ಉಡುಪಿ : ಪರ್ಯಾಯ ಶ್ರೀ ಕೃಷ್ಣಾಪುರ ಮಠ, ಶ್ರೀಕೃಷ್ಣ ಮಠದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ವ್ಯಕ್ತಿಗತ ಸ್ಪರ್ಧೆ, ಹುಲಿವೇಷ ಕುಣಿತ, ಜಾನಪದ ಸ್ಪರ್ಧೆ ಮೂರು ವಿಭಾಗವಾಗಿ ಪ್ರಥಮ, ದ್ವಿತೀಯ, ತೃತೀಯ ಮೂರು ವಿಭಾಗ ದಲ್ಲಿ ಬಹುಮಾನಗಳಿವೆ.
ಆ. 27ರ ಬೆಳಗ್ಗೆ 8.30ಕ್ಕೆ ಕನಕ ಮಂಟಪದಲ್ಲಿ ರಸಪ್ರಶ್ನೆ, ಅನ್ನಬ್ರಹ್ಮ ಸಭಾಂಗಣದಲ್ಲಿ ಬೆಳಗ್ಗೆ ಸಾಂಪ್ರದಾಯಿಕ ಚುಕ್ಕಿರಂಗವಲ್ಲಿ, ಸೆ. 2ರ ಅಪರಾಹ್ನ 2.30ರಿಂದ ಅನ್ನಬ್ರಹ್ಮ, ಮಧ್ವಮಂಟಪ, ರಾಜಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಸಂಗೀತ ಸ್ಪರ್ಧೆ ನಡೆಯಲಿದೆ.

ಸೆ. 2ರ ಅಪರಾಹ್ನ 2.30ಕ್ಕೆ ಮಧ್ವಮಂಟಪದಲ್ಲಿ ಶಂಖ ಊದುವ ಸ್ಪರ್ಧೆ, ಸೆ. 3ಕ್ಕೆ ಬೆಳಗ್ಗೆ 10.30ರಿಂದ ಮಧ್ವಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಸ್ಪರ್ಧೆ, ಸೆ. 6ಕ್ಕೆ ಬೆಳಗ್ಗೆ 9.30ರಿಂದ ಕೃಷ್ಣ ವೇಷ ಆಯೋಜಿಸ ಲಾಗಿದ್ದು, ಮಧ್ವಾಂಗಣದಲ್ಲಿ ಮುದ್ದು ಕೃಷ್ಣ, ಭೋಜನ ಶಾಲೆ ಮಾಳಿಗೆಯಲ್ಲಿ ಬಾಲಕೃಷ್ಣ, ಅನ್ನಬ್ರಹ್ಮದಲ್ಲಿ ಕಿಶೋರ ಕೃಷ್ಣ ಸ್ಪರ್ಧೆ, ಸೆ. 7ರಂದು ರಾತ್ರಿ 7.30ರಿಂದ ರಾಜಾಂಗಣದಲ್ಲಿ ಜಾನಪದ ಹುಲಿವೇಷ ಕುಣಿತ ಸ್ಪರ್ಧೆ ನಡೆಯಲಿದೆ.
ಕೃಷ್ಣಮಠದ ಬಡಗು ಮಾಳಿಗೆ ಕಚೇರಿಯಲ್ಲಿ ಸ್ಪರ್ಧಾ ದಿನದ ಹಿಂದಿನ ದಿನ ಸಂಜೆ 6 ಗಂಟೆ ಒಳಗೆ ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ 0820-2520598 ಸಂಪರ್ಕಿ ಸುವಂತೆ ತಿಳಿಸಲಾಗಿದೆ.






