Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮೊದಲ ಯಶಸ್ವಿ ಗ್ರಾಫ್ಟ್ ಮ್ಯಾನಿಪುಲೇಟೆಡ್ ಅರ್ಧ-ಹೊಂದಾಣಿಕೆಯ ಮೂಳೆ ಮಜ್ಜೆಯ ಕಸಿ..!! 

Dhrishya News by Dhrishya News
26/08/2023
in ಮುಖಪುಟ, ರಾಜ್ಯ/ ರಾಷ್ಟ್ರೀಯ, ಸುದ್ದಿಗಳು
0
0
SHARES
160
VIEWS
Share on FacebookShare on Twitter

ಮಣಿಪಾಲ, 26 ಆಗಸ್ಟ್ 2023: ಒಂದು ವರ್ಷದ ಬಾಲಕನಿಗೆ ಸಿವಿಯರ್ ಕಂಬೈನ್ಡ್ ಇಮ್ಮುನೊ ಡೆಫಿಸೈನ್ಸಿ ಎಂಬ ತೀವ್ರ ತರಹದ ರೋಗ ನಿರೋಧಕ ಶಕ್ತಿಯ ಕೊರತೆ ಇರುವುದು ಪತ್ತೆಯಾಯಿತು ಮತ್ತು ಬಾಲಕನನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಅಸ್ಥಿಮಜ್ಜೆ (ಬೋನ್ ಮಾರೋ ಟ್ರಾನ್ಸ್ ಪ್ಲಾಂಟೇಶನ್) ಕಸಿ ಮಾಡಲು ಕಳುಹಿಸಲಾಗಿತ್ತು. ಅಸ್ಥಿಮಜ್ಜೆ ಕಸಿ ಮಾಡುವುದೊಂದೆ ಆತನ ಕಾಯಿಲೆಯನ್ನು ಗುಣಪಡಿಸಬಲ್ಲ ಏಕೈಕ ಚಿಕಿತ್ಸೆಯಾಗಿತ್ತು

 

ಮೂಳೆ ಮಜ್ಜೆಯ ಕಸಿ ಎನ್ನುವುದು ವೈದ್ಯರು ಮತ್ತು ಶುಶ್ರೂಷಾ ಸಿಬ್ಬಂದಿಗಳ ತಜ್ಞ ತಂಡವು ಮಾಡುವ ಒಂದು ಸಂಕೀರ್ಣ ವೈದ್ಯಕೀಯ ಚಿಕಿತ್ಸೆಯಾಗಿದೆ. ಅಸ್ಥಿ ಮಜ್ಜೆಯ ಕಸಿ ಮಾಡುವದರಿಂದ ಇದಕ್ಕುಮೊದಲು ಗುಣಪಡಿಸಲಾಗದಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡಬಹುದಾಗಿದೆ ಮತ್ತು ಅನೇಕ ರೋಗಿಗಳ ಜೀವನವನ್ನು ಬದಲಾಯಿಸಿದೆ. ಅಸ್ಥಿ ಮಜ್ಜೆಯ ಕಸಿಯು ಕೆಂಪು ಕೋಶದ ಅಸ್ವಸ್ಥತೆಗಳು (ಥಲಸ್ಸೆಮಿಯಾ), ಮೂಳೆ ಮಜ್ಜೆಯ ವೈಫಲ್ಯ, ಇಮ್ಯುನೊ ಡಿಫಿಷಿಯನ್ಸಿ ಮತ್ತು ಕೆಲವು ಕ್ಯಾನ್ಸರ್ ಗಳಂತಹ ರೋಗಗಳಿಗೆ ಶಾಶ್ವತ ಗುಣಪಡಿಸುವ ಚಿಕಿತ್ಸೆಯಾಗಿದೆ. ಈ ಚಿಕಿತ್ಸೆಯಲ್ಲಿ ರೋಗಗ್ರಸ್ತ ಮೂಳೆ ಮಜ್ಜೆಯನ್ನು ತೆಗೆದು ಹಾಕಿ ಬದಲಿಗೆ, ರೋಗಮುಕ್ತ ಕಾಂಡಕೋಶಗಳನ್ನು ಬಳಸಿಕೊಂಡು ಆರೋಗ್ಯಕರ ರಕ್ತದ ಕಣಗಳನ್ನು ತಯಾರಿಸುವ ಮೂಳೆ ಮಜ್ಜೆಯನ್ನು ಕಸಿ ಮಾಡಲುತ್ತದೆ. ಈ ಕಾಂಡಕೋಶವನ್ನು ದಾನ ಮಾಡಲು ಪೂರ್ಣ ಎಚ್ಎಲ್ಎ-ಹೊಂದಾಣಿಕೆಯ ದಾನಿಗಳು ಇದಕ್ಕೆ ಸೂಕ್ತವಾಗಿರುತ್ತಾರೆ. ಆದರೆ ಪ್ರಸ್ತುತ ಲಭ್ಯವಿರುವ ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಪ್ರಗತಿಯೊಂದಿಗೆ, ಅರ್ಧ- ಹೊಂದಾಣಿಕಯ ದಾನಿಗಳಿಂದ ಸಹ ಮೂಳೆ ಮಜ್ಜೆಯ ಕಸಿಯನ್ನು ಯಶಸ್ವಿಯಾಗಿ ಮಾಡಬಹುದು. ಆದ್ದರಿಂದ ಪ್ರತಿಯೊಬ್ಬ ರೋಗಿಯು ಪೋಷಕರು ಅಥವಾ ಒಡಹುಟ್ಟಿದವರ ರೂಪದಲ್ಲಿ ದಾನಿಯನ್ನು ಹೊಂದಿರುತ್ತಾರೆ.

