Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ನಾಡಹಬ್ಬ ದಸರಾದಲ್ಲಿ ಕಂಬಳ ಆಯೋಜನೆಗೆ ಶಾಸಕರ ಅಪಸ್ವರ ವಿಷಾದನೀಯ

ಕಂಬಳ ಆಯೋಜನೆ ದುಂದುವೆಚ್ಚ ಎನ್ನುವುದಾದರೆ ಕೋಟಿಕಂಠ ಗಾಯನ, ಕಾರ್ಕಳ ಉತ್ಸವ, ಥೀಮ್ ಪಾರ್ಕ್ ಉದ್ಘಾಟನೆ ದುಂದು ವೆಚ್ಚವಲ್ಲವೇ?: ಶುಭದ ರಾವ್ ಪ್ರಶ್ನೆ?

Dhrishya News by Dhrishya News
18/07/2026
in ಸುದ್ದಿಗಳು
0
ನಾಡಹಬ್ಬ ದಸರಾದಲ್ಲಿ ಕಂಬಳ ಆಯೋಜನೆಗೆ ಶಾಸಕರ ಅಪಸ್ವರ ವಿಷಾದನೀಯ
0
SHARES
21
VIEWS
Share on FacebookShare on Twitter

ಕಾನೂನು ತೊಡಕಿನಿಂದ ನಿಂತೇ ಹೋಗುತ್ತದೆ ಎನ್ನುವ ಆತಂಕದಲ್ಲಿದ್ದ ತುಳುನಾಡಿನ ಜನಪದ ಕ್ರೀಡೆ ಕಂಬಳವು ಪುನಃ ‌ಪ್ರಾರಂಭವಾಗಿ ಜನಪ್ರಿಯತೆ ಪಡೆದು ನಾಡ ಹಬ್ಬ ದಸರಾದಲ್ಲಿ ಆಯೋಜಿಸಲು ಅವಕಾಶ ಸಿಕ್ಕಿರುವುದು ತುಳುನಾಡಿನ ಜನತೆಗೆ‌ ಹಾಗೂ ಕಂಬಳ ಪ್ರೀಯರಿಗೆ ಹೆಮ್ಮೆಯ ವಿಚಾರವಾಗಿದೆ ಆದರೆ ಈ ವಿಚಾರವಾಗಿ ಶಾಸಕ‌ ಸುನೀಲ್ ಕುಮಾರ್ ರವರ ಅಪಸ್ವರ ರಾಜಕೀಯ‌ ಪ್ರೇರಿತವಾದದು ಸ್ವತಃ ಕಂಬಳ ಸಮಿತಿಯ ಅಧ್ಯಕ್ಷನಾಗಿ ಕಂಬಳ ಆಯೋಜನೆಗೆ ವಿರೋದ ವ್ಯಕ್ತಪಡಿಸಿರುವುದು ವಿಷಾದನೀಯ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಿಯಾರು ಕಂಬಳ ಸಮಿತಿ ಸದಸ್ಯ ಶುಭದರಾವ್ ತಿಳಿಸಿದ್ದಾರೆ.

ಮೈಸೂರು ದಸರಾ ಹಬ್ಬವು ರಾಜ್ಯದ ಹೆಮ್ಮೆಯ ದ್ಯೋತಕವಾಗಿದ್ದು ಈ ಸಂದರ್ಭದಲ್ಲಿ ಕಂಬಳ ಕ್ರೀಡಾಕೂಟವನ್ನು ಆಯೋಜನೆ ಮಾಡುವುದರಿಂದ ಕಂಬಳ ಕ್ರೀಡೆಗೆ ಇನ್ನಷ್ಟು ಮೆರುಗು ಸಿಗಲಿದೆ, ದೇಶದ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ವಿವಿಧ ರಾಜ್ಯಗಳ ಸಾಂಸ್ಕೃತಿಕ ಮತ್ತು ಕಲಾ ಹೆಗ್ಗುರುತುಗಳನ್ನು ಪ್ರದರ್ಶಿಸಿದಂತೆ ಮೈಸೂರು ದಸರಾದ ಸಂದರ್ಭದಲ್ಲಿ ನಾಡಿದ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಪದ್ದತಿ ಹಿಂದಿನಿಂದಲೂ ನಡೆದು‌ ಬಂದಿದೆ ಅದೇ‌ ಮಾನದಂಡದೊಂದಿಗೆ ದಸಾರದಲ್ಲಿ ಕಂಬಳ ಆಯೋಜನೆಯಿಂದ ತುಳುನಾಡಿನ ಸಂಸ್ಕೃತಿಯ ಪರಿಚಯ ವಿಶ್ವದೆಲ್ಲೆಡೆ ತಲುಪಿ‌ ಇನ್ನೂ‌ ಹೆಚ್ಚು ಜನಪ್ರಿಯತೆ ‌ಪಡೆಯಲು ಅವಕಾಶವಾಗಿದೆ ಎಂದರು.

