Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ವಿ-ಗಾರ್ಡ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಮಿಥುನ್ ಕೆ. ಚಿಟ್ಟಿಲಪ್ಪಿಲ್ಲಿ ನೇಮಕ

Dhrishya News by Dhrishya News
01/10/2026
in ಸುದ್ದಿಗಳು
0
ವಿ-ಗಾರ್ಡ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಮಿಥುನ್ ಕೆ. ಚಿಟ್ಟಿಲಪ್ಪಿಲ್ಲಿ ನೇಮಕ
0
SHARES
3
VIEWS
Share on FacebookShare on Twitter

ಬೆಂಗಳೂರು, ಸೆ. 30, 2026: ಭಾರತದ ಪ್ರಮುಖ ಎಫ್‌ಎಂಇಜಿ ಸಂಸ್ಥೆಗಳಲ್ಲಿ ಒಂದಾದ ವಿ-ಗಾರ್ಡ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಆಡಳಿತ ಮಂಡಳಿಯು, ಶ್ರೀ ಮಿಥುನ್ ಕೆ. ಚಿಟ್ಟಿಲಪ್ಪಿಲ್ಲಿ ಅವರನ್ನು ಕಂಪನಿಯ ನೂತನ ಅಧ್ಯಕ್ಷ (ಚೇರ್‌ಪರ್ಸನ್) ಹಾಗೂ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಿದೆ. ಈ ನೇಮಕಾತಿಯು ಸೆಪ್ಟೆಂಬರ್ 27, 2026 ರಿಂದ ಅಧಿಕೃತವಾಗಿ ಜಾರಿಗೆ ಬಂದಿದೆ.

2012 ರಿಂದಲೂ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಮಿಥುನ್ ಅವರು, ಅಧ್ಯಕ್ಷೆ ಮತ್ತು ಸ್ವತಂತ್ರ ನಿರ್ದೇಶಕಿಯಾಗಿ ಶ್ರೀಮತಿ ರಾಧಾ ಉನ್ನಿ ಅವರ ಎರಡನೇ ಹಾಗೂ ಅಂತಿಮ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನದ ಹೆಚ್ಚುವರಿ ಜವಾಬ್ದಾರಿ ತೆಗೆದುಕೊಂಡಿದ್ದಾರೆ.

ಮಿಥುನ್ ಅವರು 2006 ರಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ವಿ-ಗಾರ್ಡ್ ಸಂಸ್ಥೆಗೆ ಕಾಲಿಟ್ಟರು. ಅವರು ಕಂಪನಿಗೆ ಸೇರಿದ ಸಂದರ್ಭದಲ್ಲಿ ಸಂಸ್ಥೆಯ ವಾರ್ಷಿಕ ವಹಿವಾಟು ಸುಮಾರು ₹229 ಕೋಟಿಗಳಷ್ಟಿತ್ತು. ಆದರೆ, 2026ರ ಆರ್ಥಿಕ ವರ್ಷದ ಹೊತ್ತಿಗೆ ಅದು ಬರೊಬ್ಬರಿ 24 ಪಟ್ಟು ಹೆಚ್ಚಳ ಕಂಡು ₹5,966 ಕೋಟಿಗೆ ತಲುಪಿದೆ. ಕಳೆದ ಎರಡು ದಶಕಗಳಲ್ಲಿ, ದಕ್ಷಿಣ ಭಾರತಕ್ಕಷ್ಟೇ ಸೀಮಿತವಾಗಿದ್ದ ಎಲೆಕ್ಟ್ರಿಕಲ್ ಬ್ರ್ಯಾಂಡ್ ಅನ್ನು ದೇಶವ್ಯಾಪಿ ವಿಸ್ತರಿಸಿ, ವೈವಿಧ್ಯಮಯ ಗ್ರಾಹಕ ಬಾಳಿಕೆ ವಸ್ತುಗಳ (ಕನ್ಸ್ಯೂಮರ್ ಡ್ಯೂರೇಬಲ್ಸ್) ಪ್ರಮುಖ ದೈತ್ಯ ಕಂಪನಿಯಾಗಿ ಪರಿವರ್ತಿಸುವಲ್ಲಿ ಅವರು ಪ್ರಧಾನ ಪಾತ್ರ ವಹಿಸಿದ್ದಾರೆ.

