Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಅಮೆಜಾನ್ ಡೆಲಿವರಿ ಸಿಬ್ಬಂದಿಗಳಿಗೆ ಭರ್ಜರಿ ಕೊಡುಗೆ: 90,000 ಸಿಬ್ಬಂದಿಗೆ ಉತ್ಕೃಷ್ಟ ಆರೋಗ್ಯ ವಿಮೆ ಸೌಲಭ್ಯ

Dhrishya News by Dhrishya News
12/05/2026
in ಮುಖಪುಟ
0
ಅಮೆಜಾನ್ ಡೆಲಿವರಿ ಸಿಬ್ಬಂದಿಗಳಿಗೆ ಭರ್ಜರಿ ಕೊಡುಗೆ: 90,000 ಸಿಬ್ಬಂದಿಗೆ ಉತ್ಕೃಷ್ಟ ಆರೋಗ್ಯ ವಿಮೆ ಸೌಲಭ್ಯ
0
SHARES
9
VIEWS
Share on FacebookShare on Twitter

ಬೆಂಗಳೂರು, ಮೇ 12, 2026: ಇ-ಕಾಮರ್ಸ್ ದೈತ್ಯ ಅಮೆಜಾನ್ ಇಂಡಿಯಾ ಸಂಸ್ಥೆಯು ತನ್ನ ವಿತರಣಾ ಜಾಲದ ಬೆನ್ನೆಲುಬಾಗಿರುವ ಸುಮಾರು 90,000 ಡೆಲಿವರಿ ಸಿಬ್ಬಂದಿಗಳಿಗೆ ದೊಡ್ಡ ಮಟ್ಟದ ಆರೋಗ್ಯ ಮತ್ತು ವಿಮಾ ಸೌಲಭ್ಯಗಳನ್ನು ಒದಗಿಸುವುದಾಗಿ ಘೋಷಣೆ ಮಾಡಿದೆ. ದೇಶಾದ್ಯಂತ ಇರುವ ಕೊನೆಯ ಹಂತದ ವಿತರಣಾ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಭದ್ರತೆ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಈ ಸೌಲಭ್ಯಗಳು ದಿನನಿತ್ಯದ ವೈದ್ಯಕೀಯ ವೆಚ್ಚಗಳಿಗಾಗಿ ಓಪಿಡಿ ರಕ್ಷಣೆ, ಆಸ್ಪತ್ರೆಗೆ ದಾಖಲಾದಾಗ ಒಳರೋಗಿ ಚಿಕಿತ್ಸೆ ಮತ್ತು ತಾತ್ಕಾಲಿಕ ಅಥವಾ ಕಾಯಂ ಅಂಗವೈಕಲ್ಯಕ್ಕೆ ಪರಿಹಾರವನ್ನು ಒಳಗೊಂಡಿವೆ. ಇದು ತಕ್ಷಣದ ವೈದ್ಯಕೀಯ ಅಗತ್ಯಗಳು ಮತ್ತು ಗಾಯದಿಂದ ಉಂಟಾಗುವ ಆದಾಯದ ನಷ್ಟ ಎರಡನ್ನೂ ಭರಿಸುವುದನ್ನು ಖಚಿತಪಡಿಸುತ್ತದೆ. ಹೊಸ ಯೋಜನೆಯಡಿ, ವೈದ್ಯಕೀಯ ವಿಮೆ ಮೊತ್ತವನ್ನು ₹1.5 ಲಕ್ಷಕ್ಕೆ ಏರಿಸಲಾಗಿದೆ. ಇದರೊಂದಿಗೆ, ದಿನನಿತ್ಯದ ಸಣ್ಣಪುಟ್ಟ ಕಾಯಿಲೆಗಳ ತಪಾಸಣೆಗಾಗಿ (ಓಪಿಡಿ) ₹10,000 ವರೆಗಿನ ವೆಚ್ಚವನ್ನು ಕಂಪನಿಯೇ ಭರಿಸಲಿದೆ. ಕೆಲಸದ ವೇಳೆ ಸಂಭವಿಸಬಹುದಾದ ಅಪಘಾತಗಳ ಸಂದರ್ಭದಲ್ಲಿ ಭದ್ರತೆ ನೀಡಲು ಗ್ರೂಪ್ ಪರ್ಸನಲ್ ಆಕ್ಸಿಡೆಂಟ್ ವಿಮಾ ಮೊತ್ತವನ್ನು ₹10 ಲಕ್ಷಕ್ಕೆ ವಿಸ್ತರಿಸಲಾಗಿದೆ.

