ಕಾರ್ಕಳ : ರಾಜಾಪುರ ಸಾರಸ್ವತ ಸೊಸೈಟಿ ( ರಿ) ಕಾರ್ಕಳ ಇದರ ಮಹಾಸಭೆಯ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಸಲುವಾಗಿ ಶ್ರೀ ಮಹಾಲಕ್ಷ್ಮಿ ಮಹಿಳಾ ಮಂಡಳಿ ಲಕ್ಷ್ಮೀಪುರ ಕಾರ್ಕಳ, ಇವರಿಂದ ಯಕ್ಷಗಾನ ಪ್ರದರ್ಶನ ಸೆಪ್ಟೆಂಬರ್ 6 ರಂದು ಆದಿತ್ಯವಾರ ಅಪರಾಹ್ನ ಘಂಟೆ 2 ರಿಂದ “ದ್ರೌಪದಿ ಪ್ರತಾಪ” ಎಂಬ ಯಕ್ಷಗಾನ ಪ್ರಸಂಗ ಜೋಡುರಸ್ತೆಯಲ್ಲಿರುವ ಸಹಕಾರ ಸಿಂಧೂರ ಸಭಾಭವನದಲ್ಲಿ ನಡೆಯಿತು.

ಭಾಗವತರು ಶ್ರೀ ನೀಲಾವರ ಕೇಶವ ಆಚಾರ್ಯ ಚೆಂಡೆಯಲ್ಲಿ ಶ್ರೀ ಭಾಸ್ಕರ ಆಚಾರ್ಯ, ಮದ್ದಳೆ ಯಲ್ಲಿ ಶ್ರೀ ಗೋಪಾಲ ಕೃಷ್ಣ ಆಚಾರ್ಯ, ಮುಮ್ಮೇಳ: ಶ್ರೀಮತಿ ಉಷಾ ನಾಯಕ್ (ದ್ರೌಪದಿ ), ಶ್ರೀಮತಿ ಶೋಭಾ ಪ್ರಭು ( ಭೀಮ), ಶ್ರೀನಿಧಿ ( ಅರ್ಜುನ ) , ಪ್ರಿಯಾಂಕ (ಸುಭದ್ರೆ), ಶ್ರೀಮತಿ ಹರ್ಷ (ಕೃಷ್ಣ ),ಶ್ರೀಮತಿ ಸುಲೋಚನಾ ನಾಯಕ್ (ಬಲರಾಮ) , ಶ್ರೀಮತಿ ಸ್ವಾತಿ (ಈಶ್ವರ) , ಶ್ರೀಮತಿ ಲತಾ ಪಾಟ್ಕರ್ (ಪಾರ್ವತಿ) , ಕುಮಾರಿ ಸಿಂಧು (ಬಾಲ ಗೋಪಾಲರು)ಮುಂತಾದವರು ಉಪಸ್ತಿತರಿದ್ದರು.