2006 ರಲ್ಲಿ ವಿ-ಗಾರ್ಡ್‌ಗೆ ಸೇರಿದಂದಿನಿಂದ ಸಂಸ್ಥೆಯ ಭೌಗೋಳಿಕ ವಿಸ್ತರಣೆ, ವೈವಿಧ್ಯಮಯ ಉತ್ಪನ್ನಗಳ ಸೇರ್ಪಡೆ ಹಾಗೂ ಉತ್ಪಾದನಾ ಬೆಳವಣಿಗೆಗೆ ಮಿಥುನ್ ಚಾಲನೆ ನೀಡಿದ್ದಾರೆ. ಆ ಮೂಲಕ ಭಾರತೀಯ ಗ್ರಾಹಕ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‌ಗೆ ಅಭೂತಪೂರ್ವ ಬಲ ತಂದುಕೊಟ್ಟಿದ್ದಾರೆ.

ಅವರ ಈ ಅಧಿಕಾರಾವಧಿಯಲ್ಲಿ ಸಂಸ್ಥೆಯ ಸಿಬ್ಬಂದಿ ಬಲದಲ್ಲೂ ಭಾರಿ ಏರಿಕೆ ಕಂಡುಬಂದಿದೆ. 2006 ರಲ್ಲಿ ಕೇವಲ 575 ರಷ್ಟಿದ್ದ ಉದ್ಯೋಗಿಗಳ ಸಂಖ್ಯೆಯು ಆಗಸ್ಟ್ 2026 ರ ವೇಳೆಗೆ 11,350 ಕ್ಕೆ ಏರಿಕೆಯಾಗಿದ್ದು, ಇದು ಕಂಪನಿಯ ಬೆಳವಣಿಗೆಯ ಅಗಾಧತೆ ಮತ್ತು ಸಾಂಸ್ಥಿಕ ಪರಿವರ್ತನೆಯನ್ನು ಎತ್ತಿ ತೋರಿಸುತ್ತದೆ.

ಪ್ರಸ್ತುತ ವಿ-ಗಾರ್ಡ್ ದೇಶದ 7 ರಾಜ್ಯಗಳಲ್ಲಿ 15 ಉತ್ಪಾದನಾ ಘಟಕಗಳನ್ನು ಹೊಂದಿದ್ದು, 20 ಕ್ಕೂ ಹೆಚ್ಚು ವಿಭಾಗಗಳಲ್ಲಿ ವೈವಿಧ್ಯಮಯ ಉತ್ಪನ್ನಗಳನ್ನು ತಯಾರಿಸುತ್ತಿದೆ. ಇದು ಕೇವಲ ಪ್ರಾದೇಶಿಕವಾಗಿದ್ದ ಎಲೆಕ್ಟ್ರಿಕಲ್ ಬ್ರ್ಯಾಂಡ್ ಹೇಗೆ ವಿಶಾಲ ಗ್ರಾಹಕ ಬಾಳಿಕೆ ವಸ್ತುಗಳ ದೈತ್ಯ ಸಂಸ್ಥೆಯಾಗಿ ಬೆಳೆದಿದೆ ಎಂಬುದಕ್ಕೆ ನಿದರ್ಶನವಾಗಿದೆ.

