Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಆರೋಗ್ಯಕರ ವಯಸ್ಸಾಗುವಿಕೆ ಕುರಿತು ಹರ್ಬಲೈಫ್ ಇಂಡಿಯಾ- ಐಐಎಸ್‌ಸಿ ಮಹತ್ವದ ಅಧ್ಯಯನ ಆರಂಭ

1,000 ಮಂದಿಯಲ್ಲಿ ಚಯಾಪಚಯ ಆರೋಗ್ಯ, ಕರುಳಿನ ಸೂಕ್ಷ್ಮಜೀವಿ ವೈವಿಧ್ಯತೆ ಮತ್ತು ಜೈವಿಕ ವಯಸ್ಸಿನ ಮೌಲ್ಯಮಾಪನ ಮಾಡಲಿರುವ ಬಹು-ನಗರ ಯೋಜನೆ

Dhrishya News by Dhrishya News
04/11/2026
in ಸುದ್ದಿಗಳು
0
ಆರೋಗ್ಯಕರ ವಯಸ್ಸಾಗುವಿಕೆ ಕುರಿತು ಹರ್ಬಲೈಫ್ ಇಂಡಿಯಾ- ಐಐಎಸ್‌ಸಿ ಮಹತ್ವದ ಅಧ್ಯಯನ ಆರಂಭ
0
SHARES
1
VIEWS
Share on FacebookShare on Twitter

ಬೆಂಗಳೂರು, ನವೆಂಬರ್ 03, 2026: ಪ್ರಮುಖ ಸ್ವಾಸ್ಥ್ಯ ಸಂಸ್ಥೆಯಾದ ಹರ್ಬಲೈಫ್ ಇಂಡಿಯಾ ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಜಂಟಿಯಾಗಿ ಆರೋಗ್ಯಕರ ವಯಸ್ಸಾಗುವಿಕೆಯ ಕುರಿತು ಮಹತ್ವದ, ಬಹುಕೇಂದ್ರಿತ ಸಂಶೋಧನಾ ಅಧ್ಯಯನವನ್ನು ಆರಂಭಿಸಿವೆ.

ಆರೋಗ್ಯ ಮತ್ತು ಸಂತೋಷ ಪರಿಕಲ್ಪನೆಯಡಿ ರೂಪಿಸಲಾಗಿರುವ ಈ ಅಧ್ಯಯನವು ಭಾರತೀಯ ವಯಸ್ಕರಲ್ಲಿ ಆರೋಗ್ಯಕರ ವಯಸ್ಸಾಗುವಿಕೆಯನ್ನು ಸಾಧ್ಯವಾಗಿಸುವಲ್ಲಿ ಚಯಾಪಚಯ ಆರೋಗ್ಯ, ಸಮುದಾಯದ ಸಹಭಾಗಿತ್ವ, ಆರೋಗ್ಯ ಮತ್ತು ಸಂತೋಷ, ಸ್ವಾಸ್ಥ್ಯ ಮಾರ್ಗದರ್ಶನ ಹಾಗೂ ಬಯೋಮಾರ್ಕರ್ ಆಧಾರಿತ ವೈಜ್ಞಾನಿಕ ಪುರಾವೆಗಳ ನಡುವಿನ ಸಂಬಂಧಗಳನ್ನು ಅನ್ವೇಷಿಸುವ ಗುರಿ ಹೊಂದಿದೆ. ಐಐಎಸ್‌ಸಿ ಸಹಯೋಗ ಹಾಗೂ ಹರ್ಬಲೈಫ್‌ನ ಬೆಂಬಲದೊಂದಿಗೆ ಬೆಂಗಳೂರು, ಮೈಸೂರು, ಹೈದರಾಬಾದ್ ಮತ್ತು ಚೆನ್ನೈನ ವಿವಿಧ ಕೇಂದ್ರಗಳಲ್ಲಿ ಈ ಸಂಶೋಧನಾ ಅಧ್ಯಯನ ನಡೆಯಲಿದೆ.

