Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಸರಕಾರಿ ಶಾಲೆಯಲ್ಲಿ ಕಲಿತ ವ್ಯಕ್ತಿ ಜೀವನದಲ್ಲಿ ಎಂತಹ ಪರೀಕ್ಷೆ ಬಂದರೂ ಉತ್ತೀರ್ಣನಾಗುತ್ತಾನೆ – ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್..!!

Dhrishya News by Dhrishya News
17/09/2023
in ಕರಾವಳಿ, ರಾಜ್ಯ/ ರಾಷ್ಟ್ರೀಯ, ಸುದ್ದಿಗಳು
0
0
SHARES
7
VIEWS
Share on FacebookShare on Twitter

ಬೆಳಗಾವಿ: ದೃಶ್ಯ ನ್ಯೂಸ್ ಸರಕಾರಿ ಶಾಲೆಯಲ್ಲಿ ಕಲಿತ ವ್ಯಕ್ತಿ ಮುಂದೆ ಜೀವನದಲ್ಲಿ ಎಂತಹ ಪರೀಕ್ಷೆ ಎದುರಾದರೂ ಉತ್ತೀರ್ಣನಾಗುತ್ತಾನೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಭಿಪ್ರಾಯ ಪಟ್ಟಿದ್ದಾರೆ.

ಜಿಲ್ಲಾ ಪಂಚಾಯತ್ ಬೆಳಗಾವಿ, ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ (ದ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ತಾಲೂಕು ವಲಯ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿಯ ಗಾಂಧಿ ಭವನದಲ್ಲಿ ಶನಿವಾರ ನಡೆದ 62 ನೇ ಶಿಕ್ಷಕರ ದಿನಾಚರಣೆ ಮತ್ತು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಶಿಕ್ಷಕರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಎಲ್ಲ ಮಕ್ಕಳನ್ನೂ ಸಮಾನದೃಷ್ಟಿಯಿಂದ ನೋಡುವ ಶಿಕ್ಷಕರು, ಮಕ್ಕಳಿಗೆ ಸಂಸ್ಕೃತಿಯನ್ನು ಕಲಿಸುತ್ತಾರೆ. ಮಕ್ಕಳ ಭವಿಷ್ಯಕ್ಕೆ ಪಾಲಕರಿಗಿಂತ ಹೆಚ್ಚು ಕಾಳಜಿ ವಹಿಸುತ್ತಾರೆ. ಅಂತಹ ಶಿಕ್ಷಕರಿಗೆ ನೆಮ್ಮದಿಯ ಜೀವನ ನೀಡಲು ನಮ್ಮ ಸರಕಾರ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.

ಬೆಳಗಾವಿಯಲ್ಲಿ ಶಿಕ್ಷಕರ ಭವನ ನಿರ್ಮಾಣಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಜಾಗ ಒದಗಿಸುವುದಾಗಿ ಭರವಸೆ ನೀಡಿದ ಲಕ್ಷ್ಮೀ ಹೆಬ್ಬಾಳಕರ್, ಈ ದೇಶವನ್ನು ಕಟ್ಟುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಪ್ರಶಂಸಿಸಿದರು.

ಶಿಕ್ಷಕರನ್ನು ಬ್ರಹ್ಮ, ವಿಷ್ಣು, ಮಹೇಶ್ವರ ಎಂದು ಕರೆಯುತ್ತೇವೆ. ಶಿಕ್ಷಕರಿಗೆ ದೇವರ ಸ್ಥಾನವನ್ನು ನೀಡಲಾಗಿದೆ. ಇಡೀ ದೇಶದ ಭವಿಷ್ಯ ಶಿಕ್ಷಕರ ಮೇಲೆ ಅವಲಂಬಿಸಿದೆ. ಸಮಾಜದ, ದೇಶದ ಭವಿಷ್ಯವನ್ನು ರೂಪಿಸುವವರು ಶಿಕ್ಷಕರು. ರೈತರು, ಸೈನಿಕರು, ಶಿಕ್ಷಕರು ಆದರ್ಶ ಸಮಾಜದ ಆಧಾರ ಸ್ತಂಭಗಳು ಎಂದ ಅವರು, ಶಿಕ್ಷಕರ ಸಮಸ್ಯೆಗಳು, ಅದರಲ್ಲೂ ಗ್ರಾಮೀಣ ಶಿಕ್ಷಕರ, ಮಹಿಳಾ ಶಿಕ್ಷಕರ ಸಮಸ್ಯೆಗಳನ್ನು ನಾನು ಅರಿತಿದ್ದೇನೆ. ಮಧು ಬಂಗಾರಪ್ಪನವರು ಬಹಳ ಒಳ್ಳೆಯ ಶಿಕ್ಷಣ ಸಚಿವರು. ಅತ್ಯಂತ ತಳಮಟ್ಟದ ಸಮಸ್ಯೆಗಳನ್ನೂ ಅರಿತಿದ್ದಾರೆ. ಖಂಡಿತ ಅವರಿಂದ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ನಾನು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ತಾರಿಹಾಳದ ಶ್ರೀ ಅಡವಿ ಸಿದ್ದೇಶ್ವರ ಸ್ವಾಮಿಗಳು, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜ ನಾಲತವಾಡ, ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮು ಗುಗವಾಡ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಪಿ. ದಾಸಪ್ಪನವರ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೋರಿಶೆಟ್ಟಿ, ತಾಲೂಕು ಪ್ರಾಥಮಿಕ ಶಿಕ್ಷಕ ಸಂಘದ ಅಧ್ಯಕ್ಷೆ ಪೂಜಾ ಪಾಟೀಲ, ಎಂ. ಬಿ. ಹುಲಮನಿ, ಬಸವರಾಜ ರಾಯವ್ವಗೋಳ, ಎಂ. ಎಸ್. ಮೇದಾರ, ಪ್ರಾಥಮಿಕ, ಪ್ರೌಢಶಾಲೆಯ ಶಿಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು .

