Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

“ಪ್ರಿ ಓನ್ಡ್ ವೆಹಿಕಲ್ ಡೀಲರ್ಸ್ ಅಸೋಸಿಯೇಷನ್ ಉಡುಪಿ” ವತಿಯಿಂದ ಲಕ್ಷಣ ಫಲ ಹಾಗೂ ಇನ್ನಿತರ ಔಷಧೀಯ ಸಸ್ಯಗಳ ವಿತರಣೆ ..!!

ಅತ್ಯುತ್ತಮ ರೀತಿಯಲ್ಲಿ ನೆಟ್ಟು ಪೋಷಿಸುವ ವ್ಯಕ್ತಿ, ಶಾಲೆ-ಕಾಲೇಜು ಅಥವಾ ಸಂಘ ಸಂಸ್ಥೆಗಳಿಗೆ ಮುಂದಿನ ವರ್ಷ ಸಂಘದ ವತಿಯಿಂದ ಬಹುಮಾನ

Dhrishya News by Dhrishya News
15/06/2023
in ಕರಾವಳಿ, ರಾಜ್ಯ/ ರಾಷ್ಟ್ರೀಯ, ಸುದ್ದಿಗಳು
0
0
SHARES
178
VIEWS
Share on FacebookShare on Twitter

ಉಡುಪಿ: ಫ್ರೀ ಓನ್ಡ್  ವೆಹಿಕಲ್  ಡೀಲರ್ಸ್ ಅಸೋಸಿಯೇಷನ್ ವತಿಯಿಂದ  ಕ್ಯಾನ್ಸರ್ ಕಾಯಿಲೆಯ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎನ್ನಲಾದ ಔಷಧೀಯ ಗುಣವುಳ್ಳ ಲಕ್ಷಣ ಫಲ ಹಾಗೂ ಇನ್ನಿತರ ಔಷಧೀಯ ಸಸ್ಯಗಳನ್ನು ಉಚಿತವಾಗಿ ವಿತರಿಸುವ  ಕಾರ್ಯಕ್ರಮ ಗುರುವಾರದಂದು ಭುಜಂಗ ಪಾರ್ಕಿನಲ್ಲಿ ನಡೆಯಿತು

ನಗರಸಭೆ ಪೌರಾಯುಕ್ತ ರಮೇಶ್ ಪಿ ನಾಯ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪರಿಸರ ದಿನವನ್ನು ಕೇವಲ ಒಂದು ದಿನದ ಮಟ್ಟಿಗೆ ಆಚರಿಸದೆ ವರ್ಷಪೂರ್ತಿ ಆಚರಿಸುವ ಕಾರ್ಯಕ್ಕೆ ಮುಂದಾಗಿರುವುದು ಅತ್ಯುತ್ತಮ ವಿಚಾರ. ಜಿಲ್ಲೆಯಾದ್ಯಂತ 1000 ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ಸಂಘದ ವತಿಯಿಂದ ನಡೆಯುತ್ತಿರುವುದು ಅಭಿನಂದನಾರ್ಹ. ಗಿಡಗಳನ್ನು ನೆಡುವುದು ದೊಡ್ಡದಲ್ಲ, ಆದರೆ ನೆಟ್ಟ ಗಿಡವನ್ನು ಪೋಷಿಸಿ ಬೆಳೆಸುವುದು ಮುಖ್ಯ ಎಂದರು.ಮನೆಗೊಂದು ಗಿಡ ನೆಡುವ ಕಾರ್ಯ ನಮ್ಮಿಂದ ಆಗಬೇಕು. ಮರಗಳ ಹನನ, ವಾಹನ-ಕಾರ್ಖಾನೆಗಳ ಮಾಲಿನ್ಯ, ಪ್ಲಾಸ್ಟಿಕ್ ಕಾರಣದಿಂದಾಗಿ ಪರಿಸರದ ಮೇಲೆ ದುಷ್ಪರಿಣಾಮವಾಗಿ ಇವತ್ತು ಉಡುಪಿಯಂತಹ ಊರಿನಲ್ಲೂ ಕುಡಿಯುವ ನೀರಿಗೆ ಬರದಂತಹ ಪರಿಸ್ಥಿತಿ ಬಂದೊದಗಿದೆ. ಪರಿಸರ ಉಳಿಸಿ ಬೆಳೆಸುವುದು ನಮ್ಮ ಜವಾಬ್ದಾರಿಯಾಗಿದ್ದು, ಇದು ಮುಂದಿನ ಪೀಳಿಗೆಗೆ ನಾವು ನೀಡುವ ಅತಿ ದೊಡ್ಡ ಕೊಡುಗೆ ಎಂದರು.

ವಲಯ ಅರಣ್ಯಾಧಿಕಾರಿ ಸುಬ್ರಮಣ್ಯ ಆಚಾರ್ಯ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿ  ಪರಿಸರ ರಕ್ಷಣೆಯ ಮಹತ್ವ ತಿಳಿಸಿದರು. ಸಾರ್ವಜನಿಕರು ಒಂದು ಗಿಡ ನೆಟ್ಟು ಮೂರು ವರ್ಷಗಳವರೆಗೆ ಪೋಷಿಸಿದಲ್ಲಿ ಇಲಾಖೆಯ ವತಿಯಿಂದ ಒಂದು ಮರಕ್ಕೆ 125ರೂ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಮಾಹಿತಿ ನೀಡಿ ಮರಗಳನ್ನು ಅನಾವಶ್ಯಕವಾಗಿ ಕಡಿಯಬಾರದು ಎಂದು ಕಿವಿ ಮಾತು ಹೇಳಿದರು.ಪ್ರತಿಯೊಬ್ಬರೂ ತಮಗೆ ಡಿ.ಎಲ್ ಸಿಕ್ಕಿದ್ದಾಗ ಅಥವಾ ತಾವು ಹೊಸಕಾರು ಕೊಂಡಾಗ ಕನಿಷ್ಠ ಒಂದು ಗಿಡವನ್ನು ನೆಟ್ಟು ಪೋಷಿಸುವ ಪರಿಪಾಠ ಬೆಳೆಸಿಕೊಳ್ಳಬೇಕು  ಎಂದು ಆರ್.ಟಿ.ಓ ಸಾರಿಗೆ ಅಧಿಕಾರಿ ರವಿ ಶಂಕರ್ ಪಿ ಹೇಳಿದರು..

