Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಪ್ರವಾಸ ಪ್ರೇಮಿ ಕಂಟೆಂಟ್ ಕ್ರಿಯೇಟರ್ ಗಳಿಗಾಗಿ ಕ್ಲಿಯರ್‌ ಟ್ರಿಪ್ ನಿಂದ ಕ್ರಿಯೇಟರ್ಸ್ ಕ್ಲಬ್ ಆರಂಭ

ಯಾವುದೇ ಕನಿಷ್ಠ ಫಾಲೋವರ್ಸ್ ಮಿತಿ ಇಲ್ಲ ಮತ್ತು ಪೋಸ್ಟ್‌ಗೆ ಇಂತಿಷ್ಟು ಹಣ ಎಂಬ ನಿಯಮವಿಲ್ಲದೆ ಎಲ್ಲರಿಗೂ ಮುಕ್ತ ಅವಕಾಶ ಪ್ರಾಯೋಗಿಕ ಯೋಜನೆಯಲ್ಲಿ ಪ್ರಾದೇಶಿಕ ಕ್ರಿಯೇಟರ್‌ ಗಳದ್ದೇ ಮೇಲುಗೈ; ತೆಲುಗು ಕಂಟೆಂಟ್ ಅತ್ಯಂತ ವೇಗವಾಗಿ ಬೆಳೆಯುತ್ತಿರುವುದು ಪತ್ತೆ

Dhrishya News by Dhrishya News
25/06/2026
in ಸುದ್ದಿಗಳು
0
ಪ್ರವಾಸ ಪ್ರೇಮಿ ಕಂಟೆಂಟ್ ಕ್ರಿಯೇಟರ್ ಗಳಿಗಾಗಿ ಕ್ಲಿಯರ್‌ ಟ್ರಿಪ್ ನಿಂದ ಕ್ರಿಯೇಟರ್ಸ್ ಕ್ಲಬ್ ಆರಂಭ
0
SHARES
9
VIEWS
Share on FacebookShare on Twitter

ಬೆಂಗಳೂರು, ಜೂನ್ 25, 2026: ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಕಂಟೆಂಟ್‌ ಗಳನ್ನು ವಾಣಿಜ್ಯ ಅವಕಾಶವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಫ್ಲಿಪ್‌ ಕಾರ್ಟ್ ಸಮೂಹದ ಪ್ರಮುಖ ಆನ್‌ ಲೈನ್ ಟ್ರಾವೆಲ್ ಪ್ಲಾಟ್‌ ಫಾರ್ಮ್ ಕ್ಲಿಯರ್‌ಟ್ರಿಪ್, ಇದೀಗ ಹೊಸದಾಗಿ ಕ್ಲಿಯರ್‌ ಟ್ರಿಪ್ ಕ್ರಿಯೇಟರ್ಸ್ ಕ್ಲಬ್ ಅನ್ನು ಆರಂಭಿಸಿದೆ. ಇದು ಒಂದು ವ್ಯವಸ್ಥಿತ ಅಫಿಲಿಯೇಟ್ ಕಾರ್ಯಕ್ರಮವಾಗಿದ್ದು, ಕ್ರಿಯೇಟರ್‌ ಗಳ ವಿಡಿಯೋ ಮತ್ತು ಕಂಟೆಂಟ್‌ ಗಳನ್ನು ನೇರವಾಗಿ ಟಿಕೆಟ್ ಬುಕಿಂಗ್ ಪ್ರಕ್ರಿಯೆಯೊಂದಿಗೆ ಸಂಯೋಜಿಸಲಿದೆ.

