Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home मौसम

ಸಭಾ ಫ್ಲಾಟ್ ರೂಫ್ ಬಿಲ್ಡಿಂಗ್ ಸಭಾಂಗಣದಲ್ಲಿ ವಿಶಿಷ್ಟವಾದ ಮಾಟಿ ಕಲಾ ಪ್ರದರ್ಶನ

Dhrishya News by Dhrishya News
04/06/2026
in मौसम
0
ಸಭಾ ಫ್ಲಾಟ್ ರೂಫ್ ಬಿಲ್ಡಿಂಗ್ ಸಭಾಂಗಣದಲ್ಲಿ ವಿಶಿಷ್ಟವಾದ ಮಾಟಿ ಕಲಾ ಪ್ರದರ್ಶನ
0
SHARES
3
VIEWS
Share on FacebookShare on Twitter

ಬೆಂಗಳೂರು: ಕೆಲವು ಅಪರೂಪದ ಕಲಾ ಪ್ರಕಾರಗಳು ಕೇವಲ ಮ್ಯೂಸಿಯಂ ಗೋಡೆಗಳಿಗೆ ಸೀಮಿತವಾಗದೆ, ಜನರ ಮನೆ ಮತ್ತು ಮನಗಳನ್ನು ತಲುಪಬೇಕು ಹಾಗೂ ಆ ಕಲೆಯನ್ನು ಗೌರವಿಸುವ ಕಲಾಪ್ರೇಮಿಗಳ ಕೈಗಳಲ್ಲಿ ಇರಬೇಕಾದವುಗಳಾಗಿವೆ.

*ಟಾಟಾ ಟ್ರಸ್ಟ್ಸ್ ಬೆಂಬಲಿತ ಕದಂ ಇಂಡಿಯಾ ಸಂಸ್ಥೆಯ ಮಹತ್ವದ ಯೋಜನೆಯಾದ ಮಾಟಿ – ದಿ ಕ್ರಾಫ್ಟ್ಸ್ ಸ್ಕೂಲ್* ವತಿಯಿಂದ ಜೂನ್ 5 ಮತ್ತು 6 ರಂದು ಬೆಂಗಳೂರಿನ ಸಭಾ ಫ್ಲಾಟ್ ರೂಫ್ ಬಿಲ್ಡಿಂಗ್ ಸಭಾಂಗಣದಲ್ಲಿ ವಿಶಿಷ್ಟವಾದ ಮಾಟಿ ಕಲಾ ಪ್ರದರ್ಶನ ನಡೆಯಲಿದೆ.

ಈ ಪ್ರದರ್ಶನದಲ್ಲಿ ಬಿಹಾರದ ಹೆಮ್ಮೆಯ ಸಾಂಪ್ರದಾಯಿಕ ಕರಕುಶಲ ಮಧುಬನಿ ಕಲೆ ಹಾಗೂ ಅಲ್ಲಿನ ಸಮಕಾಲೀನ ಕರಕುಶಲ ಶೈಲಿಯನ್ನು ಜಂಟಿಯಾಗಿ ಅನಾವರಣಗೊಳಿಸಲಾಗುತ್ತದೆ. ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಕಡೆಗೆ ಒಲವಿರುವ ಕಲಾಪ್ರೇಮಿಗಳು, ವಸ್ತ್ರವಿನ್ಯಾಸ ತಜ್ಞರು, ಪರಿಸರ ಸ್ನೇಹಿ ಉದ್ಯಮಿಗಳು, ವಾಸ್ತುಶಿಲ್ಪಿಗಳು ಹಾಗೂ ಇಂಟೀರಿಯರ್ ಡಿಸೈನರ್‌ ಗಳನ್ನು ಗಮನದಲ್ಲಿಟ್ಟುಕೊಂಡು ಈ ಪ್ರದರ್ಶನವನ್ನು ವಿನ್ಯಾಸಗೊಳಿಸಲಾಗಿದೆ.

