Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಯುವ ಭಾರತದ ಹುಮ್ಮಸ್ಸಿಗೆ NESCAFÉಯ ಲಯದ ಸಾಥ್

NESCAFÉಯು, Spotify ಜೊತೆ ಕೈಜೋಡಿಸಿ, ಯುವ ಭಾರತದ ವಿಭಿನ್ನ ಕಠಿಣ ಪರಿಶ್ರಮಿಗಳಿಗೆ ಜನಪ್ರಿಯ ಆಂಥಮ್ ಮೂಲಕ ಸಂಗೀತದ ಸಾಥ್ ನೀಡಲಿದೆ

Dhrishya News by Dhrishya News
15/09/2026
in ಸುದ್ದಿಗಳು
0
ಯುವ ಭಾರತದ ಹುಮ್ಮಸ್ಸಿಗೆ NESCAFÉಯ ಲಯದ ಸಾಥ್
0
SHARES
8
VIEWS
Share on FacebookShare on Twitter

ಬೆಂಗಳೂರು, ಸೆಪ್ಟೆಂಬರ್ 15, 2026: ಕಠಿಣ ಪರಿಶ್ರಮ ಅಂದರೆ ಹೇಗಿರುತ್ತದೆ? ಕೆಲವರಿಗೆ ಅದು ತಡರಾತ್ರಿಯವರೆಗಿನ ಓದು. ಇನ್ನು ಕೆಲವರಿಗೆ ಅದು ತಮ್ಮ ಸೃಜನಶೀಲ ಆಸಕ್ತಿಯನ್ನು ಬೆನ್ನಟ್ಟುವುದು, ತಮ್ಮದೇ ಆದದ್ದನ್ನು ಸಾಧಿಸುವುದು ಅಥವಾ ಯಾವುದೇ ಕಾರಣಕ್ಕೂ ಮುನ್ನಡೆಯುವುದನ್ನು ನಿಲ್ಲಿಸದಿರುವುದು. ಯುವ ಭಾರತದ ಹಸ್ಲ್‌ನ ಈ ವಿಭಿನ್ನ ಅಭಿವ್ಯಕ್ತಿಗಳನ್ನು NESCAFÉ ತನ್ನ ಹೊಸ Hustle Anthem ಮೂಲಕ ಒಂದೆಡೆ ಸೇರಿಸುತ್ತಿದೆ. ಯುವ ಭಾರತದ ಶಕ್ತಿ, ಮಹತ್ವಾಕಾಂಕ್ಷೆ ಮತ್ತು ವೈಯಕ್ತಿಕತೆಯನ್ನು ಪ್ರತಿಬಿಂಬಿಸುವ ಈ ರ್ಯಾಪ್ ಟ್ರ್ಯಾಕ್, ಅವರ ಉತ್ಸಾಹಕ್ಕೆ ಸಂಗೀತದ ರೂಪ ನೀಡುವ ಆಂಥಮ್ ಆಗಿ ಮೂಡಿಬಂದಿದೆ.

Spotify ಸಹಯೋಗದೊಂದಿಗೆ ರೂಪಿಸಿರುವ ಈ ಆಂಥಮ್, ಸಂಗೀತದ ಮೂಲಕ ಯುವ ಸಮುದಾಯದೊಂದಿಗೆ NESCAFÉ ಹೊಂದಿರುವ ದೀರ್ಘಕಾಲದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಯುವ ಸಂಸ್ಕೃತಿಗೆ ಆದ್ಯತೆ ನೀಡುವ ತನ್ನ ನಿಲುವನ್ನು ಮತ್ತಷ್ಟು ಬಲಪಡಿಸುವ ರೀತಿಯಲ್ಲಿ, ಕ್ರಿಯೇಟರ್‌ಗಳು ಮತ್ತು ಸಾಂಸ್ಕೃತಿಕ ಟ್ರೆಂಡ್‌ಸೆಟರ್‌ಗಳನ್ನು ಒಳಗೊಂಡ ವಿಶೇಷ ಬ್ರ್ಯಾಂಡ್ ಅನುಭವದೊಂದಿಗೆ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಯುವ ಪ್ರೇಕ್ಷಕರಲ್ಲಿ ಭಾಗವಹಿಸುವಿಕೆ ಮತ್ತು ಸಂವಾದಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಈ ಅನುಭವವನ್ನು ರೂಪಿಸಲಾಗಿದೆ.

