Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಶ್ರೀ ಪುತ್ತಿಗೆ ಸಂಧ್ಯಾ ವಿದ್ಯಾಪೀಠ ಹಾಗೂ ಮಹಿಳಾ ವಿದ್ಯಾಪೀಠ ಉದ್ಘಾಟನೆ

Dhrishya News by Dhrishya News
21/09/2026
in ಸುದ್ದಿಗಳು
0
ಶ್ರೀ ಪುತ್ತಿಗೆ ಸಂಧ್ಯಾ ವಿದ್ಯಾಪೀಠ ಹಾಗೂ ಮಹಿಳಾ ವಿದ್ಯಾಪೀಠ ಉದ್ಘಾಟನೆ
0
SHARES
1
VIEWS
Share on FacebookShare on Twitter

ನವಿ ಮುಂಬೈ, ಸೆಪ್ಟೆಂಬರ್ 20, 2026, ಭಾನುವಾರ:ಉಡುಪಿ ಶ್ರೀ ಪುತ್ತಿಗೆ ಮಠದ ಹಿರಿಯ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿ ಹಾಗೂ ಆಶೀರ್ವಾದದೊಂದಿಗೆ ಮುಂಬೈ ಮಹಾನಗರದಲ್ಲಿ ಶ್ರೀ ಪುತ್ತಿಗೆ ಸಂಧ್ಯಾ ವಿದ್ಯಾಪೀಠ ಹಾಗೂ ಶ್ರೀ ಪುತ್ತಿಗೆ ಮಹಿಳಾ ವಿದ್ಯಾಪೀಠ ಇಂದು ವಿಧಿವತ್ತಾಗಿ ಉದ್ಘಾಟನೆಗೊಂಡಿತು.

ಯಾಂತ್ರಿಕ ಜೀವನಶೈಲಿಯ ಪರಿಣಾಮವಾಗಿ ಧರ್ಮ, ಸಂಸ್ಕೃತಿ ಹಾಗೂ ಮೌಲ್ಯಾಧಾರಿತ ಜೀವನ ಕ್ರಮಗಳು ನಿಧಾನವಾಗಿ ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ, ಆಸ್ತಿಕ ಸಮಾಜದ ಪ್ರತಿಯೊಂದು ಮನೆ-ಮನದಲ್ಲೂ ಧರ್ಮಚಿಂತನೆ ಮೂಡಿಸಿ, ಧಾರ್ಮಿಕ ಆಚರಣೆಗಳ ಅರ್ಥವನ್ನು ಅರಿತು ಅವುಗಳನ್ನು ಅರ್ಥಪೂರ್ಣವಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಶ್ರೀ ಪುತ್ತಿಗೆ ವಿದ್ಯಾಪೀಠವನ್ನು ಸ್ಥಾಪಿಸಲಾಗಿದೆ.
ಈಗಾಗಲೇ ಚೆನ್ನೈ, ಬೆಂಗಳೂರು ಹಾಗೂ ಕೋಲ್ಕತ್ತಾ ನಗರಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಪುತ್ತಿಗೆ ವಿದ್ಯಾಪೀಠವು, ಮುಂಬೈ ಮಹಾನಗರದಲ್ಲಿಯೂ ಧರ್ಮ ಹಾಗೂ ಸಂಸ್ಕೃತಿಯ ಪ್ರಸಾರಕ್ಕಾಗಿ ತನ್ನ ಕಾರ್ಯವನ್ನು ವಿಸ್ತರಿಸಿದೆ. ಶ್ರೀ ಜಗನ್ನಾಥ ದಾಸರ ಆರಾಧನೆಯ ಪವಿತ್ರ ಸಂದರ್ಭದಲ್ಲಿ ಈ ವಿದ್ಯಾಪೀಠಗಳ ಆರಂಭಕ್ಕೆ ಸಂಕಲ್ಪ ಮಾಡಲಾಗಿದೆ.

