Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲಕ್ಕೆ ಫಿಕ್ಕಿ ಆರೋಗ್ಯ ಸೇವಾ ಶ್ರೇಷ್ಠತಾ ಪ್ರಶಸ್ತಿ 2026

ಮಣಿಪಾಲ ಮಾತೃ-ಅಮೃತ ಮಿಲ್ಕ್ ಬ್ಯಾಂಕ್‌ಗೆ ‘ಸಮುದಾಯ ಸಹಭಾಗಿತ್ವದಲ್ಲಿ ಶ್ರೇಷ್ಠತೆ’ ಪ್ರಶಸ್ತಿ; ಸ್ಪರ್ಧಿಸಿದ ಮೂರೂ ವಿಭಾಗಗಳಲ್ಲಿ ಅಗ್ರ ಮೂರರಲ್ಲಿ ಸ್ಥಾನ

Dhrishya News by Dhrishya News
30/10/2026
in ಸುದ್ದಿಗಳು
0
ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲಕ್ಕೆ ಫಿಕ್ಕಿ ಆರೋಗ್ಯ ಸೇವಾ ಶ್ರೇಷ್ಠತಾ ಪ್ರಶಸ್ತಿ 2026
0
SHARES
4
VIEWS
Share on FacebookShare on Twitter

ಮಣಿಪಾಲ, ಅಕ್ಟೋಬರ್ 30, 2026: ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯ (ಮಾಹೆ) ಘಟಕವಾದ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ), ಮಣಿಪಾಲದ ಬೋಧನಾ ಆಸ್ಪತ್ರೆಯಾದ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲಕ್ಕೆ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘಗಳ ಒಕ್ಕೂಟ (Federation of Indian Chambers of Commerce and Industry – ಫಿಕ್ಕಿ) ನೀಡುವ 18ನೇ ಆರೋಗ್ಯ ಸೇವಾ ಶ್ರೇಷ್ಠತಾ ಪ್ರಶಸ್ತಿ 2026ರಲ್ಲಿ ‘ಸಮುದಾಯ ಸಹಭಾಗಿತ್ವದಲ್ಲಿ ಶ್ರೇಷ್ಠತೆ’ (Excellence in Community Engagement) ವಿಭಾಗದ ಪ್ರಶಸ್ತಿ ಲಭಿಸಿದೆ.

ಆಸ್ಪತ್ರೆಯ ಲಾಭರಹಿತ ಉಪಕ್ರಮ ಹಾಗೂ ಉಡುಪಿ-ಮಣಿಪಾಲ ಭಾಗದ ಪ್ರಥಮ ಎದೆಹಾಲು ಬ್ಯಾಂಕ್ ಆಗಿರುವ ಮಣಿಪಾಲ ಮಾತೃ-ಅಮೃತ ಮಿಲ್ಕ್ ಬ್ಯಾಂಕ್ ಗೆ ಈ ಪ್ರಶಸ್ತಿ ಸಂದಿದೆ. ನವದೆಹಲಿಯ ಫಿಕ್ಕಿಯಲ್ಲಿ ಅಕ್ಟೋಬರ್ 27ರಂದು ನಡೆದ ಸಮಾರಂಭದಲ್ಲಿ ಲೋಕಸಭಾ ಸದಸ್ಯ ಡಾ. ಶಶಿ ತರೂರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಆಸ್ಪತ್ರೆಯ ಪರವಾಗಿ ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ (ಸಿಒಒ) ಡಾ. ಸುಧಾಕರ್ ಕಂಟಿಪುಡಿ ಹಾಗೂ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು.

ಈ ಬಾರಿ ಫಿಕ್ಕಿಗೆ ಒಟ್ಟು 157 ನಾಮನಿರ್ದೇಶನಗಳು ಬಂದಿದ್ದು, ಕಸ್ತೂರ್ಬಾ ಆಸ್ಪತ್ರೆ ಸಲ್ಲಿಸಿದ್ದ ಮೂರೂ ಉಪಕ್ರಮಗಳು ತಮ್ಮ ತಮ್ಮ ವಿಭಾಗಗಳಲ್ಲಿ ಅಗ್ರ ಮೂರು ಅಂತಿಮ ಸ್ಪರ್ಧಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಗಮನಾರ್ಹ ಸಾಧನೆಯಾಗಿದೆ:

