Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಫೀನಿಕ್ಸ್ ಶ್ರೀ ವೆಂಕಟಕೃಷ್ಣ ಮಂದಿರಕ್ಕೆ ಶ್ರೀ ಪದ್ಮಾವತಿ ದೇವಿಗೆ ₹2 ಕೋಟಿ ಮೌಲ್ಯದ ಸ್ವರ್ಣ ಕಿರೀಟ ಸಮರ್ಪಣೆ

Dhrishya News by Dhrishya News
06/08/2026
in ಮುಖಪುಟ
0
ಫೀನಿಕ್ಸ್ ಶ್ರೀ ವೆಂಕಟಕೃಷ್ಣ ಮಂದಿರಕ್ಕೆ ಶ್ರೀ ಪದ್ಮಾವತಿ ದೇವಿಗೆ ₹2 ಕೋಟಿ ಮೌಲ್ಯದ ಸ್ವರ್ಣ ಕಿರೀಟ ಸಮರ್ಪಣೆ
0
SHARES
42
VIEWS
Share on FacebookShare on Twitter

ಬೆಂಗಳೂರು, ಆಗಸ್ಟ್ 6:ಅಮೇರಿಕದ ಅರಿಜೋನಾ ರಾಜ್ಯದ ಫೀನಿಕ್ಸ್ ಮಹಾನಗರದಲ್ಲಿರುವ ಶ್ರೀ ವೆಂಕಟಕೃಷ್ಣ ಮಂದಿರದಲ್ಲಿ ವಿರಾಜಮಾನರಾಗಿರುವ ಶ್ರೀ ಪದ್ಮಾವತಿ ದೇವಿಗೆ, ಭಕ್ತರೊಬ್ಬರು ಸುಮಾರು ₹2 ಕೋಟಿ ಮೌಲ್ಯದ ಸ್ವರ್ಣ ಕಿರೀಟವನ್ನು ಸಮರ್ಪಿಸುತ್ತಿದ್ದಾರೆ.

ಈ ಕಿರೀಟವನ್ನು ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಜನ್ಮ ನಕ್ಷತ್ರದ ಶುಭಸಂದರ್ಭದಲ್ಲಿ, ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ದೇವಿಗೆ ಸಮರ್ಪಿಸಲಾಗುವುದು.

ಇಂದು ಬೆಂಗಳೂರಿನ ಗೋವರ್ಧನ ಕ್ಷೇತ್ರದಲ್ಲಿ, ಪರಮಪೂಜ್ಯ ಶ್ರೀಪಾದರು ಈ ಸ್ವರ್ಣ ಕಿರೀಟವನ್ನು ವಿಶೇಷ ಪೂಜೆಯೊಂದಿಗೆ ಬಾಲಕೃಷ್ಣನಿಗೆ ಸಮರ್ಪಿಸಿ, ಬಳಿಕ ಅದನ್ನು ಫೀನಿಕ್ಸ್ ಶ್ರೀ ವೆಂಕಟಕೃಷ್ಣ ಮಂದಿರದಲ್ಲಿ ಶ್ರೀ ಪದ್ಮಾವತಿ ದೇವಿಗೆ ಅರ್ಪಿಸುವ ಸಲುವಾಗಿ ಸಂಬಂಧಿತ ಭಕ್ತರಿಗೆ ಹಸ್ತಾಂತರಿಸಿದರು.

ಅಮೇರಿಕದಲ್ಲಿ ಪರಮಪೂಜ್ಯ ಶ್ರೀಪಾದರು ಸ್ಥಾಪಿಸಿರುವ ಹನ್ನೊಂದು ದೇವಸ್ಥಾನಗಳಲ್ಲಿ ಮೊದಲನೆಯದು ಹಾಗೂ 2000 ರಲ್ಲಿ ಸ್ಥಾಪನೆಯಾದ ಪ್ರಥಮ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಫೀನಿಕ್ಸ್‌ನ ಶ್ರೀ ವೆಂಕಟಕೃಷ್ಣ ಮಂದಿರ ಪಾತ್ರವಾಗಿದೆ.

ಇಂದು ಈ ಕ್ಷೇತ್ರವು ಉತ್ತರ ಅಮೆರಿಕಾದ ಭಾರತೀಯರ ಪ್ರಮುಖ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾಗಿ ಬೆಳೆಯುತ್ತಿದೆ

ಇದೇ ಕ್ಷೇತ್ರದಲ್ಲಿ ನಾಲ್ಕು ವರ್ಷಗಳ ಹಿಂದೆ ಶ್ರೀ ವೆಂಕಟೇಶ್ವರ ಸ್ವಾಮಿಗೆ ಸುಮಾರು ₹4 ಕೋಟಿ ಮೌಲ್ಯದ ಸ್ವರ್ಣ ಕಿರೀಟವನ್ನು ಭಕ್ತರು ಸಮರ್ಪಿಸಿದ್ದರು.

ಇದೀಗ ಶ್ರೀ ಪದ್ಮಾವತಿ ದೇವಿಗೆ ಸಮರ್ಪಿಸಲಾಗುತ್ತಿರುವ ಈ ಸ್ವರ್ಣ ಕಿರೀಟವು ಆ ಮಹತ್ವದ ಸೇವೆಯ ಮತ್ತೊಂದು ಸುವರ್ಣ ಅಧ್ಯಾಯವಾಗಿದೆ.

