ಬ್ರಹ್ಮಾವರ:ಶತಮಾನೋತೋತ್ತರ ದಶಕ ಕಂಡ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರ ಸಂಘ ಬ್ರಹ್ಮಾವರ ಇದರ ನೀಲಾವರ ಶಾಖೆಯಲ್ಲಿ ನೂತನವಾಗಿ ಬ್ಯಾಂಕಿಂಗ್ ಸೌಲಭ್ಯವನ್ನು ದಿನಾಂಕ 17-06-2026 ಬುಧವಾರದಿಂದ ಆರಂಭಗೊಳ್ಳಲಿದೆ.
ನೀಲಾವರ ಶಾಖೆಯಲ್ಲಿ ಹಲವಾರು ವರ್ಷಗಳಿಂದ ಪಡಿತರ ವಿತರಣೆ ಸೇವೆ ಮಾತ್ರ ನೀಡುತ್ತಿದ್ದು, ಪ್ರಸ್ತುತ ಬ್ಯಾಂಕಿಂಗ್ ಸೇವೆ ಹಾಗೂ ಸೇಫ್ ಲಾಕರ್ ಸೌಲಭ್ಯವನ್ನು ಒದಗಿಸಲಾಗುವುದು.
ಸಂಸ್ಥೆಯ ಸ್ಥಳೀಯ ಹಿರಿಯ ಸದಸ್ಯರುಗಳಿಂದ ಬೆಳ್ಳಿಗ್ಗೆ 9ಗಂಟೆಗೆ ದೀಪ ಬೆಳಗಿಸುವುದರೊಂದಿಗೆ ಸೇವೆಯನ್ನು ಆರಂಭಗೊಳ್ಳಲಿದೆ.
ಸಂಸ್ಥೆಯ ಎಲ್ಲಾ ಸದಸ್ಯರು ಹಾಗೂ ಗ್ರಾಮಸ್ಥರು ಬ್ಯಾಂಕಿಂಗ್ ಹಾಗೂ ಸೇಫ್ ಲಾಕರ್ ಸೇವೆಯ ಸೌಲಭ್ಯವನ್ನು ಪಡೆಯಬೇಕಾಗಿ ಸಂಸ್ಥೆಯ ಅಧ್ಯಕ್ಷ ರಾಜೇಶ್ ಶೆಟ್ಟಿ ಬಿರ್ತಿಯವರು ತಿಳಿಸಿರುತ್ತಾರೆ.