ಪರಿಸರ ರಕ್ಷಣೆಯ ಮಹತ್ವ ಪರಿಸರ ಪ್ರೇಮಿಗಳಾದ ವೈದ್ಯ ಡಾ. ಮನೋಹರ್ ಬೋಳಾರ್, ಮಧುಸೂಧನ್ ಹೇರೂರು ಹಾಗೂ ರಾಘವೇಂದ್ರ ಪ್ರಭು ಕರ್ವಾಲ್  ತಿಳಿಸಿದರು.

ಫ್ರೀ ಓನ್ಡ್  ವೆಹಿಕಲ್  ಡೀಲರ್ಸ್ ಅಸೋಸಿಯೇಷನ್ ಉಡುಪಿ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲಾ ಕಾಲೇಜು ಹಾಗೂ ಸಂಘ ಸಂಸ್ಥೆಗಳಿಗೆ 1000 ಗಿಡಗಳನ್ನು ಉಚಿತವಾಗಿ ನೀಡುವುದು ಮಾತ್ರವಲ್ಲದೆ ಈ ಗಿಡಗಳನ್ನು ಪೋಷಿಸಿ ಆರೈಕೆ ಮಾಡಲಾಗುವುದು. ಗಿಡಗಳನ್ನು ಪಡೆದು ಅತ್ಯುತ್ತಮ ರೀತಿಯಲ್ಲಿ ನೆಟ್ಟು ಪೋಷಿಸುವ ವ್ಯಕ್ತಿ, ಶಾಲೆ-ಕಾಲೇಜು ಅಥವಾ ಸಂಘ ಸಂಸ್ಥೆಗಳಿಗೆ ಮುಂದಿನ ವರ್ಷ ಸಂಘದ ವತಿಯಿಂದ ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು.ಸಂಘದ ಕಾರ್ಯದರ್ಶಿ ಉದಯ್ ಕಿರಣ್ ನಿರೂಪಿಸಿ ವಂದಿಸಿದರು.ಫ್ರೀ ಓನ್ಡ್  ವೆಹಿಕಲ್  ಡೀಲರ್ಸ್ ಅಸೋಸಿಯೇಷನ್ ಸಂಘದ ಪದಾಧಿಕಾರಿಗಳು ಹಾಜರಿದ್ದರು.

Previous Post

ನೀಟ್ ಫಲಿತಾಂಶ – ಪ್ರಖ್ಯಾತ್ ಶೆಟ್ಟಿಗೆ 720ರಲ್ಲಿ 600 ಅಂಕ..!!

Next Post

ಯುವತಿ ನಾಪತ್ತೆ : ಶಿರ್ವ ಠಾಣೆಯಲ್ಲಿ ಪ್ರಕರಣ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಯುವತಿ ನಾಪತ್ತೆ : ಶಿರ್ವ ಠಾಣೆಯಲ್ಲಿ ಪ್ರಕರಣ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಾರ್ಕಳ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಬಿಜೆಪಿ ಸಂಸದರು, ಶಾಸಕರು ಮತ್ತು ನಾಯಕರ ವಿರುದ್ಧ ನಡೆದ ವೈಯಕ್ತಿಕ ತೇಜೋವಧೆಗೆ ಖಂಡನೆ, ಸೂಕ್ತ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಕಾರ್ಕಳ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಬಿಜೆಪಿ ಸಂಸದರು, ಶಾಸಕರು ಮತ್ತು ನಾಯಕರ ವಿರುದ್ಧ ನಡೆದ ವೈಯಕ್ತಿಕ ತೇಜೋವಧೆಗೆ ಖಂಡನೆ, ಸೂಕ್ತ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದಿಂದ ಜಿಲ್ಲಾಧಿಕಾರಿಗಳಿಗೆ ಮನವಿ

09/10/2026
ಉಡುಪಿಯಲ್ಲಿ ಬೃಹತ್ ಫುಡ್ ಅಂಡ್ ಬಿಸಿನೆಸ್ ಎಕ್ಸ್‌ಪೋ ಆರಂಭ

ಉಡುಪಿಯಲ್ಲಿ ಬೃಹತ್ ಫುಡ್ ಅಂಡ್ ಬಿಸಿನೆಸ್ ಎಕ್ಸ್‌ಪೋ ಆರಂಭ

09/10/2026
ಅಕ್ಟೋಬರ್ 10 : ಉದ್ಯಾವರದಲ್ಲಿ ಪಂಚ ಗ್ಯಾರಂಟಿ ಸಂಭ್ರಮೋತ್ಸವ

ಅಕ್ಟೋಬರ್ 10 : ಉದ್ಯಾವರದಲ್ಲಿ ಪಂಚ ಗ್ಯಾರಂಟಿ ಸಂಭ್ರಮೋತ್ಸವ

09/10/2026
ಕುಂದಾಪುರ: ಕೆನರಾ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಿಂದ ₹1.64 ಲಕ್ಷ ವಂಚನೆ

ಕುಂದಾಪುರ: ಕೆನರಾ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಿಂದ ₹1.64 ಲಕ್ಷ ವಂಚನೆ

09/10/2026

Recent News

imunify-bot-check