ಶ್ರೀ ಪುತ್ತಿಗೆ ಮಹಿಳಾ ವಿದ್ಯಾಪೀಠದಲ್ಲಿ ಮಹಿಳೆಯರಿಗೆ ದಾಸರ ಪದಗಳು, ಹರಿಕಥಾಮೃತಸಾರ ಸಂಪ್ರದಾಯದ ಹಾಡುಗಳು, ಭಜನೆ, ರಂಗವಲ್ಲಿ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ತರಬೇತಿ ನೀಡಲಾಗುವುದು.
ಸಂಧ್ಯಾ ವಿದ್ಯಾಪೀಠ
ವಿಪ್ರ ಪುರುಷರಿಗಾಗಿ ಆರಂಭಿಸಲಾಗಿರುವ ಸಂಧ್ಯಾ ವಿದ್ಯಾಪೀಠದಲ್ಲಿ ವೇದಾಧ್ಯಯನ, ಸಂಧ್ಯಾವಂದನೆ ಕಾರ್ಯಾಗಾರ, ದೇವಪೂಜಾ ಪದ್ಧತಿ, ಶ್ರೀಮದ್ಭಗವದ್ಗೀತೆ, ದಾಸರ ಪದಗಳು, ಭಜನೆ ಮುಂತಾದ ವಿಷಯಗಳ ಕುರಿತು ಕ್ರಮಬದ್ಧವಾದ ಶಿಕ್ಷಣ ಮತ್ತು ತರಬೇತಿ ನೀಡಲಾಗುವುದು.

ಉದ್ಘಾಟನಾ ಸಮಾರಂಭದಲ್ಲಿ ಸಭೆಯನ್ನುದ್ದೇಶಿಸಿ ಆಶೀರ್ವಚನ ನೀಡಿದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು,
“ಸನಾತನ ಧರ್ಮವು ಎಂದಿಗೂ ನಶಿಸುವುದಿಲ್ಲ. ಅದಕ್ಕೆ ಪ್ರಮುಖ ಕಾರಣ ಹಿಂದೂ ಸಮಾಜದ ಸ್ತ್ರೀಯರಲ್ಲಿರುವ ಧರ್ಮಪ್ರಜ್ಞೆ ಹಾಗೂ ಅಚಲವಾದ ಧರ್ಮನಿಷ್ಠೆ. ಈ ಧರ್ಮಪ್ರಜ್ಞೆಯನ್ನು ಮತ್ತಷ್ಟು ಜಾಗೃತಗೊಳಿಸುವ ಉದ್ದೇಶದಿಂದ ಮಹಿಳಾ ವಿದ್ಯಾಪೀಠವನ್ನು ಆರಂಭಿಸಲಾಗಿದೆ. ಯಾಂತ್ರಿಕ ಜೀವನಶೈಲಿಯಲ್ಲಿ ತಮ್ಮತನವನ್ನೇ ಮರೆತು ಹೋಗುತ್ತಿರುವ ಪುರುಷರಲ್ಲಿ, ವಿಶೇಷವಾಗಿ ವಿಪ್ರ ಪುರುಷರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಉದ್ದೇಶದಿಂದ ಸಂಧ್ಯಾ ವಿದ್ಯಾಪೀಠವನ್ನು ಸ್ಥಾಪಿಸಲಾಗಿದೆ. ವ್ಯವಸ್ಥಿತವಾಗಿ ನಡೆಯಲಿರುವ ಈ ವಿದ್ಯಾಪೀಠಗಳಲ್ಲಿ ಶಿಕ್ಷಣ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರವನ್ನು ನೀಡಲಾಗುವುದು,” ಎಂದು ನುಡಿದರು.
ಈ ಸಂದರ್ಭದಲ್ಲಿ ಮಹಾಭಾರತ ತಾತ್ಪರ್ಯ ನಿರ್ಣಯದ ಶ್ಲೋಕವನ್ನು ಉಪದೇಶಿಸುವ ಮೂಲಕ ಶ್ರೀಪಾದಂಗಳವರು ವಿದ್ಯಾಪೀಠಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ವಾನ್ ನಾಗರಹಳ್ಳಿ ಪ್ರಹ್ಲಾದಾಚಾರ್ಯರು ಮಾತನಾಡಿ,
“ಇಂತಹ ವಿದ್ಯಾಪೀಠಗಳು ಸಮಾಜಕ್ಕೆ ಆದರ್ಶಪ್ರಾಯವಾಗಿವೆ. ಲಕ್ಷಾಂತರ ಗುರುಕುಲಗಳು ಹಾಗೂ ವಿದ್ಯಾಪೀಠಗಳು ಇದ್ದಂತಹ ಈ ರಾಷ್ಟ್ರದಲ್ಲಿ ಇಂದು ಬೆರಳೆಣಿಕೆಯಷ್ಟು ಮಾತ್ರ ಉಳಿದಿವೆ. ಪರಮಪೂಜ್ಯ ಶ್ರೀಪಾದಂಗಳವರ ಸಂಕಲ್ಪದಿಂದ ನಮ್ಮ ದೇಶದ ಆ ಗತವೈಭವವು ಪುನಃಶ್ಚೇತನಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ,” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅತಿಥಿಗಳಾದ ಶ್ರೀ ಮಾನ್ಯೂರು ಅನಂತಮೂರ್ತಿ ಅವರು ಭಾಗ್ಯನಗರದ ಶ್ರೀ ಗುರು ರಾಘವೇಂದ್ರ ಮಠದಿಂದ ತಂದ ರಾಯರ ಶೇಷವಸ್ತ್ರವನ್ನು ಪರಮಪೂಜ್ಯ ಶ್ರೀಪಾದಂಗಳವರಿಗೆ ಸಮರ್ಪಿಸಿದರು.
ಧರ್ಮ, ಸಂಸ್ಕೃತಿ ಮತ್ತು ಮೌಲ್ಯಾಧಾರಿತ ಜೀವನಶೈಲಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಉದ್ದೇಶದೊಂದಿಗೆ ಆರಂಭಗೊಂಡಿರುವ ಈ ವಿದ್ಯಾಪೀಠಗಳು ಮುಂಬೈ ಮಹಾನಗರದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೊಸ ದಿಕ್ಕನ್ನು ನೀಡುವ ನಿರೀಕ್ಷೆಯಿದೆ.