ಶಾಸಕರ ನಿಲುವು ಕಂಬಳ ಕ್ರೀಡೆಗೆ ಮಾಡುವ ಅವಮಾನವಾಗಿದೆ ಮೈಸೂರಿನಲ್ಲಿ ಕಂಬಳ ಯೋಜನೆಗೆ ತಗಲುವ ಖರ್ಚು ದುಂಡು ವೆಚ್ಚ ಎನ್ನುವುದಾದರೆ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಅಯೋಜಿಸಿದ್ದ ಕೋಟಿ ಕಂಠ ಗಾಯನ, ಪರಶುರಾಮನ ನಕಲಿ ಪ್ರತಿಮೆ ಉದ್ಘಾಟನೆ‌, ಹಾಗೂ ತನ್ನ ವೈಭವಿಕರಣಕ್ಕೆ ಆಯೋಜಿಸಿದ್ದ ಕಾರ್ಕಳ ಉತ್ಸವ‌ ಮೊದಲಾದ ಕಾರ್ಯಕ್ರಮಗಳಿಗೆ ಮಾಡಿದ ಖರ್ಚು ದುಂದು ವೆಚ್ಚವಲ್ಲವೇ? ರಾಜ್ಯ ಸರಕಾರ ಇತರ ಕಂಬಳಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು‌ ಮೊಸಳೆ ಕಣ್ಣೀರು ಸುರಿಸುವ ತಾವು ಸಚಿವರಿದ್ದಾಗ ಎಷ್ಟು ಹಣ ಬಿಡುಗಡೆ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ?

ಕರಾವಳಿಯ ಗಂಡು ಕಲೆ ಯಕ್ಷಗಾನ, ಹುಲಿ ಕುಣಿತ, ಆಟಿಯ ಕೂಟ, ಆಟಿಯ ಆಹಾರ, ಮೊದಲಾದ ಕಾರ್ಯಕ್ರಮಗಳು‌ ತುಳುನಾಡಿನ ಗಡಿದಾಟಿ ವಿಶ್ವದಾದ್ಯಂತ ಪ್ರದರ್ಶನವಾಗುತ್ತದೆ ಮತ್ತು ಆಚರಿಸಲ್ಪಡುತ್ತದೆ, ಈ ಬಗ್ಗೆ ‌ನಾವೆಲ್ಲರೂ ಹೆಮ್ಮೆಪಟ್ಟು ಪ್ರೋತ್ಸಾಹಿಸಬೇಕು ಈ ಹಿಂದೆಯೂ ಬೆಂಗಳೂರಿನಲ್ಲಿಯೂ ಕಂಬಳ ಆಯೋಜನೆಯಾಗಿತ್ತು ಹೀಗಿರುವಾಗ ಸಂಕುಚಿತ‌ ಮನೋಭಾವ ಸಲ್ಲದು ಎಂದು ಹೇಳಿದ್ದಾರೆ

ಕಾರ್ಕಳ ಮಿಯ್ಯಾರು ಕಂಬಳವು ಕಾಂಗ್ರೆಸ್ ಶಾಸಕ ದಿ.ಗೋಪಾಲ್ ಭಂಡಾರಿಯವರ ಶತಪ್ರಯತ್ನದ ಫಲ, ಸರಕಾರಿ ಕಂಬಳವನ್ನು ಮೊದಲ ಬಾರಿಗೆ ಪ್ರಾರಂಬಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ, ತಾವು ಆ ಕಂಬಳ ಸಮಿತಿಯ ಅಧ್ಯಕ್ಷರಾದ ಕಾರಣ ನಿಮ್ಮ ಗೌರವ ಹೆಚ್ಚಿದೆ ಎನ್ನುವುದನ್ನು ಮರೆಯದಿರಿ ಕಂಬಳವನ್ನು ವಿರೋಧಿಸುವ ಮನಸ್ಥಿತಿಯನ್ನು ಬಿಟ್ಟು ಪ್ರೋತ್ಸಾಹಿಸುವ ಮನೋಭಾವವನ್ನು ಬೆಳೆಸಿಕೊಳ್ಳಿ‌ ಎಂದು ಶುಭದ ರಾವ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Previous Post

