Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಹೃದಯ ಸ್ತಂಭನಕ್ಕೆ ಒಳಗಾಗಿದ್ದ ವ್ಯಕ್ತಿಗೆ ಎಕ್ಮೋ ಚಿಕಿತ್ಸೆ ನೀಡಿ ಜೀವ ಉಳಿಸಿದ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ; ಯಾವುದೇ ನರವೈಜ್ಞಾನಿಕ ಹಾನಿಯಿಲ್ಲದೆ ರೋಗಿಯನ್ನು ಬಿಡುಗಡೆ

ಸ್ಥಳದಲ್ಲಿಯೇ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ವೈದ್ಯರಿಂದ ತಕ್ಷಣದ ಸಿಪಿಆರ್, ಬಳಿಕ 30 ನಿಮಿಷಗಳ ಒಳಗೆ ತುರ್ತು ವಿಎ ಎಕ್ಮೋ

Dhrishya News by Dhrishya News
17/07/2026
in ಸುದ್ದಿಗಳು
0
ಹೃದಯ ಸ್ತಂಭನಕ್ಕೆ ಒಳಗಾಗಿದ್ದ ವ್ಯಕ್ತಿಗೆ ಎಕ್ಮೋ ಚಿಕಿತ್ಸೆ ನೀಡಿ ಜೀವ ಉಳಿಸಿದ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ; ಯಾವುದೇ ನರವೈಜ್ಞಾನಿಕ ಹಾನಿಯಿಲ್ಲದೆ ರೋಗಿಯನ್ನು ಬಿಡುಗಡೆ
0
SHARES
43
VIEWS
Share on FacebookShare on Twitter

ಮಣಿಪಾಲ, ಜುಲೈ 17, 2026: ತಮ್ಮ ನಿವಾಸದಲ್ಲಿ ಹಠಾತ್ ಹೃದಯ ಸ್ತಂಭನಕ್ಕೆ ಒಳಗಾಗಿ ಕುಸಿದು ಬಿದ್ದಿದ್ದ ವ್ಯಕ್ತಿಯೊಬ್ಬರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಯಾವುದೇ ನರವೈಜ್ಞಾನಿಕ ಹಾನಿಯಿಲ್ಲದೆ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಆಸ್ಪತ್ರೆಯ ಹೊರಗೆ ಸಂಭವಿಸುವ ಹೃದಯ ಸ್ತಂಭನದ ಪ್ರಕರಣಗಳಲ್ಲಿ ಭಾರತದಲ್ಲಿ ಮರಣ ಪ್ರಮಾಣ ಶೇಕಡಾ 90ಕ್ಕೂ ಹೆಚ್ಚಿದೆ. ತಕ್ಷಣವೇ ಎದೆಗೆ ಒತ್ತಡ ನೀಡುವ ವಿಧಾನ (ಸಿ ಪಿ ಆರ್) ತಿಳಿದಿರುವವರು ಜನಸಂಖ್ಯೆಯಲ್ಲಿ ಕೇವಲ ಶೇಕಡಾ ಐದರಷ್ಟು ಮಾತ್ರ ಎಂಬುದೇ ಇದಕ್ಕೆ ಪ್ರಮುಖ ಕಾರಣ.

ಅವರು ಕುಸಿದು ಬಿದ್ದ ಸಂದರ್ಭದಲ್ಲಿ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ವೈದ್ಯರು ಆಕಸ್ಮಿಕವಾಗಿ ಅದೇ ಪರಿಸರದಲ್ಲಿದ್ದರು. ಅವರು ಕ್ಷಣಾರ್ಧದಲ್ಲಿ ಸಿಪಿಆರ್ ಆರಂಭಿಸಿ, ನಿವಾಸದಲ್ಲಿಯೇ ಇಂಟ್ಯುಬೇಷನ್ ಮಾಡಿದರು. ಅವರನ್ನು ತುರ್ತು ವಿಭಾಗಕ್ಕೆ ಸ್ಥಳಾಂತರಿಸಲಾಯಿತು, ಜೊತೆಗೆ ಆಸ್ಪತ್ರೆಗೆ ಸಾಗಿಸುವ ವೇಳೆಯೂ ಎದೆಯ ಒತ್ತಡವನ್ನು (ಸಿ ಪಿ ಆರ್) ಮುಂದುವರಿಸಿದರು. ಹಲವು ಬಾರಿ ಡಿಫಿಬ್ರಿಲೇಟರ್ ಶಾಕ್ ನೀಡಿದ ಬಳಿಕ, ಸುಮಾರು ಒಂದು ಗಂಟೆಯ ಕೊನೆಗೆ ರಕ್ತ ಪರಿಚಲನೆ ಮರಳಿತು.

