ಕುಂದಾಪುರ: ಮಹಿಳೆಯೊಬ್ಬರ ಕೆನರಾ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಿಂದ ಅವರ ಗಮನಕ್ಕೆ ಬಾರದೆ ಐದು ಬಾರಿ ಒಟ್ಟು ₹1,64,666.10 ಹಣ ಕಡಿತಗೊಂಡಿರುವ ಸೈಬರ್ ವಂಚನೆ ಪ್ರಕರಣ ಕುಂದಾಪುರದಲ್ಲಿ ದಾಖಲಾಗಿದೆ.
ಕುಂದಾಪುರದ ಮಹಿಳೆ ಯೊಬ್ಬರು 2026ರ ಅಕ್ಟೋಬರ್ 7ರಂದು ಕೆಲಸ ಮುಗಿಸಿ ಸಂಜೆ ಸುಮಾರು 7:30ರ ವೇಳೆಗೆ ಮನೆಗೆ ವಾಪಸ್ಸಾಗುತ್ತಿದ್ದಾಗ ಮೊಬೈಲ್‌ನ ಇನ್‌ಬಾಕ್ಸ್ ಪರಿಶೀಲಿಸಿದ್ದಾರೆ. ಈ ವೇಳೆ ಅವರ ಕೆನರಾ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಿಂದ ತಲಾ ₹32,933.22ರಂತೆ ಐದು ಬಾರಿ ಹಣ ಕಡಿತಗೊಂಡಿರುವ ಸಂದೇಶಗಳು ಕಂಡುಬಂದಿವೆ. ಒಟ್ಟು ₹1,64,666.10 ಹಣ ಕಡಿತಗೊಂಡಿರುವುದು ತಿಳಿದುಬಂದಿದೆ.
ತಮ್ಮ ಮೊಬೈಲ್‌ಗೆ ಯಾವುದೇ ಒಟಿಪಿ (OTP) ಅಥವಾ ಕಾರ್ಡ್ ಪರಿಶೀಲನಾ ಕೋಡ್ ನೀಡದಿದ್ದರೂ, ಯಾರೋ ಸೈಬರ್ ಅಪರಾಧಿಗಳು ಕ್ರೆಡಿಟ್ ಕಾರ್ಡ್ ಸಂಖ್ಯೆಯನ್ನು ದುರ್ಬಳಕೆ ಮಾಡಿಕೊಂಡು ಹಣವನ್ನು ಬಳಸಿದ್ದಾರೆ ಎಂದು ಸಾರಿಕಾ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