ಈ ಸೇವೆಯನ್ನು ಶ್ರೀಮಠದ ಭಕ್ತರೊಬ್ಬರು ಅಪಾರ ಭಕ್ತಿ, ಶ್ರದ್ಧೆ ಹಾಗೂ ಸಮರ್ಪಣಾಭಾವದಿಂದ ನೆರವೇರಿಸುತ್ತಿದ್ದು, ಶ್ರೀಮಠದ ವಿದೇಶಿ ಧಾರ್ಮಿಕ ಚಟುವಟಿಕೆಗಳ ಇತಿಹಾಸದಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಿದೆ.

ಇದಲ್ಲದೆ, ಫೀನಿಕ್ಸ್ ಶ್ರೀ ವೆಂಕಟಕೃಷ್ಣ ಕ್ಷೇತ್ರಕ್ಕಾಗಿ ಈಗಾಗಲೇ ನಾಲ್ಕು ಎಕರೆ ವಿಶಾಲ ಜಾಗವನ್ನು ಪಡೆದುಕೊಳ್ಳಲಾಗಿದ್ದು, ಪರಮಪೂಜ್ಯ ಶ್ರೀಪಾದರ ಶಿಷ್ಯರೂ, ಅಲ್ಲಿನ ಪ್ರಧಾನ ಅರ್ಚಕರೂ ಆದ ಶ್ರೀ ಕಿರಣ್ ಆಚಾರ್ಯ ಅವರ ನೇತೃತ್ವದಲ್ಲಿ ಆಗಮಶಾಸ್ತ್ರದ ನಿಯಮಾನುಸಾರ ಭವ್ಯ, ವೈಭವೋಪೇತ ಹಾಗೂ ಬೃಹತ್ ದೇವಸ್ಥಾನದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಮುಂಬರುವ ದಿನಗಳಲ್ಲಿ ಈ ಕ್ಷೇತ್ರವು ವಿಶ್ವದ ಪ್ರಮುಖ ವೈಷ್ಣವ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾಗಿ ರೂಪುಗೊಳ್ಳುವ ನಿರೀಕ್ಷೆಯಿದೆ.

ಈ ಸಂದರ್ಭದಲ್ಲಿ ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನಾಚಾರ್ಯರು,

ಗೋವರ್ಧನ ಕ್ಷೇತ್ರದ ವ್ಯವಸ್ಥಾಪಕರಾದ ಶ್ರೀ ಕುಂಜಾರರು, ಸುಗುಣ ಸಂಧ್ಯಾ ಗುರುಕುಲದ ಕಾರ್ಯದರ್ಶಿ ಶ್ರೀ ಅಭಿಷೇಕ್ ಹಾಗೂ ಅನೇಕ ಭಕ್ತರು ಉಪಸ್ಥಿತರಿದ್ದರು.

Previous Post

ಚೇತನಾ ಪ್ರೌಢಶಾಲೆ ಹಂಗಾರಕಟ್ಟೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

Next Post

ಉಡುಪಿ: ಆಸ್ಪತ್ರೆಯ ಪಾರ್ಕಿಂಗ್‌ ನಲ್ಲಿ ನಿಲ್ಲಿಸಿದ್ದ ಬೈಕ್ ಕಳವು..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಉಡುಪಿ: ಆಸ್ಪತ್ರೆಯ ಪಾರ್ಕಿಂಗ್‌ ನಲ್ಲಿ ನಿಲ್ಲಿಸಿದ್ದ ಬೈಕ್ ಕಳವು..!

ಉಡುಪಿ: ಆಸ್ಪತ್ರೆಯ ಪಾರ್ಕಿಂಗ್‌ ನಲ್ಲಿ ನಿಲ್ಲಿಸಿದ್ದ ಬೈಕ್ ಕಳವು..!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಕನಸಿಗೆ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಆಸರೆ

ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಕನಸಿಗೆ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಆಸರೆ

22/09/2026
31 ವರ್ಷಗಳಿಂದ ನಾಟಕ ಕ್ಷೇತ್ರದಲ್ಲಿ ಸೇವೆ: ಕಲಾವಿದ ಅನಿಲ್ ಕಾಬೆಟ್ಟು ಅವರಿಗೆ ಸನ್ಮಾನ

31 ವರ್ಷಗಳಿಂದ ನಾಟಕ ಕ್ಷೇತ್ರದಲ್ಲಿ ಸೇವೆ: ಕಲಾವಿದ ಅನಿಲ್ ಕಾಬೆಟ್ಟು ಅವರಿಗೆ ಸನ್ಮಾನ

22/09/2026
ಬೈಂದೂರು: ಪರವಾನಿಗೆ ಇಲ್ಲದೆ ಮದ್ಯ ಸೇವನೆ, ಇಬ್ಬರು ಪರಾರಿ

ಬೈಂದೂರು: ಪರವಾನಿಗೆ ಇಲ್ಲದೆ ಮದ್ಯ ಸೇವನೆ, ಇಬ್ಬರು ಪರಾರಿ

22/09/2026
ಕಡಿಯಾಳಿ ಗಣೇಶೋತ್ಸವ: ಉಡುಪಿ ರಥಬೀದಿಯಲ್ಲಿ ವಿಸರ್ಜನಾ ಮೆರವಣಿಗೆ

ಕಡಿಯಾಳಿ ಗಣೇಶೋತ್ಸವ: ಉಡುಪಿ ರಥಬೀದಿಯಲ್ಲಿ ವಿಸರ್ಜನಾ ಮೆರವಣಿಗೆ

22/09/2026

Recent News

imunify-bot-check