ಈ ಕ್ಷೇಮ ಸೌಲಭ್ಯಗಳು ಡೆಲಿವರಿ ಸಿಬ್ಬಂದಿ ಮತ್ತು ವರ್ಷಕ್ಕೆ ಕುಟುಂಬದ ಗರಿಷ್ಠ ಮೂವರು ಸದಸ್ಯರನ್ನು ಒಳಗೊಳ್ಳುತ್ತವೆ. ಇದರಲ್ಲಿ ಅನಿಯಮಿತ ಬಹುಭಾಷಾ ವರ್ಚುವಲ್ ವೈದ್ಯಕೀಯ ಸಮಾಲೋಚನೆ ಮತ್ತು ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಎರಡು ಉಚಿತ ಓಪಿಡಿ ಭೇಟಿಗಳು ಸೇರಿವೆ. ಹೆಚ್ಚುವರಿ ಬೆಂಬಲವಾಗಿ ರೋಗನಿರ್ಣಯ, ಫಾರ್ಮಸಿ, ಹಲ್ಲು ಮತ್ತು ಕಣ್ಣಿನ ಆರೈಕೆಯ ಮೇಲೆ ರಿಯಾಯಿತಿಗಳನ್ನು ನೀಡಲಾಗುವುದು, ಜೊತೆಗೆ ತಡೆಗಟ್ಟುವ ಆರೋಗ್ಯ ಮತ್ತು ಫಿಟ್‌ ನೆಸ್ ಅನ್ನು ಪ್ರೋತ್ಸಾಹಿಸುವ ಸಾಧನಗಳನ್ನು ಒದಗಿಸಲಾಗುವುದು.

ಅಮೆಜಾನ್ ಇಂಡಿಯಾವು ಥರ್ಡ್ ಪಾರ್ಟಿ ವಿಮಾ ಸಂಸ್ಥೆಯ ಸಹಯೋಗದೊಂದಿಗೆ ದೇಶಾದ್ಯಂತ ಆರೋಗ್ಯ ಶಿಬಿರಗಳನ್ನು ಆಯೋಜಿಸಿದ್ದು, ಹತ್ತಾರು ಸಾವಿರ ವಿತರಣಾ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣೆ ಸೌಲಭ್ಯವನ್ನು ಒದಗಿಸಿದೆ. ಈ ವೈದ್ಯಕೀಯ ಶಿಬಿರಗಳು ಕಣ್ಣಿನ ಪರೀಕ್ಷೆ, ದಂತ ತಪಾಸಣೆ, ಬಿಎಂಐ ಮೌಲ್ಯಮಾಪನ ಮತ್ತು ವೈದ್ಯರ ಸಮಾಲೋಚನೆಯಂತಹ ಅತ್ಯಗತ್ಯ ಆರೋಗ್ಯ ಸೇವೆಗಳನ್ನು ನೀಡುತ್ತವೆ. ಭಾರತದಾದ್ಯಂತ ಅಮೆಜಾನ್‌ ನ ಲಾಸ್ಟ್- ಮೈಲ್ ಡೆಲಿವರಿ ಸ್ಟೇಷನ್‌ ಗಳಲ್ಲಿ ಸ್ಥಾಪಿಸಲಾದ ಯಾವುದೇ ಶಿಬಿರಗಳಲ್ಲಿ ಸರ್ಕಾರಿ ಗುರುತಿನ ಚೀಟಿಯನ್ನು ತೋರಿಸುವ ಮೂಲಕ ವಿತರಣಾ ಸಿಬ್ಬಂದಿಗಳು ಈ ಸೇವೆಗಳನ್ನು ಪಡೆಯಬಹುದಾಗಿದೆ.

