Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home मौसम

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 17  ಭಾನುವಾರ )

Dhrishya News by Dhrishya News
17/05/2026
in मौसम
0
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 17  ಭಾನುವಾರ )
0
SHARES
5
VIEWS
Share on FacebookShare on Twitter

ಉಡುಪಿ:ಮೇ 17:ಇಂದಿನ ದಿನವು ದ್ವಾದಶ ರಾಶಿಗಳವರಿಗೂ ವಿಭಿನ್ನ ಫಲಿತಾಂಶಗಳನ್ನು ತರಲಿದೆ. ಗ್ರಹಗಳ ಚಲನೆ ಮತ್ತು ನಕ್ಷತ್ರಗಳ ಪ್ರಭಾವದ ಹಿನ್ನೆಲೆಯಲ್ಲಿ, ಕೆಲವರಿಗೆ ಯಶಸ್ಸಿನ ಸೂಚನೆಗಳು ಕಂಡುಬಂದರೆ, ಇನ್ನೂ ಕೆಲವರಿಗೆ ಎಚ್ಚರಿಕೆ ಅಗತ್ಯವಿದೆ. ನಿಮ್ಮ ರಾಶಿಗೆ ಇಂದು ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ ಮತ್ತು ದಿನವನ್ನು ಉತ್ತಮವಾಗಿ ರೂಪಿಸಿಕೊಳ್ಳಿ.

*01,🐏ಮೇಷರಾಶಿ🐏*
📃, ಈ ರಾಶಿಯವರು ದಿನದಿಂದ ದಿನಕ್ಕೆ ಅಭಿವೃದ್ಧಿಯನ್ನು ಹೊಂದುತ್ತಿರುವ ನಿಮ್ಮನ್ನು ಕಂಡು ಇತರರು ಅಸೂಯೆ ಪಡುವರು. ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿ. ನಿಮ್ಮ ಗುಪ್ತ ವಿಚಾರಗಳ ಬಗ್ಗೆ ಗಮನವಿರಲಿ, ಕುಟುಂಬದ ವಿಚಾರಗಳಲ್ಲಿ ಮಾನಸಿಕ ಹಿಂಸೆ ಹಾಗು ತೊಂದರೆಗಳು ತಲೆದೂರಬಹುದು,
ಗಮನಿಸಿ:- ಇಂದು ನಿಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ,
ಪರಿಹಾರ:-ಕಾಮಾಕ್ಷಿ ದೇವಿಯನ್ನು ಪ್ರಾರ್ಥಿಸಿ,

*02,🐂ವೃಷಭರಾಶಿ🐂*
📃, ಈ ರಾಶಿಯವರು ಇಂದು ಕೇವಲ ಹಗಲುಗನಸು ಕಾಣುವುದನ್ನು ಬಿಡಿ. ನಿಮಗೆ ಮಾಡಲು ಸಾಧ್ಯವಾದುದನ್ನೆ ಆಯ್ಕೆ ಮಾಡಿಕೊಂಡು ಕೆಲಸ ಪೂರೈಸಿ. ಗೆಳೆಯರ ಒತ್ತಾಯದ ಮೇರೆಗೆ ಬಹುಪ್ರಮುಖ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುವುದು, ಗಮನಿಸಿ:- ಇಂದು ನಿಮ್ಮ ಪಾಲುದಾರರು ಅಥವಾ ಸಹೋದ್ಯೋಗಿಗಳ ಕಡೆ ಗಮನವಿರಲಿ,
ಪರಿಹಾರ:-ಕಾಳಿಕಾ ದೇವಿಯ ದರ್ಶನ ಮಾಡಿ,

*03,👥ಮಿಥುನ ರಾಶಿ👥*
📃, ಈ ರಾಶಿಯವರು ಇಂದು ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರಿ. ಬ್ಯಾಂಕಿನಲ್ಲಿ ವ್ಯವಹರಿಸುವಾಗ ಬ್ಯಾಂಕಿಗೆ ಸಂಬಂಧಪಟ್ಟ ದಾಖಲೆಗಳನ್ನು ಸರಿಯಾಗಿಟ್ಟು ಕೊಳ್ಳಿ. ನಿಮ್ಮ ಗಮನವನ್ನು ಬೇರೆಡೆ ಸೆಳೆದು ಹಣ ದೋಚುವವರಿಂದ ಎಚ್ಚರದಿಂದಿರಿ, ಈ ದಿನ ಯಾವುದೇ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವದು ಬೇಡ, ಗಮನಿಸಿ:- ಇಂದು ನಿಮ್ಮ ಕುಟುಂಬದಲ್ಲಿ ಕಲಹ ಸಂಭವ,
ಪರಿಹಾರ:-ಗಣಪತಿಯನ್ನು ಆರಾದಿಸಿ,

