Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಜಯನಗರದಲ್ಲಿ ಇಂದ್ರಿಯಾ ನೂತನ ಮಳಿಗೆ ಉದ್ಘಾಟನೆ: ಬೆಂಗಳೂರಿನಲ್ಲಿ ರಿಟೇಲ್ ಮಾರುಕಟ್ಟೆ ಜಾಲ ವಿಸ್ತರಣೆ

ಮದುವೆ, ಹಬ್ಬ, ಸಮಕಾಲೀನ ಹಾಗೂ ನಿತ್ಯ ಬಳಕೆಯ ಶ್ರೇಣಿಯ 37,000ಕ್ಕೂ ಅಧಿಕ ಆಭರಣ ವಿನ್ಯಾಸಗಳ ಪ್ರದರ್ಶನ, ಗ್ರಾಹಕರಿಗೆ ಉನ್ನತ ಗುಣಮಟ್ಟದ ಶಾಪಿಂಗ್ ಅನುಭವ ಲಭ್ಯ

Dhrishya News by Dhrishya News
16/10/2026
in ಸುದ್ದಿಗಳು
0
ಜಯನಗರದಲ್ಲಿ ಇಂದ್ರಿಯಾ ನೂತನ ಮಳಿಗೆ ಉದ್ಘಾಟನೆ: ಬೆಂಗಳೂರಿನಲ್ಲಿ ರಿಟೇಲ್ ಮಾರುಕಟ್ಟೆ ಜಾಲ ವಿಸ್ತರಣೆ
0
SHARES
2
VIEWS
Share on FacebookShare on Twitter

ಬೆಂಗಳೂರು, ಅ. 16, 2026: ಆದಿತ್ಯ ಬಿರ್ಲಾ ಸಮೂಹದ ಆಭರಣ ಬ್ರ್ಯಾಂಡ್ ಇಂದ್ರಿಯಾ, ಜಯನಗರದಲ್ಲಿ ತನ್ನ ಏಳನೇ ಮಳಿಗೆಯನ್ನು ಲೋಕಾರ್ಪಣೆ ಮಾಡುವ ಮೂಲಕ ಬೆಂಗಳೂರಿನಲ್ಲಿ ತನ್ನ ಮಾರುಕಟ್ಟೆ ಜಾಲವನ್ನು ಮತ್ತಷ್ಟು ವಿಸ್ತರಿಸಿದೆ.

ಇತ್ತೀಚೆಗಷ್ಟೇ ಫೋರಮ್ ಮಾಲ್‌ನಲ್ಲಿ ನೂತನ ಮಳಿಗೆಯನ್ನು ತೆರೆದಿದ್ದ ಬೆನ್ನಲ್ಲೇ ಈ ಹೊಸ ಮಳಿಗೆ ಕಾರ್ಯಾರಂಭ ಮಾಡಿದೆ. ನಗರದಾದ್ಯಂತ ಬ್ರ್ಯಾಂಡ್‌ ನ ವ್ಯಾಪ್ತಿಯನ್ನು ಬಲಪಡಿಸುವುದು ಹಾಗೂ ವಿವಿಧ ಬಡಾವಣೆಗಳ ವೈವಿಧ್ಯಮಯ ಗ್ರಾಹಕರ ಬೇಡಿಕೆಗಳನ್ನು ತಲುಪುವ ಯೋಜನಾಬದ್ಧ ಕಾರ್ಯತಂತ್ರದ ಭಾಗವಾಗಿ ಈ ಮಳಿಗೆಯನ್ನು ತೆರೆಯಲಾಗಿದೆ.

ಈ ನೂತನ ಮಳಿಗೆಯನ್ನು ಇಂದ್ರಿಯಾದ ವಿಶಿಷ್ಟ ವಿನ್ಯಾಸ ಶೈಲಿ ಹಾಗೂ ಗ್ರಾಹಕರಿಗೆ ಆಪ್ತವಾದ, ವೈಯಕ್ತಿಕ ಶಾಪಿಂಗ್ ಅನುಭವ ಕಲ್ಪಿಸುವ ರೀತಿಯಲ್ಲಿ ರೂಪಿಸಲಾಗಿದೆ. ಇಲ್ಲಿ ಪರಂಪರಾಗತ ಕರಕುಶಲತೆ ಮತ್ತು ಆಧುನಿಕ ಶೈಲಿಯ ಆಭರಣಗಳು ಜೊತೆಜೊತೆಯಾಗಿ ಗಮನಸೆಳೆಯುತ್ತವೆ. ವಿಶೇಷವಾಗಿ ವಿವಾಹ ಮತ್ತು ಸಮಾರಂಭಗಳ ಪ್ರಮುಖ ಖರೀದಿಗಳಿಗಾಗಿ ಆಭರಣಗಳನ್ನು ಕುಟುಂಬ ಸಮೇತ ಕುಳಿತು ಪರಿಶೀಲಿಸಲು ಕಾರಿಗರಿ ರೂಮ್ ಹಾಗೂ ಬ್ರೈಡಲ್ ಲೌಂಜ್ ನಂತಹ ಪ್ರತ್ಯೇಕ ಸ್ಥಳಾವಕಾಶಗಳನ್ನು ಕಲ್ಪಿಸಲಾಗಿದೆ. ಇದರ ಜೊತೆಗೆ, ಸಾಂಪ್ರದಾಯಿಕ ಸಂದರ್ಭಗಳ ಹೊರತಾಗಿಯೂ ಬಳಸಬಹುದಾದ ಹಗುರವಾದ (ಲೈಟ್‌ವೇಟ್) ಮತ್ತು ಸಮಕಾಲೀನ ಆಭರಣಗಳ ವಿಶಾಲ ಸಂಗ್ರಹವೂ ಇಲ್ಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಇಂದ್ರಿಯಾದ ಸಿಇಓ ಸಂದೀಪ್ ಕೊಹ್ಲಿ ಅವರು, “ನಗರ ಬೆಳೆದಂತೆಲ್ಲಾ ಗ್ರಾಹಕರ ಖರೀದಿ ಪ್ರವೃತ್ತಿಯೂ ಪ್ರಾದೇಶಿಕ ಕೇಂದ್ರಿತವಾಗುತ್ತದೆ. ಬೆಂಗಳೂರು ವಿಶಿಷ್ಟವಾದ ಗ್ರಾಹಕ ಮಾರುಕಟ್ಟೆ ವಲಯಗಳನ್ನು ಹೊಂದಿದ್ದು, ಎಲ್ಲಿ ಶಾಪಿಂಗ್ ಮಾಡಬೇಕು, ಯಾವುದು ತಮಗೆ ಸುಲಭವಾಗಿ ತಲುಪುತ್ತದೆ ಹಾಗೂ ಆಭರಣ ಖರೀದಿಯ ಅನುಭವ ಹೇಗಿರಬೇಕು ಎಂಬುದರ ಬಗ್ಗೆ ಜನರಿಗೆ ಸ್ಪಷ್ಟ ಆದ್ಯತೆಗಳಿವೆ. ಆದ್ದರಿಂದ ನಗರದ ವಿಭಿನ್ನ ಭಾಗಗಳಲ್ಲಿ ಶಾಖೆ ವಿಸ್ತರಿಸುವುದು ನಮ್ಮ ಬ್ರ್ಯಾಂಡ್ ಬೆಳವಣಿಗೆಯ ಪ್ರಮುಖ ಭಾಗವಾಗಿದೆ. ಜಯನಗರದಲ್ಲಿ ಮಳಿಗೆ ಆರಂಭಿಸಿರುವುದು ನಮಗೆ ವಿಭಿನ್ನ ಮಾರುಕಟ್ಟೆ ವಾತಾವರಣ ಒದಗಿಸುವುದರ ಜೊತೆಗೆ, ಬೆಂಗಳೂರಿನ ಮತ್ತೊಂದು ಪ್ರಮುಖ ಭಾಗದ ಗ್ರಾಹಕರಿಗೆ ಹತ್ತಿರವಾಗಲು ನೆರವಾಗಿದೆ. ಕೆಲವೇ ನಿರ್ದಿಷ್ಟ ಸ್ಥಳಗಳಿಗೆ ಸೀಮಿತವಾಗದೆ, ನಮ್ಮ ಮಳಿಗೆಗಳ ಜಾಲ ಇಡೀ ನಗರದ ವಿಸ್ತಾರವನ್ನು ಪ್ರತಿಬಿಂಬಿಸಬೇಕು ಎಂಬುದು ನಮ್ಮ ಗುರಿ” ಎಂದು ತಿಳಿಸಿದರು.

ಬೆಂಗಳೂರಿನ ವಿವಿಧ ಆಯಕಟ್ಟಿನ ವಾಣಿಜ್ಯ ಪ್ರದೇಶಗಳಲ್ಲಿ ಹೆಜ್ಜೆಗುರುತು ಮೂಡಿಸುತ್ತಿರುವ ಇಂದ್ರಿಯಾ, ಮಳಿಗೆ ವಿಸ್ತರಣೆಯ ಜೊತೆಗೆ ನಗರದ ಗ್ರಾಹಕರ ಅಭಿರುಚಿಯನ್ನು ಇನ್ನಷ್ಟು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಲು ಒತ್ತು ನೀಡುತ್ತಿದೆ. ಬೆಂಗಳೂರಿನ ವಿಶಿಷ್ಟ ಸಮುದಾಯಗಳು ಹಾಗೂ ಬದಲಾಗುತ್ತಿರುವ ಜೀವನಶೈಲಿಯ ಗ್ರಾಹಕರಿಗೆ ಬ್ರ್ಯಾಂಡ್ ಅನ್ನು ಇನ್ನಷ್ಟು ಹತ್ತಿರವಾಗಿಸಲು ಜಯನಗರದ ಈ ನೂತನ ಮಳಿಗೆ ಮಹತ್ವದ ಹೆಜ್ಜೆಯಾಗಿದೆ.

Previous Post

ಬ್ರಹ್ಮಾವರ: ನವದುರ್ಗೆಯರಾದ ಬ್ರಹ್ಮಾವರದ ಮಹಿಳಾ ಅಧಿಕಾರಿಣಿಗಳು

Next Post

ಉಚ್ಚಿಲ ದಸರಾ–2026: ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆಯಲ್ಲಿ ತಪಸ್ಯ ನಾಗಾಪ್ರಸಾದ್‌ಗೆ ಪ್ರಥಮ ಬಹುಮಾನ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಉಚ್ಚಿಲ ದಸರಾ–2026: ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆಯಲ್ಲಿ ತಪಸ್ಯ ನಾಗಾಪ್ರಸಾದ್‌ಗೆ ಪ್ರಥಮ ಬಹುಮಾನ

ಉಚ್ಚಿಲ ದಸರಾ–2026: ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆಯಲ್ಲಿ ತಪಸ್ಯ ನಾಗಾಪ್ರಸಾದ್‌ಗೆ ಪ್ರಥಮ ಬಹುಮಾನ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಚ್ಚಿಲ ದಸರಾ–2026: ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆಯಲ್ಲಿ ತಪಸ್ಯ ನಾಗಾಪ್ರಸಾದ್‌ಗೆ ಪ್ರಥಮ ಬಹುಮಾನ

ಉಚ್ಚಿಲ ದಸರಾ–2026: ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆಯಲ್ಲಿ ತಪಸ್ಯ ನಾಗಾಪ್ರಸಾದ್‌ಗೆ ಪ್ರಥಮ ಬಹುಮಾನ

16/10/2026
ಜಯನಗರದಲ್ಲಿ ಇಂದ್ರಿಯಾ ನೂತನ ಮಳಿಗೆ ಉದ್ಘಾಟನೆ: ಬೆಂಗಳೂರಿನಲ್ಲಿ ರಿಟೇಲ್ ಮಾರುಕಟ್ಟೆ ಜಾಲ ವಿಸ್ತರಣೆ

ಜಯನಗರದಲ್ಲಿ ಇಂದ್ರಿಯಾ ನೂತನ ಮಳಿಗೆ ಉದ್ಘಾಟನೆ: ಬೆಂಗಳೂರಿನಲ್ಲಿ ರಿಟೇಲ್ ಮಾರುಕಟ್ಟೆ ಜಾಲ ವಿಸ್ತರಣೆ

16/10/2026
ಬ್ರಹ್ಮಾವರ: ನವದುರ್ಗೆಯರಾದ ಬ್ರಹ್ಮಾವರದ ಮಹಿಳಾ ಅಧಿಕಾರಿಣಿಗಳು

ಬ್ರಹ್ಮಾವರ: ನವದುರ್ಗೆಯರಾದ ಬ್ರಹ್ಮಾವರದ ಮಹಿಳಾ ಅಧಿಕಾರಿಣಿಗಳು

16/10/2026
ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ: ರಾಜ್ಯಮಟ್ಟಕ್ಕೆ ಆಯ್ಕೆಯಾದ ಲಾಸ್ಯ ಶೆಟ್ಟಿ

ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ: ರಾಜ್ಯಮಟ್ಟಕ್ಕೆ ಆಯ್ಕೆಯಾದ ಲಾಸ್ಯ ಶೆಟ್ಟಿ

16/10/2026

Recent News

imunify-bot-check