ಸಾಂಪ್ರದಾಯಿಕವಾಗಿ ಕಂಟೆಂಟ್‌ಗಳಿಗೆ ಇಂತಿಷ್ಟು ಹಣ ನೀಡುವ (ಪೇ- ಪರ್- ಕಂಟೆಂಟ್) ಮಾದರಿಗೆ ಮುಕ್ತಿ ನೀಡಿರುವ ಸಂಸ್ಥೆ, ಹೊಸ ಕಾರ್ಯಕ್ಷಮತೆ ಆಧಾರಿತ ಕಮಿಷನ್ ಮಾದರಿಯನ್ನು ಪರಿಚಯಿಸಿದೆ. ಇದರಿಂದಾಗಿ ಕ್ರಿಯೇಟರ್‌ ಗಳು ಕೇವಲ ಪ್ರಚಾರಕರಾಗಿ ಉಳಿಯದೆ ಕಂಪನಿಯ ಆದಾಯದಲ್ಲಿ ನೇರ ಪಾಲುದಾರರಾಗಲಿದ್ದಾರೆ. 2026 ರ ಅಂತ್ಯದ ವೇಳೆಗೆ ದೇಶಾದ್ಯಂತ 10,000 ಕ್ಕೂ ಹೆಚ್ಚು ಕ್ರಿಯೇಟರ್‌ ಗಳನ್ನು ಈ ಕ್ಲಬ್‌ಗೆ ಸೇರಿಸಿಕೊಳ್ಳುವ ಗುರಿಯನ್ನು ಹೊಂದಲಾಗಿದೆ. ಈ ಕಾರ್ಯಕ್ರಮದ ಪ್ರಮುಖ ವೈಶಿಷ್ಟ್ಯವೆಂದರೆ, ಇದರಲ್ಲಿ ಭಾಗವಹಿಸಲು ಕ್ರಿಯೇಟರ್‌ಗಳಿಗೆ ಯಾವುದೇ ಕನಿಷ್ಠ ಫಾಲೋವರ್ಸ್ ಸಂಖ್ಯೆಯ ಮಿತಿ ಇರುವುದಿಲ್ಲ. ಕೇವಲ ಫಾಲೋವರ್ಸ್ ಸಂಖ್ಯೆಗಿಂತ ಅವರ ಕಂಟೆಂಟ್‌ಗೆ ಸಾರ್ವಜನಿಕರಿಂದ ಸಿಗುವ ಪ್ರತಿಕ್ರಿಯೆ ಆಧರಿಸಿ ಅರ್ಹತೆಯನ್ನು ನಿರ್ಧರಿಸಲಾಗುತ್ತದೆ. ಹೀಗಾಗಿ ಹೊಸದಾಗಿ ಕಂಟೆಂಟ್ ಕ್ರಿಯೇಟ್ ಮಾಡಲು ಆರಂಭಿಸಿರುವವರಿಗೂ ಇದು ಮುಕ್ತ ಅವಕಾಶ ಕಲ್ಪಿಸಿದೆ.

ಕಾರ್ಯಕ್ರಮದ ಅಧಿಕೃತ ಬಿಡುಗಡೆಗೂ ಮುನ್ನ ನಡೆಸಲಾದ ಪ್ರಾಯೋಗಿಕ ಯೋಜನೆಯಲ್ಲಿ ಪ್ರಾದೇಶಿಕ ಭಾಷೆಗಳ ಕ್ರಿಯೇಟರ್‌ ಗಳು ಮುಂಚೂಣಿಯಲ್ಲಿರುವುದು ಕಂಡುಬಂದಿದೆ. ಪ್ರವಾಸಕ್ಕೆ ಸಂಬಂಧಿಸಿದ ಕಂಟೆಂಟ್‌ಗಳಲ್ಲಿ ಅದರಲ್ಲೂ ವಿಶೇಷವಾಗಿ ತೆಲುಗು ಭಾಷೆಯ ಕಂಟೆಂಟ್‌ ಗಳು ಅತ್ಯಂತ ವೇಗವಾಗಿ ಬೆಳೆಯುತ್ತಿರುವುದು ಈ ಅಧ್ಯಯನದಲ್ಲಿ ಪತ್ತೆಯಾಗಿದೆ.

