Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿಎ ಗುಜ್ಜಾಡಿ ಪ್ರಭಾಕರ್ ನಾಯಕ್.

Dhrishya News by Dhrishya News
01/07/2026
in ಸುದ್ದಿಗಳು
0
ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿಎ ಗುಜ್ಜಾಡಿ ಪ್ರಭಾಕರ್ ನಾಯಕ್.
0
SHARES
15
VIEWS
Share on FacebookShare on Twitter

ಜಿ ಎಸ್ ಬಿ ಸಮಾಜ ಹಿತ ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲೆ ನೇತೃತ್ವದಲ್ಲಿ ಬ್ರಹ್ಮಾವರ ತಾಲೂಕು ಉಪ್ಪೂರಿನಲ್ಲಿ 1.11 ಎಕ್ರೆ ಜಾಗದಲ್ಲಿ ನಿರ್ಮಾಣಗೊಳ್ಳಲಿರುವ ” ವಯೋವಂದನ ಆತಿಥ್ಯ ಗೃಹ” ಯೋಜನೆ ಹಿರಿಯರ ಬದುಕಿನ ಸಂಧ್ಯಾಕಾಲದ ಆಸರೆ ಆಗಲಿದ್ದು, ಈ ಯೋಜನೆಯ ನಿರ್ಮಾಣ ಕಾರ್ಯ ಮತ್ತು ಆ ಬಳಿಕದ ನಿರ್ವಹಣೆಗೆ ಸಮಾಜದ ಸಹಭಾಗಿತ್ವ ಅತಿ ಅಗತ್ಯ.

ಜಿ ಎಸ್ ಬಿ ಸಮಾಜ ಹಿತ ರಕ್ಷಣಾ ವೇದಿಕೆ ಕಳೆದ 14 ವರ್ಷಗಳಿಂದ ಸಮಾಜ ಸಂಘಟನೆ ಮತ್ತು ಸಮಾಜಮುಖಿ ಕಾರ್ಯಗಳ ಮೂಲಕ ಸಮಾಜದ ಎಲ್ಲಾ ವರ್ಗದವರ ಪ್ರೀತಿ ವಿಶ್ವಾಸವನ್ನು ಗಳಿಸಿದ್ದು, ಎಲ್ಲಾ ಅಡೆತಡೆ ಸವಾಲುಗಳನ್ನು ಎದುರಿಸಿ ಸಮಾಜದ ಅವಶ್ಯಕತೆ ಇರುವ ಹಿರಿಯ ನಾಗರಿಕರಿಗೆ ನೆಮ್ಮದಿಯ ತಾಣದ ನಿರ್ಮಾಣ ಮತ್ತು ಯಶಸ್ವಿ ಕಾರ್ಯನಿರ್ವಹಣೆ ಸಾಧ್ಯವಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಯೋಜನೆಗೆ ವೈಯುಕ್ತಿಕವಾಗಿ ಮತ್ತು ಉಡುಪಿ ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನದ ವತಿಯಿಂದ ಸಂಪೂರ್ಣ ಸಹಕಾರ ಮತ್ತು ಸಹಭಾಗಿತ್ವ ನೀಡುವುದಾಗಿ ಉಡುಪಿ ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನದ ನೂತನ ವಿಶ್ವಸ್ಥರಾದ ಸಿಎ ಗುಜ್ಜಾಡಿ ಪ್ರಭಾಕರ್ ನಾಯಕ್ ತಿಳಿಸಿದರು.

ಅವರು ಜೂನ್ 28 ಆದಿತ್ಯವಾರದಂದು ಸಂಜೆ ಉಡುಪಿಯ ಶ್ರೀ ಪದ್ಮಾವತಿ ಸಭಾಭವನದಲ್ಲಿ ನಿರ್ಮಾಣ ಯೋಜನೆಯ ವಿವಿಧ ಸಮಿತಿಗಳ ರಚನೆ ಮತ್ತು ಸಮಾಲೋಚನಾ ಸಭೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.

