Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ವಿ-ಗಾರ್ಡ್ ಸಂಸ್ಥೆಗೆ ಪ್ರತಿಷ್ಠಿತ ಐಎಂಸಿ ರಾಮಕೃಷ್ಣ ಬಜಾಜ್ ರಾಷ್ಟ್ರೀಯ ಗುಣಮಟ್ಟ ಪ್ರಶಸ್ತಿ 2025ರ ಗರಿ

ಮೊದಲ ಯತ್ನದಲ್ಲೇ ರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿಕೊಂಡ ವಿ-ಗಾರ್ಡ್, ಐದು ಉತ್ಪಾದನಾ ಘಟಕಗಳಲ್ಲಿನ ಅತ್ಯುತ್ತಮ ಉತ್ಪಾದನಾ ಸಾಧನೆಗಾಗಿ ಮನ್ನಣೆ

Dhrishya News by Dhrishya News
22/05/2026
in ಸುದ್ದಿಗಳು
0
ವಿ-ಗಾರ್ಡ್ ಸಂಸ್ಥೆಗೆ ಪ್ರತಿಷ್ಠಿತ ಐಎಂಸಿ ರಾಮಕೃಷ್ಣ ಬಜಾಜ್ ರಾಷ್ಟ್ರೀಯ ಗುಣಮಟ್ಟ ಪ್ರಶಸ್ತಿ 2025ರ ಗರಿ
0
SHARES
5
VIEWS
Share on FacebookShare on Twitter

 

ಮೊದಲ ಯತ್ನದಲ್ಲೇ ರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿಕೊಂಡ 

ಬೆಂಗಳೂರು, ಮೇ 21, 2026: ಭಾರತದ ಮುಂಚೂಣಿಯ ಗ್ರಾಹಕ ಬಳಕೆಯ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಬ್ರಾಂಡ್ ಆದ ವಿ-ಗಾರ್ಡ್ ಇಂಡಸ್ಟ್ರೀಸ್ ಲಿಮಿಟೆಡ್, ಪ್ರತಿಷ್ಠಿತ ಐಎಂಸಿ ರಾಮಕೃಷ್ಣ ಬಜಾಜ್ ರಾಷ್ಟ್ರೀಯ ಗುಣಮಟ್ಟ ಪ್ರಶಸ್ತಿ 2025 ಸಮಾರಂಭದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಕಂಪನಿಯ ಇತಿಹಾಸದಲ್ಲಿ ಇದೊಂದು ಪ್ರಮುಖ ಮೈಲಿಗಲ್ಲಾಗಿದ್ದು, ವಿ-ಗಾರ್ಡ್ ಸಂಸ್ಥೆಯು ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಮೊದಲ ವರ್ಷದಲ್ಲೇ ಈ ರಾಷ್ಟ್ರ ಮಟ್ಟದ ಮನ್ನಣೆಯನ್ನು ತನ್ನದಾಗಿಸಿಕೊಂಡಿದೆ.

 

ಈ ಸಾಧನೆಯಲ್ಲಿ ವಿಶೇಷವಾಗಿ ಗಮನಿಸಬೇಕಾದ ಅಂಶವೆಂದರೆ, ಈ ರಾಷ್ಟ್ರೀಯ ಪ್ರಶಸ್ತಿಯು ಕೇವಲ ಒಂದು ಉತ್ಪಾದನಾ ಘಟಕಕ್ಕೆ ಲಭಿಸಿಲ್ಲ. ಬದಲಿಗೆ, ವಿ-ಗಾರ್ಡ್ ಸಂಸ್ಥೆಯ ಒಟ್ಟಾರೆ ಸಾಂಸ್ಥಿಕ ಉತ್ಪಾದನಾ ಸಾಮರ್ಥ್ಯಕ್ಕೆ ಸಂದ ಗೌರವವಾಗಿದೆ. ಚಾವಡಿ, ಕಾಶಿಪುರ, ಪೆರುಂದುರೈ, ಸಿಕ್ಕಿಂ ಯೂನಿಟ್ 2 ಮತ್ತು ರೂರ್ಕಿಯಲ್ಲಿರುವ ಕಂಪನಿಯ ಐದು ಉತ್ಪಾದನಾ ಘಟಕಗಳ ಜಂಟಿ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

 