ಸಮುದಾಯ ಸಹಭಾಗಿತ್ವದಲ್ಲಿ ಶ್ರೇಷ್ಠತೆ – ಮಣಿಪಾಲ ಮಾತೃ-ಅಮೃತ ಮಿಲ್ಕ್ ಬ್ಯಾಂಕ್, ಉಡುಪಿ-ಮಣಿಪಾಲ ಭಾಗದ ಪ್ರಥಮ ಎದೆಹಾಲು ಬ್ಯಾಂಕ್ (ವಿಜೇತ)

ರೋಗಿ ಸುರಕ್ಷತೆಯಲ್ಲಿ ಶ್ರೇಷ್ಠತೆ  ಆಸ್ಪತ್ರೆಯಾದ್ಯಂತ ಸಿಎಲ್‌ಎಬಿಎಸ್‌ಐ ತಡೆಗಟ್ಟುವಿಕೆ ಕಾರ್ಯಕ್ರಮ: ಐಸಿಯು, ಎಚ್‌ಡಿಯು ಹಾಗೂ ವಾರ್ಡ್‌ಗಳಲ್ಲಿ ಸಾಕ್ಷ್ಯಾಧಾರಿತ ಬಹು-ಬಂಡಲ್ ಕ್ರಮಗಳ ಮೂಲಕ ಸೆಂಟ್ರಲ್ ಲೈನ್ ಸಂಬಂಧಿತ ರಕ್ತಪ್ರವಾಹ ಸೋಂಕುಗಳ (CLABSI) ಇಳಿಕೆ (ಅಗ್ರ ಮೂರು ಅಂತಿಮ ಸ್ಪರ್ಧಿ)

ವರ್ಷದ ಶ್ರೇಷ್ಠ ತರಬೇತಿ ಮತ್ತು ಕೌಶಲಾಭಿವೃದ್ಧಿ ಉಪಕ್ರಮ – “Everyone is a Hero, Every Second Counts” (ಪ್ರತಿಯೊಬ್ಬರೂ ಹೀರೋ, ಪ್ರತಿ ಕ್ಷಣವೂ ಅಮೂಲ್ಯ): ಸಾರ್ವತ್ರಿಕ ಸಿಪಿಆರ್ ಹಾಗೂ ತುರ್ತು ಸ್ಪಂದನ ತರಬೇತಿಯ ಮೂಲಕ ಜೀವ ಉಳಿಸುವ ಕಾರ್ಯಪಡೆ ನಿರ್ಮಾಣ (ಅಗ್ರ ಮೂರು ಅಂತಿಮ ಸ್ಪರ್ಧಿ)

