Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಇನ್ನಾ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ.

Dhrishya News by Dhrishya News
01/07/2026
in ಸುದ್ದಿಗಳು
0
ಇನ್ನಾ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ.
0
SHARES
6
VIEWS
Share on FacebookShare on Twitter

ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಆಯುರ್ವೇದಭೂಷಣ ಎಂ ವಿ ಶಾಸ್ತ್ರೀ ಪ್ರೌಢಶಾಲೆಯಲ್ಲಿ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ, ಪ್ರತಿಭಾ ಪುರಸ್ಕಾರ ಮತ್ತು ದಾನಿಗಳಿಗೆ ಸನ್ಮಾನ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸುಂಕದಕಟ್ಟೆ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ರಾಘವೇಂದ್ರ ಶೆಟ್ಟಿ ಅವರು ಊರಿನ ವಿವಿಧ ದಾನಿಗಳ ಮೂಲಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳ ಶಿಕ್ಷಣದ ವೆಚ್ಚವನ್ನು ಭರಿಸಿದ ಶೈಕ್ಷಣಿಕ ದತ್ತು ಸ್ವೀಕಾರವನ್ನು ಘೋಷಣೆ ಮಾಡಿದರು. ಹಾಗೆಯೇ ಕಳೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ನೂರು ಶೇಕಡಾ ಫಲಿತಾಂಶಕ್ಕೆ ಕಾರಣರಾದ ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ದಾನಿಗಳಾದ ಜಯ ಎಸ್ ಕೋಟ್ಯಾನ್ ಮತ್ತು ದೀಪಕ್ ಕೋಟ್ಯಾನ್ ಅವರ ಕೊಡುಗೆಯಾದ ತಲಾ ಎರಡು ಸಾವಿರ ನಗದು ಬಹುಮಾನಗಳ ಜೊತೆಗೆ ಸನ್ಮಾನಿಸಲಾಯಿತು. ಹಾಗೆಯೇ ಶಾಲೆಯ ಎಲ್ಲ ಅಧ್ಯಾಪಕರನ್ನು ಅತಿಥಿಗಳು ಸನ್ಮಾನಿಸಿದರು.

ಶಾಲೆಯಲ್ಲಿ ಹೆಚ್ಚು ಅಂಕ ಪಡೆದ ಸಮೀಕ್ಷಾ ಮತ್ತು ಕೃಷ್ಣಮೂರ್ತಿ ಅವರಿಗೆ ಶಾಲೆಯ ಸ್ಥಾಪಕ ಕಾರ್ಯದರ್ಶಿ ಡಾಕ್ಟರ್ ಎನ್ ಜೆ ಉಷಾರಾವ್ ಅವರ ನೆನಪಿನಲ್ಲಿ ತಲಾ 5,000 ರೂಗಳ ವಿದ್ಯಾರ್ಥಿವೇತನಗಳನ್ನು ನೀಡಿ ಅಭಿನಂದಿಸಲಾಯಿತು. ಎಲ್ಲ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಬರೆಯುವ ಪುಸ್ತಕ, ಸ್ಕೂಲ್ ಬ್ಯಾಗ್, ಕೊಡೆ ಮತ್ತು ಶೈಕ್ಷಣಿಕ ಸಾಮಗ್ರಿಗಳನ್ನು ಸಮಾರಂಭದ ಅತಿಥಿಯಾದ ನಿವೃತ್ತ ಶಿಕ್ಷಕ ವಸಂತ್ ಎಂ ಅವರು ಹಸ್ತಾಂತರ ಮಾಡಿ ವಿಜೇತರನ್ನು ಅಭಿನಂದಿಸಿದರು. ಅವರು ಮಾತನಾಡಿ ಈ ಕನ್ನಡ ಮಾಧ್ಯಮ ಶಾಲೆಯನ್ನು ಬೆಂಬಲಿಸುತ್ತಿರುವ ಊರಿನ ದಾನಿಗಳನ್ನು ಮತ್ತು ಈ ಶಾಲೆಯ ಆಡಳಿತ ಮಂಡಳಿಯ ಕೊಡುಗೆಯನ್ನು ಅಭಿನಂದಿಸಿದರು.