ಸಾಂಸ್ಥಿಕ ಶ್ರೇಷ್ಠತೆಯನ್ನು ಅಳೆಯುವಲ್ಲಿ ಐಎಂಸಿ ರಾಮಕೃಷ್ಣ ಬಜಾಜ್ ರಾಷ್ಟ್ರೀಯ ಗುಣಮಟ್ಟ ಪ್ರಶಸ್ತಿಯನ್ನು ಭಾರತದ ಅತ್ಯಂತ ಗೌರವಾನ್ವಿತ ಮಾನದಂಡಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಜಾಗತಿಕವಾಗಿ ಮನ್ನಣೆ ಪಡೆದಿರುವ ಅಮೆರಿಕಾದ ಮಾಲ್ಕಮ್ ಬಾಲ್ಡ್ರಿಜ್ ಮಾದರಿಯನ್ನು ಆಧರಿಸಿದ ಈ ಪ್ರಶಸ್ತಿಯು ಅತ್ಯಂತ ಕಠಿಣವಾದ ಬಹು-ಹಂತದ ಮೌಲ್ಯಮಾಪನ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಇದು ಸಂಸ್ಥೆಯ ನಾಯಕತ್ವ, ಕಾರ್ಯಾಚರಣೆಯ ದಕ್ಷತೆ, ಕಾರ್ಯತಂತ್ರದ ಯೋಜನೆ, ಗ್ರಾಹಕ ಕೇಂದ್ರಿತ ಧೋರಣೆ, ಉದ್ಯೋಗಿಗಳ ತೊಡಗಿಸಿಕೊಳ್ಳುವಿಕೆ ಮತ್ತು ವ್ಯವಹಾರದ ಒಟ್ಟಾರೆ ಕಾರ್ಯಕ್ಷಮತೆಯನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತದೆ. ಈ ಪ್ರಶಸ್ತಿಗಳನ್ನು 1907ರಲ್ಲಿ ಸ್ಥಾಪಿತವಾದ ಐಎಂಸಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಸಂಸ್ಥೆಯು ನಿರ್ವಹಿಸುತ್ತಿದ್ದು, ಇದು ಕಳೆದ ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ.

 

ಈ ಮೌಲ್ಯಮಾಪನ ಪ್ರಕ್ರಿಯೆಯ ಆರಂಭಿಕ ಹಂತದಲ್ಲಿ, ವಿ-ಗಾರ್ಡ್ ಸಂಸ್ಥೆಯ ಉತ್ಪಾದನಾ ಕಾರ್ಯಾಚರಣೆಗಳು ಮತ್ತು ಸಾಂಸ್ಥಿಕ ಕಾರ್ಯಚಟುವಟಿಕೆಗಳನ್ನು ಒಳಗೊಂಡ ವಿವರವಾದ ಕಾರ್ಯಕ್ಷಮತೆಯ ವರದಿಯನ್ನು ಸಲ್ಲಿಸಲಾಗಿತ್ತು. ಇದನ್ನು ಆಧರಿಸಿ, ಮೌಲ್ಯಮಾಪನ ಸಮಿತಿಯು ಕಂಪನಿಯ ಚಾವಡಿ ಉತ್ಪಾದನಾ ಘಟಕದಲ್ಲಿ ಸುದೀರ್ಘವಾದ ಸ್ಥಳ ಪರಿಶೀಲನೆ ಮತ್ತು ಪರಿಶೀಲನಾ ಪ್ರಕ್ರಿಯೆಯನ್ನು ನಡೆಸಿತು. ಪ್ರಶಸ್ತಿ ಸಮಿತಿಯ ಅಂತಿಮ ಪರಿಶೀಲನೆಗೆ ಮುನ್ನ, ಮೌಲ್ಯಮಾಪಕರು ಕಂಪನಿಯ ವಿವಿಧ ಸಾಂಸ್ಥಿಕ ವಿಭಾಗಗಳೊಂದಿಗೆ ಸುದೀರ್ಘ ಸಂವಾದ ನಡೆಸಿ ವರದಿಯನ್ನು ಖಚಿತಪಡಿಸಿಕೊಂಡಿದ್ದರು.