 

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗದ ವೈದ್ಯರ ತಂಡವು ಈ ಮಗುವನ್ನು ಉಳಿಸಲು ವಿಶಿಷ್ಟವಾದ ಅಸ್ಥಿಮಜ್ಜೆಯ ಕಸಿ ಮಾಡಲು ನಿರ್ಧರಿಸಿತು. ರೋಗಿಯ ತಂದೆ ಕೇವಲ ಶೇಕಡಾ 50 ರಷ್ಟು ಎಚ್‌ಎಲ್‌ಎ ಹೊಂದಿಕೆಯಾಗಿದ್ದರು ಮತ್ತು ವೈದ್ಯಕೀಯ ಪರೀಕ್ಷೆಗಳ ನಂತರ ದಾನಿಯಾಗಿ ಆಯ್ಕೆಯಾದರು. ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅರ್ಚನಾ ಎಂವಿ ಮಾತನಾಡಿ, ‘ರೋಗಿಯು ಮಾರಣಾಂತಿಕ ಕ್ಷಯರೋಗದ ಸೋಂಕಿನಿಂದ ಬಳಲುತ್ತಿದ್ದ ಕಾರಣ ಕೀಮೋಥೆರಪಿ ಮತ್ತು ಇಮ್ಯುನೊಸಪ್ರೆಸಿವ್ ಔಷಧಗಳನ್ನು ಬಳಸಲಾಗಲಿಲ್ಲ. ಅಂತಹ ಔಷಧಿಗಳನ್ನು ತಪ್ಪಿಸಲು, ಟಿ ಸಿ ಆರ್ ಆಲ್ಫಾ ಬೀಟಾ ಡಿಪ್ಲೀಷನ್ ಎಂದು ಕರೆಯಲ್ಪಡುವ ಸ್ಟೆಮ್ ಸೆಲ್ ಗ್ರಾಫ್ಟ್ ಮ್ಯಾನಿಪ್ಯುಲೇಷನ್ ತಂತ್ರಜ್ಞಾನವನ್ನು ಬಳಸಲಾಯಿತು, ಇದು ಕಸಿ ಸಮಯದಲ್ಲಿ ಸಹಜವಾಗಿ ಪ್ರಕ್ರಿಯೆ ನಡೆಯಲು ಸಹಾಯ ಮಾಡುತ್ತದೆ ಮತ್ತು ಅಡ್ಡಪರಿಣಾಮಗಳನ್ನು ಕಡಿಮೆ ಮಾಡುತ್ತದೆ’ ಎಂದು ಹೇಳಿದರು.