ಅವರ ಅಧಿಕಾರಾವಧಿಯಲ್ಲಿ ಬ್ರ್ಯಾಂಡ್ ಮೌಲ್ಯ, ಗ್ರಾಹಕ ಸೇವೆ, ಪೂರೈಕೆ ಸರಪಳಿ, ಮಾರಾಟ ಮತ್ತು ಮಾರ್ಕೆಟಿಂಗ್, ಮಾನವ ಸಂಪನ್ಮೂಲ ಹಾಗೂ ಹಣಕಾಸು ಸೇರಿದಂತೆ ಇಡೀ ಸಂಸ್ಥೆಯಲ್ಲೇ ಸಮಗ್ರ ಪರಿವರ್ತನೆ ನಡೆದಿದೆ. ಈ ಪರಿವರ್ತನಾ ಯೋಜನೆಗಳ ಫಲವಾಗಿ ವಿ-ಗಾರ್ಡ್ ವ್ಯಕ್ತಿ-ಆಧಾರಿತ ಸಂಸ್ಥೆಯಿಂದ ವ್ಯವಸ್ಥಾ-ಆಧಾರಿತ (ಪ್ರೊಸೆಸ್-ಓರಿಯೆಂಟೆಡ್) ಕಂಪನಿಯಾಗಿ ಬೆಳೆದು, ತನ್ನ ಆಂತರಿಕ ವ್ಯವಸ್ಥೆಗಳು, ಸಾಮರ್ಥ್ಯ ಮತ್ತು ಕಾರ್ಯವಿಧಾನಗಳನ್ನು ಬಲಪಡಿಸಿಕೊಂಡಿದೆ.

ಕಂಪನಿಯು ತನ್ನ ಅತ್ಯುತ್ತಮ ಕೆಲಸದ ವಾತಾವರಣಕ್ಕಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಪಾರ ಮನ್ನಣೆ ಗಳಿಸಿದೆ. ನ್ಯೂಸ್‌ವೀಕ್ ಮತ್ತು ಸ್ಟ್ಯಾಟಿಸ್ಟಾ ಸಮೀಕ್ಷೆಯಲ್ಲಿ ವಿಶ್ವದ ಅತ್ಯಂತ ವಿಶ್ವಾಸಾರ್ಹ ಕಂಪನಿಗಳು 2025 ಪಟ್ಟಿಯಲ್ಲಿ ವಿ-ಗಾರ್ಡ್ ಸ್ಥಾನ ಪಡೆದುಕೊಂಡಿದ್ದು, ಪ್ರತಿಷ್ಠಿತ ಟೈಮ್ ಮ್ಯಾಗಜೀನ್‌ನಿಂದ ಭಾರತದ ಅತ್ಯುತ್ತಮ ಉದ್ಯೋಗದಾತ 2025 ಗೌರವಕ್ಕೆ ಪಾತ್ರವಾಗಿದೆ. ಮಧ್ಯಮ ಗಾತ್ರದ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ನಾಲ್ಕು ಬಾರಿ ಆ್ಯಂಬಿಷನ್‌ಬಾಕ್ಸ್ ಬೆಸ್ಟ್ ಪ್ಲೇಸ್ ಟು ವರ್ಕ್ ಪ್ರಶಸ್ತಿಯನ್ನೂ ಪಡೆದುಕೊಂಡಿದೆ. ಇದಲ್ಲದೆ ವಿನ್ಯಾಸ ಶ್ರೇಷ್ಠತೆಗಾಗಿ ಐದು ರೆಡ್ ಡಾಟ್ ಗ್ಲೋಬಲ್ ಡಿಸೈನ್ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು, ನಾವೀನ್ಯತೆಗೆ ನೀಡಿದ ಆದ್ಯತೆಗೆ ಸಾಕ್ಷಿಯಾಗಿದೆ. ವೋಲ್ಟೇಜ್ ಸ್ಟೆಬಿಲೈಜರ್ ವಿಭಾಗದಲ್ಲಿ ಸತತ ಐದು ವರ್ಷಗಳ ಕಾಲ ಸೂಪರ್‌ಬ್ರ್ಯಾಂಡ್ ಗರಿ ಮುಡಿಗೇರಿಸಿಕೊಂಡಿದ್ದು, ಬ್ರ್ಯಾಂಡ್ ಮೇಲಿನ ಗ್ರಾಹಕರ ಅಚಲ ನಂಬಿಕೆಯನ್ನು ಪ್ರದರ್ಶಿಸುತ್ತದೆ. ಅಲ್ಲದೆ, ಕಂಪನಿಯಲ್ಲಿ ನೌಕರರು ಸಂಸ್ಥೆ ಬಿಡುವ ಪ್ರಮಾಣ (ಅಟ್ರಿಷನ್ ರೇಟ್) ಅತ್ಯಂತ ಕಡಿಮೆಯಿದ್ದು, ಇದು ಸಕಾರಾತ್ಮಕ ಕಾರ್ಯಸ್ಥಳದ ಸಂಸ್ಕೃತಿಗೆ ಕನ್ನಡಿ ಹಿಡಿದಿದೆ.