*04,🦀ಕಟಕ ರಾಶಿ🦀*
📃, ಈ ರಾಶಿಯವರಿಗೆ ಇಂದು ಸರ್ಕಾರಿ ಕೆಲಸದಲ್ಲಿ ಅನ್ಯರ ಹಸ್ತಕ್ಷೇಪದಿಂದ ತೊಂದರೆ ಎದುರಾಗುವುದು. ಹಾಗಾಗಿ ಯಾರೊಡನೆಯೂ ಗುಟ್ಟು ಬಿಟ್ಟುಕೊಡದಿರಿ. ವಾಹನದಲ್ಲಿ ಸಂಚರಿಸುವಾಗ ಜಾಗ್ರತೆ ಇರಲಿ, ಮಕ್ಕಳ ಅರೋಗ್ಯ ಹಾಗು ಅವರ ಕಡೆ ಗಮನವಿರಿಸಿ,
ಗಮನಿಸಿ:- ಇಂದು ನಿಮ್ಮ ಹಣಕಾಸು ಸ್ಥಿತಿ
ಉತ್ತಮವಾಗಿರುವುದು,
ಪರಿಹಾರ:-ಶ್ರೀ ದುರ್ಗಾದೇವಿಯ ಸ್ತೋತ್ರವನ್ನು ಪಠಿಸಿ,

*05,🦁ಸಿಂಹ ರಾಶಿ🦁*
📃, ಈ ರಾಶಿಯವರು ಇಂದು ಹೆಚ್ಚಿನ ವೇಗದ ಅಥವಾ ನಿರ್ಲಕ್ಷ್ಯದ ವಾಹನ ಚಾಲನೆಯು ಅಪಘಾತವನ್ನು ಉಂಟುಮಾಡುತ್ತದೆ. ಪ್ರಯಾಣದಲ್ಲಿ ರಸ್ತೆ ನಿಯಮಗಳನ್ನು ಪಾಲಿಸಿ ಮತ್ತು ಸಂಗಾತಿ ಮತ್ತು ಕುಟುಂಬದ ಜೊತೆ ವಾದವಿವಾದವನ್ನು ಮಾಡಿಕೊಳ್ಳದಿರಿ, ಭೂ ಸಂಬಂದಿತ ವ್ಯವಹಾರಗಳಲ್ಲಿ ಜಾಗ್ರತೆ ಇರಲಿ,
ಗಮನಿಸಿ:-ಈ ದಿನ ಯಾವುದೇ ವಸ್ತುಗಳನ್ನು ಖರೀದಿಸುವಾಗ ಎಚ್ಚರಿಕೆ ಇರಲಿ,
ಪರಿಹಾರ:- ಶ್ರೀ ಆಂಜನೇಯನ ಪ್ರಾರ್ಥನೆ ಮಾಡಿ,

*06,👩‍🦳ಕನ್ಯಾ ರಾಶಿ👩‍🦳*
📃, ಈ ರಾಶಿಯವರು ಇಂದು ಹಳೆಯ ಕಡತಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ವಿಲೇವಾರಿ ಮಾಡಿ. ಸ್ನೇಹಿತರ ಇಲ್ಲವೆ ಬಂಧುಗಳ ಸಹಕಾರವನ್ನು ಪಡೆಯಿರಿ. ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿಲ್ಲದ ಕಾರಣ ಈ ದಿನ ಹಣವನ್ನು ಮಿತವಾಗಿ ಬಳಸಿ. ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಒಂದು ಶುಭ ಸಮಾಚಾರವನ್ನು ಪಡೆಯುವ ಸಾಧ್ಯತೆ ಇದೆ,
ಗಮನಿಸಿ:- ನಿಮ್ಮ ಮಾತಿನ ಬಗ್ಗೆ ಎಚ್ಚರವಿರಲಿ,
ಪರಿಹಾರ:- ಇಂದು ನಿಮ್ಮ ಗ್ರಾಮ ದೇವತಾ ದರ್ಶನ ಮಾಡಿ,

