Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ₹2.2 ಲಕ್ಷ ನೆರವು 

ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ಎಸಿ ವಿಭಾಗ ಹಾಗೂ ಉಡುಪಿಯ ದರ್ಪಣ ಮಹಿಳಾ ಪಿಲಿ ತಂಡದಿಂದ ಶ್ಲ್ಯಾಘನೀಯ ಕಾರ್ಯ

Dhrishya News by Dhrishya News
01/10/2026
in ಸುದ್ದಿಗಳು
0
ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ₹2.2 ಲಕ್ಷ ನೆರವು 
0
SHARES
0
VIEWS
Share on FacebookShare on Twitter

ಮಣಿಪಾಲ, 01 ಅಕ್ಟೋಬರ್ 2026: ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ಎಸಿ ವಿಭಾಗ ಹಾಗೂ ದರ್ಪಣ ಮಹಿಳಾ ಪಿಲಿ ತಂಡವು ಆಸ್ಪತ್ರೆಯ ಮಕ್ಕಳ ರಕ್ತಶಾಸ್ತ್ರ ಮತ್ತು ಕ್ಯಾನ್ಸರ್ ಚಿಕಿತ್ಸಾ ವಿಭಾಗದಲ್ಲಿ (Department of Paediatric Haematology and Oncology) ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಚಿಕಿತ್ಸೆಗಾಗಿ ಒಟ್ಟು ₹2.2 ಲಕ್ಷ ನೆರವು ನೀಡಿವೆ.

ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ಎಸಿ ವಿಭಾಗದ ಸಿಬ್ಬಂದಿ ವಿಭಿನ್ನ ಶೈಲಿಯ ವೇಷಗಳನ್ನು ಧರಿಸಿ ₹70,000 ಸಂಗ್ರಹಿಸಿದ್ದು, ಈ ಸಂಪೂರ್ಣ ಮೊತ್ತವನ್ನು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ನೇರವಾಗಿ ವಿಭಾಗಕ್ಕೆ ಹಸ್ತಾಂತರಿಸಲಾಯಿತು. ಈ ಕೊಡುಗೆಯೊಂದಿಗೆ, ವಿವಿಧ ಚಟುವಟಿಕೆಗಳ ಮೂಲಕ ಎಸಿ ವಿಭಾಗವು ಇದುವರೆಗೆ ನೀಡಿರುವ ಸೇವಾ ನೆರವಿನ ಮೊತ್ತ ₹40.7 ಲಕ್ಷ ದಾಟಿದೆ.