ಉಡುಪಿಯ ತ್ರಿಶಾ ವಿದ್ಯಾ ಕಾಲೇಜಿನ ಸಂಸ್ಥಾಪಕರಾದ ಸಿಎ ಗೋಪಾಲಕೃಷ್ಣ ಭಟ್ ಮತ್ತು ಮೂಡಬಿದ್ರೆ ವಿಜಯ್ ಕುಮಾರ್ ಶೆಣೈ ಯವರು ವಯೋವಂದನ ಯೋಜನೆಯ ಕಟ್ಟಡ ನಿರ್ಮಾಣದ ಪೂರ್ವಭಾವಿ ಸಿದ್ಧತೆ, ಯೋಜನೆಯ ನಿರ್ವಹಣೆಯ ಖರ್ಚು ವೆಚ್ಚದ ವಿವರಗಳನ್ನು ದೃಶ್ಯ ಶ್ರಾವ್ಯ ಮಾಧ್ಯಮದ ಮೂಲಕ ವಿವರಿಸಿದರು.

ವಿವಿಧ ಸಮಿತಿಗಳ ರಚನೆ

ಇದೇ ಸಂದರ್ಭದಲ್ಲಿ ವಯೋವಂದನ ಕಟ್ಟಡ ನಿರ್ಮಾಣ ಯೋಜನ ಸಮಿತಿ ಅಧ್ಯಕ್ಷರಾಗಿ ಬೆಂಗಳೂರಿನ ಮಹಾಲಸಾ ಎಲೆಕ್ಟ್ರಿಕಲ್ ನ ಮಾಲಕರಾದ ಮೂಡಬಿದ್ರೆ ಶ್ರೀ ವಿಜಯಕುಮಾರ್ ಶೆಣೈ, ಸಂಚಾಲಕರಾಗಿ ಕಾಪು ಹರೀಶ್ ನಾಯಕ್, ಶ್ರೀ ಕೆ.ಸಿ. ಕಾಮತ್, ಬಾಲಕೃಷ್ಣ ಶೆಣೈ ಮಣಿಪಾಲ. ಹಣಕಾಸು ಸಮಿತಿ ಮತ್ತು ಲೆಕ್ಕಪತ್ರ ಮೇಲ್ವಿಚಾರಣ ಸಮಿತಿಯ ಅಧ್ಯಕ್ಷರಾಗಿ ಸಿಎ ಗೋಪಾಲಕೃಷ್ಣ ಭಟ್, ಗೌರವ ಸಲಹೆಗಾರರಾಗಿ ಸಿಎ ಎಸ್ಎಸ್ ನಾಯಕ್ ಮಂಗಳೂರು, ಮತ್ತು ಸಂಚಾಲಕರುಗಳಾಗಿ ಶ್ರೀ ನಾಗೇಶ್ ಕಾಮತ್ ಮತ್ತು ಮೋಹನದಾಸ ಶಾನುಭಾಗ್, ಅಜಿತ್ ಶೆಣೈ ಉಡುಪಿ.

ಕಟ್ಟಡ ನಿರ್ಮಾಣ ಸಾಮಗ್ರಿ ಸಂಗ್ರಹಣ ಮತ್ತು ಮೇಲ್ವಿಚಾರಣಾ ಸಮಿತಿ ಸಂಚಾಲಕರುಗಳಾಗಿ ಬೆಳ್ಮಣ್ ವೆಂಕಟರಾಯ ಕಾಮತ್ ಮತ್ತು ಮೂಡಬಿದ್ರೆ ರಘುವೀರ್ ಶೆಣೈ ಯ ವರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಯಿತು.