ಭಾರತದಲ್ಲಿ ಹಿರಿಯ ನಾಗರಿಕರ ಜನಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜನರು ಎಷ್ಟು ಕಾಲ ಬದುಕುತ್ತಾರೆ ಎಂಬುದರ ಜೊತೆಗೆ ಎಷ್ಟು ಗುಣಮಟ್ಟದಿಂದ ಬದುಕುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವ ಆಸಕ್ತಿಯೂ ಹೆಚ್ಚುತ್ತಿದೆ. ವೈಜ್ಞಾನಿಕ ಸಂಶೋಧನೆಗಳು ಪೋಷಕಾಂಶಗಳು, ಜೀವನಶೈಲಿ ಮತ್ತು ಚಯಾಪಚಯ ಆರೋಗ್ಯದ ಪ್ರಾಮುಖ್ಯತೆಯನ್ನು ಸತತವಾಗಿ ಒತ್ತಿಹೇಳುತ್ತಿದ್ದರೂ, ಸಾಮಾಜಿಕ ಸಂಪರ್ಕ, ಜೀವನದ ಉದ್ದೇಶ, ಸ್ವಾಸ್ಥ್ಯ ಬೆಂಬಲ ವ್ಯವಸ್ಥೆಗಳು ಮತ್ತು ಜೈವಿಕ ಮಾರ್ಕರ್‌ಗಳಂತಹ ಅಂಶಗಳು ಚಯಾಪಚಯ ಆರೋಗ್ಯ ಹಾಗೂ ಒಟ್ಟಾರೆ ಸ್ವಾಸ್ಥ್ಯದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದರ ಕುರಿತು ಇರುವ ಮಾಹಿತಿ ಬಹಳ ಸೀಮಿತವಾಗಿದೆ.

ಈ ಆರೋಗ್ಯ ಮತ್ತು ಸಂತೋಷ ಅಧ್ಯಯನದಲ್ಲಿ 1,000ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದು, ಪ್ರತಿಯೊಬ್ಬರೂ ಸುಮಾರು ಆರು ತಿಂಗಳ ಕಾಲ ಅಧ್ಯಯನಕ್ಕೆ ಒಳಪಡಲಿದ್ದಾರೆ. ಬಹುಆಯಾಮದ ಮೌಲ್ಯಮಾಪನ ವಿಧಾನದ ಮೂಲಕ ದೈಹಿಕ ಆರೋಗ್ಯ, ಜೈವಿಕ ಮಾರ್ಕರ್‌ಗಳು, ಕರುಳಿನ ಮೈಕ್ರೋಬಯೋಮ್ ಸಂಯೋಜನೆ, ಪೋಷಣೆ, ಜೀವನಶೈಲಿ ಪದ್ಧತಿಗಳು ಮತ್ತು ಕ್ಷೇಮ ಸೂಚಕಗಳನ್ನು ಪರೀಕ್ಷಿಸಲಾಗುತ್ತದೆ. ಇದು ವೈಯಕ್ತಿಕ ಒಳನೋಟಗಳನ್ನು ಒದಗಿಸುವುದರೊಂದಿಗೆ ಆರೋಗ್ಯ, ಸಂತೋಷ ಮತ್ತು ಸ್ವಾಸ್ಥ್ಯದ ಬಗ್ಗೆ ಆಳವಾದ ವೈಜ್ಞಾನಿಕ ತಿಳುವಳಿಕೆಯನ್ನು ನೀಡಲಿದೆ.