 

*ಈ ಮಹತ್ತರ ಸಾಧನೆಯ ಕುರಿತು ಮಾತನಾಡಿದ ವಿ-ಗಾರ್ಡ್ ಇಂಡಸ್ಟ್ರೀಸ್ ಲಿಮಿಟೆಡ್‌ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮಿಥುನ್ ಚಿತ್ತಿಲಪ್ಪಿಲ್ಲಿ ಅವರು* , “ನಾವು ಭಾಗವಹಿಸಿದ ಮೊದಲ ವರ್ಷದಲ್ಲೇ ಪ್ರತಿಷ್ಠಿತ ಐಎಂಸಿ ರಾಮಕೃಷ್ಣ ಬಜಾಜ್ ರಾಷ್ಟ್ರೀಯ ಗುಣಮಟ್ಟ ಪ್ರಶಸ್ತಿಯನ್ನು ಗೆದ್ದಿರುವುದು ವಿ-ಗಾರ್ಡ್ ಸಂಸ್ಥೆಗೆ ಅತ್ಯಂತ ಹೆಮ್ಮೆಯ ಮೈಲಿಗಲ್ಲಾಗಿದೆ. ಈ ಮನ್ನಣೆಯು ನಮ್ಮ ಇಡೀ ಸಂಸ್ಥೆಯುದ್ದಕ್ಕೂ ಕಾರ್ಯಾಚರಣೆಯ ದಕ್ಷತೆ, ವ್ಯವಸ್ಥಿತ ಪ್ರಕ್ರಿಯೆ ಮತ್ತು ನಿರಂತರ ಸುಧಾರಣೆಯ ಸಂಸ್ಕೃತಿಯನ್ನು ನಿರ್ಮಿಸಲು ನಾವು ಹೊಂದಿರುವ ದೀರ್ಘಕಾಲದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ಒಟ್ಟಾರೆ ಉತ್ಪಾದನಾ ವ್ಯವಸ್ಥೆಯ ಸಾಮರ್ಥ್ಯ ಮತ್ತು ವಿವಿಧ ಘಟಕಗಳು ಹಾಗೂ ಸಾಂಸ್ಥಿಕ ವಿಭಾಗಗಳ ತಂಡಗಳು ಪ್ರದರ್ಶಿಸಿದ ಜಂಟಿ ಬದ್ಧತೆಯನ್ನು ಈ ಪ್ರಶಸ್ತಿ ಗುರುತಿಸಿರುವುದರಿಂದ ಇದು ನಮಗೆ ಸಂದ ಅತ್ಯಂತ ಅರ್ಥಪೂರ್ಣ ಗೌರವವಾಗಿದೆ. ನಾವು ನಮ್ಮ ಉತ್ಪಾದನಾ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುತ್ತಾ, ಏಕೀಕೃತ ಒನ್ ವಿ-ಗಾರ್ಡ್ ಆಪರೇಟಿಂಗ್ ಸಿಸ್ಟಮ್ ಕಡೆಗೆ ಮುನ್ನಡೆಯುತ್ತಿರುವ ಈ ಸಂದರ್ಭದಲ್ಲಿ, ಸುಸ್ಥಿರ ಶ್ರೇಷ್ಠತೆಯು ಕೇವಲ ಸಹಯೋಗ, ಶಿಸ್ತು ಮತ್ತು ಗುಣಮಟ್ಟದ ಮೇಲಿನ ಅವಿರತ ಗಮನದಿಂದ ಮಾತ್ರ ಸಾಧ್ಯ ಎಂಬ ನಮ್ಮ ನಂಬಿಕೆಯನ್ನು ಈ ಸಾಧನೆ ಮತ್ತಷ್ಟು ಗಟ್ಟಿಗೊಳಿಸಿದೆ” ಎಂದು ತಿಳಿಸಿದ್ದಾರೆ.

 

ಈ ರಾಷ್ಟ್ರೀಯ ಮನ್ನಣೆಯ ಯಶಸ್ಸಿನ ಹಿಂದೆ ವಿ-ಗಾರ್ಡ್ ಸಂಸ್ಥೆಯು ಸ್ವತಃ ಅಭಿವೃದ್ಧಿಪಡಿಸಿರುವ ವಿಜಿಎಂಇಎ 2.0 ಕಾರ್ಯಚೌಕಟ್ಟು ಪ್ರಮುಖ ಪಾತ್ರ ವಹಿಸಿದೆ. ಇದು ಜಾಗತಿಕವಾಗಿ ಮನ್ನಣೆ ಪಡೆದ ವ್ಯವಹಾರ ಶ್ರೇಷ್ಠತೆಯ ಮಾದರಿಗಳ ಪ್ರಮುಖ ತತ್ವಗಳನ್ನು ಒಳಗೊಂಡಿರುವುದರ ಜೊತೆಗೆ, ವ್ಯವಸ್ಥಿತ ಪ್ರಕ್ರಿಯೆಗಳನ್ನು ಅತ್ಯುತ್ತಮ ವ್ಯವಹಾರದ ಫಲಿತಾಂಶ ಒದಗಿಸುವಂತೆ ರೂಪಿಸುತ್ತದೆ. ಕಂಪನಿಯ ಉತ್ಪಾದನಾ ಜಾಲದಾದ್ಯಂತ ಗುಣಮಟ್ಟದ ಮಾನದಂಡಗಳನ್ನು ಕಾಯ್ದುಕೊಳ್ಳಲು, ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ಮತ್ತು ನಿರಂತರ ಸುಧಾರಣೆಯನ್ನು ಉತ್ತೇಜಿಸಲು ಈ ಕಾರ್ಯಚೌಕಟ್ಟು ಅತ್ಯಂತ ಮಹತ್ವದ ಕೊಡುಗೆ ನೀಡಿದೆ.