*07,⚖️ತುಲಾ ರಾಶಿ⚖️*
📃, ಈ ರಾಶಿಯವರಿಗೆ ಪ್ರತಿದಿನದಂತೆ ಈ ದಿನವೂ ಎಲ್ಲಾ ಸರಿಯಾಗಿದೆ ಎಂದುಕೊಳ್ಳತ್ತಿರುವಾಗಲೇ ಕೆಲಸಗಾರರು ಇಲ್ಲವೆ ನಿಮ್ಮ ಕೈಕೆಳಗೆ ಕೆಲಸ ಮಾಡುವವರು ದಿಢೀರನೆ ರಜಾ ಹಾಕುವುದರಿಂದ ಎಲ್ಲಾ ಕೆಲಸವೂ ಒಟ್ಟಿಗೆ ಮೈಮೇಲೆ ಬಂದಂತೆ ಆಗುವುದು. ನಿಮ್ಮ ಮಾತಿನ ಮೇಲೆ ಗಮನವಿರಲಿ, ಗಮನಿಸಿ:-ಈ ದಿನ ಆಹಾರದ ವಿಚಾರದಲ್ಲಿ ಜಾಗ್ರತೆ ಇರಲಿ,
ಪರಿಹಾರ:- ಈಶ್ವರನ ಪ್ರಾರ್ಥನೆ ಮಾಡಿ,

*08,🦂ವೃಶ್ಚಿಕ ರಾಶಿ🦂*
📃, ಈ ರಾಶಿಯವರಿಗೆ ಇಂದು ನಿಮ್ಮ ಕಾರ್ಯಕ್ರಮಗಳ ಸಫಲತೆಗೆ ಅನಿರೀಕ್ಷಿತ ವಲಯದಿಂದ ಭಾರೀ ಸಹಾಯ ದೊರೆಯುವುದು. ಇದರಿಂದ ಮನಸ್ಸಿಗೆ ಆನಂದ ಉಂಟಾಗುವುದು. ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ಗೌರವ ಆದರಗಳು ದೊರೆಯುವುದು,
ಗಮನಿಸಿ:-ಇಂದು ನಿಮ್ಮ ಸ್ವ ಇಚ್ಛೆಯಿಂದ ಈ ದಿನದ ಎಲ್ಲಾ ಕೆಲಸಗಳನ್ನು ಮುಗಿಸಿ,
ಪರಿಹಾರ:-ಶ್ರೀ ದುರ್ಗಾ ದೇವಿಯನ್ನು ಪ್ರಾರ್ಥಿಸಿ,

*09,🏹ಧನಸ್ಸು ರಾಶಿ🏹*
📃, ಈ ರಾಶಿಯವರು ಇಂದು ಸುಮ್ಮನೆ ಒತ್ತಡದಲ್ಲಿರಿಸುವ ಕಾರ್ಯತಂತ್ರವನ್ನು ರೂಪಿಸುವ ಗೆಳೆಯರಿಂದ ದೂರವಿರಿ. ಸಂಗಾತಿಯ ಸಕಾಲಿಕ ಎಚ್ಚರಿಕೆಯಿಂದ ಅಧಿಕ ಲಾಭ ಅಥವಾ ನೆಮ್ಮದಿ ಉಂಟಾಗುವುದು. ಹೊಸ ವ್ಯವಹಾರ ಹಾಗು ಉಳಿತಾಯದ ವಿಚಾರಗಳನ್ನು ಈ ದಿನ ಮುಂದೂಡುವದು ಉತ್ತಮ,
ಗಮನಿಸಿ:- ಈ ದಿನ ಹಣದ ಬಗ್ಗೆ ಜಾಗರೂಕತೆ ವಹಿಸಿ,
ಪರಿಹಾರ:-ಶ್ರೀ ರಾಘವೇಂದ್ರ ಸ್ವಾಮಿಗಳನ್ನು ಸ್ಮರಿಸಿ,

