Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಕಾರ್ಕಳದಲ್ಲಿ ಯಶೋಯಾನ -2026, ಶೈಕ್ಷಣಿಕ ವಲಯದ ಎಸೆಸೆಲ್ಸಿ ಸಾಧನೆಯ ಸಂಭ್ರಮ.

ಫಲಿತಾಂಶವು ಶಿಕ್ಷಣ ವ್ಯವಸ್ಥೆಯ ಒಂದು ಉಪ ಉತ್ಪನ್ನ ಮಾತ್ರ - ಅಶೋಕ್ ಕಾಮತ್.

Dhrishya News by Dhrishya News
13/07/2026
in ಸುದ್ದಿಗಳು
0
ಕಾರ್ಕಳದಲ್ಲಿ ಯಶೋಯಾನ -2026,  ಶೈಕ್ಷಣಿಕ ವಲಯದ ಎಸೆಸೆಲ್ಸಿ ಸಾಧನೆಯ ಸಂಭ್ರಮ.
0
SHARES
15
VIEWS
Share on FacebookShare on Twitter

2025-26ರ ಶೈಕ್ಷಣಿಕ ವರ್ಷದಲ್ಲಿ 99.85% ಫಲಿತಾಂಶ ಪಡೆದು ಉಡುಪಿ ಜಿಲ್ಲೆಯಲ್ಲಿ ಪ್ರಥಮ ಮತ್ತು ರಾಜ್ಯದಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ಕಾರ್ಕಳ ಶೈಕ್ಷಣಿಕ ವಲಯದ ( ಕಾರ್ಕಳ ಮತ್ತು ಹೆಬ್ರಿ ತಾ.) ಶಾಲೆಗಳನ್ನು ಗೌರವಿಸಿ ಅಭಿನಂದಿಸುವ ಯಶೋಯಾನ -2026 ಕಾರ್ಯಕ್ರಮವು ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು. ತಾಲೂಕಿನ ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘ, ಪ್ರೌಢಶಾಲಾ ಸಹಶಿಕ್ಷಕರ ಸಂಘ ಮತ್ತು ಕ್ರಿಯೇಟಿವ್ ವಿದ್ಯಾಸಂಸ್ಥೆಗಳು ಈ ಕಾರ್ಯಕ್ರಮದ ಆಯೋಜನೆ ಮಾಡಿದ್ದವು. ಕಾರ್ಕಳದ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ ಅವರು ಸಭಾಧ್ಯಕ್ಷತೆ ವಹಿಸಿದ್ದರು.

ದೀಪ ಬೆಳಗಿಸುವ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ದಾನಿಗಳಾದ CA ಕಮಲಾಕ್ಷ ಕಾಮತ್ ಅವರು ಶಾಲೆಯು ಉತ್ತಮ ಫಲಿತಾಂಶವನ್ನು ಪಡೆದಾಗ ಎಲ್ಲ ಕಡೆಗಳಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸುವ ಸಂಪ್ರದಾಯ ಇರುತ್ತದೆ . ಆದರೆ ಫಲಿತಾಂಶಕ್ಕೆ ದುಡಿದ ಶಿಕ್ಷಕರ ಪರಿಶ್ರಮಕ್ಕೆ ಹೆಚ್ಚಿನ ಕಡೆಗಳಲ್ಲಿ ಗೌರವ ದೊರೆಯುವುದಿಲ್ಲ. ಶಿಕ್ಷಕರು ಉತ್ತಮ ಸಮಾಜದ ನಿರ್ಮಾಪಕರು. ಅವರನ್ನು ಗೌರವಿಸುವುದು ನಾಗರಿಕ ಸಮಾಜದ ಕರ್ತವ್ಯ ಆಗಿದೆ’ ಎಂದರು. ಕಾರ್ಕಳ ಶೈಕ್ಷಣಿಕ ವಲಯದ ಅತ್ಯುತ್ತಮ ಫಲಿತಾಂಶಕ್ಕೆ ಕಾರಣರಾದ ಎಲ್ಲಾ 57 ಪ್ರೌಢಶಾಲೆಗಳನ್ನು ಶಾಲು, ನೆನಪಿನ ಕಾಣಿಕೆ ಮತ್ತು ಹಣ್ಣಿನ ಗಿಡ ನೀಡಿ ಅವರು ಸನ್ಮಾನಿಸಿದರು. ಶಾಲೆಗಳ ಪರವಾಗಿ ಶಾಲೆಗಳ ಮುಖ್ಯಶಿಕ್ಷಕರು ಮತ್ತು ಶಿಕ್ಷಕರು ಈ ಸನ್ಮಾನಗಳನ್ನು ಸ್ವೀಕಾರ ಮಾಡಿದರು.