 

ಈ ಉನ್ನತ ಗೌರವವು ವಿ-ಗಾರ್ಡ್ ಸಂಸ್ಥೆಯು ಗುಣಮಟ್ಟ ಆಧಾರಿತ ಆವಿಷ್ಕಾರಗಳು ಮತ್ತು ಬೃಹತ್ ಮಟ್ಟದ ಕಾರ್ಯಾಚರಣೆಯ ದಕ್ಷತೆಯನ್ನು ತಲುಪಿಸುವಲ್ಲಿ ಮುನ್ನೋಟ ಹೊಂದಿರುವ ಭವಿಷ್ಯದ ಸನ್ನದ್ಧ ಸಂಸ್ಥೆಯಾಗಿದೆ ಎಂಬುದನ್ನು ಮತ್ತಷ್ಟು ಸಾಬೀತುಪಡಿಸಿದೆ. ಸುಮಾರು ಐದು ದಶಕಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ಕಂಪನಿಯು, ಸುಸ್ಥಿರ ಬೆಳವಣಿಗೆ ಮತ್ತು ಗ್ರಾಹಕರಿಗೆ ಅತ್ಯುತ್ತಮ ಅನುಭವವನ್ನು ನೀಡಲು ಪೂರಕವಾಗುವಂತೆ ಬಲಿಷ್ಠ ವ್ಯವಸ್ಥೆಗಳು ಹಾಗೂ ಸಾಮರ್ಥ್ಯಗಳನ್ನು ನಿರಂತರವಾಗಿ ನಿರ್ಮಿಸುತ್ತಾ ಸಾಗಿದೆ.

Previous Post

ಗ್ರಾಮೀಣಾಭಿವೃದ್ಧಿಗೆ ಟಾಟಾ ಮೋಟಾರ್ಸ್ ಫೌಂಡೇಶನ್ ಹೊಸ ಭಾಷ್ಯ: ಸಮಗ್ರ ಗ್ರಾಮ ವಿಕಾಸ ಯೋಜನೆ ರಾಷ್ಟ್ರಾದ್ಯಂತ 200 ಹಳ್ಳಿಗಳಿಗೆ ವಿಸ್ತರಣೆ

Next Post

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 22 ಶುಕ್ರವಾರ )

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 22 ಶುಕ್ರವಾರ )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 22 ಶುಕ್ರವಾರ )

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ದಂಪತಿ ವಶಕ್ಕೆ..!

ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ದಂಪತಿ ವಶಕ್ಕೆ..!

22/05/2026
ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಹಲ್ಲೆ..!

ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಹಲ್ಲೆ..!

22/05/2026
ಮರ ಕಡಿಯುವ ವೇಳೆ ಅವಘಡ: ಕಾರ್ಮಿಕನಿಗೆ ಗಂಭೀರ ಗಾಯ

ಮರ ಕಡಿಯುವ ವೇಳೆ ಅವಘಡ: ಕಾರ್ಮಿಕನಿಗೆ ಗಂಭೀರ ಗಾಯ

22/05/2026
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 22 ಶುಕ್ರವಾರ )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 22 ಶುಕ್ರವಾರ )

22/05/2026

Recent News

ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ದಂಪತಿ ವಶಕ್ಕೆ..!

ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ದಂಪತಿ ವಶಕ್ಕೆ..!

22/05/2026
ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಹಲ್ಲೆ..!

ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಹಲ್ಲೆ..!

22/05/2026
ಮರ ಕಡಿಯುವ ವೇಳೆ ಅವಘಡ: ಕಾರ್ಮಿಕನಿಗೆ ಗಂಭೀರ ಗಾಯ

ಮರ ಕಡಿಯುವ ವೇಳೆ ಅವಘಡ: ಕಾರ್ಮಿಕನಿಗೆ ಗಂಭೀರ ಗಾಯ

22/05/2026
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 22 ಶುಕ್ರವಾರ )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 22 ಶುಕ್ರವಾರ )

22/05/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved