್ವವಿದ್ಯಾನಿಲಯದ ಕುಲಪತಿಗಳು ಈ ಹಿಂದಿನಂತೆ ಮಂಗಳಾ ಸಭಾಂಗಣದಲ್ಲಿಯೇ
ಗಣೇಶೋತ್ಸವ ಆಚರಿಸುತ್ತೇವೆಂದು ನಿರ್ಣಯಿಸಿದ್ದಾರೆ. ಈ ಮೂಲಕ ಹಿಂದೂ ಸಮಾಜದ ಶ್ರದ್ಧೆ-ಭಕ್ತಿ-ನಂಬಿಕೆಯಂತಹ ಧಾರ್ಮಿಕ ಆಚರಣೆಗಳಿಗೆ ಧಕ್ಕೆ ಉಂಟಾದಾಗ ಭಾರತೀಯ ಜನತಾ ಪಾರ್ಟಿ ಸದಾ ಹೋರಾಟಕ್ಕೆ ಸಿದ್ಧವಾಗಿರುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ರಾಜ್ಯದ ಕಾಂಗ್ರೆಸ್‌ ಸರ್ಕಾರಕ್ಕೆ ಹಾಗೂ ಸಂಬಂಧಪಟ್ಟವರಿಗೆ ನೀಡ ಬಯಸುತ್ತೇನೆ ಎಂದರು.

Tags: #ಮಂಗಳೂರು#ನ್ಯೂಸ್
Previous Post

ಮಣಿಪಾಲ : ಕೆಎಕ್ಸ್ 23′ ಅನಾವರಣ – ಗೋ ಕಾರ್ಟ್: ಎಂಐಟಿಯಲ್ಲಿ ಸಮರ್ಪಣೆ ಮತ್ತು ನಾವೀನ್ಯತೆಗಳ ವಿಜಯೋತ್ಸವ..!!

Next Post

ಉದ್ಯಮಿಯೋರ್ವರಿಗೆ MLA ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ.ವಂಚಿಸಿದ ಪ್ರಕರಣ : ಒಡಿಶಾದಲ್ಲಿ ಆರೋಪಿ ಹಾಲಶ್ರೀ ಸ್ವಾಮೀಜಿಯ ಬಂಧನ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಉದ್ಯಮಿಯೋರ್ವರಿಗೆ MLA ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ.ವಂಚಿಸಿದ ಪ್ರಕರಣ : ಒಡಿಶಾದಲ್ಲಿ ಆರೋಪಿ ಹಾಲಶ್ರೀ ಸ್ವಾಮೀಜಿಯ ಬಂಧನ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಬಿಜೆಪಿ ಶಾಸಕರ ಸುಳ್ಳು ಆರೋಪಗಳಿಗೆ ಉತ್ತರವಾಗಿ ಕಾರ್ಕಳ ಕಾಂಗ್ರೆಸಿನಿಂದ ಸತ್ಯಮೇವ ಜಯತೆ ಕಾರ್ಯಕ್ರಮದ ಪೂರ್ವಭಾವಿ ಸಭೆ

ಬಿಜೆಪಿ ಶಾಸಕರ ಸುಳ್ಳು ಆರೋಪಗಳಿಗೆ ಉತ್ತರವಾಗಿ ಕಾರ್ಕಳ ಕಾಂಗ್ರೆಸಿನಿಂದ ಸತ್ಯಮೇವ ಜಯತೆ ಕಾರ್ಯಕ್ರಮದ ಪೂರ್ವಭಾವಿ ಸಭೆ

06/10/2026
ಅಕ್ಷರ ಕಾಯಕಕ್ಕೆ ಸಂದ ಅರ್ಹ ಗೌರವ: ಶಿಕ್ಷಕಿ ತಾರಾಮತಿ ದೇವಾಡಿಗ ಅವರ ಸಾಧನೆ ನಾಡಿಗೆ ಆದರ್ಶ

ಅಕ್ಷರ ಕಾಯಕಕ್ಕೆ ಸಂದ ಅರ್ಹ ಗೌರವ: ಶಿಕ್ಷಕಿ ತಾರಾಮತಿ ದೇವಾಡಿಗ ಅವರ ಸಾಧನೆ ನಾಡಿಗೆ ಆದರ್ಶ

06/10/2026
ಮಾಹೆಯಲ್ಲಿ ವಿಶ್ವ ಹಾಸ್ಪಿಸ್‌ ಮತ್ತು ಉಪಶಾಮಕ ಆರೈಕೆ ದಿನ ಆಚರಣೆ

ಮಾಹೆಯಲ್ಲಿ ವಿಶ್ವ ಹಾಸ್ಪಿಸ್‌ ಮತ್ತು ಉಪಶಾಮಕ ಆರೈಕೆ ದಿನ ಆಚರಣೆ

06/10/2026
ಕೇಂದ್ರ ಸರ್ಕಾರ ಗ್ಯಾನೇಶ್ ನನ್ನು ರಕ್ಷಣೆ ಮಾಡಿ ಕಾರ್ಯಾಂಗವನ್ನೇ ದುರ್ಬಲ ಗೊಳಿಸುತ್ತಿದೆ: ಸುರೇಶ್ ಕಲ್ಲಾಗರ

ಕೇಂದ್ರ ಸರ್ಕಾರ ಗ್ಯಾನೇಶ್ ನನ್ನು ರಕ್ಷಣೆ ಮಾಡಿ ಕಾರ್ಯಾಂಗವನ್ನೇ ದುರ್ಬಲ ಗೊಳಿಸುತ್ತಿದೆ: ಸುರೇಶ್ ಕಲ್ಲಾಗರ

06/10/2026

Recent News

imunify-bot-check