ಅದೇ ರೀತಿ ಕಾರ್ಕಳದ ವಿವಿಧ ಪ್ರೌಢಶಾಲೆಗಳ ನಾಲ್ಕು ವಿಭಾಗಗಳ ಟಾಪ್ 11 ವಿದ್ಯಾರ್ಥಿಗಳನ್ನು ಅವರ ಹೆತ್ತವರ ಜೊತೆಗೆ ಪ್ರಶಸ್ತಿ ಫಲಕ, ಶಾಲು, ಹಣ್ಣಿನ ಗಿಡಗಳು ಮತ್ತು ನಗದು ಬಹುಮಾನಗಳ ಜೊತೆಗೆ ಅಭಿನಂದಿಸಲಾಯಿತು. ಕಾರ್ಕಳದ ಅಶೋಕ್ ರಾವ್ ಸ್ಮಾರಕ ಟ್ರಸ್ಟ್ ಮತ್ತು ಜೆಸಿಐ ಬೆಳ್ಮಣ್ ಈ ನಗದು ಬಹುಮಾನಗಳ ಪ್ರಾಯೋಜಕರಾಗಿದ್ದರು.

ಕಾರ್ಯಕ್ರಮದಲ್ಲಿ ಶಿಖರೋಪನ್ಯಾಸ ನೀಡಿದ ಉಡುಪಿ ಡಯಟ್ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಅಶೋಕ್ ಕಾಮತ್ ಅವರು ಕಾರ್ಕಳ ಶೈಕ್ಷಣಿಕ ವಲಯದ ಸಾಧನೆಗಳನ್ನು ಅಭಿನಂದಿಸಿ ಮಾತನಾಡಿ ‘ಶಾಲೆಗಳ ಫಲಿತಾಂಶವು ಶೈಕ್ಷಣಿಕ ಸಾಧನೆಯ ಒಂದು ಉಪ ಉತ್ಪನ್ನ ಮಾತ್ರ. ಅದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಮೌಲ್ಯಗಳ ವರ್ಧನೆ, ನಾಗರಿಕ ಅರಿವು, ಹೃದಯ ಶ್ರೀಮಂತಿಕೆ ಇವುಗಳನ್ನು ನೆಲೆಸುವುದು ಕೂಡ ಶಿಕ್ಷಣದ ಪ್ರಮುಖ ಉದ್ದೇಶವಾಗಬೇಕು. ಶಿಕ್ಷಕರು ತಮ್ಮ ಪ್ರಾಮಾಣಿಕ ಕರ್ತವ್ಯದ ಮೂಲಕ ಉತ್ತಮ ರಾಷ್ಟ್ರವನ್ನು ಕಟ್ಟಲು ಸಾಧ್ಯ ‘ ಎಂದರು. ಕಾರ್ಯಕ್ರಮದ ಅತಿಥಿಯಾಗಿದ್ದ ಕ್ರಿಯೇಟಿವ್ ಕಾಲೇಜಿನ ಉಪನ್ಯಾಸಕರಾದ ವಿನಾಯಕ ಜೋಗ್ ಮತ್ತು ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಅವರು ಅಭಿನಂದನಾ ಭಾಷಣ ಮಾಡಿದರು.

ಇದೇ ಸಮಾರಂಭದಲ್ಲಿ ಕಲ್ಯ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಸುಭಾಸಚಂದ್ರ ಶೆಟ್ಟಿಗಾರ್ ಅವರನ್ನು ಮಾನಪತ್ರದ ಜೊತೆಗೆ ಅತಿಥಿಗಳು ಸನ್ಮಾನಿಸಿದರು. ಅವರು ಸನ್ಮಾನಕ್ಕೆ ಧನ್ಯವಾದ ಸಲ್ಲಿಸಿದರು. ಇದೇ ಕಾರ್ಯಕ್ರಮದಲ್ಲಿ ದಾನಿಗಳಾದ ಕಮಲಾಕ್ಷ ಕಾಮತ್, ಡಾಕ್ಟರ್ ಅಶೋಕ್ ಕಾಮತ್, ಕ್ರಿಯೇಟಿವ್ ಸಂಸ್ಥೆಯ ವಿನಾಯಕ ಜೋಗ್ ಅವರನ್ನು ಸಂಘಟಕರು ಸನ್ಮಾನಿಸಿದರು.