*ತಮ್ಮ ನೂತನ ನೇಮಕಾತಿಯ ಕುರಿತು ಮಾತನಾಡಿದ ವಿ-ಗಾರ್ಡ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀ ಮಿಥುನ್ ಕೆ. ಚಿಟ್ಟಿಲಪ್ಪಿಲ್ಲಿ ಅವರು* , “ಕಂಪನಿಯ ಪಯಣದ ಮಹತ್ವದ ತಿರುವಿನಲ್ಲಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕನಾಗಿ ಜವಾಬ್ದಾರಿ ವಹಿಸಿಕೊಳ್ಳುತ್ತಿರುವುದು ನನಗೆ ದೊರೆತ ಗೌರವ ಮತ್ತು ಸವಲತ್ತು. ಕಳೆದ ಎರಡು ದಶಕಗಳಲ್ಲಿ, ಪ್ರಾದೇಶಿಕ ಬ್ರ್ಯಾಂಡ್ ಆಗಿದ್ದ ವಿ-ಗಾರ್ಡ್ ಅಖಿಲ ಭಾರತ ಮಟ್ಟದ ಬಲಿಷ್ಠ ಸಂಸ್ಥೆಯಾಗಿ ಹೊರಹೊಮ್ಮುವುದನ್ನು ಕಣ್ಣಾರೆ ಕಂಡು, ನನ್ನ ತಂಡದೊಂದಿಗೆ ಅದಕ್ಕೆ ಕೊಡುಗೆ ನೀಡಲು ಸಾಧ್ಯವಾಗಿರುವುದು ಹೆಮ್ಮೆಯ ಸಂಗತಿ. ಕಂಪನಿಯು ತನ್ನ ಸುವರ್ಣ ಮಹೋತ್ಸವದ ಹೊಸ್ತಿಲಿನಲ್ಲಿರುವಾಗ, ನಮ್ಮ ಸದೃಢ ಅಡಿಪಾಯದ ಮೇಲೆ ಸಂಸ್ಥೆಯನ್ನು ಮುಂದಿನ ಹಂತದ ಮಹಾ ಬೆಳವಣಿಗೆಗೆ ಸಜ್ಜುಗೊಳಿಸಲು ಇದೊಂದು ಸದಾವಕಾಶ” ಎಂದರು.

2006 ರಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಪ್ರವೇಶಿಸಿ, 2012 ರಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ, ಇದೀಗ 2026 ರಲ್ಲಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಉನ್ನತ ಹುದ್ದೆಗೇರಿರುವ ಮಿಥುನ್ ಅವರ ಈ ಪಯಣವು, ವಿ-ಗಾರ್ಡ್ ಅಖಿಲ ಭಾರತ ಮಟ್ಟದ ಕಂಪನಿಯಾಗಿ ಬೆಳೆದುಬಂದ ಇತಿಹಾಸವನ್ನೇ ಬಿಂಬಿಸುತ್ತದೆ. ಅವರು ಸೆಪ್ಟೆಂಬರ್ 27, 2026 ರಂದು ಅಧಿಕೃತವಾಗಿ ನೂತನ ಹುದ್ದೆಯ ಅಧಿಕಾರ ವಹಿಸಿಕೊಂಡರು.