ಕೋಡಿಂಗ್ ಮತ್ತು ಸಂಗೀತದಿಂದ ಹಿಡಿದು ಕಲೆ ಹಾಗೂ ಗುಂಪು ಅಧ್ಯಯನದವರೆಗೆ, ಯುವಜನರ ವಿಭಿನ್ನ ಪರಿಶ್ರಮದ ವೀಡಿಯೊ ಚಿತ್ರಗಳೊಂದಿಗೆ ಈ ಹಾಡನ್ನು ಬಿಡುಗಡೆ ಮಾಡಲಾಗಿದೆ. Meta, Spotify ಮತ್ತು YouTube ವೇದಿಕೆಗಳಲ್ಲಿ ಪ್ರಚಾರಗೊಳ್ಳುತ್ತಿರುವ ಈ ಚಿತ್ರಗಳು, ವಿವಿಧ ಡಿಜಿಟಲ್ ವೇದಿಕೆಗಳಲ್ಲಿ 360-ಡಿಗ್ರಿ ವ್ಯಾಪ್ತಿಯ ಪ್ರಚಾರದ ಮೂಲಕ Hustle Anthemನ ಪ್ರಸ್ತುತತೆಯನ್ನು ಮತ್ತಷ್ಟು ಬಲಪಡಿಸುತ್ತವೆ.

Nestlé Indiaಯ ಪೌಡರ್ಡ್ ಮತ್ತು ಲಿಕ್ವಿಡ್ ಬೆವರೇಜಸ್ ವಿಭಾಗದ ಮುಖ್ಯಸ್ಥರಾದ ಶ್ರೀ ಸುನಯನ್ ಮಿತ್ರ ಅವರು ಮಾತನಾಡುತ್ತಾ, “ಯುವ ಭಾರತವು ಕಠಿಣ ಪರಿಶ್ರಮ ಎಂದರೆ ಏನು ಎಂಬುದನ್ನೇ ಹೊಸದಾಗಿ ವ್ಯಾಖ್ಯಾನಿಸುತ್ತಿದೆ. ಇದು ಕೇವಲ ಕೆಲಸ ಅಥವಾ ಮಹತ್ವಾಕಾಂಕ್ಷೆಗೆ ಸೀಮಿತವಾಗಿಲ್ಲ; ನಿಮ್ಮ ಗುರಿಯನ್ನು ನಿಮ್ಮದೇ ರೀತಿಯಲ್ಲಿ ಬೆನ್ನಟ್ಟುವುದೂ ಇದರ ಭಾಗವಾಗಿದೆ. NESCAFÉ Hustle Anthem ಮೂಲಕ, ಯುವ ಸಂಸ್ಕೃತಿಗೆ ಅತ್ಯಂತ ಸಹಜವಾಗಿ ಹೊಂದಿಕೊಳ್ಳುವ ಮಾಧ್ಯಮವಾದ ಸಂಗೀತದ ಮೂಲಕ ಈ ಮನೋಭಾವವನ್ನು ಹಿಡಿದಿಡಲು ನಾವು ಬಯಸಿದ್ದೇವೆ. ನೀವು ಯಾವುದೇ ಕ್ಷೇತ್ರದಲ್ಲಿ ನಿಮ್ಮ ಪರಿಶ್ರಮವನ್ನು ಮುಂದುವರಿಸುತ್ತಿರಲಿ, ಹೊಸದನ್ನು ಸೃಷ್ಟಿಸುತ್ತಾ ನಿಮ್ಮದೇ ಜಗತ್ತನ್ನು ರೂಪಿಸಿಕೊಳ್ಳುವ ಈ ಪ್ರಯಾಣದಲ್ಲಿ ನಾವು ನಿಮ್ಮೊಂದಿಗೆ ಇದ್ದೇವೆ ಎಂಬುದನ್ನು ಹೇಳುವ ನಮ್ಮದೇ ರೀತಿಯಿದು.” ಎಂದು ಅಭಿಪ್ರಾಯಪಟ್ಟರು.

ಈ ಉಪಕ್ರಮವು Gen Z ಜೊತೆ NESCAFÉ ಸಂವಹನ ನಡೆಸುವ ರೀತಿಯಲ್ಲಿ ಮಹತ್ವದ ಬದಲಾವಣೆಯನ್ನು ಸೂಚಿಸುತ್ತದೆ. ಯುವಜನರ ಪರಿಶ್ರಮದ ಬಗ್ಗೆ ಮಾತನಾಡುವ ಬ್ರ್ಯಾಂಡ್‌ನಿಂದ, ಅವರ ಪರಿಶ್ರಮಕ್ಕೆ ಬೆಂಬಲ ಮತ್ತು ಉತ್ತೇಜನ ನೀಡುವ ಬ್ರ್ಯಾಂಡ್‌ನತ್ತ NESCAFÉ ಹೆಜ್ಜೆ ಇಡುತ್ತಿದೆ. ಈ ಅಭಿಯಾನಕ್ಕೆ ಕ್ರಿಯೇಟರ್‌ಗಳು ತಮ್ಮದೇ ಧ್ವನಿ ಮತ್ತು ಅಭಿಪ್ರಾಯಗಳನ್ನು ಸೇರಿಸುವ ಮೂಲಕ, Hustle Anthem ಕೇವಲ ಜಾಹೀರಾತಿನ ವ್ಯಾಪ್ತಿಗೆ ಸೀಮಿತವಾಗದೆ, ಯುವ ಭಾರತದ ದೈನಂದಿನ ಬದುಕಿನ ಲಯದ ಭಾಗವಾಗುವ ಗುರಿ ಹೊಂದಿದೆ.

Link to Spotify: https://open.spotify.com/track/52nMSXYHJpQIl2h5H9GYS3?si=K76Pi298Q22jxqd6F1AIew&utm_source=whatsapp&nd=1&dlsi=1a9f600c8b074635#login

Link to YouTube: https://www.youtube.com/watch?v=Tec1S9Z4_Mg&list=RDTec1S9Z4_Mg&start_radio=1

Previous Post

ಕಾರ್ಕಳ ಹೋಟೆಲ್ ಕೊಠಡಿಯಲ್ಲಿ ವ್ಯಕ್ತಿ ಮೃತ್ಯು..!

Next Post

ಮಾಹೆಯಲ್ಲಿ ಐಪಿಟುಇ360 ಕಾರ್ಯಾಗಾರ : ಬೌದ್ಧಿಕ-ಔದ್ಯಮಿಕ ಕ್ಷೇತ್ರಗಳನ್ನು ಬೆಸೆಯುವ ಆಶಯ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಮಾಹೆಯಲ್ಲಿ ಐಪಿಟುಇ360 ಕಾರ್ಯಾಗಾರ : ಬೌದ್ಧಿಕ-ಔದ್ಯಮಿಕ ಕ್ಷೇತ್ರಗಳನ್ನು ಬೆಸೆಯುವ ಆಶಯ

ಮಾಹೆಯಲ್ಲಿ ಐಪಿಟುಇ360 ಕಾರ್ಯಾಗಾರ : ಬೌದ್ಧಿಕ-ಔದ್ಯಮಿಕ ಕ್ಷೇತ್ರಗಳನ್ನು ಬೆಸೆಯುವ ಆಶಯ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಾಪು ತಾಲೂಕು ಮಟ್ಟದ ವಿಶ್ವಕರ್ಮ ಜಯಂತಿ ಆಚರಣೆ

ಕಾಪು ತಾಲೂಕು ಮಟ್ಟದ ವಿಶ್ವಕರ್ಮ ಜಯಂತಿ ಆಚರಣೆ

17/09/2026
ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಶ್ರೀ ಕ್ಷೇತ್ರ ಉಚ್ಚಿಲ  ಮಾನ್ಯ ಪೌರಾಡಳಿತ ಸಚಿವ ಶ್ರೀ ಎಚ್. ಸಿ. ಬಾಲಕೃಷ್ಣ ಅವರಿಂದ ಶ್ರೀ ಕ್ಷೇತ್ರ ಉಚ್ಚಿಲಕ್ಕೆ ಭೇಟಿ

ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಶ್ರೀ ಕ್ಷೇತ್ರ ಉಚ್ಚಿಲ ಮಾನ್ಯ ಪೌರಾಡಳಿತ ಸಚಿವ ಶ್ರೀ ಎಚ್. ಸಿ. ಬಾಲಕೃಷ್ಣ ಅವರಿಂದ ಶ್ರೀ ಕ್ಷೇತ್ರ ಉಚ್ಚಿಲಕ್ಕೆ ಭೇಟಿ

17/09/2026
ಉಡುಪಿ ನಗರ ಬಿಜೆಪಿಯಿಂದ ಬೃಹತ್ ರಕ್ತದಾನ ಶಿಬಿರ: ಶಾಸಕ ಯಶ್‌ಪಾಲ್ ಸುವರ್ಣ ಚಾಲನೆ

ಉಡುಪಿ ನಗರ ಬಿಜೆಪಿಯಿಂದ ಬೃಹತ್ ರಕ್ತದಾನ ಶಿಬಿರ: ಶಾಸಕ ಯಶ್‌ಪಾಲ್ ಸುವರ್ಣ ಚಾಲನೆ

17/09/2026
ಪ್ರಧಾನಿ ಮೋದಿ ಜನ್ಮದಿನ: ಕಾಪುವಿನಲ್ಲಿ ಉಚಿತ ರಿಕ್ಷಾ ಪ್ರಯಾಣ ಸೇವೆಗೆ ಚಾಲನೆ

ಪ್ರಧಾನಿ ಮೋದಿ ಜನ್ಮದಿನ: ಕಾಪುವಿನಲ್ಲಿ ಉಚಿತ ರಿಕ್ಷಾ ಪ್ರಯಾಣ ಸೇವೆಗೆ ಚಾಲನೆ

17/09/2026

Recent News

imunify-bot-check