ಉಡುಪಿ:ವಿಶ್ವಮಾನ್ಯ ಯತಿಕುಲ ಚಕ್ರವರ್ತಿ ಡಾ. ಶ್ರೀಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಶುಭಾಶೀರ್ವಾದಗಳೊಂದಿಗೆ ಶ್ರೀಕೃಷ್ಣ ಜಯಂತಿಯ ಪ್ರಯುಕ್ತ ಉಡುಪಿಯ ಗೀತಾ ಮಂದಿರದಲ್ಲಿ 108 ವಿಧದ ಲಡ್ಡುಗಳನ್ನು ಒದಗಿಸಲಾಗುತ್ತಿದೆ.
ಆಸಕ್ತ ಭಕ್ತರಿಗೆ ಇಂದಿನಿಂದಲೇ ಲಡ್ಡುಗಳು ಲಭ್ಯವಿದ್ದು ವೀಕ್ಷಣೆಗೂ ಅವಕಾಶ ಕಲ್ಪಿಸಲಾಗಿದೆ. ಮುಂಗಡ ಕಾದಿರಿಸಲು ಮತ್ತು ಹೆಚ್ಚಿನ ವಿವರಗಳಿಗಾಗಿ
8792158946 ನ್ನು ಸಂಪರ್ಕಿಸಬಹುದಾಗಿದೆ ಎಂದು ಶ್ರೀ ಪುತ್ತಿಗೆ ಮಠದ ಪ್ರಕಟಣೆ ತಿಳಿಸಿದೆ.






