Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಆನ್‌ಲೈನ್ ಲೋನ್ ಹೆಸರಿನಲ್ಲಿ ₹5.69 ಲಕ್ಷ ವಂಚನೆ..!

Dhrishya News by Dhrishya News
04/06/2026
in ಸುದ್ದಿಗಳು
0
ಆನ್‌ಲೈನ್ ಲೋನ್ ಹೆಸರಿನಲ್ಲಿ ₹5.69 ಲಕ್ಷ ವಂಚನೆ..!

ಸಾಂದರ್ಭಿಕ ಚಿತ್ರ

0
SHARES
18
VIEWS
Share on FacebookShare on Twitter

ಕುಂದಾಪುರ: ಜೂನ್ 04: ಆನ್‌ಲೈನ್ ಲೋನ್ ಹೆಸರಿನಲ್ಲಿ ಭಾರೀ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. 40 ಲಕ್ಷ ರೂಪಾಯಿ ಸಾಲ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಸುಮಾರು 5.69 ಲಕ್ಷ ರೂಪಾಯಿ ಪಡೆದು ಮೋಸ ಮಾಡಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ ತಾಲೂಕಿನ ಕಸಬ ಗ್ರಾಮದ ಕೆಳ ಖಾರ್ವಿಕೇರಿ ನಿವಾಸಿ ಪ್ರಣೀತ್ (38) ಎಂಬವರು ಫೇಸ್‌ಬುಕ್‌ನಲ್ಲಿ PMGDY ಯೋಜನೆಯಡಿ ಸಾಲ ನೀಡುವ ಕುರಿತು ಜಾಹೀರಾತು ಕಂಡಿದ್ದರು. ಜಾಹೀರಾತಿನಲ್ಲಿ ನೀಡಲಾಗಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ, ತನ್ನನ್ನು ಶ್ರೀನಿವಾಸ್ ರಾವ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ 40 ಲಕ್ಷ ರೂಪಾಯಿ ಸಾಲ ಮಂಜೂರು ಮಾಡಿಕೊಡುವುದಾಗಿ ಭರವಸೆ ನೀಡಿದ್ದಾನೆ.

ಸಾಲ ಪಡೆಯಲು ಮೊದಲು ವಿವಿಧ ಶುಲ್ಕ ಮತ್ತು ಪ್ರಕ್ರಿಯೆಗಳ ಹೆಸರಿನಲ್ಲಿ ಹಣ ಪಾವತಿಸಬೇಕೆಂದು ಹೇಳಿದ್ದು, ಅದರಂತೆ ಪ್ರಣೀತ್ ಅವರು ಮಾರ್ಚ್ 11ರಿಂದ ಏಪ್ರಿಲ್ 13ರವರೆಗೆ ಒಟ್ಟು 5 ಲಕ್ಷ 69 ಸಾವಿರ 69 ರೂಪಾಯಿಯನ್ನು ಫೋನ್‌ಪೇ ಮೂಲಕ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ.

ಆದರೆ ನಂತರ ಯಾವುದೇ ಸಾಲ ಮಂಜೂರಾಗದೇ, ಹಣ ವಾಪಸ್ ಕೇಳಿದಾಗ ಮತ್ತಷ್ಟು ಹಣ ಪಾವತಿಸುವಂತೆ ಆರೋಪಿತ ಸೂಚಿಸಿದ್ದಾನೆ ಎನ್ನಲಾಗಿದೆ. ಇದರಿಂದ ತಾನು ಮೋಸ ಹೋಗಿರುವುದಾಗಿ ಅರಿತ ಪ್ರಣೀತ್ ಅವರು ಸಂಬಂಧಿಕರೊಂದಿಗೆ ಚರ್ಚಿಸಿ ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

“ಆನ್‌ಲೈನ್‌ನಲ್ಲಿ ಲೋನ್ ನೀಡುವ ಆಮಿಷಗಳಿಗೆ ಬಲಿಯಾಗದಂತೆ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.”

Previous Post

ಮಂಗಳೂರು-ಮಂತ್ರಾಲಯ ಪ್ರಯಾಣ ಈಗ ಮತ್ತಷ್ಟು ಸುಲಭ; ವಿಶೇಷ ರೈಲು ಸೇವೆ ಆರಂಭ

Next Post

ಟಾಟಾ ಇಂಟ್ರಾ V40 ಬಿಡುಗಡೆ: ಪರ್ಯಾಯ ಇಂಧನ ಪಿಕಪ್‌ಗೆ ಹೊಸ ಶಕ್ತಿ..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಟಾಟಾ ಇಂಟ್ರಾ V40 ಬಿಡುಗಡೆ: ಪರ್ಯಾಯ ಇಂಧನ ಪಿಕಪ್‌ಗೆ ಹೊಸ ಶಕ್ತಿ..!

ಟಾಟಾ ಇಂಟ್ರಾ V40 ಬಿಡುಗಡೆ: ಪರ್ಯಾಯ ಇಂಧನ ಪಿಕಪ್‌ಗೆ ಹೊಸ ಶಕ್ತಿ..!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಆ. 2 :ಅಂಬಲಪಾಡಿ ದೇವಸ್ಥಾನದಲ್ಲಿ ಭಜನಾ ಪರಿಷತ್ ತಾಲೂಕು ಮಟ್ಟದ ‘ಭಜನೋತ್ಸವ’

ಆ. 2 :ಅಂಬಲಪಾಡಿ ದೇವಸ್ಥಾನದಲ್ಲಿ ಭಜನಾ ಪರಿಷತ್ ತಾಲೂಕು ಮಟ್ಟದ ‘ಭಜನೋತ್ಸವ’

30/07/2026
ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ವತಿಯಿಂದ ವನಮಹೋತ್ಸವ

ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ವತಿಯಿಂದ ವನಮಹೋತ್ಸವ

30/07/2026
ವಿದುಷಿ ಡಾ. ಉಷಾ ಹೆಬ್ಬಾರ್ ಅವರಿಗೆ ಗುರುವಂದನೆ

ವಿದುಷಿ ಡಾ. ಉಷಾ ಹೆಬ್ಬಾರ್ ಅವರಿಗೆ ಗುರುವಂದನೆ

30/07/2026
ಉಡುಪಿ: ಆಗಸ್ಟ್ 29ರಂದು ‘ಮುದ್ದು ಕೃಷ್ಣ ಸ್ಪರ್ಧೆ–2026’ ಆಯೋಜನೆ..!

ಉಡುಪಿ: ಆಗಸ್ಟ್ 29ರಂದು ‘ಮುದ್ದು ಕೃಷ್ಣ ಸ್ಪರ್ಧೆ–2026’ ಆಯೋಜನೆ..!

30/07/2026

Recent News