*10,🐊ಮಕರ ರಾಶಿ🐊*
📃, ಈ ರಾಶಿಯವರು ಇಂದು ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿಗಳ ದರ್ಶನಕ್ಕೆ ಕಾಯುವಿರಿ. ಆದರೆ ಗ್ರಹಸ್ಥಿತಿಯು ಕೂಡಾ ನಿರಾಸೆಯನ್ನುಂಟು ಮಾಡುವುದು ಹಾಗಾಗಿ ಪ್ರಮುಖರ ಭೇಟಿಯು ರದ್ದಾಗಲಿದೆ. ನಿಮ್ಮ ವಿರುದ್ಧ ಲಿಂಗದವರಿಂದ ನಿಮಗೆ ಅನುಕೂಲವಾಗುವುದು, ಗಮನಿಸಿ:- ಇಂದು ಪ್ರಯಾಣದಲ್ಲಿ ವಾಹನ ನಡೆಸುವಾಗ ಜಾಗ್ರತೆ ಇರಲಿ,
ಪರಿಹಾರ:-ಶ್ರೀ ಸುಬ್ರಮಣ್ಯ ಸ್ವಾಮಿಯನ್ನು ಪೂಜಿಸಿ,

*11,⚱️ಕುಂಭ ರಾಶಿ⚱️*
📃, ಈ ರಾಶಿಯವರು ಇಂದು ಕಟ್ಟಡ ಮೇಲುಸ್ತುವಾರಿಕೆ ಮಾಡುವವರು ಅಥವಾ ಕಟ್ಟಡ ವಿನ್ಯಾಸಕಾರರಿಗೆ ಉತ್ತಮ ದಿನ. ಬಹು ಪ್ರಮುಖವಾದ ಮತ್ತು ಬೃಹತ್ತಾದ ಕಾರ್ಯ ನಿರ್ವಹಿಸಲು ನಿಮಗೆ ಕರೆ ಬರುವ ಸಾಧ್ಯತೆ ಇರುತ್ತದೆ. ನಿಮ್ಮ ಕಾರ್ಯ ಕ್ಷೇತ್ರದಲ್ಲಿ ನಿಮ್ಮನ್ನು ಎಲ್ಲರು ಗೌರವಿಸುವರು,
ಗಮನಿಸಿ:-ಈ ದಿನ ಎಲ್ಲರ ಜೊತೆ ಸಮಾಧಾನವಾಗಿ ಇರುವುದು ಉತ್ತಮ,
ಪರಿಹಾರ:-ತಾಯಿ ಚಾಮುಂಡಿಯನ್ನು ಪ್ರಾರ್ಥಿಸಿ,

*12,🐬ಮೀನ ರಾಶಿ🐬*
📃, ಈ ರಾಶಿಯವರಿಗೆ ಇಂದು ಕಾಡಿನಲ್ಲಿ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿಕೊಂಡಂತೆ ನಿಮ್ಮ ಪ್ರಯತ್ನಕ್ಕೆ ಭಗವಂತನು ಒಲಿದು ಬರುವನು. ಮನೆ ಬಾಗಿಲಿಗೆ ನಿಮ್ಮ ಕಾರ್ಯಗಳ ಸಫಲತೆಯ ಬಗ್ಗೆ ವಾರ್ತೆ ಬರುವುದು. ದೂರು ಪ್ರಯಾಣ ಅಥವಾ ಪ್ರವಾಸಕ್ಕೆ ಸಂಬಂದಿಸಿದ ಶುಭ ಸುದ್ದಿಯನ್ನು ಕೇಳುವಿರಿ,
ಗಮನಿಸಿ:-ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಿ,
ಪರಿಹಾರ:-ಶಿವ ಪಂಚಾಕ್ಷರಿ ಜಪಿಸಿ

 

ಇವು ಇಂದಿನ ದ್ವಾದಶ ರಾಶಿಗಳ ದಿನಭವಿಷ್ಯ. ಗ್ರಹಗಳ ಪ್ರಭಾವವು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬ ನಂಬಿಕೆಯಲ್ಲಿ, ಈ ಮಾಹಿತಿಯನ್ನು ಮಾರ್ಗದರ್ಶನವಾಗಿ ಪಡೆದುಕೊಳ್ಳಿ. ನಾಳೆಯ ದಿನಭವಿಷ್ಯಕ್ಕಾಗಿ ದ್ರಶ್ಯ ನ್ಯೂಸ್  ವೆಬ್ ಸೈಟ್ ಭೇಟಿ ನೀಡುವುದನ್ನು ಮರೆಯಬೇಡಿ. ಶುಭ ದಿನ! 🌟