ಈ ಪ್ರದರ್ಶನದ ವಿಶೇಷತೆ ಎಂದರೆ, ಬಿಹಾರದ ಮಧುಬನಿ ಮತ್ತು ದರ್ಭಾಂಗಾ ಜಿಲ್ಲೆಗಳ ಮಾಟಿ ಕಲಾ ಕೇಂದ್ರಗಳಿಂದ ನೇರವಾಗಿ ನಾಲ್ವರು ಮಹಿಳಾ ಕರಕುಶಲ ಕಲಾವಿದೆಯರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಕಲಾಪ್ರೇಮಿಗಳು ಈ ನುರಿತ ಕಲಾವಿದರನ್ನು ಖುದ್ದಾಗಿ ಭೇಟಿ ಮಾಡಿ, ಅವರ ವಿಶಿಷ್ಟ ಕಲಾ ಪ್ರಕ್ರಿಯೆಯನ್ನು ನೇರವಾಗಿ ವೀಕ್ಷಿಸುವ ಅಪರೂಪದ ಅವಕಾಶವನ್ನು ಈ ಪ್ರದರ್ಶನ ಕಲ್ಪಿಸಿಕೊಡಲಿದೆ. ತಲೆಮಾರುಗಳ ದೃಶ್ಯ ವೈಭವ ಹಾಗೂ ಸಾಂಸ್ಕೃತಿಕ ನೆನಪುಗಳನ್ನು ಇಂದಿನ ಆಧುನಿಕ ಜೀವನಶೈಲಿಗೆ ಒಗ್ಗುವಂತೆ ರೂಪಿಸಲಾದ ಕೈಮಗ್ಗದ ಅಪೂರ್ವ ವಸ್ತ್ರ ಸಂಗ್ರಹಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ.

ಕೇವಲ ಕಲಾತ್ಮಕ ವಿನ್ಯಾಸ ಪ್ರದರ್ಶಿಸುವುದಷ್ಟೇ ಈ ಪ್ರದರ್ಶನದ ಉದ್ದೇಶವಲ್ಲ, ಇದರ ಹಿಂದೆ ಪ್ರಚಲಿತ ಜಗತ್ತಿನ ಕಟು ಸತ್ಯ ಮತ್ತು ತುರ್ತು ಕಳಕಳಿಯಿದೆ. ಬಿಹಾರದ ಯಾವ ಭಾಗಗಳಲ್ಲಿ ಹವಾಮಾನ ವೈಪರೀತ್ಯ ಹಾಗೂ ಪರಿಸರ ಏರುಪೇರಿನ ಸವಾಲುಗಳು ಪ್ರತಿವರ್ಷವೂ ಅಲ್ಲಿನ ಸಾಂಪ್ರದಾಯಿಕ ಜೀವನಶೈಲಿಗೆ ಧಕ್ಕೆ ತರುತ್ತಿವೆಯೋ, ಅಂತಹ ಪ್ರದೇಶಗಳಲ್ಲಿ ಮಾಟಿ ಸಂಸ್ಥೆಯು ಕೆಲಸ ಮಾಡುತ್ತಿದೆ. ಈ ಕಲಾತ್ಮಕ ಯೋಜನೆಯು ಗ್ರಾಮೀಣ ಕಲಾವಿದರಿಗೆ ನೇರ ಮಾರುಕಟ್ಟೆ ಸೌಲಭ್ಯವನ್ನು ಒದಗಿಸುವ ಮೂಲಕ ಮತ್ತು ಸ್ವತಂತ್ರ ಸೃಜನಶೀಲ ಉದ್ಯಮಗಳನ್ನು ಪ್ರೋತ್ಸಾಹಿಸುವ ಮೂಲಕ, ಪರಿಸರ ಸವಾಲುಗಳ ನಡುವೆಯೂ ಅವರು ಸುಸ್ಥಿರ ಹಾಗೂ ದೀರ್ಘಕಾಲೀನ ಜೀವನೋಪಾಯವನ್ನು ಕಂಡುಕೊಳ್ಳುವಂತೆ ಬೆನ್ನೆಲುಬಾಗಿ ನಿಂತಿದೆ.

