Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಮಾಹೆ : ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯಗಳ ಜೊತೆಗೆ ಸಹಭಾಗಿತ್ವ

ಶೈಕ್ಷಣಿಕ, ಸಂಶೋಧನ ಸಾಧ್ಯತೆಗಳ ವಿಸ್ತರಣೆ

Dhrishya News by Dhrishya News
10/09/2026
in ಸುದ್ದಿಗಳು
0
ಮಾಹೆ : ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯಗಳ ಜೊತೆಗೆ ಸಹಭಾಗಿತ್ವ

Representatives of the New South Wales Government and MAHE during the NSW Government's India Mission reception in Mumbai, highlighting growing academic and research engagement between MAHE and leading universities in New South Wales.

0
SHARES
3
VIEWS
Share on FacebookShare on Twitter

ಮಣಿಪಾಲ, ಸೆಪ್ಟೆಂಬರ್ 10, 2026: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು ಆಸ್ಟ್ರೇಲಿಯಾದ ಪೂರ್ವ ಕರಾವಳಿಯ ನ್ಯೂ ಸೌತ್ ವೇಲ್ಸ್ (ಎನ್‌ಎಸ್‌ಡಬ್ಲ್ಯು)ನ ವಿಶ್ವವಿದ್ಯಾಲಯಗಳ ಜೊತೆಗೆ ಶೈಕ್ಷಣಿಕ ಹಾಗೂ ಸಂಶೋಧನಾ ಸಹಭಾಗಿತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ನ್ಯೂ ಸೌತ್ ವೇಲ್ಸ್‌ನ ಪ್ರಮುಖ ಐದು ವಿಶ್ವವಿದ್ಯಾಲಯಗಳಾದ ದಿ ಯೂನಿವರ್ಸಿಟಿ ಆಫ್ ಸಿಡ್ನಿ, ಯುಎನ್‌ಎಸ್‌ಡಬ್ಲ್ಯು ಸಿಡ್ನಿ, ಮ್ಯಾಕ್ವಾರಿ ವಿಶ್ವವಿದ್ಯಾನಿಲಯ, ದಿ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಸಿಡ್ನಿ ಮತ್ತು ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾನಿಲಯಗಳೊಂದಿಗೆ ಮಾಹೆಯ ಈ ಸಹಯೋಗವು ಶೈಕ್ಷಣಿಕ ಮತ್ತು ಸಂಶೋಧನ ಚಟುವಟಿಕೆಗಳ ಜೊತೆಗೆ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಸಂಶೋಧಕರ ವಿನಿಮಯವನ್ನು ಒಳಗೊಂಡಿವೆ.

ನ್ಯೂ ಸೌತ್ ವೇಲ್ಸ್ (ಎಸ್‌ಎಸ್‌ಡಬ್ಲ್ಯು) ಸರ್ಕಾರದ ನಿಯೋಗವು ಆಗಸ್ಟ್‌ 31 ರಿಂದ ಸೆಪ್ಟೆಂಬರ್‌ 3, 2026ರವರೆಗೆ ಭಾರತ ಸಂದರ್ಶನದಲ್ಲಿದ್ದು ಆರ್ಥಿಕ, ಶಿಕ್ಷಣ, ಸಂಶೋಧನೆ, ನವೋದ್ಯಮ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಎನ್‌ಎಸ್‌ಡಬ್ಲ್ಯು ಮತ್ತು ಭಾರತದ ನಡುವಿನ ಬಾಂಧವ್ಯವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಕ್ರಿಯಾಶೀಲ ಪ್ರಯತ್ನ ನಡೆಸಿತು. ಅಲ್ಲದೆ, ಎರಡೂ ಕಡೆಯ ಆಡಳಿತ ವ್ಯವಸ್ಥೆ, ಶೈಕ್ಷಣಿಕ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ಸಮುದಾಯಗಳ ನಡುವೆ ದೀರ್ಘಕಾಲೀನ ಪಾಲುದಾರಿಕೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಯಿತು.

