Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಖರ್ಗೆ ವರ್ತನೆ ಕಾಂಗ್ರೆಸ್ ಅಧಪತನಕ್ಕೆ ನಾಂದಿ ಹಾಡಿದೆ : ಕುತ್ಯಾರು ನವೀನ್ ಶೆಟ್ಟಿ

Dhrishya News by Dhrishya News
27/10/2026
in ಸುದ್ದಿಗಳು
0
ಖರ್ಗೆ ವರ್ತನೆ ಕಾಂಗ್ರೆಸ್ ಅಧಪತನಕ್ಕೆ ನಾಂದಿ ಹಾಡಿದೆ : ಕುತ್ಯಾರು ನವೀನ್ ಶೆಟ್ಟಿ
0
SHARES
2
VIEWS
Share on FacebookShare on Twitter

ಉಡುಪಿ : ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುತ್ತಿರುವ ವಿಶ್ವದ ಅತ್ಯಂತ ಜನಪ್ರಿಯ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕೀಳು ಮಟ್ಟದ ಪದ ಪ್ರಯೋಗಿಸಿ ಅವಮಾನಿಸಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಕ್ಷೇಪಾರ್ಹ ವರ್ತನೆ ಖಂಡನೀಯ. ಖರ್ಗೆ ಅವರ ಬೇಜವಾಬ್ದಾರಿಯುತ ನಡೆ ಕಾಂಗ್ರೆಸ್ ಪಕ್ಷದ ಅಧಪತನಕ್ಕೆ ನಾಂದಿ ಹಾಡಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದಾ ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದುಕೊಂಡು ‘ಮೊಹಬ್ಬತ್ ಕೀ ದುಖಾನ್’ ತೆರೆದಿದ್ದೇವೆ ಎನ್ನುತ್ತಾ ಬೇಲ್ ಮೇಲೆ ತಿರುಗಾಡುತ್ತಿರುವ ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಓಲೈಸಲು ಬಿಹಾರದ ಪಾಟ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖರ್ಗೆ ಅವರು ‘ಪ್ರಧಾನಿ ಮೋದಿ ಎಲ್ಲೂ ಹೋಗುವುದಿಲ್ಲ’ ಎಂಬ ಸಭಿಕನ ಘೋಷಣೆಗೆ ಪ್ರತಿಯಾಗಿ ಮತಿಭ್ರಮಣೆಗೊಂಡಂತೆ ವರ್ತಿಸಿ ‘ಮೋದಿ ಮಾತ್ರವಲ್ಲ, ಮೋದಿ ಅಪ್ಪನೂ ಹೋಗಲೇಬೇಕು’ ಎನ್ನುತ್ತಾ ಗೂಂಡಾ ಮಾದರಿಯ ಭಾಷೆಯನ್ನು ಬಳಸುವ ಹೀನಾಯ ಮಟ್ಟಕ್ಕೆ ಇಳಿದಿರುವುದು ಅಸಹ್ಯಕರವೆನಿಸಿದೆ.

ಜಾಗತಿಕ ಮಟ್ಟದಲ್ಲಿ ಭಾರತ ಇಂದು ಅತ್ಯಂತ ಪ್ರಭಾವಶಾಲಿ ಮತ್ತು ಶಕ್ತಿಯುತ ದೇಶಗಳ ಸಾಲಿನಲ್ಲಿ ನಿಂತಿದೆ. ಬಿಜೆಪಿ ಬೆಳವಣಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ದಿನೇ ದಿನೇ ವೃದ್ಧಿಸುತ್ತಿದೆ. ಇವೆಲ್ಲವನ್ನೂ ಸಹಿಸಲಾಗದ ಖರ್ಗೆ ಮತ್ತು ಕಾಂಗ್ರೆಸ್ಸಿನ ಅಸಹಾಯಕ ಸ್ಥಿತಿ ‘ಕೈಲಾಗದವನು ಮೈ ಪರಚಿಕೊಂಡ’ ಎಂಬಂತಾಗಿದೆ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ಗೌರವಾನ್ವಿತ ಪ್ರಧಾನಿಯವರನ್ನು ಅವಮಾನಿಸಿರುವ ಖರ್ಗೆ ಅವರು ದೇಶದ ಕ್ಷಮೆ ಯಾಚಿಸಬೇಕು.

ಪ್ರಧಾನಿ ಮೋದಿ ಅವರನ್ನು ‘ಚಾಯ್‌ವಾಲಾ’ ಎಂದು ಗೇಲಿ ಮಾಡುವುದು, ‘ಸಾವಿನ ವ್ಯಾಪಾರಿ’ ಎಂದು ಜರೆಯುವುದು, ಅವರ ದಿವಂಗತ ತಂದೆ, ತಾಯಿಯವರನ್ನು ನಿಂದಿಸುವುದು ಕಾಂಗ್ರೆಸಿಗರಿಗೆ ಹವ್ಯಾಸವಾಗಿದೆ. ದೇಶದ ಜನತೆ ಕಾಂಗ್ರೆಸ್ಸಿನ ವಿಕೃತ ಮನಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Previous Post

ಉಡುಪಿ: ಗಾಜಿನ ಬ್ಲಾಕ್‌ ಇಳಿಸುವ ವೇಳೆ ಅವಘಡ – ಸಾಮಾಜಿಕ ಕಾರ್ಯಕರ್ತ ಸುನಿಲ್ ಬೈಲಕೆರೆ ಮೃತ್ಯು

Next Post

ಅಲೆವೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ₹62.5 ಲಕ್ಷದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಅಲೆವೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ₹62.5 ಲಕ್ಷದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಅಲೆವೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ₹62.5 ಲಕ್ಷದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಪಕ್ಷ ಸಂಘಟನೆಯಲ್ಲಿ ಮಹತ್ತರ ಬದಲಾವಣೆ ಬರಲಿ : ಶ್ರೀಮತಿ ರಮಿತಾ ಸೂರ್ಯವಂಶಿ

ಪಕ್ಷ ಸಂಘಟನೆಯಲ್ಲಿ ಮಹತ್ತರ ಬದಲಾವಣೆ ಬರಲಿ : ಶ್ರೀಮತಿ ರಮಿತಾ ಸೂರ್ಯವಂಶಿ

27/10/2026
ಕೊಕ್ಕರ್ಣೆಯಲ್ಲಿ ಮೂರು ದಿನಗಳ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಸಿದ್ಧತೆ

ಕೊಕ್ಕರ್ಣೆಯಲ್ಲಿ ಮೂರು ದಿನಗಳ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಸಿದ್ಧತೆ

27/10/2026
ಅಲೆವೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ₹62.5 ಲಕ್ಷದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಅಲೆವೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ₹62.5 ಲಕ್ಷದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

27/10/2026
ಖರ್ಗೆ ವರ್ತನೆ ಕಾಂಗ್ರೆಸ್ ಅಧಪತನಕ್ಕೆ ನಾಂದಿ ಹಾಡಿದೆ : ಕುತ್ಯಾರು ನವೀನ್ ಶೆಟ್ಟಿ

ಖರ್ಗೆ ವರ್ತನೆ ಕಾಂಗ್ರೆಸ್ ಅಧಪತನಕ್ಕೆ ನಾಂದಿ ಹಾಡಿದೆ : ಕುತ್ಯಾರು ನವೀನ್ ಶೆಟ್ಟಿ

27/10/2026

Recent News

imunify-bot-check