ಬ್ರಹ್ಮಾವರ: ಮಾಣಿಕ್ಯ ಕ್ರಿಕೆಟರ್ಸ್ ನೀಲಾವರ ಇದರ 20 ನೇವರ್ಷದ ಅಂಗವಾಗಿ ತಂಡದ ಪ್ರಮುಖ ಆಟಗಾರ ಅಫಘಾತದಲ್ಲಿ ಮೃತರಾದ ಪ್ರದೀಪ್ ಆಚಾರ್ಯ ಅವರ ಸ್ಮರಣಾರ್ಥ ಮಾಣಿಕ್ಯ ಪ್ರೀಮಿಯರ್ ಲೀಗ್ 2026 ಹಾಗೂ ವಿಶ್ವಕರ್ಮ ಟ್ರೋಫಿ ಕ್ರಿಕೆಟ್ ಪಂದ್ಯಾಟ 60 ಗಜಗಳ ಸೀಮಿತ ಓವರಗಳ ಹಗಲಿನ 3 ದಿನಗಳ ಪಂದ್ಯಾಕೂಟ ಶುಕ್ರವಾರ ನೀಲಾವರ ಹೆಬ್ಬಲಸಿನಕಟ್ಟೆ ಕ್ರೀಡಾಂಗಣದಲ್ಲಿ ಚೇರ್ಕಾಡಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ನಾರಾಯಣ ನಾಯ್ಕ್ ಚಾಲನೆ ನೀಡಿದರು.
ಮಾಣಿಕ್ಯ ಕ್ರಿಕೆಟರ್ಸ್ ಅಧ್ಯಕ್ಷ ರಾಘವೇಂದ್ರ ಆಚಾರ್ಯ ಆರೂರು ಗ್ರಾಮಪಂಚಾಯತಿ ಮಾಜಿ ಅಧ್ಯಕ್ಷ ರಾಜೀವ ಕುಲಾಲ್, ಗುರುರಾಜ್ ರಾವ್,ಗುರು ಸೇವಾ ಪರಿಷತ್ ತೆಂಕನಿಡಿಯೂರು ಇದರ ದಯಾನಂದ ಆಚಾರ್ಯ, ನೇರಂಬಳ್ಳಿ ರಮೇಶ್ ಆಚಾರ್ಯ, ನಾಗರಾಜ ಆಚಾರ್ಯ ಬೆಂಗಳೂರು, ರಮೇಶ್ ಪೂಜಾರಿ ನೀಲಾವರ,ಶ್ಯಾಮರಾಯ ಆಚಾರ್ಯ, ಪಂದ್ಯಾಟದ ಸಂಯೋಜಕ ನೀಲಾವರ ರಾಜೇಶ್ ಆಚಾರ್ಯ ಇನ್ನಿತರು ಉಪಸ್ಥಿತರಿದ್ದರು.
2 ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಾಟದಲ್ಲಿ ಒಟ್ಟು 24 ತಂಡಗಳು ಭಾಗವಹಿಸಲಿದ್ದು,ವಿಶ್ವಕರ್ಮ ಟ್ರೋಫಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟವಾಗಿದ್ದು,ಭಾನುವಾರ ಸಂಜೆ ಸಮಾರೋಪ ಸಮಾರಂಭ ಜರುಗಲಿದ್ದು ಸಮಾಜಮುಖಿ ಕಾರ್ಯಕ್ರಮ ನೀಡುತ್ತಿರುವ ಮಾಣಿಕ್ಯ ತಂಡ ಈ ಹಿಂದೆ ಕೂಡಾ ಅಶಕ್ತರೀಗೆ ಆರ್ಥಿಕ ನೆರವು ನೀಡಿದಂತೆ ಈ ಕ್ರೀಡಾಕೂಟದ ಖರ್ಚು ವೆಚ್ಚಗಳ ಬಳಿಕ ಉಳಿಯುವ ಮೊತ್ತವನ್ನು ಅಗಲಿದ ಪ್ರದೀಪ್ ಆಚಾರ್ಯ ಕುಟುಂಬಕ್ಕೆ ಹಸ್ತಾಂತರಿಸಲಿದೆ.