ಕಾರ್ಕಳ ವಲಯದ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಭಾಸ್ಕರ್ ಟಿ ಅವರು ಸ್ವಾಗತ ಮಾಡಿದರು. ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ನಾಗರಾಜ್ ತೆಕ್ಕಟ್ಟೆ ಮತ್ತು       ತಾ. ಅಧ್ಯಕ್ಷ ಆನಂದ, ಸಮೂಹ ಸಂಪನ್ಮೂಲ ಕೇಂದ್ರದ ಮುಖ್ಯಸ್ಥರಾದ ಇಂದಿರಾ ಅವರು ಶುಭಾಶಂಸನೆ ಸಲ್ಲಿಸಿದರು.

ಅಪರ್ಣ ಮತ್ತು ಸ್ಮಿತಾ ಭಂಡಾರಿ ಪರಿಚಯ ಮಾಡಿದರು. ಶಿಕ್ಷಕರ ಸಂಘದ ಕಾರ್ಯದರ್ಶಿ ಸದಾಶಿವ ಬಾಯರಿ ಅವರು ಧನ್ಯವಾದ ಸಲ್ಲಿಸಿದರು. ರಾಜೇಂದ್ರ ಭಟ್ ಕೆ ಕಾರ್ಯಕ್ರಮ ನಿರ್ವಹಣೆ ಮಾಡಿದರು.

Previous Post

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಅನಿಲ್ ಎಸ್ ಪೂಜಾರಿ ಮಾಳ ನೇಮಕ.

Next Post

ಸ್ಕೀಂ ನೌಕರರಿಂದ ಜಿಲ್ಲಾಧಿಕಾರಿ ಕಛೇರಿ ಮುಂದೆ ಧರಣಿ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಸ್ಕೀಂ ನೌಕರರಿಂದ ಜಿಲ್ಲಾಧಿಕಾರಿ ಕಛೇರಿ ಮುಂದೆ ಧರಣಿ

ಸ್ಕೀಂ ನೌಕರರಿಂದ ಜಿಲ್ಲಾಧಿಕಾರಿ ಕಛೇರಿ ಮುಂದೆ ಧರಣಿ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿಯ ಬಾಲಪ್ರತಿಭೆ ಸಚಿತ ರಾವ್ ಫ್ಯಾಷನ್ ಲೋಕದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ

ಉಡುಪಿಯ ಬಾಲಪ್ರತಿಭೆ ಸಚಿತ ರಾವ್ ಫ್ಯಾಷನ್ ಲೋಕದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ

28/08/2026
ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಯಮಹಾ YZF-R2 ಜಾಗತಿಕ ಪಾದಾರ್ಪಣೆ; R-ಸರಣಿಯ ಮುಂದಿನ ಅಧ್ಯಾಯ ಅನಾವರಣ

ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಯಮಹಾ YZF-R2 ಜಾಗತಿಕ ಪಾದಾರ್ಪಣೆ; R-ಸರಣಿಯ ಮುಂದಿನ ಅಧ್ಯಾಯ ಅನಾವರಣ

28/08/2026
ಭಾರತ–ಯುಕೆ ಹೆಲ್ತ್‌ಟೆಕ್ ಆಕ್ಸಿಲರೇಟರ್ 2026 : ಆರು ಭಾರತೀಯ ನವೋದ್ಯಮಗಳಿಗೆ ಮನ್ನಣೆ

ಭಾರತ–ಯುಕೆ ಹೆಲ್ತ್‌ಟೆಕ್ ಆಕ್ಸಿಲರೇಟರ್ 2026 : ಆರು ಭಾರತೀಯ ನವೋದ್ಯಮಗಳಿಗೆ ಮನ್ನಣೆ

28/08/2026
ಮುನಿಯಾಲಿನಲ್ಲಿ 36ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ ಆಚರಣೆ

ಮುನಿಯಾಲಿನಲ್ಲಿ 36ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ ಆಚರಣೆ

28/08/2026

Recent News