*ಈ ಕುರಿತು ಮಾತನಾಡಿದ ಹರ್ಬಲೈಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಯ್ ಖನ್ನಾ ಅವರು,* “ಸರಿಯಾದ ಪೋಷಣೆಯಾಗಿರಲಿ, ಅವರನ್ನು ಸಕ್ರಿಯವಾಗಿರಿಸುವ ಜನರಿರಲಿ ಅಥವಾ ಪ್ರೇರೇಪಿಸುವ ಸಮುದಾಯವಾಗಿರಲಿ ಜನರ ಸುತ್ತಮುತ್ತ ಸೂಕ್ತ ಬೆಂಬಲವಿದ್ದಾಗ- ಅದು ಅವರು ಆರೋಗ್ಯವಾಗಿರುತ್ತಾರೆ ಎಂದು ಹರ್ಬಲೈಫ್ ಇಂಡಿಯಾದಲ್ಲಿ ನಾವು ನಂಬುತ್ತೇವೆ. ಜನರು ವಯಸ್ಸಾದಂತೆ ಆ ದೈನಂದಿನ ಆಯ್ಕೆಗಳು ಎಷ್ಟು ಮಹತ್ವ ಪಡೆಯುತ್ತವೆ ಎಂಬುದನ್ನು ನಾವು ತಿಳಿಯಲು ಬಯಸುತ್ತೇವೆ, ಮತ್ತು ಆ ಉತ್ತರವು ಭಾರತೀಯರ ಜೀವನಶೈಲಿಯಿಂದಲೇ ಮೂಡಿಬರಬೇಕಿದೆ. ಐಐಎಸ್‌ಸಿ ಜೊತೆಗಿನ ಪಾಲುದಾರಿಕೆಯು ಅಂತಹ ಸಂಶೋಧನೆಗೆ ಅಗತ್ಯವಿರುವ ವೈಜ್ಞಾನಿಕ ನಿಖರತೆಯನ್ನು ತಂದುಕೊಡುತ್ತದೆ” ಎಂದು ತಿಳಿಸಿದರು.

ಐಐಎಸ್‌ಸಿಯ ಡೆವಲಪ್‌ಮೆಂಟಲ್ ಬಯಾಲಜಿ ಮತ್ತು ಜೆನೆಟಿಕ್ಸ್ ವಿಭಾಗದ ಪ್ರೊ. ದೀಪಕ್ ಸೈನಿ ಅವರು ಮಾತನಾಡಿ,* “ಸಮುದಾಯ, ಪೋಷಣೆ ಮತ್ತು ದೈನಂದಿನ ಅಭ್ಯಾಸಗಳನ್ನು ಬಾಯಾರ ಹೊಗಳುವುದು ಸುಲಭ, ಆದರೆ ವೈಜ್ಞಾನಿಕವಾಗಿ ಸಾಬೀತುಪಡಿಸುವುದು ಕಷ್ಟ. ಹರ್ಬಲೈಫ್ ಇಂಡಿಯಾ ಜತೆಗಿನ ಈ ಸಹಯೋಗದ ಮೂಲಕ, ಕಾಲಾನಂತರದಲ್ಲಿ ಜನರ ಆರೋಗ್ಯದಲ್ಲಿ ಆಗುವ ನೈಜ ಬದಲಾವಣೆಗಳನ್ನು ಗುರುತಿಸಿ ಅರ್ಥಪೂರ್ಣ ವೈಜ್ಞಾನಿಕ ಪುರಾವೆಗಳನ್ನು ಸೃಷ್ಟಿಸುವ ಸುವರ್ಣಾವಕಾಶ ನಮಗೆ ದೊರೆತಿದೆ. ಸ್ವತಂತ್ರ, ಕಟ್ಟುನಿಟ್ಟಿನ ಸಂಶೋಧನೆ ನಡೆಸುವುದು ಮತ್ತು ಪುರಾವೆಗಳು ಎಲ್ಲಿಗೆ ಮುಟ್ಟಿಸುತ್ತವೆಯೋ ಆ ಫಲಿತಾಂಶಗಳನ್ನು ಅತ್ಯಂತ ಪಾರದರ್ಶಕವಾಗಿ ಸಮಾಜಕ್ಕೆ ಮುಟ್ಟಿಸುವುದು ಐಐಎಸ್‌ಸಿಯ ಬದ್ಧತೆಯಾಗಿದೆ. ಈ ಅಧ್ಯಯನದಿಂದ ಹೊರಬರುವ ಜ್ಞಾನವು ಭಾರತೀಯರು ದೀರ್ಘಕಾಲ ಆರೋಗ್ಯವಾಗಿರಲು ಏನು ನೆರವಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಲಿದ್ದು, ಜನಸಾಮಾನ್ಯರು, ವೈದ್ಯಕೀಯ ವೃತ್ತಿಪರರು ಹಾಗೂ ನೀತಿ ನಿರೂಪಕರು ಉತ್ತಮ ಆರೋಗ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು ದಾರಿದೀಪವಾಗಲಿದೆ” ಎಂದು ವಿವರಿಸಿದರು.