ಮಣಿಪಾಲ ಮಾತೃ-ಅಮೃತ ಮಿಲ್ಕ್ ಬ್ಯಾಂಕ್, ಹಾಲುಣಿಸುವ ತಾಯಂದಿರು ಸ್ವಯಂಪ್ರೇರಿತವಾಗಿ ದಾನ ಮಾಡುವ ಎದೆಹಾಲನ್ನು ಸಂಗ್ರಹಿಸಿ, ಪರೀಕ್ಷಿಸಿ, ಪಾಶ್ಚರೀಕರಿಸಿ ಸುರಕ್ಷಿತವಾಗಿ ಶೇಖರಿಸುತ್ತದೆ. ತಾಯಂದಿರು ಹಾಲುಣಿಸಲು ಸಾಧ್ಯವಾಗದ ಅವಧಿಪೂರ್ವ ಜನಿಸಿದ, ಕಡಿಮೆ ತೂಕದ ಹಾಗೂ ಅನಾರೋಗ್ಯಪೀಡಿತ ನವಜಾತ ಶಿಶುಗಳಿಗೆ ನವಜಾತ ಶಿಶು ತೀವ್ರ ನಿಗಾ ಘಟಕದಲ್ಲಿ (ಎನ್‌ಐಸಿಯು) ಈ ಹಾಲನ್ನು ನೀಡಲಾಗುತ್ತದೆ. ಇದರಿಂದ ಅತ್ಯಂತ ದುರ್ಬಲ ಶಿಶುಗಳಿಗೂ ಎದೆಹಾಲಿನ ರಕ್ಷಣಾತ್ಮಕ ಪ್ರಯೋಜನಗಳು ದೊರೆಯುತ್ತವೆ.
ಪರಿಶೀಲನಾ ವರ್ಷದಲ್ಲಿ ಹಾಲಿನ ಬ್ಯಾಂಕ್, 493 ಸ್ವಯಂಪ್ರೇರಿತ ದಾನಿ ತಾಯಂದಿರಿಂದ 538 ಲೀಟರ್‌ಗಿಂತ ಹೆಚ್ಚು ಎದೆಹಾಲನ್ನು ಸಂಗ್ರಹಿಸಿ 660 ನವಜಾತ ಶಿಶುಗಳಿಗೆ ನೆರವಾಗಿದೆ. ಹಿಂದಿನ ವರ್ಷ ಇದು 430 ಶಿಶುಗಳು ಹಾಗೂ 300 ಲೀಟರ್ ಆಗಿತ್ತು. ದಾನಿ ಹಾಲಿಗೆ ಸಂಬಂಧಿಸಿದ ಯಾವುದೇ ಪ್ರತಿಕೂಲ ಘಟನೆ ವರದಿಯಾಗಿಲ್ಲ. ನಿಯಮಿತ ಆಪ್ತಸಮಾಲೋಚನೆ ಮತ್ತು ಜಾಗೃತಿ ಕಾರ್ಯಕ್ರಮಗಳ ಮೂಲಕ ಎದೆಹಾಲು ದಾನದ ಬಗ್ಗೆ ಈ ಭಾಗದ ಕುಟುಂಬಗಳಲ್ಲಿ ವಿಶ್ವಾಸ ಮೂಡಿಸುವಲ್ಲಿಯೂ ಇದು ಯಶಸ್ವಿಯಾಗಿದೆ.

ತಂಡವನ್ನು ಅಭಿನಂದಿಸಿದ *ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್* ಅವರು, “ಫಿಕ್ಕಿಯ ಈ ಮನ್ನಣೆ ಕಸ್ತೂರ್ಬಾ ಆಸ್ಪತ್ರೆ ಹಾಗೂ ಇಡೀ ಮಾಹೆ ಪರಿವಾರಕ್ಕೆ ಹೆಮ್ಮೆಯ ಕ್ಷಣ. ಆರೋಗ್ಯ ಸೇವೆ ಆಸ್ಪತ್ರೆಯ ಗೋಡೆಗಳನ್ನು ಮೀರಿ ನಾವು ಸೇವೆ ಸಲ್ಲಿಸುವ ಸಮುದಾಯದ ಬದುಕನ್ನು ತಲುಪಬೇಕು ಎಂಬ ನಮ್ಮ ನಂಬಿಕೆಗೆ ಮಣಿಪಾಲ ಮಾತೃ-ಅಮೃತ ಮಿಲ್ಕ್ ಬ್ಯಾಂಕ್ ಸಾಕ್ಷಿ. ದಾನ ಮಾಡಿದ ಪ್ರತಿ ಹನಿ ಹಾಲೂ ಜೀವದ ಕೊಡುಗೆ. ಹಾಲು ದಾನ ಮಾಡಿದ ತಾಯಂದಿರಿಗೆ ಹಾಗೂ ಈ ಉಪಕ್ರಮವನ್ನು ಯಶಸ್ವಿಗೊಳಿಸಿದ ವೈದ್ಯರು, ಶುಶ್ರೂಷಕರು ಮತ್ತು ಸಿಬ್ಬಂದಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ” ಎಂದು ಹೇಳಿದರು.

ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಅವರು ಮಾತನಾಡಿ, “ಕಸ್ತೂರ್ಬಾ ಆಸ್ಪತ್ರೆ ಸದಾ ವೈದ್ಯಕೀಯ ಶ್ರೇಷ್ಠತೆಯ ಜೊತೆಗೆ ಸಮಾಜದ ಬಗ್ಗೆ ಆಳವಾದ ಬದ್ಧತೆಯನ್ನು ಮೈಗೂಡಿಸಿಕೊಂಡಿದೆ. ಒಂದು ಬೋಧನಾ ಆಸ್ಪತ್ರೆ ಸಮುದಾಯದ ವಿಶ್ವಾಸ ಗಳಿಸಿ, ಜಾಗೃತಿ ಮೂಡಿಸಿ, ಅತ್ಯಂತ ದುರ್ಬಲ ನವಜಾತ ಶಿಶುಗಳ ಆರೋಗ್ಯ ಸುಧಾರಣೆಗೆ ಹೇಗೆ ಕೊಡುಗೆ ನೀಡಬಹುದು ಎಂಬುದಕ್ಕೆ ಈ ಹಾಲಿನ ಬ್ಯಾಂಕ್ ಉತ್ತಮ ಉದಾಹರಣೆ. 157 ನಾಮನಿರ್ದೇಶನಗಳ ಪೈಕಿ, ರೋಗಿ ಸುರಕ್ಷತೆ ಹಾಗೂ ಸಿಪಿಆರ್ ತರಬೇತಿ ಸೇರಿದಂತೆ ಮೂರೂ ವಿಭಾಗಗಳಲ್ಲಿ ಅಗ್ರ ಮೂರರಲ್ಲಿ ಸ್ಥಾನ ಪಡೆದಿರುವುದು ಆಸ್ಪತ್ರೆಯಾದ್ಯಂತ ನಡೆಯುತ್ತಿರುವ ಕಾರ್ಯದ ಆಳವನ್ನು ತೋರಿಸುತ್ತದೆ. ಈ ಪ್ರಶಸ್ತಿ ನಮ್ಮ ಎಲ್ಲಾ ಬೋಧನಾ ಆಸ್ಪತ್ರೆಗಳಲ್ಲಿ ಇಂತಹ ಸಮುದಾಯ ಕೇಂದ್ರಿತ ಉಪಕ್ರಮಗಳನ್ನು ಮುಂದುವರಿಸಲು ನಮ್ಮ ತಂಡಗಳಿಗೆ ಸ್ಫೂರ್ತಿಯಾಗಲಿದೆ” ಎಂದರು.

ಈ ಮನ್ನಣೆಯೊಂದಿಗೆ, ಪುಟ್ಟ ನವಜಾತ ಶಿಶುವಿನಿಂದ ಹಿಡಿದು ವಿಶಾಲ ಸಮುದಾಯದವರೆಗೆ ತಾನು ತಲುಪುವ ಪ್ರತಿಯೊಂದು ಜೀವಕ್ಕೂ ಸಹಾನುಭೂತಿಯುಳ್ಳ, ಸಮುದಾಯ ಕೇಂದ್ರಿತ ಆರೈಕೆ ನೀಡುವ ತನ್ನ ಬದ್ಧತೆಯನ್ನು ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ ಪುನರುಚ್ಚರಿಸುತ್ತದೆ.

Previous Post

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪಘಾತ ತಡೆಗೆ ಕ್ರಮ: ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಧಾರ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲಕ್ಕೆ ಫಿಕ್ಕಿ ಆರೋಗ್ಯ ಸೇವಾ ಶ್ರೇಷ್ಠತಾ ಪ್ರಶಸ್ತಿ 2026

ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲಕ್ಕೆ ಫಿಕ್ಕಿ ಆರೋಗ್ಯ ಸೇವಾ ಶ್ರೇಷ್ಠತಾ ಪ್ರಶಸ್ತಿ 2026

30/10/2026
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪಘಾತ ತಡೆಗೆ ಕ್ರಮ: ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಧಾರ

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪಘಾತ ತಡೆಗೆ ಕ್ರಮ: ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಧಾರ

30/10/2026
ನ.1ರಂದು ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ‘ಗುರುಕುಲ ಕಾರ್ನಿವಲ್ 2.0’ ಸಂಭ್ರಮ..!

ನ.1ರಂದು ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ‘ಗುರುಕುಲ ಕಾರ್ನಿವಲ್ 2.0’ ಸಂಭ್ರಮ..!

30/10/2026
ಕಾಪು: ಬೀಚ್‌ಗಳಲ್ಲಿ ಗಾಂಜಾ ಮಾರಾಟ ಆರೋಪ; 5.710 ಕೆ.ಜಿ. ಗಾಂಜಾ ಸಹಿತ ಇಬ್ಬರ ಬಂಧನ

ಮಂಗಳೂರು: ₹7.07 ಲಕ್ಷ ಮೌಲ್ಯದ MDMA ಮಾದಕ ವಸ್ತು ವಶ – ಇಬ್ಬರ ಬಂಧನ

30/10/2026

Recent News

imunify-bot-check