Previous Post

ಮಲ್ಪೆ ಬೀಚ್ ಪ್ರವೇಶ ನಿರ್ಬಂಧ ಸೆ.25ರವರೆಗೆ ವಿಸ್ತರಣೆ..!!

Next Post

ಉಡುಪಿ :ಆಶಾ ನಿಲಯದಲ್ಲಿ ವಿಶೇಷ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಉಡುಪಿ :ಆಶಾ ನಿಲಯದಲ್ಲಿ ವಿಶೇಷ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಾರ್ಕಳ ಯಕ್ಷರಂಗಾಯಣ ಮೂಲ ಹೆಸರಿನಲ್ಲೇ ಉಳಿಯಲಿ : ಶ್ರೀಮತಿ ರಮಿತಾ ಸೂರ್ಯವಂಶಿ

ಕಾರ್ಕಳ ಯಕ್ಷರಂಗಾಯಣ ಮೂಲ ಹೆಸರಿನಲ್ಲೇ ಉಳಿಯಲಿ : ಶ್ರೀಮತಿ ರಮಿತಾ ಸೂರ್ಯವಂಶಿ

23/06/2026
ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. – ನಿರ್ದೇಶಕರಾಗಿ ಸ್ಟೀವನ್ ಕುಲಾಸೊ ಆಯ್ಕೆ 

ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. – ನಿರ್ದೇಶಕರಾಗಿ ಸ್ಟೀವನ್ ಕುಲಾಸೊ ಆಯ್ಕೆ 

23/06/2026
ನಿವೃತ್ತ ಐಎಎಸ್ ಅಧಿಕಾರಿ ಬಿ. ಸದಾಶಿವ ಪ್ರಭು ಎಳ್ಳಾರೆ ಅವರಿಗೆ ‘ಸಾರಸ್ವತ ಭಾರ್ಗವ’ ಬಿರುದು ಪ್ರದಾನ

ನಿವೃತ್ತ ಐಎಎಸ್ ಅಧಿಕಾರಿ ಬಿ. ಸದಾಶಿವ ಪ್ರಭು ಎಳ್ಳಾರೆ ಅವರಿಗೆ ‘ಸಾರಸ್ವತ ಭಾರ್ಗವ’ ಬಿರುದು ಪ್ರದಾನ

22/06/2026
ಗೀತಾ ಮಂದಿರದಲ್ಲಿ ಚಯರ್ ಯೋಗ ತರಬೇತಿ ಕಾರ್ಯಕ್ರಮ

ಗೀತಾ ಮಂದಿರದಲ್ಲಿ ಚಯರ್ ಯೋಗ ತರಬೇತಿ ಕಾರ್ಯಕ್ರಮ

22/06/2026

Recent News

ಕಾರ್ಕಳ ಯಕ್ಷರಂಗಾಯಣ ಮೂಲ ಹೆಸರಿನಲ್ಲೇ ಉಳಿಯಲಿ : ಶ್ರೀಮತಿ ರಮಿತಾ ಸೂರ್ಯವಂಶಿ

ಕಾರ್ಕಳ ಯಕ್ಷರಂಗಾಯಣ ಮೂಲ ಹೆಸರಿನಲ್ಲೇ ಉಳಿಯಲಿ : ಶ್ರೀಮತಿ ರಮಿತಾ ಸೂರ್ಯವಂಶಿ

23/06/2026
ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. – ನಿರ್ದೇಶಕರಾಗಿ ಸ್ಟೀವನ್ ಕುಲಾಸೊ ಆಯ್ಕೆ 

ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. – ನಿರ್ದೇಶಕರಾಗಿ ಸ್ಟೀವನ್ ಕುಲಾಸೊ ಆಯ್ಕೆ 

23/06/2026
ನಿವೃತ್ತ ಐಎಎಸ್ ಅಧಿಕಾರಿ ಬಿ. ಸದಾಶಿವ ಪ್ರಭು ಎಳ್ಳಾರೆ ಅವರಿಗೆ ‘ಸಾರಸ್ವತ ಭಾರ್ಗವ’ ಬಿರುದು ಪ್ರದಾನ

ನಿವೃತ್ತ ಐಎಎಸ್ ಅಧಿಕಾರಿ ಬಿ. ಸದಾಶಿವ ಪ್ರಭು ಎಳ್ಳಾರೆ ಅವರಿಗೆ ‘ಸಾರಸ್ವತ ಭಾರ್ಗವ’ ಬಿರುದು ಪ್ರದಾನ

22/06/2026
ಗೀತಾ ಮಂದಿರದಲ್ಲಿ ಚಯರ್ ಯೋಗ ತರಬೇತಿ ಕಾರ್ಯಕ್ರಮ

ಗೀತಾ ಮಂದಿರದಲ್ಲಿ ಚಯರ್ ಯೋಗ ತರಬೇತಿ ಕಾರ್ಯಕ್ರಮ

22/06/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved