Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ವಿದ್ಯಾರ್ಥಿಗಳೇ ಸಾಧನೆಗೆ ವಿಪುಲ ಅವಕಾಶಗಳಿವೆ, ಬಳಸಿಕೊಳ್ಳಿ : ಜಾನ್ ಆರ್ ಡಿಸಿಲ್ವ

Dhrishya News by Dhrishya News
11/11/2026
in ಸುದ್ದಿಗಳು
0
ವಿದ್ಯಾರ್ಥಿಗಳೇ ಸಾಧನೆಗೆ ವಿಪುಲ ಅವಕಾಶಗಳಿವೆ, ಬಳಸಿಕೊಳ್ಳಿ : ಜಾನ್ ಆರ್ ಡಿಸಿಲ್ವ
0
SHARES
1
VIEWS
Share on FacebookShare on Twitter

ಕಾರ್ಕಳ : ಇಂದು ವಿದ್ಯಾರ್ಥಿ ವೇತನ ಪಡೆಯುವ ವಿದ್ಯಾರ್ಥಿಗಳು ಕಲಿತು ಮುಂದೆ ತಾವು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವವರಾಗಬೇಕು. ಇಂದು ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳಿವೆ ಅವುಗಳನ್ನು ಬಳಸಿಕೊಳ್ಳುವ ಚಾಕಚಕ್ಯತೆ ನಮ್ಮಲ್ಲಿ ಬೆಳೆಸಿಕೊಂಡು ಜೀವನದಲ್ಲಿ ಅಭಿವೃದ್ಧಿ ಹೊಂದಬೇಕಾಗಿದೆ. ಸರಕಾರದ ಸವಲತ್ತುಗಳನ್ನು ಪಡೆದುಕೊಳ್ಳುವಲ್ಲಿ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದ್ದಲ್ಲಿ ತಾನು ಸದಾ ಸಿದ್ದ ಎಂದು ಕಾರ್ಕಳದ ಉದ್ಯಮಿ, ಜಾನ್ಸ್ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ಜಾನ್ ಆರ್ ಡಿಸಿಲ್ವ ಅವರು ತಿಳಿಸಿದರು.

ಜಮೀಯತುಲ್ ಫಲಾಹ್ ಕಾರ್ಕಳ ತಾಲೂಕು ಘಟಕದ ವತಿಯಿಂದ ನಡೆದ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು
ಜಮೀಯ್ಯತುಲ್ ಫಲಾಹ್ ಕೇಂದ್ರ ಸಮಿತಿ ಅಧ್ಯಕ್ಷ ಅಷ್ಪಾಕ್ ಅಹ್ಮದ್ ಮಾತನಾಡಿ ಪೋಷಕರೇ ನಿಮ್ಮ ಅಮೂಲ್ಯವಾದ ಸಮಯವನ್ನು ನಿಮ್ಮ ಮಕ್ಕಳ ಜೊತೆ ಕಳೆಯಿರಿ. ಶಾಲಾ ಕಾಲೇಜುಗಳಲ್ಲಿ ವ್ಯಾಪಕವಾಗಿ ಮಾದಕ ದ್ರವ್ಯ ಜಾಡು ಕಾರ್ಯಾಚರಿಸುತ್ತಿದೆ ನಿಮ್ಮ ಮಕ್ಕಳು ದಾರಿ ತಪ್ಪದಂತೆ ನಿಗಾವಹಿಸಿ ನಿಮ್ಮ ಸಮಯ ನಿಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುತ್ತದೆ. ಇಸ್ಲಾಂನ ಮೂಲ ತತ್ವವೇ ಓದು ಖುರಾನ್ ನ ಮೊದಲು ಪದವೇ ಓದು ಎಂದಾಗಿದೆ ಅದಕ್ಕಾಗಿ ಜಮೀಯ್ಯತುಲ್ ಫಲಾಹ್ ದ ಮೂಲ ದ್ಯೇಯವೇ ಶಿಕ್ಷಣಕ್ಕೆ ಒತ್ತು ನೀಡುವುದಾಗಿದೆ ಈ ನಿಟ್ಟಿನಲ್ಲಿ ಕೆಲಸ ನಡೆಸುತ್ತಿದ್ದೇವೆ ಎಂದರು.

ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ, ಜಮೀಯತುಲ್ ಫಲಾಹ್ ಕೋಶಾಧಿಕಾರಿ ಮೊಹಮ್ಮದ್ ಶರೀಫ್ ಮಾತನಾಡಿ, ಮುಸ್ಲಿಮ್ ಸಮುದಾಯದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದಿಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು ಇಂದು ಪ್ರತಿ ಮನೆ ಮನೆಗಳಲ್ಲಿ ಪದವೀಧರರಿದ್ದಾರೆ, ಆದರೆ ಸರಕಾರಿ ಮತ್ತು ಖಾಸಗಿ ವಲಯದಲ್ಲಿ ಕೆಲಸದಲ್ಲಿ ಗುರುತಿಸಿ ಕೊಂಡವರ ಸಂಖ್ಯೆ ಕಡಿಮೆಯಾದುದರಿಂದ ನಮಗೆ ಅಪವಾದ ಎದುರಾಗಿದೆ. ಸ್ವಾತಂತ್ರ ಪೂರ್ವ ಇದ್ದ ಮುಸ್ಲಿಮರ ಸರಕಾರಿ ನೌಕರರ ಸಂಖ್ಯೆ ಸ್ವಾತಂತ್ರ ನಂತರದ ದಿನಗಳಲ್ಲಿ ಕಮ್ಮಿಯಾಗಿತ್ತು ಇತ್ತೀಚಿನ ದಿನಗಳಲ್ಲಿ ಮತ್ತೆ ಉನ್ನತ ಸರಕಾರಿಕೆಲಸಗಳಲ್ಲಿ ಉತ್ಸಾಹ ತೋರುತ್ತಿರುವುದು ಉತ್ತಮ ಬೆಳವಣಿಗೆ ಎಂದ ಅವರು ಕೆಲಸದಲ್ಲಿ ಇಸ್ಲಾಂ ಪ್ರತಿಪಾದಿಸಿದ ನಿಷ್ಠೆ, ಕಾರ್ಯಪರತೆ, ಮೋಸರಹಿತ, ಭ್ರಷ್ಟಾಚಾರ ರಹಿತ ಆಡಳಿತಾತ್ಮಕ ಕೆಲಸದ ಮೂಲಕ ಸಮಾಜಕ್ಕೆ ಮಾದರಿಯಾಗಬೇಕಿದೆ ಎಂದರು
ಜಮೀಯತುಲ್ ಫಲಾಹ್ ಕಾರ್ಕಳ ತಾಲೂಕು ಅಧ್ಯಕ್ಷ ಮೊಹಮ್ಮದ್ ಗೌಸ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಉದ್ಯಮಿಗಳಾದ ಮೊಹಮ್ಮದ್ ಅಸ್ಲಾಂ ಕುಂಟಲ್ಪಾಡಿ, ಕೆ ಪಿ ಶಬ್ಬೀರ್ ಹಸನ್ ಕಾಳಿಕಾಂಬಾ, ಜಮೀಯತುಲ್ ಫಲಾಹ್ ಉಪಾಧ್ಯಕ್ಷರುಗಳಾದ ಅಬ್ದುಲ್ ರಶೀದ್ ಬಂಗ್ಲೆಗುಡ್ಡೆ, ಸಯ್ಯೇದ್ ಅಬ್ಬಾಸ್ ಅಂಚಿಕಟ್ಟೆ, ಸಂಘಟನಾ ಕಾರ್ಯದರ್ಶಿ ಸಯ್ಯದ್ ಹಸನ್ ಗಾಂಧಿ ಮೈದಾನ್ ಸದಸ್ಯರಾದ ಮೊಹಮ್ಮದ್ ಸಾಹೇಬ್ ಪುಲ್ಕೆರಿ, ಕೆ ಎಸ್ ಮೊಹಮ್ಮದ್ ಕಾಸಿಮ್ ಅಂಚಿಕಟ್ಟೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.   

ಕರ್ನಾಟಕ ಮುಸ್ಲಿಮ್ ಜಮಾತ್ ಕಾರ್ಕಳ ಅಧ್ಯಕ್ಷ ನಾಸಿರ್ ಶೇಕ್ ಬೈಲೂರ್, ಕಾರ್ಯಕ್ರಮ ನಿರೂಪಿಸಿದರು. ಸಮದ್ ಖಾನ್ ಸ್ವಾಗತಿಸಿ,
ಅಬ್ದುಲ್ ಮುನೀರ್ ಧನ್ಯವಾದವಿತ್ತರು.

Previous Post

ಗೂಗಲ್ ಪೇ ಮೂಲಕ ₹2.49 ಲಕ್ಷ ಸೈಬರ್ ವಂಚನೆ: ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ವಿದ್ಯಾರ್ಥಿಗಳೇ ಸಾಧನೆಗೆ ವಿಪುಲ ಅವಕಾಶಗಳಿವೆ, ಬಳಸಿಕೊಳ್ಳಿ : ಜಾನ್ ಆರ್ ಡಿಸಿಲ್ವ

ವಿದ್ಯಾರ್ಥಿಗಳೇ ಸಾಧನೆಗೆ ವಿಪುಲ ಅವಕಾಶಗಳಿವೆ, ಬಳಸಿಕೊಳ್ಳಿ : ಜಾನ್ ಆರ್ ಡಿಸಿಲ್ವ

11/11/2026
ಮಂಗಳೂರಿನಲ್ಲಿ APK ಲಿಂಕ್ ಮೂಲಕ ಆನ್‌ಲೈನ್ ವಂಚನೆ: ಕೆಮಿಸ್ಟ್‌ಗೆ ₹1.18 ಲಕ್ಷ ನಷ್ಟ..!

ಗೂಗಲ್ ಪೇ ಮೂಲಕ ₹2.49 ಲಕ್ಷ ಸೈಬರ್ ವಂಚನೆ: ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

10/11/2026
ಶಿರ್ವ: ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸುಕೇಶ ಆಚಾರ್ಯ ಮೃತ್ಯು..!

ಶಿರ್ವ: ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸುಕೇಶ ಆಚಾರ್ಯ ಮೃತ್ಯು..!

10/11/2026
ಅಮೆರಿಕದ ಸ್ಯಾನ್ ಡಿಯಾಗೋದಲ್ಲಿ ಪುತ್ತಿಗೆ ಶ್ರೀಗಳಿಂದ ಗೋಪೂಜೆ

ಅಮೆರಿಕದ ಸ್ಯಾನ್ ಡಿಯಾಗೋದಲ್ಲಿ ಪುತ್ತಿಗೆ ಶ್ರೀಗಳಿಂದ ಗೋಪೂಜೆ

10/11/2026

Recent News

imunify-bot-check