ಶಿರ್ವ: ಮೀನು ಗಾಡಿಯಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷದ ಯುವಕನೊಬ್ಬ ನಾಪತ್ತೆಯಾಗಿರುವ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದ ಯುವಕನನ್ನು ಅಬುಬ್ಬಕ್ಕರ್ ಸಿದ್ದೀಕ್ (21) ಎಂದು ಗುರುತಿಸಲಾಗಿದೆ.
ಶಿರ್ವ ಗ್ರಾಮದ ಕಾಪು ನಿವಾಸಿ M.H. ಮಯ್ಯದ್ದಿ ಅವರ ಪುತ್ರನಾದ ಸಿದ್ದೀಕ್, ಝೀಯಾನ್ ಎಂಬಾತನೊಂದಿಗೆ ಮೀನು ಗಾಡಿಯಲ್ಲಿ ಕೆಲಸ ಮಾಡುತ್ತಿದ್ದರು
ಆಗಸ್ಟ್ 23ರಂದು ಸಂಜೆ 6 ಗಂಟೆಗೆ ಝೀಯಾನ್ ಜೊತೆ ಮಂಗಳೂರಿನ ಮೀನು ಧಕ್ಕೆಗೆ ತೆರಳಿದ್ದ ಸಿದ್ದೀಕ್, ಬಳಿಕ ಮೀನು ಸಾಗಾಟ ಮಾಡಿ ಝೀಯಾನ್‌ನ ಅಜ್ಜಿ ಮನೆಯಾದ ಮಂಗಳೂರು ತಾಲೂಕಿನ ಕಿನ್ನಿಗೋಳಿಯ ಗುತ್ತಕಾಡಿನಲ್ಲಿ ಉಳಿದುಕೊಂಡಿದ್ದರು.
ಆಗಸ್ಟ್ 26ರಂದು ರಾತ್ರಿ 7 ಗಂಟೆಯ ಬಳಿಕ ಝೀಯಾನ್‌ನ ಅಜ್ಜಿಗೆ ತನ್ನ ಮೊಬೈಲ್ ರಿಪೇರಿ ಮಾಡಿಸಿಕೊಂಡು ಬರುವುದಾಗಿ ಹೇಳಿ ಹೊರಟ ಸಿದ್ದೀಕ್ ಮರಳಿ ಬಂದಿಲ್ಲ. ಬಳಿಕ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಶಿರ್ವ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಗಂಡಸು ಕಾಣೆ ಪ್ರಕರಣ ದಾಖಲಾಗಿದೆ.