ಭಾರತದಲ್ಲಿ ಪ್ರವಾಸದ ನಿರ್ಧಾರಗಳು ಈಗ ಕೇವಲ ಸರ್ಚ್ ಬಾರ್‌ ಗಳಿಗೆ ಸೀಮಿತವಾಗಿಲ್ಲ. ಟ್ರಾವೆಲ್ ಕ್ಷೇತ್ರದಲ್ಲಿ ಸಾಮಾಜಿಕ ಜಾಲತಾಣಗಳು ಅತ್ಯಂತ ಶಕ್ತಿಶಾಲಿ ವಿತರಣಾ ಚಾನಲ್ ಆಗಿ ನಿಶ್ಯಬ್ದವಾಗಿ ಹೊರಹೊಮ್ಮುತ್ತಿವೆ. ಅದರಲ್ಲೂ ವಿಶೇಷವಾಗಿ ಜೆನ್-ಜೀ ಮತ್ತು ಮಿಲೇನಿಯಲ್ಸ್ ತಲೆಮಾರಿನ ಯುವಕರು ಪ್ರವಾಸದ ಸ್ಥಳಗಳ ಆಯ್ಕೆಯಿಂದ ಹಿಡಿದು ಬುಕಿಂಗ್ ನಿರ್ಧಾರಗಳವರೆಗೆ ಪ್ರತಿಯೊಂದಕ್ಕೂ ಕಂಟೆಂಟ್ ಕ್ರಿಯೇಟರ್‌ಗಳನ್ನೇ ಅವಲಂಬಿಸುತ್ತಿದ್ದಾರೆ. ಕ್ಲಿಯರ್‌ ಟ್ರಿಪ್‌ ನ ಪೀಕ್‌ಅಬೂ ಟ್ರೆಂಡ್ಸ್ ಟ್ರ್ಯಾಕರ್ ವರದಿಯ ಪ್ರಕಾರ, ಈ ಬದಲಾವಣೆಯು ಕೇವಲ ಮೆಟ್ರೋ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ; ಎರಡನೇ ಹಂತದ ನಗರಗಳ ಮಾರುಕಟ್ಟೆಗಳೂ ಸಹ ಪ್ರವಾಸೋದ್ಯಮದಲ್ಲಿ ಹೆಚ್ಚು ಸಕ್ರಿಯವಾಗುತ್ತಿದ್ದು, ಕ್ರಿಯೇಟರ್‌ ಗಳೇ ಇದಕ್ಕೆ ಪ್ರಮುಖ ಪ್ರೇರಕರಾಗಿದ್ದಾರೆ.

ಈ ಕುರಿತು ಕ್ಲಿಯರ್‌ ಟ್ರಿಪ್‌ ನ ಮುಖ್ಯ ಮಾರ್ಕೆಟಿಂಗ್ ಮತ್ತು ರೆವಿನ್ಯೂ ಅಧಿಕಾರಿ ಪಲ್ಲವಿ ಸಕ್ಸೇನಾ ಮಾತನಾಡಿ,“ಜೆನ್- ಜೀ ತಲೆಮಾರು ಪ್ರವಾಸದ ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಪ್ರವಾಸದ ಯೋಜನೆ ಮತ್ತು ಪ್ರೇರಣೆ ಈಗ ಸೋಶಿಯಲ್ ಮೀಡಿಯಾ ಫೀಡ್‌ ಗಳಿಂದಲೇ ಆರಂಭವಾಗುತ್ತದೆ ಮತ್ತು ಕ್ರಿಯೇಟರ್‌ ಗಳು ಈ ಬದಲಾವಣೆಯ ಕೇಂದ್ರಬಿಂದುವಾಗಿದ್ದಾರೆ. ಭಾರತದ ಮುಂದಿನ ಹಂತದ ಪ್ರವಾಸೋದ್ಯಮದ ಬೆಳವಣಿಗೆಯು ಸಾಂಪ್ರದಾಯಿಕ ಮಾಧ್ಯಮಗಳಿಗಿಂತ ಕ್ರಿಯೇಟರ್‌ ಗಳು ಹೆಚ್ಚು ಪ್ರಭಾವ ಹೊಂದಿರುವ ಮಾರುಕಟ್ಟೆಗಳು ಮತ್ತು ಗ್ರಾಹಕರಿಂದ ಬರಲಿದೆ. ಕ್ಲಿಯರ್‌ ಟ್ರಿಪ್ ಕ್ರಿಯೇಟರ್ಸ್ ಕ್ಲಬ್ ಆರಂಭವು ಅವರಿಗೆ ತಮ್ಮ ಪ್ರತಿಯೊಂದು ಪೋಸ್ಟ್ ಅನ್ನು ಆದಾಯದ ಮೂಲವಾಗಿ ಮತ್ತು ಪ್ರತಿಯೊಂದು ಬುಕಿಂಗ್ ಅನ್ನು ಮತ್ತೊಂದು ಪ್ರವಾಸದ ಪ್ರೇರಣೆಯಾಗಿ ಪರಿವರ್ತಿಸಲು ಅಗತ್ಯವಿರುವ ವೇದಿಕೆಯನ್ನು ಒದಗಿಸುತ್ತದೆ. ಇದೇ ವ್ಯವಸ್ಥೆಯನ್ನು ನಾವು ನಿರ್ಮಿಸುತ್ತಿದ್ದೇವೆ” ಎಂದರು.