ಕೈಮಗ್ಗ ಮತ್ತು ಕರಕುಶಲ ಕಲೆಯನ್ನು ಆನಂದಿಸಲು, ಅದ್ಭುತ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳಲು ಹಾಗೂ ಬಿಹಾರದ ಕಲಾವಿದರನ್ನು ನೇರವಾಗಿ ಭೇಟಿಯಾಗಿ ಸಂವಾದ ನಡೆಸಲು ಕಲಾಪ್ರೇಮಿಗಳಿಗೆ ಆತ್ಮೀಯ ಆಹ್ವಾನ.

*ಪ್ರದರ್ಶನದ ವಿವರ ಹಾಗೂ ಮುಂಗಡ ಕಾಯ್ದಿರಿಸುವಿಕೆ ಮಾಹಿತಿ:*

*• ದಿನಾಂಕ:* 5- 6 ಜೂನ್ 2026

*• ಸ್ಥಳ:* ಫ್ಲಾಟ್ ರೂಫ್ ಬಿಲ್ಡಿಂಗ್, ಸಭಾ, ಬೆಂಗಳೂರು.

*• ಮಾಹಿತಿ ಮತ್ತು ವಿಚಾರಣೆಗೆ:* info@maaticraftschool.com OR Simran Girish (SGirish@webershandwick.com/ 9820621734)

*• ಇನ್‌ ಸ್ಟಾ ಗ್ರಾಮ್ ಪುಟ:* @maatithecraftschool

Previous Post

ಟಾಟಾ ಇಂಟ್ರಾ V40 ಬಿಡುಗಡೆ: ಪರ್ಯಾಯ ಇಂಧನ ಪಿಕಪ್‌ಗೆ ಹೊಸ ಶಕ್ತಿ..!

Next Post

ಕೆಮ್ಮಣ್ಣಿನಲ್ಲಿ ಬಾವಿಗೆ ಬಿದ್ದ ದಂಪತಿ ರಕ್ಷಣೆ..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಕೆಮ್ಮಣ್ಣಿನಲ್ಲಿ ಬಾವಿಗೆ ಬಿದ್ದ ದಂಪತಿ ರಕ್ಷಣೆ..!

ಕೆಮ್ಮಣ್ಣಿನಲ್ಲಿ ಬಾವಿಗೆ ಬಿದ್ದ ದಂಪತಿ ರಕ್ಷಣೆ..!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಆ. 2 :ಅಂಬಲಪಾಡಿ ದೇವಸ್ಥಾನದಲ್ಲಿ ಭಜನಾ ಪರಿಷತ್ ತಾಲೂಕು ಮಟ್ಟದ ‘ಭಜನೋತ್ಸವ’

ಆ. 2 :ಅಂಬಲಪಾಡಿ ದೇವಸ್ಥಾನದಲ್ಲಿ ಭಜನಾ ಪರಿಷತ್ ತಾಲೂಕು ಮಟ್ಟದ ‘ಭಜನೋತ್ಸವ’

30/07/2026
ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ವತಿಯಿಂದ ವನಮಹೋತ್ಸವ

ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ವತಿಯಿಂದ ವನಮಹೋತ್ಸವ

30/07/2026
ವಿದುಷಿ ಡಾ. ಉಷಾ ಹೆಬ್ಬಾರ್ ಅವರಿಗೆ ಗುರುವಂದನೆ

ವಿದುಷಿ ಡಾ. ಉಷಾ ಹೆಬ್ಬಾರ್ ಅವರಿಗೆ ಗುರುವಂದನೆ

30/07/2026
ಉಡುಪಿ: ಆಗಸ್ಟ್ 29ರಂದು ‘ಮುದ್ದು ಕೃಷ್ಣ ಸ್ಪರ್ಧೆ–2026’ ಆಯೋಜನೆ..!

ಉಡುಪಿ: ಆಗಸ್ಟ್ 29ರಂದು ‘ಮುದ್ದು ಕೃಷ್ಣ ಸ್ಪರ್ಧೆ–2026’ ಆಯೋಜನೆ..!

30/07/2026

Recent News