Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಉಡುಪಿ : ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಡೋಸಲ್ಫಾನ್‌ ಸಂತ್ರಸ್ತರ ಆರೋಗ್ಯ ಸುಧಾರಣೆಯ ದೃಷ್ಟಿಯಿಂದ “ಡೇ ಕೇರ್‌ ಕೇಂದ್ರ” ಪ್ರಾರಂಭ..!!

Dhrishya News by Dhrishya News
16/09/2023
in ಕರಾವಳಿ, ಸುದ್ದಿಗಳು
0
0
SHARES
7
VIEWS
Share on FacebookShare on Twitter

ಜಿಲ್ಲೆಯ ಎಂಡೋಸಲ್ಫಾನ್‌ ಸಂತ್ರಸ್ತರ ಆರೋಗ್ಯ ಸುಧಾರಣೆಯ ದೃಷ್ಟಿಯಿಂದ 11 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ 19 ಲಕ್ಷ ರೂ. ವೆಚ್ಚದಲ್ಲಿ 6 ಹಾಸಿಗೆಗಳ ವಾರ್ಡ್‌ಗಳನ್ನು ನಿರ್ಮಿಸುವ ಕಾಮಗಾರಿ ಬಹುಪಾಲು ಪೂರ್ಣಗೊಂಡಿದ್ದು, ಪ್ರಾಯೋಗಿಕ ಯೋಜನೆಯಾಗಿ ಎರಡು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಡೇ ಕೇರ್‌ ಸೆಂಟರ್‌ ಆರಂಭಿಸಲು ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದೆ.

ಶಿರೂರು, ಕೊಲ್ಲೂರು, ಕಿರಿಮಂಜೇಶ್ವರ, ಸಿದ್ದಾಪುರ, ಬಿದ್ಕಲ್‌ಕಟ್ಟೆ, ಕೆದೂರು, ಆಲೂರು, ಹಿರಿಯಡಕ, ಕೊಕ್ಕರ್ಣೆ, ಇರ್ವತ್ತೂರು ಮತ್ತು ಮಾಳದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಸಿಆರ್‌ಪಿ ಯೋಜನೆಯಡಿ 6 ಹಾಸಿಗೆಯ ವಾರ್ಡ್‌ಗಳನ್ನು ತಲಾ 19 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಆದರೆ, ವೈದ್ಯಕೀಯ ಪರಿಕರ ಹಾಗೂ ಸಿಬಂದಿ ಸೇವೆ ಇನ್ನೂ ಒದಗಿಸದೇ ಇರುವುದರಿಂದ ಕಾರ್ಯಾರಂಭವಾಗಿಲ್ಲ. ಯಾವ ರೀತಿಯ ಬೆಡ್‌ ಆವಶ್ಯಕತೆಯಿದೆ ಮತ್ತು ಸಿಬಂದಿ ನೇಮಕ ಇತ್ಯಾದಿಗಳ ಚರ್ಚೆ ನಡೆಯುತ್ತಿದೆ

ಸಂತ್ರಸ್ತರಿಗೆ ಪುನರ್‌ವಸತಿ ಕೇಂದ್ರದ ರೀತಿಯಲ್ಲಿ ದಾಖಲಾತಿ ಮಾಡಿಕೊಂಡು ಅವರ ಆರೈಕೆ ಮಾಡುವುದಕ್ಕಿಂತ ಡೇ ಕೇರ್‌ ಸೆಂಟರ್‌ ಮಾದರಿಯಲ್ಲಿ ಬೆಳಗ್ಗೆ ಬಂದು ಪೂರ್ಣ ಚಿಕಿತ್ಸೆ ಪಡೆದು, ಸಂಜೆ ವಾಪಸ್‌ ಹೋಗಬಹುದಾಗಿದೆ

ಕಿರಿಮಂಜೇಶ್ವರ ಹಾಗೂ ಹಿರಿಯಡಕದಲ್ಲಿ ಪೈಲೆಟ್‌ ಯೋಜನೆಯಾಗಿ ಫಿಜಿಯೋಥೆರಪಿ ಯುನಿಟ್‌ ಆಗಿ ರೂಪಿಸುವ ಹಂತದಲ್ಲಿದ್ದೇವೆ. ಎಲ್ಲಿ ಪ್ರಕರಣ ಜಾಸ್ತಿ ಇದೆಯೋ ಆ ಭಾಗಕ್ಕೆ ಮೊದಲ ಆದ್ಯತೆಯಲ್ಲಿ ಡೇ ಕೇರ್‌ ಕೇಂದ್ರ ಆರಂಭಿಸಲಾಗುವುದು. ಮುಂದೆ ಎಲ್ಲ ಕಡೆಗೂ ವಿಸ್ತರಿಸಲಿದ್ದೇವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಎಚ್‌. ನಾಗಭೂಷಣ ಉಡುಪ ಮಾಹಿತಿ ನೀಡಿದರು.