ಗ್ರಾಹಕರ ಪ್ರಕ್ರಿಯೆಯನ್ನು ಸುಲಭಗೊಳಿಸಲು ಇದರಲ್ಲಿ ಕಾಮೆಂಟ್-ಟು-ಡಿಎಂ ಆಟೊಮೇಷನ್ ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ. ವೀಕ್ಷಕರು ಕ್ರಿಯೇಟರ್‌ ನ ಪೋಸ್ಟ್‌ಗೆ ಟ್ರಿಪ್ ಎಂದು ಕಾಮೆಂಟ್ ಮಾಡಿದರೆ, ಅವರು ತಮ್ಮ ಇನ್‌ ಬಾಕ್ಸ್‌ ನಲ್ಲಿ ಮುಂಚಿತವಾಗಿಯೇ ಭರ್ತಿ ಮಾಡಿದ ಬುಕಿಂಗ್ ಲಿಂಕ್ ಮತ್ತು ಕ್ಲಿಯರ್‌ ಟ್ರಿಪ್‌ ನ ವಿಶೇಷ ಕೂಪನ್ ಕೋಡ್ ಅನ್ನು ಸ್ವಯಂಚಾಲಿತವಾಗಿ ಪಡೆಯುತ್ತಾರೆ. ಈ ಕಾರ್ಯಕ್ರಮವು ಸದ್ಯ ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ ನಲ್ಲಿ ದೇಶಾದ್ಯಂತ ಲಭ್ಯವಿದೆ.

ಈ ಕಾರ್ಯಕ್ರಮದ ಆರಂಭಿಕ ಫಲಿತಾಂಶಗಳು ಅತ್ಯಂತ ಆಶಾದಾಯಕವಾಗಿವೆ. ಒಟ್ಟು ಸೃಷ್ಟಿಯಾದ ಕಂಟೆಂಟ್‌ಗಳಲ್ಲಿ ಶೇ. 50 ರಷ್ಟು ಪ್ರಾದೇಶಿಕ ಕ್ರಿಯೇಟರ್‌ ಗಳದ್ದೇ ಆಗಿದ್ದು, ಇದು ವಿವಿಧ ಭೌಗೋಳಿಕ ಪ್ರದೇಶಗಳಲ್ಲಿನ ಸ್ಥಳೀಯ ಜನರನ್ನು ತಲುಪಿರುವುದನ್ನು ಪ್ರತಿಬಿಂಬಿಸುತ್ತದೆ. ಬ್ಯೂಟಿ ಮತ್ತು ಲೈಫ್‌ ಸ್ಟೈಲ್, ಫುಡ್ ಹಾಗೂ ಡೀಲ್ ಹ್ಯಾಕ್ (ಆಫರ್‌ ಗಳು) ಕಂಟೆಂಟ್‌ ಗಳು ನಿರಂತರವಾಗಿ ಶೇ. 5 ರಿಂದ ಶೇ. 6 ರಷ್ಟು ಎಂಗೇಜ್‌ ಮೆಂಟ್ ರೇಟ್ ತಂದುಕೊಡುವ ಮೂಲಕ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿವೆ. ಇದು ಉದ್ಯಮದ ಸರಾಸರಿಗಿಂತ ತೀರಾ ಹೆಚ್ಚಾಗಿದೆ. ದಕ್ಷಿಣದ ರಾಜ್ಯಗಳಿಂದಲೂ ಕ್ರಿಯೇಟರ್‌ ಗಳು ಇದರಲ್ಲಿ ಭಾರಿ ಪ್ರಮಾಣದಲ್ಲಿ ಭಾಗವಹಿಸುತ್ತಿದ್ದು, ಅದರಲ್ಲೂ ವಿಶೇಷವಾಗಿ ತೆಲುಗು ಭಾಷೆಯ ಕಂಟೆಂಟ್‌ ಗಳು ಅತ್ಯಂತ ಸಕ್ರಿಯ ಮತ್ತು ವೇಗವಾಗಿ ಬೆಳೆಯುತ್ತಿರುವ ವಿಭಾಗವಾಗಿ ಹೊರಹೊಮ್ಮಿವೆ.

