ಉಡುಪಿ: ಅಂಬಲಪಾಡಿ ಗ್ರಾಮದ ಅಂಬೇಡ್ಕರ್ ಭವನದ ಹಿಂದಿನ ಕುಂಜಿಗಡ್ಡೆ ರಸ್ತೆಯಲ್ಲಿರುವ ನಿರ್ಮಾಣ ಹಂತದ ಕಟ್ಟಡದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಐವರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ದಿನಾಂಕ 17/05/2026 ರಂದು ರೌಂಡ್ಸ್ ಕರ್ತವ್ಯದಲ್ಲಿದ್ದ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಭರತೇಶ್ ಕಂಕಣವಾಡಿ ಅವರಿಗೆ ಜುಗಾರಿ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದ್ದು, ತಕ್ಷಣ ದಾಳಿ ನಡೆಸಲಾಗಿದೆ.
ದಾಳಿಯ ವೇಳೆ ಜುಗಾರಿ ಆಡುತ್ತಿದ್ದ 1) ಸಿದ್ದಣ್ಣ ರೆಡ್ಡಿ (55), 2) ಅಶೋಕ್ ದೊರೆ (38), 3) ಪ್ರಭು (36), 4) ಶೇಖಪ್ಪ (31) ಹಾಗೂ 5) ಈರಣ್ಣ (24) ಅವರನ್ನು ವಶಕ್ಕೆ ಪಡೆಯಲಾಗಿದೆ.
ಅವರಿಂದ ಆಟಕ್ಕೆ ಬಳಸಲಾಗಿದ್ದ ₹710 ನಗದು, ಟವೆಲ್ ಹಾಗೂ ಇಸ್ಪೀಟು ಎಲೆಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