Previous Post

ಉಡುಪಿ: ಅಮ್ಮಣ್ಣಿ ರಾಮಣ್ಣ ಸಭಾಭವನದಿಂದ ಚಿಟ್ಪಾಡಿ ಮುಖ್ಯರಸ್ತೆ ಕಾಮಗಾರಿ ಶೀಘ್ರ ಆರಂಭಕ್ಕೆ ಸೂಚನೆ..!

Next Post

ಸಿಯಾಟಲ್‌ನಲ್ಲಿ ಪುತ್ತಿಗೆ ಶ್ರೀಗಳಿಗೆ ವೈಭವದ ಗುರುವಂದನಾ ಮಹೋತ್ಸವ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಸಿಯಾಟಲ್‌ನಲ್ಲಿ ಪುತ್ತಿಗೆ ಶ್ರೀಗಳಿಗೆ ವೈಭವದ ಗುರುವಂದನಾ ಮಹೋತ್ಸವ

ಸಿಯಾಟಲ್‌ನಲ್ಲಿ ಪುತ್ತಿಗೆ ಶ್ರೀಗಳಿಗೆ ವೈಭವದ ಗುರುವಂದನಾ ಮಹೋತ್ಸವ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಸಿಯಾಟಲ್‌ನಲ್ಲಿ ಪುತ್ತಿಗೆ ಶ್ರೀಗಳಿಗೆ ವೈಭವದ ಗುರುವಂದನಾ ಮಹೋತ್ಸವ

ಸಿಯಾಟಲ್‌ನಲ್ಲಿ ಪುತ್ತಿಗೆ ಶ್ರೀಗಳಿಗೆ ವೈಭವದ ಗುರುವಂದನಾ ಮಹೋತ್ಸವ

04/11/2026
ಆರೋಗ್ಯಕರ ವಯಸ್ಸಾಗುವಿಕೆ ಕುರಿತು ಹರ್ಬಲೈಫ್ ಇಂಡಿಯಾ- ಐಐಎಸ್‌ಸಿ ಮಹತ್ವದ ಅಧ್ಯಯನ ಆರಂಭ

ಆರೋಗ್ಯಕರ ವಯಸ್ಸಾಗುವಿಕೆ ಕುರಿತು ಹರ್ಬಲೈಫ್ ಇಂಡಿಯಾ- ಐಐಎಸ್‌ಸಿ ಮಹತ್ವದ ಅಧ್ಯಯನ ಆರಂಭ

04/11/2026
ಉಡುಪಿ: ಅಮ್ಮಣ್ಣಿ ರಾಮಣ್ಣ ಸಭಾಭವನದಿಂದ ಚಿಟ್ಪಾಡಿ ಮುಖ್ಯರಸ್ತೆ ಕಾಮಗಾರಿ ಶೀಘ್ರ ಆರಂಭಕ್ಕೆ ಸೂಚನೆ..!

ಉಡುಪಿ: ಅಮ್ಮಣ್ಣಿ ರಾಮಣ್ಣ ಸಭಾಭವನದಿಂದ ಚಿಟ್ಪಾಡಿ ಮುಖ್ಯರಸ್ತೆ ಕಾಮಗಾರಿ ಶೀಘ್ರ ಆರಂಭಕ್ಕೆ ಸೂಚನೆ..!

04/11/2026
ಮಂಗಳೂರು : ಅಮೆಜಾನ್ ಕಸ್ಟಮರ್ ಕೇರ್ ಹೆಸರಿನಲ್ಲಿ ₹1.30 ಲಕ್ಷ ಆನ್‌ಲೈನ್ ವಂಚನೆ..!

ಮಂಗಳೂರು : ಅಮೆಜಾನ್ ಕಸ್ಟಮರ್ ಕೇರ್ ಹೆಸರಿನಲ್ಲಿ ₹1.30 ಲಕ್ಷ ಆನ್‌ಲೈನ್ ವಂಚನೆ..!

04/11/2026

Recent News

imunify-bot-check