Previous Post

ಉಡುಪಿ : ರಾಧಾಕೃಷ್ಣ ನೃತ್ಯ ನಿಕೇತನ (ರಿ.)ಮಾಸಿಕ ಸರಣಿ ನೃತ್ಯ : ವರ್ಣಜತಿಮಾಲ..!!!

Next Post

ಉಡುಪಿ : ಸೌಜನ್ಯ ಪ್ರಕರಣ ಮರು ತನಿಖೆಗೆ ಆಗ್ರಹಿಸಿ ಮಲ್ಪೆಯಲ್ಲಿ ಪ್ರತಿಭಟನೆ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಉಡುಪಿ : ಸೌಜನ್ಯ ಪ್ರಕರಣ ಮರು ತನಿಖೆಗೆ ಆಗ್ರಹಿಸಿ ಮಲ್ಪೆಯಲ್ಲಿ ಪ್ರತಿಭಟನೆ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಬಿಜೆಪಿ ಶಾಸಕರ ಸುಳ್ಳು ಆರೋಪಗಳಿಗೆ ಉತ್ತರವಾಗಿ ಕಾರ್ಕಳ ಕಾಂಗ್ರೆಸಿನಿಂದ ಸತ್ಯಮೇವ ಜಯತೆ ಕಾರ್ಯಕ್ರಮದ ಪೂರ್ವಭಾವಿ ಸಭೆ

ಬಿಜೆಪಿ ಶಾಸಕರ ಸುಳ್ಳು ಆರೋಪಗಳಿಗೆ ಉತ್ತರವಾಗಿ ಕಾರ್ಕಳ ಕಾಂಗ್ರೆಸಿನಿಂದ ಸತ್ಯಮೇವ ಜಯತೆ ಕಾರ್ಯಕ್ರಮದ ಪೂರ್ವಭಾವಿ ಸಭೆ

06/10/2026
ಅಕ್ಷರ ಕಾಯಕಕ್ಕೆ ಸಂದ ಅರ್ಹ ಗೌರವ: ಶಿಕ್ಷಕಿ ತಾರಾಮತಿ ದೇವಾಡಿಗ ಅವರ ಸಾಧನೆ ನಾಡಿಗೆ ಆದರ್ಶ

ಅಕ್ಷರ ಕಾಯಕಕ್ಕೆ ಸಂದ ಅರ್ಹ ಗೌರವ: ಶಿಕ್ಷಕಿ ತಾರಾಮತಿ ದೇವಾಡಿಗ ಅವರ ಸಾಧನೆ ನಾಡಿಗೆ ಆದರ್ಶ

06/10/2026
ಮಾಹೆಯಲ್ಲಿ ವಿಶ್ವ ಹಾಸ್ಪಿಸ್‌ ಮತ್ತು ಉಪಶಾಮಕ ಆರೈಕೆ ದಿನ ಆಚರಣೆ

ಮಾಹೆಯಲ್ಲಿ ವಿಶ್ವ ಹಾಸ್ಪಿಸ್‌ ಮತ್ತು ಉಪಶಾಮಕ ಆರೈಕೆ ದಿನ ಆಚರಣೆ

06/10/2026
ಕೇಂದ್ರ ಸರ್ಕಾರ ಗ್ಯಾನೇಶ್ ನನ್ನು ರಕ್ಷಣೆ ಮಾಡಿ ಕಾರ್ಯಾಂಗವನ್ನೇ ದುರ್ಬಲ ಗೊಳಿಸುತ್ತಿದೆ: ಸುರೇಶ್ ಕಲ್ಲಾಗರ

ಕೇಂದ್ರ ಸರ್ಕಾರ ಗ್ಯಾನೇಶ್ ನನ್ನು ರಕ್ಷಣೆ ಮಾಡಿ ಕಾರ್ಯಾಂಗವನ್ನೇ ದುರ್ಬಲ ಗೊಳಿಸುತ್ತಿದೆ: ಸುರೇಶ್ ಕಲ್ಲಾಗರ

06/10/2026

Recent News

imunify-bot-check