 

ಈ ಮಗುವಿಗೆ ನಮ್ಮ ವಿಶೇಷ ಮೂಳೆ ಮಜ್ಜೆ ಘಟಕದಲ್ಲಿ ಮೂಳೆ ಮಜ್ಜೆಯ ಕಸಿ ಮಾಡಲಾಯಿತು ಮತ್ತು 6 ವಾರಗಳ ನಂತರ ಸ್ಥಿರ ಸ್ಥಿತಿಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಯಶಸ್ವಿ ಅರ್ಧ-ಹೊಂದಾಣಿಕೆಯ ಟಿ ಸೆಲ್ ಡೆಪ್ಲೇಷನ್ ನೊಂದಿಗೆ ಮೂಳೆ ಮಜ್ಜೆ ಕಸಿ ನಡೆಸಿ, ಈಗ ಒಂದು ವರುಷವಾಗಿದ್ದು ಮಗುವು ರೋಗ ಮತ್ತು ಸೋಂಕಿನಿಂದ ಮುಕ್ತವಾಗಿ , ಆರೋಗ್ಯಕರ ಜೀವನ ನಡೆಸುತ್ತಿದೆ.

 

ಇಮ್ಯುನೊಹೆಮಟಾಲಜಿ ಮತ್ತು ರಕ್ತ ವರ್ಗಾವಣೆ ವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಧೆಯಾದ ಡಾ.ಶಮೀ ಶಾಸ್ತ್ರಿ ನೇತೃತ್ವದ ರಕ್ತ ಕೇಂದ್ರದ ವೈದ್ಯರ ತಂಡವು ಈ ಅಪರೂಪದ ಕಸಿಗೆ ಸಹಕರಿಸಿದೆ. ಮಕ್ಕಳ ರಕ್ತ ಶಾಸ್ತ್ರ ಮತ್ತು ಆಂಕೊಲೊಜಿ ವಿಭಾಗದ ಮುಖ್ಯಸ್ಥರಾದ ಡಾ.ವಾಸುದೇವ ಭಟ್ ಕೆ ಮಾಹಿತಿ ನೀಡಿ, “ರಾಜ್ಯದ ಈ ಕರಾವಳಿ ಪ್ರದೇಶದಲ್ಲಿ ಯಶಸ್ವಿ ಟಿ ಸೆಲ್-ಡಿಪ್ಲೀಟೆಡ್ ಹ್ಯಾಪ್ಲೋಡೆಂಟಿಕಲ್ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್‌ಗೆ ಒಳಗಾದ ಮೊದಲ ಪ್ರಕರಣ ಇದು. ಈ ನವೀನ ತಂತ್ರಜ್ಞನದೊಂದಿಗೆ, ದೊಡ್ಡ ತೊಡಕುಗಳಿಲ್ಲದೆ ಸಂಪೂರ್ಣವಾಗಿ ಹೊಂದಾಣಿಕೆಯ ದಾನಿಯು ಇಲ್ಲದಿರುವಾಗ ಕೂಡ ನಾವು ಮೂಳೆ ಮಜ್ಜೆಯ ಕಸಿ ಮಾಡಬಹುದಾಗಿದೆ” ಎಂದರು .

 

ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ್ ಶೆಟ್ಟಿ ಅವರು ಅಪರೂಪದ ರಕ್ತದ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ಜೀವ ಉಳಿಸುವ ನಿಟ್ಟಿನಲ್ಲಿ ಮಕ್ಕಳ ರಕ್ತ ಶಾಸ್ತ್ರ ಆಂಕೊಲಾಜಿ ವಿಭಾಗದ ವೈದ್ಯರ, ರಕ್ತನಿಧಿ ವೈದ್ಯರ ಮತ್ತು ಶುಶ್ರೂಷಾ ಸೇವೆಗಳ ತಂಡದ ಕಾರ್ಯವನ್ನು ಶ್ಲಾಘಿಸಿದರು.

Previous Post

ಉಚ್ಚಿಲ: ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ ಸಂಪನ್ನ.!!

