Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಬೇಡಿಕೆ ಈಡೇರಿಕೆಗೆ ಆಗ್ರಹ: ಜುಲೈ 13ರಂದು ಬಿಸಿಯೂಟ ಬಂದ್, ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ..!

Dhrishya News by Dhrishya News
10/07/2026
in ಸುದ್ದಿಗಳು
0
ಬೇಡಿಕೆ ಈಡೇರಿಕೆಗೆ ಆಗ್ರಹ: ಜುಲೈ 13ರಂದು ಬಿಸಿಯೂಟ ಬಂದ್, ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ..!
0
SHARES
17
VIEWS
Share on FacebookShare on Twitter

ಉಡುಪಿ, ಜುಲೈ 10: ಅಕ್ಷರ ದಾಸೋಹ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸ್ಕೀಂ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಜುಲೈ 13ರಂದು ಬಿಸಿಯೂಟ ಬಂದ್ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲು ನಿರ್ಧರಿಸಿದೆ.

ಜುಲೈ 10ನ್ನು ದೇಶಾದ್ಯಂತ “ಸ್ಕೀಂ ನೌಕರರ ಕರಾಳ ದಿನ” ವಾಗಿ ಆಚರಿಸಲಾಗುತ್ತಿದ್ದು, ರಾಜ್ಯವ್ಯಾಪಿ ಹೋರಾಟದ ಭಾಗವಾಗಿ ಉಡುಪಿಯಲ್ಲೂ ಪ್ರತಿಭಟನೆ ನಡೆಯಲಿದೆ. ಹೋರಾಟದಲ್ಲಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಅಕ್ಷರ ದಾಸೋಹ ನೌಕರರ ಸಂಘದ ಗೌರವಾಧ್ಯಕ್ಷೆ ಎಸ್. ವರಲಕ್ಷ್ಮಿ ಭಾಗವಹಿಸಲಿದ್ದಾರೆ.

ಸಂಘದ ಪ್ರಕಾರ, ಅಕ್ಷರ ದಾಸೋಹ ಯೋಜನೆ ಆರಂಭವಾಗಿ 25 ವರ್ಷಗಳು ಕಳೆದರೂ, ಬೆಲೆ ಏರಿಕೆಗೆ ಅನುಗುಣವಾಗಿ ಅನುದಾನ ಹೆಚ್ಚಳವಾಗಿಲ್ಲ. 2008ರಿಂದ ಕೇಂದ್ರ ಸರ್ಕಾರ ಅಡುಗೆ ಸಿಬ್ಬಂದಿಯ ಗೌರವಧನವನ್ನು ಹೆಚ್ಚಿಸಿಲ್ಲ. ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ್ದ ಭರವಸೆಯಂತೆ ಅಡುಗೆ ಸಿಬ್ಬಂದಿಯ ವೇತನವನ್ನು ₹7,000 ಹೆಚ್ಚಿಸಬೇಕು ಎಂದು ಸಂಘ ಒತ್ತಾಯಿಸಿದೆ.

ಸಂಘವು ವೇತನ ಹೆಚ್ಚಳ, ಆರು ಗಂಟೆಗಳ ಕೆಲಸಕ್ಕೆ ಸುತ್ತೋಲೆ, ಆರೋಗ್ಯ ವಿಮೆ, ನಿವೃತ್ತರಿಗೆ ₹10,000 ಪಿಂಚಣಿ, ವರ್ಷಪೂರ್ತಿ 12 ತಿಂಗಳ ಕೆಲಸ ಮತ್ತು ಕನಿಷ್ಠ ಕೂಲಿ ಜಾರಿ, ಅಕ್ಷರ ದಾಸೋಹ ಯೋಜನೆಯ ಖಾಸಗೀಕರಣ ಕೈಬಿಡುವುದು, ಬೇಸಿಗೆ ಹಾಗೂ ಇತರ ರಜೆ ಅವಧಿಯಲ್ಲೂ ವೇತನ ಪಾವತಿ, ಅಡುಗೆ ಸಿಬ್ಬಂದಿಯನ್ನು ಖಾಯಂ ಸಿಬ್ಬಂದಿಯಾಗಿ ನೇಮಕ ಸೇರಿದಂತೆ 13 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ.

ಈ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಿಗೆ ಶುಕ್ರವಾರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಂದ, ಜಿಲ್ಲಾ ಕಾರ್ಯದರ್ಶಿಗಳಾದ ರತ್ನ ಮತ್ತು ಮಂಜುಳ ಹಾಗೂ ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಕವಿರಾಜ್ ಎಸ್. ಕಾಂಚನ್ ಉಪಸ್ಥಿತರಿದ್ದರು.

Previous Post

ಲಾರಿ-ಬೈಕ್ ನಡುವೆ ಅಪಘಾತ: ಯುವಕ ಮೃತ್ಯು ..!

Next Post

ಗಡಿಯಾಚೆಗಿನ ವ್ಯಾಪಾರದ ಸವಾಲು ಮೆಟ್ಟಿನಿಲ್ಲಲು ಮಹಿಳಾ ಉದ್ಯಮಿಗಳಿಗೆ ಪೇ10 ನೆರವು

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಗಡಿಯಾಚೆಗಿನ ವ್ಯಾಪಾರದ ಸವಾಲು ಮೆಟ್ಟಿನಿಲ್ಲಲು ಮಹಿಳಾ ಉದ್ಯಮಿಗಳಿಗೆ ಪೇ10 ನೆರವು

ಗಡಿಯಾಚೆಗಿನ ವ್ಯಾಪಾರದ ಸವಾಲು ಮೆಟ್ಟಿನಿಲ್ಲಲು ಮಹಿಳಾ ಉದ್ಯಮಿಗಳಿಗೆ ಪೇ10 ನೆರವು

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿಯ ಬಾಲಪ್ರತಿಭೆ ಸಚಿತ ರಾವ್ ಫ್ಯಾಷನ್ ಲೋಕದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ

ಉಡುಪಿಯ ಬಾಲಪ್ರತಿಭೆ ಸಚಿತ ರಾವ್ ಫ್ಯಾಷನ್ ಲೋಕದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ

28/08/2026
ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಯಮಹಾ YZF-R2 ಜಾಗತಿಕ ಪಾದಾರ್ಪಣೆ; R-ಸರಣಿಯ ಮುಂದಿನ ಅಧ್ಯಾಯ ಅನಾವರಣ

ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಯಮಹಾ YZF-R2 ಜಾಗತಿಕ ಪಾದಾರ್ಪಣೆ; R-ಸರಣಿಯ ಮುಂದಿನ ಅಧ್ಯಾಯ ಅನಾವರಣ

28/08/2026
ಭಾರತ–ಯುಕೆ ಹೆಲ್ತ್‌ಟೆಕ್ ಆಕ್ಸಿಲರೇಟರ್ 2026 : ಆರು ಭಾರತೀಯ ನವೋದ್ಯಮಗಳಿಗೆ ಮನ್ನಣೆ

ಭಾರತ–ಯುಕೆ ಹೆಲ್ತ್‌ಟೆಕ್ ಆಕ್ಸಿಲರೇಟರ್ 2026 : ಆರು ಭಾರತೀಯ ನವೋದ್ಯಮಗಳಿಗೆ ಮನ್ನಣೆ

28/08/2026
ಮುನಿಯಾಲಿನಲ್ಲಿ 36ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ ಆಚರಣೆ

ಮುನಿಯಾಲಿನಲ್ಲಿ 36ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ ಆಚರಣೆ

28/08/2026

Recent News