Previous Post

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಯಶಸ್ವಿ ರೋಬೋಟಿಕ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆ..!

Next Post

ಮಾರಿಷಸ್ ರಾಷ್ಟ್ರಾಧ್ಯಕ್ಷರನ್ನು ಅನುಗ್ರಹಿಸಿದ ಶ್ರೀ ಪುತ್ತಿಗೆ ಶ್ರೀಗಳು

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಮಾರಿಷಸ್ ರಾಷ್ಟ್ರಾಧ್ಯಕ್ಷರನ್ನು ಅನುಗ್ರಹಿಸಿದ ಶ್ರೀ ಪುತ್ತಿಗೆ ಶ್ರೀಗಳು

ಮಾರಿಷಸ್ ರಾಷ್ಟ್ರಾಧ್ಯಕ್ಷರನ್ನು ಅನುಗ್ರಹಿಸಿದ ಶ್ರೀ ಪುತ್ತಿಗೆ ಶ್ರೀಗಳು

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮಾಹೆಯಲ್ಲಿ ಮಣಿಪಾಲ ಸ್ಟಾರ್ಟ್‌ಅಪ್ ಎಕ್ಸ್‌ಪೋ-2026

ಮಾಹೆಯಲ್ಲಿ ಮಣಿಪಾಲ ಸ್ಟಾರ್ಟ್‌ಅಪ್ ಎಕ್ಸ್‌ಪೋ-2026

28/09/2026
ಹಾಲಿಡೇ ಪ್ಯಾಕೇಜ್ ಕ್ಷೇತ್ರಕ್ಕೆ ಕ್ಲಿಯರ್‌ಟ್ರಿಪ್ ಪ್ರವೇಶ: ಮೊದಲ ಬಾರಗಿಗೆ ಪ್ರವಾಸಿಗರೇ ತಮಗೆ ತಕ್ಕಂತೆ ಬದಲಾಯಿಸಿಕೊಳ್ಳಬಹುದಾದ ನೂತನ ಮಾದರಿ ಪರಿಚಯ

ಹಾಲಿಡೇ ಪ್ಯಾಕೇಜ್ ಕ್ಷೇತ್ರಕ್ಕೆ ಕ್ಲಿಯರ್‌ಟ್ರಿಪ್ ಪ್ರವೇಶ: ಮೊದಲ ಬಾರಗಿಗೆ ಪ್ರವಾಸಿಗರೇ ತಮಗೆ ತಕ್ಕಂತೆ ಬದಲಾಯಿಸಿಕೊಳ್ಳಬಹುದಾದ ನೂತನ ಮಾದರಿ ಪರಿಚಯ

28/09/2026
ಹಿರಿಯಡ್ಕ: ಕೊಟ್ಟಿಗೆಯಲ್ಲಿ ವ್ಯಕ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕುಂದಾಪುರ: ಮನೆಯಲ್ಲಿ ನೇಣು ಬಿಗಿದು ಮಹಿಳೆ ಆತ್ಮಹತ್ಯೆ

28/09/2026
ಶೀರೂರು ಮೂಲ ಮಠದಲ್ಲಿ  ಗೋವುಗಳಿಗಾಗಿ ನೂತನ ಗೋಶಾಲೆ ನಿರ್ಮಾಣಕ್ಕೆ ಚಾಲನೆ

ಶೀರೂರು ಮೂಲ ಮಠದಲ್ಲಿ ಗೋವುಗಳಿಗಾಗಿ ನೂತನ ಗೋಶಾಲೆ ನಿರ್ಮಾಣಕ್ಕೆ ಚಾಲನೆ

28/09/2026

Recent News

imunify-bot-check