ಕಟ್ಟಡ ನಿರ್ಮಾಣ ಕೆಲಸದ ಗುತ್ತಿಗೆಯನ್ನು ಬೆಳ್ಮಣ್ ಕಾಮಾಕ್ಷಿ ಕನ್ಸ್ಟ್ರಕ್ಷನ್ ನ ಶ್ರೀ ಸುಧೀರ್ ಕಾಮತ್ ರವರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಏಜಿಎಂ ಉಡುಪಿಯ ಶ್ರೀ ಅಶೋಕ್ ನಾಯಕ್, ನಿವೃತ್ತ ಬ್ಯಾಂಕರ್ ಕಾಪುವಿನ ಶ್ರೀ ಲಕ್ಷ್ಮೀನಾರಾಯಣ ನಾಯಕ್ ದಂಪತಿಗಳು, ಶ್ರೀ ಲಕ್ಷ್ಮಿ ವೆಂಕಟೇಶ ಕ್ರೆಡಿಟ್ ಕಾರ್ಪೊರೇಟಿವ್ ಸೊಸೈಟಿಯ ವತಿಯಿಂದ ನಿವೃತ್ತ ಬ್ಯಾಂಕರ್ ಮಲ್ಪೆ ಶ್ರೀನಿವಾಸ್ ಭಟ್ ನೇತ್ರತ್ವದಲ್ಲಿ ಹಾಗೂ ಉಡುಪಿಯ ಯು ಎಸ್ ನಾಯಕ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ವಿಶ್ವಸ್ಥರಾದ ಪಾಂಗಾಳ ಸಿಎ ಸುರೇಶ್ ನಾಯಕ್ ಮತ್ತು ಸಿಎ ಗುಜ್ಜಾಡಿ ಪ್ರಭಾಕರ್ ನಾಯಕ್ ರವರು ವಯೋವಂದನ ಯೋಜನೆಯ ಕೊಠಡಿ ನಿರ್ಮಾಣಕ್ಕೆ ತಲಾ 8 ಲಕ್ಷ ರೂಪಾಯಿ ದೇಣಿಗೆ ಚೆಕ್ಕನ್ನು ವೇದಿಕೆಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಮುಖ್ಯ ಅತಿಥಿಗಳಾಗಿ ಡಾ. ರಾಜ್ ಗೋಪಾಲ್ ಶೆಣೈ,ಉಡುಪಿ ಮತ್ತು ಮಂಗಳೂರಿನ ಖ್ಯಾತ ಲೆಕ್ಕ ಪರಿಶೋಧಕರಾದ ಸಿಎ ಎಸ್ಎಸ್ ನಾಯಕ್ ರವರು ಮಾತನಾಡಿದರು.

ವೇದಿಕೆಯಲ್ಲಿ ಉಡುಪಿಯ ಖ್ಯಾತ ಸರ್ಜನ್ ಡಾ. ಸುರೇಶ್ ಶೆಣೈ,
ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದ ವಿಶ್ವಸ್ಥರಾದ ಶ್ರೀ ತೋನ್ಸೆ ರಾಮರಾಯ ಕಿಣಿ,
ಉಡುಪಿ ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನದ ವಿಶ್ವಸ್ಥರಾದ ಶ್ರೀ ಮಹೇಶ ಶೆಣೈ ,ಯುವಕ ಮಂಡಳಿಯ ಅಧ್ಯಕ್ಷರಾದ ನಿತೇಶ್ ಶೆಣೈ,
ಮತ್ತು ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದ ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಸೀಮಾ. ಎಸ್. ಪೈ ಯವರು ಉಪಸ್ಥಿತರಿದ್ದರು.
ಸನ್ಮಾನ
ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯ ಪರಿಕಲ್ಪನೆ ಮತ್ತು ಸಂಯೋಜನೆಯಲ್ಲಿ ಸಿದ್ಧಗೊಂಡಿರುವ
“ಡಾ.ಪಿ. ದಯಾನಂದ ಪೈ ಸಾರ್ಥಕ ಬದುಕಿನ ಸಾಕ್ಷಾತ್ಕಾರ” ಎನ್ನುವ ಪುಸ್ತಕದ ಸಂಪಾದಕಿಯಾದ ಕಾರ್ಕಳದ ಪ್ರತಿಭಾನ್ವಿತ ಲೇಖಕಿ ಶ್ರೀಮತಿ ಪ್ರಜ್ವಲಾ ಶೆಣೈಯವರಿಗೆ ಸನ್ಮಾನಿಸಿ, ಗೌರವಾರ್ಪಣೆ ಮಾಡಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ವೇದಮೂರ್ತಿ ಶ್ರೀಚೇಂಪಿ ರಾಮಚಂದ್ರ ಅನಂತ ಭಟ್ಟರವರು, ವೇದಿಕೆಯ ಮಹತ್ವಕಾಂಕ್ಷಿ ಯೋಜನೆಗೆ ಸಮಾಜದ ದಾನಿಗಳಿಂದ ಈಗಾಗಲೇ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದ್ದು, ಆದಷ್ಟು ಶೀಘ್ರ ನಿರ್ಮಾಣ ಕಾರ್ಯ ಸಂಪೂರ್ಣಗೊಂಡು ಸಮಾಜದ ಹಿರಿಯರ ಬಾಳಿಗೆ ಈ ಯೋಜನೆ ಆಸರೆಯಾಗಲಿ ಎಂದು ಶುಭ ಹಾರೈಸಿದರು.

ಬಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ಶ್ರೀ ಜಿ. ಸತೀಶ್ ಹೆಗಡೆ ಸ್ವಾಗತಿಸಿ ,ವೇದಿಕೆಯ ಸಂಚಾಲಕರಾದ ಆರ್. ವಿವೇಕಾನಂದ ಶೆಣೈಯವರು ಪ್ರಸ್ತಾವನೆಗೈದರು, ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ರವರು ಕಾರ್ಯಕ್ರಮ ನಿರೂಪಿಸಿ ,ಕಾಪು ಹರೀಶ್ ನಾಯಕ್ ರವರು ವಂದನಾರ್ಪಣೆಗೆದರು.

Previous Post

ಇನ್ನಾ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ.

Next Post

ವಿಕಸಿತ ಭಾರತ’, ‘ವಿಶ್ವ ಗುರು ಭಾರತ’ ಬಿಜೆಪಿ ಗುರಿ : ಕುತ್ಯಾರು ನವೀನ್ ಶೆಟ್ಟಿ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ವಿಕಸಿತ ಭಾರತ’, ‘ವಿಶ್ವ ಗುರು ಭಾರತ’ ಬಿಜೆಪಿ ಗುರಿ : ಕುತ್ಯಾರು ನವೀನ್ ಶೆಟ್ಟಿ

ವಿಕಸಿತ ಭಾರತ', 'ವಿಶ್ವ ಗುರು ಭಾರತ' ಬಿಜೆಪಿ ಗುರಿ : ಕುತ್ಯಾರು ನವೀನ್ ಶೆಟ್ಟಿ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಬಿಜೆಪಿ ಉಡುಪಿ ಜಿಲ್ಲಾ ಕಛೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

ಬಿಜೆಪಿ ಉಡುಪಿ ಜಿಲ್ಲಾ ಕಛೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

15/08/2026
ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ.

ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ.

15/08/2026
ಸಿಐಟಿಯು ಉಡುಪಿ ವಲಯ ಸಮಿತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

ಸಿಐಟಿಯು ಉಡುಪಿ ವಲಯ ಸಮಿತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

15/08/2026
20×14 ಅಡಿ ರಾಷ್ಟ್ರಧ್ವಜ ಪ್ರದರ್ಶಿಸಿ ಸ್ವಾತಂತ್ರ್ಯೋತ್ಸವ ಆಚರಿಸಿದ ಉಡುಪಿ ನಾಗರಿಕ ಸಮಿತಿ..!

20×14 ಅಡಿ ರಾಷ್ಟ್ರಧ್ವಜ ಪ್ರದರ್ಶಿಸಿ ಸ್ವಾತಂತ್ರ್ಯೋತ್ಸವ ಆಚರಿಸಿದ ಉಡುಪಿ ನಾಗರಿಕ ಸಮಿತಿ..!

15/08/2026

Recent News

ಬಿಜೆಪಿ ಉಡುಪಿ ಜಿಲ್ಲಾ ಕಛೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

ಬಿಜೆಪಿ ಉಡುಪಿ ಜಿಲ್ಲಾ ಕಛೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

15/08/2026
ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ.

ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ.

15/08/2026
ಸಿಐಟಿಯು ಉಡುಪಿ ವಲಯ ಸಮಿತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

ಸಿಐಟಿಯು ಉಡುಪಿ ವಲಯ ಸಮಿತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

15/08/2026
20×14 ಅಡಿ ರಾಷ್ಟ್ರಧ್ವಜ ಪ್ರದರ್ಶಿಸಿ ಸ್ವಾತಂತ್ರ್ಯೋತ್ಸವ ಆಚರಿಸಿದ ಉಡುಪಿ ನಾಗರಿಕ ಸಮಿತಿ..!

20×14 ಅಡಿ ರಾಷ್ಟ್ರಧ್ವಜ ಪ್ರದರ್ಶಿಸಿ ಸ್ವಾತಂತ್ರ್ಯೋತ್ಸವ ಆಚರಿಸಿದ ಉಡುಪಿ ನಾಗರಿಕ ಸಮಿತಿ..!

15/08/2026