Previous Post

ಎಂಆರ್‌ಪಿಎಲ್‌ನಲ್ಲಿ ಭಾರೀ ಸ್ಫೋಟ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರ್ಮಿಕನ ಮೃತದೇಹ ಪತ್ತೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ವಿ-ಗಾರ್ಡ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಮಿಥುನ್ ಕೆ. ಚಿಟ್ಟಿಲಪ್ಪಿಲ್ಲಿ ನೇಮಕ

ವಿ-ಗಾರ್ಡ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಮಿಥುನ್ ಕೆ. ಚಿಟ್ಟಿಲಪ್ಪಿಲ್ಲಿ ನೇಮಕ

01/10/2026
ಎಂಆರ್‌ಪಿಎಲ್‌ನಲ್ಲಿ ಭಾರೀ ಸ್ಫೋಟ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರ್ಮಿಕನ ಮೃತದೇಹ ಪತ್ತೆ

ಎಂಆರ್‌ಪಿಎಲ್‌ನಲ್ಲಿ ಭಾರೀ ಸ್ಫೋಟ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರ್ಮಿಕನ ಮೃತದೇಹ ಪತ್ತೆ

30/09/2026
ಮಣಿಪಾಲದಲ್ಲಿ ಅಂದರ್‌ ಬಾಹರ್‌ ಜುಗಾರಿ: 6 ಮಂದಿ ವಶಕ್ಕೆ

ಮಣಿಪಾಲದಲ್ಲಿ ಅಂದರ್‌-ಬಾಹರ್‌ ಜುಗಾರಿ; ಆರು ಮಂದಿ ವಶಕ್ಕೆ

30/09/2026
ಬೈಂದೂರು: ಅರಣ್ಯ ಪ್ರದೇಶದಲ್ಲಿ ಇಬ್ಬರ ಮೃತದೇಹ ಪತ್ತೆ

ಬೈಂದೂರು: ಅರಣ್ಯ ಪ್ರದೇಶದಲ್ಲಿ ಇಬ್ಬರ ಮೃತದೇಹ ಪತ್ತೆ

30/09/2026

Recent News

ವಿ-ಗಾರ್ಡ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಮಿಥುನ್ ಕೆ. ಚಿಟ್ಟಿಲಪ್ಪಿಲ್ಲಿ ನೇಮಕ

ವಿ-ಗಾರ್ಡ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಮಿಥುನ್ ಕೆ. ಚಿಟ್ಟಿಲಪ್ಪಿಲ್ಲಿ ನೇಮಕ

01/10/2026
ಎಂಆರ್‌ಪಿಎಲ್‌ನಲ್ಲಿ ಭಾರೀ ಸ್ಫೋಟ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರ್ಮಿಕನ ಮೃತದೇಹ ಪತ್ತೆ

ಎಂಆರ್‌ಪಿಎಲ್‌ನಲ್ಲಿ ಭಾರೀ ಸ್ಫೋಟ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರ್ಮಿಕನ ಮೃತದೇಹ ಪತ್ತೆ

30/09/2026
ಮಣಿಪಾಲದಲ್ಲಿ ಅಂದರ್‌ ಬಾಹರ್‌ ಜುಗಾರಿ: 6 ಮಂದಿ ವಶಕ್ಕೆ

ಮಣಿಪಾಲದಲ್ಲಿ ಅಂದರ್‌-ಬಾಹರ್‌ ಜುಗಾರಿ; ಆರು ಮಂದಿ ವಶಕ್ಕೆ

30/09/2026
ಬೈಂದೂರು: ಅರಣ್ಯ ಪ್ರದೇಶದಲ್ಲಿ ಇಬ್ಬರ ಮೃತದೇಹ ಪತ್ತೆ

ಬೈಂದೂರು: ಅರಣ್ಯ ಪ್ರದೇಶದಲ್ಲಿ ಇಬ್ಬರ ಮೃತದೇಹ ಪತ್ತೆ

30/09/2026
imunify-bot-check