ಕ್ರಿಸ್ ಮಿನ್ಸ್ ಎಂಪಿ, ಆಡಳಿತ ಮುಖ್ಯಸ್ಥರು, ಎನ್‌ಎಸ್‌ಡಬ್ಲ್ಯು ಹಾಗೂ ಡೇನಿಯಲ್ ಮೂಕ್‌ಹಿ ಎಂಎಲ್‌ಸಿ, ವಿತ್ತಪ್ರಮುಖರು, ಎನ್‌ಎಸ್‌ಡಬ್ಲ್ಯು ಅವರ ನೇತೃತ್ವದಲ್ಲಿ ನಡೆದ ಈ ಪ್ರವಾಸದಲ್ಲಿ ನ್ಯೂ ಸೌತ್ ವೇಲ್ಸ್ ಮತ್ತು ಭಾರತದ ಹಿರಿಯ ಸರ್ಕಾರಿ ಅಧಿಕಾರಿಗಳು, ನೀತಿ ನಿರೂಪಕರು, ಶಿಕ್ಷಣ ತಜ್ಞರು, ಕೈಗಾರಿಕಾ ವಲಯದ ನಾಯಕರು ಹಾಗೂ ಇತರ ಪ್ರಮುಖ ಪ್ರತಿನಿಧಿಗಳು ಭಾಗವಹಿಸಿದ್ದರು. ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಅವಕಾಶಗಳನ್ನು ಕಂಡುಕೊಳ್ಳುವುದು ಇದರ ಪ್ರಮುಖ ಉದ್ದೇಶವಾಗಿತ್ತು.

ಈ ಪ್ರವಾಸದ ಅಂಗವಾಗಿ, ಎನ್‌ಎಸ್‌ಡಬ್ಲ್ಯು ಸರ್ಕಾರವು ಮುಂಬೈನಲ್ಲಿ ಏರ್ಪಡಿಸಿದ್ದ ವಿಶೇಷ ಸಮಾರಂಭದಲ್ಲಿ ಎರಡೂ ಕಡೆಗಳ ಸಮಾನ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಕಾರವನ್ನು ವಿಸ್ತರಿಸುವಲ್ಲಿ ಸಂವಾದ ನಡೆಸಲು ಮತ್ತು ಹೊಸ ಅವಕಾಶದ ಕ್ಷೇತ್ರಗಳನ್ನು ಗುರುತಿಸಲು ಈ ಸಮಾರಂಭ ಪ್ರಮುಖ ವೇದಿಕೆಯಾಯಿತು.

ಮಾಹೆ ಮತ್ತು ದಿ ಯೂನಿವರ್ಸಿಟಿ ಆಫ್ ಸಿಡ್ನಿ (ಯುಸ್‌ವೈಡಿ) ನಡುವೆ ಶಿಕ್ಷಣ, ಸಂಶೋಧನೆ, ನವೋದ್ಯಮ ಮತ್ತು ಅಂತಾರಾಷ್ಟ್ರೀಯ ಶೈಕ್ಷಣಿಕ ವಿನಿಮಯ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸುವ ಆಶಯದಲ್ಲಿ ಪರಸ್ಪರ ಒಡಂಬಡಿಕೆ [ಎಂಒಯು] ಗೆ ಸೆಪ್ಟೆಂಬರ್‌ 2 ರಂದು ಎರಡೂ ಸಂಸ್ಥೆಗಳ ಪ್ರತಿನಿಧಿಗಳು ಸಹಿ ಹಾಕಿದರು.

ಮಾಹೆ ಮತ್ತು ಎನ್‌ಎಸ್‌ಡಬ್ಲ್ಯು ವಿಶ್ವವಿದ್ಯಾನಿಲಯಗಳ ನಡುವೆ ಶೈಕ್ಷಣಿಕ ಮತ್ತು ಸಂಶೋಧನಾತ್ಮಕ ಕ್ಷೇತ್ರಗಳಿಗೆ ಸಂಬಂಧಿಸಿ ನಡೆದ ಒಪ್ಪಂದ ಕುರಿತು ಹರ್ಷ ವ್ಯಕ್ತಪಡಿಸಿದ ಮಾಹೆಯ ಕುಲಪತಿ ಡಾ. ಶರತ್‌ ರಾವ್‌ ಅವರು, ‘‘ಎನ್‌ಎಸ್‌ಡಬ್ಲ್ಯು ಸರ್ಕಾರಿ ನಿಯೋಗದ ಭಾರತ ಪ್ರವಾಸವು ನ್ಯೂ ಸೌತ್ ವೇಲ್ಸ್ ಮತ್ತು ಭಾರತದ ನಡುವಿನ ದೀರ್ಘಕಾಲೀನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಕಾರಣವಾಗಿದೆ. ಆಸ್ಟ್ರೇಲಿಯಾದ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಮಾಹೆಯ ನಡುವೆ ನಿಕಟ ಸಂಬಂಧ ಬಹುಕಾಲದಿಂದಲೂ ಇದೆ. ಪ್ರಸ್ತುತ ಈಗ ಆಸ್ಟ್ರೇಲಿಯಾದ ಪೂರ್ವ ಕರಾವಳಿಯ ನ್ಯೂ ಸೌತ್‌ ವೇಲ್ಸ್‌ [ಎನ್‌ಎಸ್‌ಡಬ್ಲ್ಯು] ಜೊತೆಗೆ ಗಾಢವಾದ ಮತ್ತು ಸುಸ್ಥಿರವಾದ ಸಂಬಂಧವನ್ನು ಬೆಸೆಯಲು ಈ ಒಡಂಬಡಿಕೆಯ ಮೂಲಕ ಅವಕಾಶ ಒದಗಿದೆ. ಮಾಹೆ ಯಾವತ್ತೂ ವಿಶ್ವದ ಯಾವುದೇ ನವಜ್ಞಾನಪರಂಪರೆಗೆ ತನ್ನನ್ನು ತಾನು ತೆರೆದುಕೊಳ್ಳುವಲ್ಲಿ ಮತ್ತು ತನ್ನಲ್ಲಿರುವ ಜ್ಞಾನವನ್ನು ವಿಶ್ವದೊಂದಿಗೆ ಹಂಚಿಕೊಳ್ಳುವಲ್ಲಿ ಸದಾ ಮುಕ್ತವಾಗಿದೆ. ನ್ಯೂಸೌತ್‌ವೇಲ್ಸ್‌ನ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಮಾಹೆಯ ನಡುವೆ ವಿದ್ಯಾರ್ಥಿಗಳು, ಬೋಧಕವರ್ಗ ಮತ್ತು ಸಂಶೋಧಕರ ಸಹಯೋಗ ಮತ್ತು ಪ್ರವಾಸದ ಮೂಲಕ ಜ್ಞಾನವಿನಿಮಯದ ಅರ್ಥಪೂರ್ಣ ಅವಕಾಶಗಳನ್ನು ಸೃಷ್ಟಿಸಲು ಮಾಹೆ ಬದ್ಧವಾಗಿದೆ”ಎಂದರು.

Previous Post

ಆಶ್ರಯ ಮನೆ ವಿತರಣೆ ಫಲಾನುಭವಿಗಳ ಅಯ್ಕೆಯಲ್ಲಿ ಶಾಸಕರ ವಿಳಂಬ ನೀತಿಯನ್ನು ವಿರೋದಿಸಿ ಕಾಂಗ್ರೆಸ್ ವತಿಯಿಂದ ಧರಣಿ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮಾಹೆ : ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯಗಳ ಜೊತೆಗೆ ಸಹಭಾಗಿತ್ವ

ಮಾಹೆ : ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯಗಳ ಜೊತೆಗೆ ಸಹಭಾಗಿತ್ವ

10/09/2026
ಆಶ್ರಯ ಮನೆ ವಿತರಣೆ ಫಲಾನುಭವಿಗಳ ಅಯ್ಕೆಯಲ್ಲಿ ಶಾಸಕರ ವಿಳಂಬ ನೀತಿಯನ್ನು ವಿರೋದಿಸಿ ಕಾಂಗ್ರೆಸ್ ವತಿಯಿಂದ ಧರಣಿ

ಆಶ್ರಯ ಮನೆ ವಿತರಣೆ ಫಲಾನುಭವಿಗಳ ಅಯ್ಕೆಯಲ್ಲಿ ಶಾಸಕರ ವಿಳಂಬ ನೀತಿಯನ್ನು ವಿರೋದಿಸಿ ಕಾಂಗ್ರೆಸ್ ವತಿಯಿಂದ ಧರಣಿ

10/09/2026
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಿಶನ್ ಹೆಗ್ಡೆ ಕೊಳ್ಳೆಬೈಲು ನೇಮಕ..!

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಿಶನ್ ಹೆಗ್ಡೆ ಕೊಳ್ಳೆಬೈಲು ನೇಮಕ..!

10/09/2026
ಮುಂಬೈಯಲ್ಲಿ ‘ಭೂ ಕೈಲಾಸ’ ಪೌರಾಣಿಕ ಕೊಂಕಣಿ ನಾಟಕ ಪ್ರದರ್ಶನ..!

ಮುಂಬೈಯಲ್ಲಿ ‘ಭೂ ಕೈಲಾಸ’ ಪೌರಾಣಿಕ ಕೊಂಕಣಿ ನಾಟಕ ಪ್ರದರ್ಶನ..!

10/09/2026

Recent News

imunify-bot-check