Next Post

ಮಲ್ಪೆ ಬೀಚ್ ನಲ್ಲಿ “ಕಂಗ್ರಾಜ್ಯುಲೇಶನ್ ಇಸ್ರೋ’ ಶೀರ್ಷಿಕೆ ನೀಡಿ ಮರಳು ಶಿಲ್ಪ ರಚಿಸಿ ಇಸ್ರೋ ಗೆ ಅಭಿನಂದನೆ ಸಲ್ಲಿಸಿದ ಸ್ಯಾಂಡ್ ಥೀಂ ಉಡುಪಿ’ ತಂಡದ ಸದಸ್ಯರು .!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಮಲ್ಪೆ ಬೀಚ್ ನಲ್ಲಿ "ಕಂಗ್ರಾಜ್ಯುಲೇಶನ್ ಇಸ್ರೋ' ಶೀರ್ಷಿಕೆ ನೀಡಿ ಮರಳು ಶಿಲ್ಪ ರಚಿಸಿ ಇಸ್ರೋ ಗೆ ಅಭಿನಂದನೆ ಸಲ್ಲಿಸಿದ ಸ್ಯಾಂಡ್ ಥೀಂ ಉಡುಪಿ' ತಂಡದ ಸದಸ್ಯರು .!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ದೈವದ ಮೂರ್ತಿ ಕಳ್ಳತನ: ಸುರತ್ಕಲ್ ಪೊಲೀಸರಿಂದ ಇಬ್ಬರ ಬಂಧನ..!!

ದೈವದ ಮೂರ್ತಿ ಕಳ್ಳತನ: ಸುರತ್ಕಲ್ ಪೊಲೀಸರಿಂದ ಇಬ್ಬರ ಬಂಧನ..!!

29/01/2026
ನಗರದಲ್ಲಿ ಡ್ರಗ್ಸ್ ದಂಧೆಗೆ ಬ್ರೇಕ್: 4 ಕೋಟಿ ರೂ. ಮಾದಕ ವಸ್ತು ವಶ, 10 ಮಂದಿ ಸೆರೆ…!!

ನಗರದಲ್ಲಿ ಡ್ರಗ್ಸ್ ದಂಧೆಗೆ ಬ್ರೇಕ್: 4 ಕೋಟಿ ರೂ. ಮಾದಕ ವಸ್ತು ವಶ, 10 ಮಂದಿ ಸೆರೆ…!!

29/01/2026
ಅಧಿವೇಶನ ಫೆಬ್ರವರಿ 3ರ ವರೆಗೆ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಒಲವು..!!

ಅಧಿವೇಶನ ಫೆಬ್ರವರಿ 3ರ ವರೆಗೆ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಒಲವು..!!

29/01/2026
ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

29/01/2026

Recent News

ದೈವದ ಮೂರ್ತಿ ಕಳ್ಳತನ: ಸುರತ್ಕಲ್ ಪೊಲೀಸರಿಂದ ಇಬ್ಬರ ಬಂಧನ..!!

ದೈವದ ಮೂರ್ತಿ ಕಳ್ಳತನ: ಸುರತ್ಕಲ್ ಪೊಲೀಸರಿಂದ ಇಬ್ಬರ ಬಂಧನ..!!

29/01/2026
ನಗರದಲ್ಲಿ ಡ್ರಗ್ಸ್ ದಂಧೆಗೆ ಬ್ರೇಕ್: 4 ಕೋಟಿ ರೂ. ಮಾದಕ ವಸ್ತು ವಶ, 10 ಮಂದಿ ಸೆರೆ…!!

ನಗರದಲ್ಲಿ ಡ್ರಗ್ಸ್ ದಂಧೆಗೆ ಬ್ರೇಕ್: 4 ಕೋಟಿ ರೂ. ಮಾದಕ ವಸ್ತು ವಶ, 10 ಮಂದಿ ಸೆರೆ…!!

29/01/2026
ಅಧಿವೇಶನ ಫೆಬ್ರವರಿ 3ರ ವರೆಗೆ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಒಲವು..!!

ಅಧಿವೇಶನ ಫೆಬ್ರವರಿ 3ರ ವರೆಗೆ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ಒಲವು..!!

29/01/2026
ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

ಕಾರ್ಕಳದಲ್ಲಿ ಗಂಡನಿಂದ ಪತ್ನಿಗೆ ಮಾರಣಾಂತಿಕ ಹಲ್ಲೆ – ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು…!!

29/01/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved