ಉಡುಪಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮದ ಅಂಗವಾಗಿ Dhrishya Media ವತಿಯಿಂದ “ಕೃಷ್ಣೋತ್ಸವ 2026” ವಿಶೇಷ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಮಕ್ಕಳ ಪ್ರತಿಭೆ ಹಾಗೂ ಮುದ್ದುತನವನ್ನು ಅನಾವರಣಗೊಳಿಸುವ ಉದ್ದೇಶದಿಂದ ಮುದ್ದುಕೃಷ್ಣ ಫೋಟೋ ಸ್ಪರ್ಧೆ, ಯಶೋಧಾ ಕೃಷ್ಣ ಫೋಟೋ ಸ್ಪರ್ಧೆ ಹಾಗೂ ರಾಧಾಕೃಷ್ಣ ರೀಲ್ಸ್ ಸ್ಪರ್ಧೆ ಆಯೋಜಿಸಲಾಗಿದೆ.
ಮುದ್ದುಕೃಷ್ಣ ಫೋಟೋ ಸ್ಪರ್ಧೆ 0 ರಿಂದ 6 ವರ್ಷದೊಳಗಿನ ಮಕ್ಕಳಿಗೆ, ಯಶೋಧಾ ಕೃಷ್ಣ ಫೋಟೋ ಸ್ಪರ್ಧೆ 3 ವರ್ಷದೊಳಗಿನ ಮಕ್ಕಳಿಗೆ ಹಾಗೂ ರಾಧಾಕೃಷ್ಣ ರೀಲ್ಸ್ ಸ್ಪರ್ಧೆ 6 ವರ್ಷದೊಳಗಿನ ಮಕ್ಕಳಿಗೆ ಮುಕ್ತವಾಗಿದೆ. ರೀಲ್ಸ್ ಗರಿಷ್ಠ ಒಂದು ನಿಮಿಷದ ಅವಧಿಯದ್ದಾಗಿರಬೇಕು.
ಸ್ಪರ್ಧಿಗಳ ಫೋಟೋ ಮತ್ತು ರೀಲ್ಸ್‌ಗಳನ್ನು Dhrishya Media Facebook Pageನಲ್ಲಿ ಪೋಸ್ಟ್ ಮಾಡಲಾಗುವುದು. ಅತೀ ಹೆಚ್ಚು LIKE ಪಡೆದ ಸ್ಪರ್ಧಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಸೇರಿದಂತೆ ವಿಶೇಷ ಬಹುಮಾನಗಳನ್ನು ನೀಡಲಾಗುತ್ತದೆ.
ಸ್ಪರ್ಧೆಗೆ ಸೆಪ್ಟೆಂಬರ್ 5 ನೋಂದಣಿ ಕೊನೆಯ ದಿನಾಂಕವಾಗಿದ್ದು, LIKE COUNT ಅನ್ನು ಸೆಪ್ಟೆಂಬರ್ 10 ಸಂಜೆ 6 ಗಂಟೆಯವರೆಗೆ ಪರಿಗಣಿಸಲಾಗುತ್ತದೆ.
ಸ್ಪರ್ಧೆಗೆ ಪ್ರವೇಶ ಶುಲ್ಕ ₹200 ನಿಗದಿಪಡಿಸಲಾಗಿದೆ. ಎಡಿಟ್ ಮಾಡಿದ ಫೋಟೋ ಅಥವಾ ರೀಲ್ಸ್‌ಗೆ ಅವಕಾಶವಿಲ್ಲ. ನೈಜ ಹಾಗೂ ಮೂಲ ಫೋಟೋ ಮತ್ತು ರೀಲ್ಸ್‌ಗಳನ್ನು ಮಾತ್ರ ಸಲ್ಲಿಸಬೇಕು. ಭಾಗವಹಿಸುವವರು Dhrishya Media Facebook Page ಅನ್ನು Follow ಮಾಡುವುದು ಕಡ್ಡಾಯ.
ಹೆಚ್ಚಿನ ಮಾಹಿತಿಗಾಗಿ 9480115547 ಸಂಖ್ಯೆಯನ್ನು ಸಂಪರ್ಕಿಸಬಹುದು.
www.dhrishyanews.com ಮೂಲಕವೂ ಮಾಹಿತಿ ಪಡೆಯಬಹುದು.
ನಿಮ್ಮ ಮುದ್ದು ಕೃಷ್ಣನಿಗೆ ಹೆಚ್ಚು LIKE ಕೊಡಿಸಿ, ಆಕರ್ಷಕ ಬಹುಮಾನ ಗೆಲ್ಲಿಸಿ!