ಇನ್ನಾ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕಾಚೂರು ಪರಾಡಿ ದಿವಾಕರ ಆರ್ ಶೆಟ್ಟಿಯವರು ಎಂ ವಿ ಶಾಸ್ತ್ರಿಯವರ ಭಾವಚಿತ್ರದ ಎದುರು ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಶಾಲೆಯ ಸಂಚಾಲಕರಾದ ಸತೀಶ್ ಸದಾನಂದ ಅವರು ಸಂಸ್ಥಾಪಕರ ಬದುಕು ಮತ್ತು ಸಾಧನೆಗಳ ಬಗ್ಗೆ ವಿವರಿಸಿದರು. ದಾನಿಗಳಾದ ಇನ್ನಾ ಬೀಡು ದಿನೇಶ್ ಶೆಟ್ಟಿ ಅವರು ಉಪಸ್ಥಿತರಿದ್ದರು. ವಿದ್ಯಾರ್ಥಿವೇತನಗಳ ಪ್ರಾಯೋಜಕರಾದ ಜಯ ಎಸ್ ಕೋಟ್ಯಾನ್ ಮತ್ತು ದೀಪಕ್ ಕೋಟ್ಯಾನ್ ಅವರ ಪರವಾಗಿ ಅವರ ತಾಯಿ ಸುಲೋಚನಾ ಕೋಟ್ಯಾನ್ ಅವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕರಾದ ರಾಜೇಂದ್ರ ಭಟ್ ಕೆ ಅವರು ಅತಿಥಿಗಳನ್ನು ಸ್ವಾಗತ ಮಾಡಿದರು. ಸಹಶಿಕ್ಷಕಿ ವಾಣಿ ಮತ್ತು ಸೌಮ್ಯಾ ಆರ್ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಶಿಕ್ಷಕ ಉಮೇಶ್ ಆಚಾರ್ಯ ಅವರು ಧನ್ಯವಾದ ನೀಡಿದರು. ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆಯಿಂದ ನೀಡಲ್ಪಟ್ಟ ಹಣ್ಣಿನ ಗಿಡಗಳನ್ನು ವಿತರಣೆ ಮಾಡಲಾಯಿತು.

Previous Post

ಮಹಾಭಾರತದ ಒಟ್ಟು ಸಾರವೇ ಧರ್ಮ

Next Post

ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿಎ ಗುಜ್ಜಾಡಿ ಪ್ರಭಾಕರ್ ನಾಯಕ್.

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿಎ ಗುಜ್ಜಾಡಿ ಪ್ರಭಾಕರ್ ನಾಯಕ್.

ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿಎ ಗುಜ್ಜಾಡಿ ಪ್ರಭಾಕರ್ ನಾಯಕ್.

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಬಿಜೆಪಿ ಉಡುಪಿ ಜಿಲ್ಲಾ ಕಛೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

ಬಿಜೆಪಿ ಉಡುಪಿ ಜಿಲ್ಲಾ ಕಛೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

15/08/2026
ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ.

ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ.

15/08/2026
ಸಿಐಟಿಯು ಉಡುಪಿ ವಲಯ ಸಮಿತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

ಸಿಐಟಿಯು ಉಡುಪಿ ವಲಯ ಸಮಿತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

15/08/2026
20×14 ಅಡಿ ರಾಷ್ಟ್ರಧ್ವಜ ಪ್ರದರ್ಶಿಸಿ ಸ್ವಾತಂತ್ರ್ಯೋತ್ಸವ ಆಚರಿಸಿದ ಉಡುಪಿ ನಾಗರಿಕ ಸಮಿತಿ..!

20×14 ಅಡಿ ರಾಷ್ಟ್ರಧ್ವಜ ಪ್ರದರ್ಶಿಸಿ ಸ್ವಾತಂತ್ರ್ಯೋತ್ಸವ ಆಚರಿಸಿದ ಉಡುಪಿ ನಾಗರಿಕ ಸಮಿತಿ..!

15/08/2026

Recent News