ಎರಡೂ ಶ್ವಾಸಕೋಶಗಳು ಪಲ್ಮನರಿ ಎಡಿಮಾದಿಂದ ತುಂಬಿಕೊಂಡಿತ್ತು ಮತ್ತು ಹೃದಯವು ರಕ್ತ ಪರಿಚಲನೆಯನ್ನು ಸ್ವತಃ ನಿಭಾಯಿಸುವ ಸ್ಥಿತಿಯಲ್ಲಿರಲಿಲ್ಲ. ಹೃದಯ ಮತ್ತು ಶ್ವಾಸಕೋಶಗಳ ಕೆಲಸವನ್ನು ತಾನೇ ನಿರ್ವಹಿಸುವ ವೀನೋ ಆರ್ಟೀರಿಯಲ್ ಎಕ್ಮೋ ವ್ಯವಸ್ಥೆಯನ್ನು 30 ನಿಮಿಷಗಳ ಒಳಗಾಗಿ ಹೃದಯ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಹೃದಯ ಮತ್ತು ಎದೆಗೂಡು ಶಸ್ತ್ರಚಿಕಿತ್ಸಾ ವಿಭಾಗವು ಅಳವಡಿಸಿತು. 36 ಗಂಟೆಗಳ ಬಳಿಕ ಅವರನ್ನು ಎಕ್ಮೋದಿಂದ ಹೊರತರಲಾಯಿತು, ಎಕ್ಸ್‌ಟ್ಯುಬೇಷನ್ ಮಾಡಲಾಯಿತು ಮತ್ತು ಯಾವುದೇ ನರವೈಜ್ಞಾನಿಕ ಹಾನಿ ಆಗದಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿತು. ಇಂಪ್ಲಾಂಟಬಲ್ ಕಾರ್ಡಿಯೋವರ್ಟರ್ ಡಿಫಿಬ್ರಿಲೇಟರ್ ಅಳವಡಿಕೆಗಾಗಿ ಅವರನ್ನು ಹೃದ್ರೋಗ ವಿಭಾಗಕ್ಕೆ ವರ್ಗಾಯಿಸಲಾಯಿತು .

ಹೃದಯ ಮತ್ತು ಎದೆಗೂಡು ಶಸ್ತ್ರಚಿಕಿತ್ಸಾ ವಿಭಾಗದ ಕನ್ಸಲ್ಟೆಂಟ್ ಡಾ. ಶ್ಯಾಮ್ ಕೆ ಅಶೋಕ್ ಅವರು , “ಇಲ್ಲಿ ಎಲ್ಲವೂ ಸಮಯದ ಮೇಲೆ ನಿಂತಿತ್ತು. ಕುಸಿದ ಕ್ಷಣಾರ್ಧದಲ್ಲಿ ಪ್ರಾರಂಭವಾದ ಎದೆಯ ಸಂಕೋಚನಗಳೇ ಈ ವ್ಯಕ್ತಿ ಇಂದು ಯಾವುದೇ ಮಿದುಳಿನ ಹಾನಿಯಿಲ್ಲದೆ ತಮ್ಮ ಕುಟುಂಬದೊಂದಿಗೆ ಇರಲು ಕಾರಣ. ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿ, ಎಕ್ಮೋ ಸರ್ಕ್ಯೂಟ್ ಮತ್ತು ತಜ್ಞ ತಂಡಗಳು ದಿನದ 24 ಗಂಟೆಯೂ ಸನ್ನದ್ಧ ಸ್ಥಿತಿಯಲ್ಲಿ ಇರುವುದರಿಂದಲೇ ನಾವು 30 ನಿಮಿಷಗಳ ಒಳಗೆ ಅವರನ್ನು ಎಕ್ಮೋಗೆ ಸೇರಿಸಲು ಸಾಧ್ಯವಾಯಿತು.” ಎಂದರು.

ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಸುಧಾಕರ್ ಕಂಟಿಪುಡಿ ಅವರು , “ಜೀವ ಉಳಿಸುವ ಪ್ರಶ್ನೆ ಬಂದಾಗ ಇಡೀ ವ್ಯವಸ್ಥೆ ಒಂದೇ ಘಟಕವಾಗಿ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಇದು ತೋರಿಸುತ್ತದೆ. ಸಾರ್ವಜನಿಕರು ಕನಿಷ್ಠ (ಬೇಸಿಕ್) ಸಿಪಿಆರ್ ಮಾಡುವುದನ್ನು ಕಲಿಯಬೇಕೆಂದು ನಾನು ಈ ಮೂಲಕ ಒತ್ತಾಯಿಸುತ್ತೇನೆ. ಇಲ್ಲಿ ಪಕ್ಕದಲ್ಲಿಯೇ ಇದ್ದವರು ವೈದ್ಯರಾಗಿದ್ದರು, ಆದರೆ ಮುಂದಿನ ಜೀವವನ್ನು ಉಳಿಸುವವರು ಯಾರು ಬೇಕಾದರೂ ಆಗಿರಬಹುದು ಎಂಬುದನ್ನು ಮರೆಯಬಾರದು” ಎಂದರು.

ಈ ಪ್ರಕರಣವನ್ನು ಸಿಟಿವಿಎಸ್ ವಿಭಾಗದ ಡಾ. ಶ್ಯಾಮ್ ಕೆ. ಅಶೋಕ್, ಡಾ. ವಿಜಯ್ ಕುಮಾರ್, ಡಾ. ಸಾಯಿ, ಡಾ. ಗಣೇಶ್ ಕಾಮತ್ ಮತ್ತು ಡಾ. ಶುಭಂ ಅವರು ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್‌ನ ಪರ್ಫ್ಯೂಷನಿಸ್ಟ್ ಶ್ರೀ ಹಲೀಶ್ ಜೊತೆಗೆ ನಿರ್ವಹಿಸಿದರು.

Previous Post

ಬಿಸಿ ರೋಡ್ KSRTC ಬಸ್ ನಿಲ್ದಾಣದಲ್ಲಿ ಯುವತಿ ಲಾವಣ್ಯಳ ಹತ್ಯೆ ಅತ್ಯಂತ ದುರದೃಷ್ಟಕರ

Next Post

ನಾಡಹಬ್ಬ ದಸರಾದಲ್ಲಿ ಕಂಬಳ ಆಯೋಜನೆಗೆ ಶಾಸಕರ ಅಪಸ್ವರ ವಿಷಾದನೀಯ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ನಾಡಹಬ್ಬ ದಸರಾದಲ್ಲಿ ಕಂಬಳ ಆಯೋಜನೆಗೆ ಶಾಸಕರ ಅಪಸ್ವರ ವಿಷಾದನೀಯ

ನಾಡಹಬ್ಬ ದಸರಾದಲ್ಲಿ ಕಂಬಳ ಆಯೋಜನೆಗೆ ಶಾಸಕರ ಅಪಸ್ವರ ವಿಷಾದನೀಯ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮಾಹೆ : ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯಗಳ ಜೊತೆಗೆ ಸಹಭಾಗಿತ್ವ

ಮಾಹೆ : ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯಗಳ ಜೊತೆಗೆ ಸಹಭಾಗಿತ್ವ

10/09/2026
ಆಶ್ರಯ ಮನೆ ವಿತರಣೆ ಫಲಾನುಭವಿಗಳ ಅಯ್ಕೆಯಲ್ಲಿ ಶಾಸಕರ ವಿಳಂಬ ನೀತಿಯನ್ನು ವಿರೋದಿಸಿ ಕಾಂಗ್ರೆಸ್ ವತಿಯಿಂದ ಧರಣಿ

ಆಶ್ರಯ ಮನೆ ವಿತರಣೆ ಫಲಾನುಭವಿಗಳ ಅಯ್ಕೆಯಲ್ಲಿ ಶಾಸಕರ ವಿಳಂಬ ನೀತಿಯನ್ನು ವಿರೋದಿಸಿ ಕಾಂಗ್ರೆಸ್ ವತಿಯಿಂದ ಧರಣಿ

10/09/2026
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಿಶನ್ ಹೆಗ್ಡೆ ಕೊಳ್ಳೆಬೈಲು ನೇಮಕ..!

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಿಶನ್ ಹೆಗ್ಡೆ ಕೊಳ್ಳೆಬೈಲು ನೇಮಕ..!

10/09/2026
ಮುಂಬೈಯಲ್ಲಿ ‘ಭೂ ಕೈಲಾಸ’ ಪೌರಾಣಿಕ ಕೊಂಕಣಿ ನಾಟಕ ಪ್ರದರ್ಶನ..!

ಮುಂಬೈಯಲ್ಲಿ ‘ಭೂ ಕೈಲಾಸ’ ಪೌರಾಣಿಕ ಕೊಂಕಣಿ ನಾಟಕ ಪ್ರದರ್ಶನ..!

10/09/2026

Recent News

imunify-bot-check