ಮೂಲ :ಪ್ರಾಚೀನ ಶಾಸ್ತ್ರಾಸಕ್ತ,ಎಲ್ ವಿವೇಕಾನಂದ ಆಚಾರ್ಯ 

ಮೂಲ :ಪ್ರಾಚೀನ ಶಾಸ್ತ್ರಾಸಕ್ತ,ಎಲ್ ವಿವೇಕಾನಂದ ಆಚಾರ್ಯ
Previous Post

ಮಾಹೆ ಆನ್‌ಲೈನ್ ಶಿಕ್ಷಣದ 3ನೇ ಘಟಿಕೋತ್ಸವ: ಸೀಮಾತೀತ ಶಿಕ್ಷಣದ ಹೊಸ ಅಲೆ, ಭವಿಷ್ಯಕ್ಕೆ ಸಜ್ಜಾದ ವಿದ್ಯಾರ್ಥಿಗಳು

Next Post

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 18 ಸೋಮವಾರ )

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 18 ಸೋಮವಾರ )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 18 ಸೋಮವಾರ )

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಆ. 2 :ಅಂಬಲಪಾಡಿ ದೇವಸ್ಥಾನದಲ್ಲಿ ಭಜನಾ ಪರಿಷತ್ ತಾಲೂಕು ಮಟ್ಟದ ‘ಭಜನೋತ್ಸವ’

ಆ. 2 :ಅಂಬಲಪಾಡಿ ದೇವಸ್ಥಾನದಲ್ಲಿ ಭಜನಾ ಪರಿಷತ್ ತಾಲೂಕು ಮಟ್ಟದ ‘ಭಜನೋತ್ಸವ’

30/07/2026
ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ವತಿಯಿಂದ ವನಮಹೋತ್ಸವ

ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ವತಿಯಿಂದ ವನಮಹೋತ್ಸವ

30/07/2026
ವಿದುಷಿ ಡಾ. ಉಷಾ ಹೆಬ್ಬಾರ್ ಅವರಿಗೆ ಗುರುವಂದನೆ

ವಿದುಷಿ ಡಾ. ಉಷಾ ಹೆಬ್ಬಾರ್ ಅವರಿಗೆ ಗುರುವಂದನೆ

30/07/2026
ಉಡುಪಿ: ಆಗಸ್ಟ್ 29ರಂದು ‘ಮುದ್ದು ಕೃಷ್ಣ ಸ್ಪರ್ಧೆ–2026’ ಆಯೋಜನೆ..!

ಉಡುಪಿ: ಆಗಸ್ಟ್ 29ರಂದು ‘ಮುದ್ದು ಕೃಷ್ಣ ಸ್ಪರ್ಧೆ–2026’ ಆಯೋಜನೆ..!

30/07/2026

Recent News

ಆ. 2 :ಅಂಬಲಪಾಡಿ ದೇವಸ್ಥಾನದಲ್ಲಿ ಭಜನಾ ಪರಿಷತ್ ತಾಲೂಕು ಮಟ್ಟದ ‘ಭಜನೋತ್ಸವ’

ಆ. 2 :ಅಂಬಲಪಾಡಿ ದೇವಸ್ಥಾನದಲ್ಲಿ ಭಜನಾ ಪರಿಷತ್ ತಾಲೂಕು ಮಟ್ಟದ ‘ಭಜನೋತ್ಸವ’

30/07/2026
ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ವತಿಯಿಂದ ವನಮಹೋತ್ಸವ

ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ವತಿಯಿಂದ ವನಮಹೋತ್ಸವ

30/07/2026
ವಿದುಷಿ ಡಾ. ಉಷಾ ಹೆಬ್ಬಾರ್ ಅವರಿಗೆ ಗುರುವಂದನೆ

ವಿದುಷಿ ಡಾ. ಉಷಾ ಹೆಬ್ಬಾರ್ ಅವರಿಗೆ ಗುರುವಂದನೆ

30/07/2026
ಉಡುಪಿ: ಆಗಸ್ಟ್ 29ರಂದು ‘ಮುದ್ದು ಕೃಷ್ಣ ಸ್ಪರ್ಧೆ–2026’ ಆಯೋಜನೆ..!

ಉಡುಪಿ: ಆಗಸ್ಟ್ 29ರಂದು ‘ಮುದ್ದು ಕೃಷ್ಣ ಸ್ಪರ್ಧೆ–2026’ ಆಯೋಜನೆ..!

30/07/2026