ಇನ್ನೊಂದೆಡೆ, ಉಡುಪಿಯ ದರ್ಪಣ ಮಹಿಳಾ ಪಿಲಿ ತಂಡವು ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಮಕ್ಕಳಿಗೆ ₹1,50,000 ಚಿಕಿತ್ಸಾ ನೆರವು ನೀಡಿದೆ. ತಂಡದ ಮಕ್ಕಳು, ಪೋಷಕರು, ಹಿತೈಷಿಗಳು ಹಾಗೂ ಅಭಿಮಾನಿಗಳ ಪ್ರೀತಿ ಮತ್ತು ಸಹಕಾರದಿಂದ ಈ ನೆರವು ಸಾಧ್ಯವಾಯಿತು ಎಂದು ತಂಡ ತಿಳಿಸಿದ್ದು, ಮುಂದೆಯೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಸಂಕಲ್ಪ ವ್ಯಕ್ತಪಡಿಸಿದೆ. ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಶೀಘ್ರ ಚೇತರಿಕೆಗೂ ತಂಡ ಹಾರೈಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿ, “ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಕುಟುಂಬಗಳ ಮೇಲೆ ಅಪಾರ ಭಾವನಾತ್ಮಕ ಹಾಗೂ ಆರ್ಥಿಕ ಹೊರೆಯನ್ನು ಉಂಟುಮಾಡುತ್ತದೆ. ಸಕಾಲದಲ್ಲಿ ದೊರೆಯುವ ಚಿಕಿತ್ಸೆ ಮಗುವಿನ ಬದುಕಿನಲ್ಲಿ ದೊಡ್ಡ ಬದಲಾವಣೆ ತರಬಲ್ಲದು. ನಮ್ಮದೇ ಆಸ್ಪತ್ರೆಯ ಎಸಿ ವಿಭಾಗದ ತಂಡ ಹಬ್ಬದ ಸಂಪ್ರದಾಯವನ್ನು ಈ ಮಕ್ಕಳ ಪಾಲಿಗೆ ಭರವಸೆಯ ಬೆಳಕನ್ನಾಗಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ. ತಮ್ಮ ಕಲೆಯ ಮೂಲಕ ಪುಟ್ಟ ರೋಗಿಗಳಿಗೆ ನೆರವಾದ ದರ್ಪಣ ಮಹಿಳಾ ಪಿಲಿ ತಂಡಕ್ಕೂ ನಾವು ಆಭಾರಿಯಾಗಿದ್ದೇವೆ. ಕಸ್ತೂರ್ಬಾ ಆಸ್ಪತ್ರೆಯ ಪರವಾಗಿ ಪ್ರತಿಯೊಬ್ಬ ಸದಸ್ಯರು, ಬೆಂಬಲಿಗರು ಮತ್ತು ದಾನಿಗಳ ಬದ್ಧತೆ ಹಾಗೂ ಉದಾರತೆಗೆ ಧನ್ಯವಾದಗಳು. ಆರ್ಥಿಕ ಸಂಕಷ್ಟದ ಕಾರಣದಿಂದ ಯಾವುದೇ ಮಗು ಚಿಕಿತ್ಸೆಯಿಂದ ವಂಚಿತವಾಗದಂತೆ ನೋಡಿಕೊಳ್ಳುವ ನಮ್ಮ ಪ್ರಯತ್ನಕ್ಕೆ ಇಂತಹ ನೆರವು ಬಲ ನೀಡುತ್ತದೆ,” ಎಂದು ಹೇಳಿದರು.

ಈ ಸೇವಾ ಕಾರ್ಯಗಳಿಗೆ ಕೈಜೋಡಿಸಿದ ಹಾಗೂ ಬೆಂಬಲ ನೀಡಿದ ಎಲ್ಲರಿಗೂ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ ಕೃತಜ್ಞತೆ ಸಲ್ಲಿಸಿದೆ.

Previous Post

ವಿ-ಗಾರ್ಡ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಮಿಥುನ್ ಕೆ. ಚಿಟ್ಟಿಲಪ್ಪಿಲ್ಲಿ ನೇಮಕ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ₹2.2 ಲಕ್ಷ ನೆರವು 

ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ₹2.2 ಲಕ್ಷ ನೆರವು 

01/10/2026
ವಿ-ಗಾರ್ಡ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಮಿಥುನ್ ಕೆ. ಚಿಟ್ಟಿಲಪ್ಪಿಲ್ಲಿ ನೇಮಕ

ವಿ-ಗಾರ್ಡ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಮಿಥುನ್ ಕೆ. ಚಿಟ್ಟಿಲಪ್ಪಿಲ್ಲಿ ನೇಮಕ

01/10/2026
ಎಂಆರ್‌ಪಿಎಲ್‌ನಲ್ಲಿ ಭಾರೀ ಸ್ಫೋಟ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರ್ಮಿಕನ ಮೃತದೇಹ ಪತ್ತೆ

ಎಂಆರ್‌ಪಿಎಲ್‌ನಲ್ಲಿ ಭಾರೀ ಸ್ಫೋಟ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರ್ಮಿಕನ ಮೃತದೇಹ ಪತ್ತೆ

30/09/2026
ಮಣಿಪಾಲದಲ್ಲಿ ಅಂದರ್‌ ಬಾಹರ್‌ ಜುಗಾರಿ: 6 ಮಂದಿ ವಶಕ್ಕೆ

ಮಣಿಪಾಲದಲ್ಲಿ ಅಂದರ್‌-ಬಾಹರ್‌ ಜುಗಾರಿ; ಆರು ಮಂದಿ ವಶಕ್ಕೆ

30/09/2026

Recent News

imunify-bot-check