ಹೃದಯ ಸ್ತಂಭನಕ್ಕೆ ಒಳಗಾಗಿದ್ದ ವ್ಯಕ್ತಿಗೆ ಎಕ್ಮೋ ಚಿಕಿತ್ಸೆ ನೀಡಿ ಜೀವ ಉಳಿಸಿದ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ; ಯಾವುದೇ ನರವೈಜ್ಞಾನಿಕ ಹಾನಿಯಿಲ್ಲದೆ ರೋಗಿಯನ್ನು ಬಿಡುಗಡೆ

Next Post

ಕಾರ್ಕಳದಲ್ಲಿ ರಸ್ತೆ ದುಸ್ಥಿತಿ ವಿರುದ್ಧ ಕಾಂಗ್ರೆಸ್‌ನ 20 ಕಿ.ಮೀ. ಜಾಥಾ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಕಾರ್ಕಳದಲ್ಲಿ ರಸ್ತೆ ದುಸ್ಥಿತಿ ವಿರುದ್ಧ ಕಾಂಗ್ರೆಸ್‌ನ 20 ಕಿ.ಮೀ. ಜಾಥಾ

ಕಾರ್ಕಳದಲ್ಲಿ ರಸ್ತೆ ದುಸ್ಥಿತಿ ವಿರುದ್ಧ ಕಾಂಗ್ರೆಸ್‌ನ 20 ಕಿ.ಮೀ. ಜಾಥಾ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಹಾಗೂ ಕ್ರೀಡಾ ಪ್ರತಿಭೆಯನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಕ್ರೀಡಾಕೂಟಗಳು ಮಹತ್ವದ ಪಾತ್ರ ವಹಿಸುತ್ತವೆ. — ವಿಜಯ ಕೊಡವೂರು

ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಹಾಗೂ ಕ್ರೀಡಾ ಪ್ರತಿಭೆಯನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಕ್ರೀಡಾಕೂಟಗಳು ಮಹತ್ವದ ಪಾತ್ರ ವಹಿಸುತ್ತವೆ. — ವಿಜಯ ಕೊಡವೂರು

09/09/2026
ಉಡುಪಿಯಲ್ಲಿ ಕಣ್ಮನ ಸೆಳೆದ ಮುದ್ದು ಕೃಷ್ಣ ಸ್ಪರ್ಧೆ–2026..!

ಉಡುಪಿಯಲ್ಲಿ ಕಣ್ಮನ ಸೆಳೆದ ಮುದ್ದು ಕೃಷ್ಣ ಸ್ಪರ್ಧೆ–2026..!

09/09/2026
ಹಿರಿಯ ಸಾಮಾಜಿಕ ಕಾರ್ಯಕರ್ತ, ನಾಟಕ ಕಲಾವಿದ ಶೇಖರ್ ಜಿ. ಅಮೀನ್ ನಿಧನ

ಹಿರಿಯ ಸಾಮಾಜಿಕ ಕಾರ್ಯಕರ್ತ, ನಾಟಕ ಕಲಾವಿದ ಶೇಖರ್ ಜಿ. ಅಮೀನ್ ನಿಧನ

09/09/2026
ಹಿರಿಯ ಸಮಾಜ ಸೇವಕ ತೋನ್ಸೆ ಶೇಖ್ ಬುಡನ್ ಬಾಷಾ ಸಾಹೇಬ್ ನಿಧನ..!

ಹಿರಿಯ ಸಮಾಜ ಸೇವಕ ತೋನ್ಸೆ ಶೇಖ್ ಬುಡನ್ ಬಾಷಾ ಸಾಹೇಬ್ ನಿಧನ..!

09/09/2026

Recent News

imunify-bot-check