ವಿದ್ಯಾಪೀಠದ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

Previous Post

ಶ್ರೀ ಕೃಷ್ಣ ಮಠದಲ್ಲಿ ಜಗನ್ನಾಥ ದಾಸರ ಆರಾಧನೆ: ಕೃತಿಗಳ ಮೆರವಣಿಗೆ

Next Post

ಹಿಂದುಜ ಕುಟುಂಬದವರಿಂದ ಆತಿಥ್ಯ ಸ್ವೀಕರಿಸಿದ ಪುತ್ತಿಗೆ ಶ್ರೀ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಹಿಂದುಜ ಕುಟುಂಬದವರಿಂದ ಆತಿಥ್ಯ ಸ್ವೀಕರಿಸಿದ ಪುತ್ತಿಗೆ ಶ್ರೀ

ಹಿಂದುಜ ಕುಟುಂಬದವರಿಂದ ಆತಿಥ್ಯ ಸ್ವೀಕರಿಸಿದ ಪುತ್ತಿಗೆ ಶ್ರೀ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಶಂಕರನಾರಾಯಣ: ರಬ್ಬರ್ ಟ್ಯಾಪಿಂಗ್‌ಗೆ ಬಳಸುವ ದ್ರಾವಣ ಸೇವಿಸಿ ವ್ಯಕ್ತಿ ಮೃತ್ಯು

ಉಡುಪಿ: ಬನ್ನಂಜೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಅಪರಿಚಿತ ವ್ಯಕ್ತಿ ಆತ್ಮಹತ್ಯೆ

21/09/2026
ಉಚ್ಚಿಲ ದಸರಾ 2026: ‘ಅಬ್ಬರದ ಪಿಲಿ ಪಂಥ’ ಕಾರ್ಯಕ್ರಮದ ಅಧಿಕೃತ ಪೋಸ್ಟರ್ ಬಿಡುಗಡೆ

ಉಚ್ಚಿಲ ದಸರಾ 2026: ‘ಅಬ್ಬರದ ಪಿಲಿ ಪಂಥ’ ಕಾರ್ಯಕ್ರಮದ ಅಧಿಕೃತ ಪೋಸ್ಟರ್ ಬಿಡುಗಡೆ

21/09/2026
ಶಂಕರನಾರಾಯಣ: ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಗೆ ನೀಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ

ಶಂಕರನಾರಾಯಣ: ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಗೆ ನೀಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ

21/09/2026
ಶಿರ್ವದಲ್ಲಿ ಕೋಳಿ ಜೂಜಾಟ: 9 ಮಂದಿ ಬಂಧನ, 13 ಕೋಳಿ ಹುಂಜಗಳು ಸಹಿತ ವಿವಿಧ ವಸ್ತುಗಳ ಸ್ವಾಧೀನ

ಶಿರ್ವದಲ್ಲಿ ಕೋಳಿ ಜೂಜಾಟ: 9 ಮಂದಿ ಬಂಧನ, 13 ಕೋಳಿ ಹುಂಜಗಳು ಸಹಿತ ವಿವಿಧ ವಸ್ತುಗಳ ಸ್ವಾಧೀನ

21/09/2026

Recent News

imunify-bot-check