ಬ್ರಹ್ಮಾವರ :ಕಲಾ ಕುಸುಮ ಯುಟ್ಯೂಬ್ ಸ್ಟುಡಿಯೋ, ಹಿಂದೂ ಸಂಗಮ ಶಿರಿಯಾರ ಮಂಡಲ, ರೋಟರಿ ಕ್ಲಬ್ ಸಾಹೇಬರಕಟ್ಟೆ, ರೋಟರಾಕ್ಟ್ ಕ್ಲಬ್ ಬ್ರಹ್ಮಾವರ ಇವರ ಸಹಭಾಗಿತ್ವದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀ ಕೃಷ್ಣ ವೇಶಭೂಷಣ ಸ್ಪರ್ಧೆ 2026 ಮೆಕ್ಕೆ ಕಟ್ಟು ಶ್ರೀ ನಂದಿಕೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಅಗಸ್ಟ್ 30 ಭಾನುವಾರ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಒಂದರಿಂದ ಐದು ವರ್ಷದೊಳಗಿನ ಮಕ್ಕಳು ಶ್ರೀಕೃಷ್ಣನ ವಿವಿಧ ವೇಷಭೂಷಣಗಳಲ್ಲಿ ಕಂಗೊಳಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದರು.
ಮಕ್ಕಳ ಕೃಷ್ಣ ವೇಷ, ಪ್ರತಿಭೆ ಹಾಗೂ ಮುದ್ದು ನೋಟಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.
ಸ್ಪರ್ಧೆಯಲ್ಲಿ ವಿಜೇತ ರಾದ ಮಕ್ಕಳಿಗೆ ಪ್ರಥಮ ದ್ವಿತೀಯ ತೃತೀಯ ನಗದು ಬಹುಮಾನ, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು
ಕಾರ್ಯಕ್ರಮ ದಲ್ಲಿ ತೀರ್ಪುಗಾರರಾಗಿ ಶರತ್ ಆರೂರು ಮತ್ತು ಮಾಲತಿ ಉಡುಪಿ ಸಹಕರಿಸಿದರು
ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಸಂದೀಪ್ ಶೆಟ್ಟಿ ಶಿರಿಯಾರ ಮೇಲ್ಮನೆ, ನಾಗರಿಕ ಹಿತರಕ್ಷಣಾ ವೇದಿಕೆ ಹಾಲಾಡಿ ಅಧ್ಯಕ್ಷ ನಾಗರಾಜ್ ಗೋಳಿ, ಶ್ರೀರಂಗ ಸಾಹೇಬರ ಕಟ್ಟೆ ಕಂಟ್ರಾಕ್ಟರ್ ರಾಘವೇಂದ್ರ ಆಚಾರ್ಯ, ನಾಗರಿಕ ಹಿತರಕ್ಷಣಾ ವೇದಿಕೆ ಹಾಲಾಡಿ ಉಪಾಧ್ಯಕ್ಷ ಶಂಕರ್ ಡಿ.ಎಂ., ಅಧ್ಯಾಪಕರಾದ ಕರುಣಾಕರ ಶೆಟ್ಟಿ ಪಡುಮುಂಡು ಹಾಗೂ ರೋಟರಾಕ್ಟ್ ಕ್ಲಬ್ ಬ್ರಹ್ಮಾವರ ಅಧ್ಯಕ್ಷ ಮಧುಸೂದನ್ ದೇವಾಡಿಗ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.