ಅಮೆಜಾನ್ ಇತ್ತೀಚೆಗೆ ತನ್ನ ಡೆಲಿವರಿ ಸಿಬ್ಬಂದಿಗಳ ಸುರಕ್ಷತೆ, ಆರೋಗ್ಯ ಮತ್ತು ಆರ್ಥಿಕ ಕ್ಷೇಮವನ್ನು ಮತ್ತಷ್ಟು ಬಲಪಡಿಸಲು ಸುಮಾರು ₹2,800 ಕೋಟಿ (ಅಂದಾಜು 300 ಮಿಲಿಯನ್ ಯುಎಸ್ ಡಾಲರ್) ಹೂಡಿಕೆ ಮಾಡುವುದಾಗಿ ಘೋಷಿಸಿದ್ದು, ಅದರ ಭಾಗವಾಗಿ ಈ ಯೋಜನೆ ರೂಪಿಸಲಾಗಿದೆ. ಇದರೊಂದಿಗೆ ದೇಶದ ಅತ್ಯಂತ ಸುರಕ್ಷಿತ, ವೇಗವಾದ ಮತ್ತು ವಿಶ್ವಾಸಾರ್ಹ ಲಾಜಿಸ್ಟಿಕ್ಸ್ ಜಾಲಗಳಲ್ಲಿ ಒಂದನ್ನು ರೂಪಿಸುವುದನ್ನು ಮುಂದುವರಿಸಿದೆ.

*ಈ ಕುರಿತು ಅಮೆಜಾನ್ ಇಂಡಿಯಾದ ಕಾರ್ಯಾಚರಣೆ ವಿಭಾಗದ ನಿರ್ದೇಶಕರಾದ ಸಲೀಂ ಮೆಮನ್ ಅವರು ಮಾತನಾಡಿ*, “ಭಾರತದಾದ್ಯಂತ ನಮ್ಮ ಕಾರ್ಯಾಚರಣಾ ಜಾಲ, ಮೂಲಸೌಕರ್ಯ ಮತ್ತು ಅದ್ಭುತ ಕಾರ್ಯಪಡೆಯ ಮೇಲೆ ನಾವು ಹೂಡಿಕೆ ಮಾಡುವುದನ್ನು ಮುಂದುವರಿಸುತ್ತಿದ್ದು, ನಮ್ಮ ವಿತರಣಾ ಸಿಬ್ಬಂದಿಗಳ ಸುರಕ್ಷತೆ ಮತ್ತು ಯೋಗಕ್ಷೇಮ ನಮಗೆ ಮೊದಲ ಆದ್ಯತೆಯಾಗಿದೆ. ಹೆಚ್ಚು ಸಮಗ್ರವಾದ ಬೆಂಬಲವನ್ನು ನೀಡಲು ನಾವು ಓಪಿಡಿ, ಆಸ್ಪತ್ರೆ ದಾಖಲಾತಿ ಮತ್ತು ಅಪಘಾತ ಪ್ರಯೋಜನಗಳಾದ್ಯಂತ ವಿಮಾ ರಕ್ಷಣೆಯನ್ನು ಒದಗಿಸುತ್ತಿದ್ದೇವೆ. ಜೊತೆಗೆ ಉಚಿತ ತಪಾಸಣೆ ಮತ್ತು ತಡೆಗಟ್ಟುವ ಆರೈಕೆಯನ್ನು ನೀಡುವ ರಾಷ್ಟ್ರವ್ಯಾಪಿ ಆರೋಗ್ಯ ಶಿಬಿರಗಳನ್ನು ಸಹ ಜಾರಿಗೆ ತರುತ್ತಿದ್ದೇವೆ. ನಮ್ಮ ಪಾಲುದಾರರ ಆರೋಗ್ಯವನ್ನು ಮತ್ತಷ್ಟು ಬಲಪಡಿಸಲು ಮತ್ತು ದೇಶಾದ್ಯಂತ ನಮ್ಮ ಕಾರ್ಯಾಚರಣೆಯ ವ್ಯವಸ್ಥೆಯನ್ನು ವಿಸ್ತರಿಸಲು ನಾವು ಇತ್ತೀಚೆಗೆ ಘೋಷಿಸಿದ ₹2,800 ಕೋಟಿ ಹೂಡಿಕೆಯ ಭಾಗವಾಗಿ ಈ ಯೋಜನೆಗಳು ಮೂಡಿಬಂದಿವೆ” ಎಂದು ತಿಳಿಸಿದರು.

 

 

 

 

 

ಆರೋಗ್ಯ ಮತ್ತು ಸುರಕ್ಷತೆಯ ಮೇಲಿನ ತನ್ನ ವಿಶಾಲ ದೃಷ್ಟಿಕೋನದ ಭಾಗವಾಗಿ, ಅಮೆಜಾನ್ ತನ್ನ ಕಾರ್ಯಾಚರಣಾ ಕಾರ್ಯಪಡೆಗಾಗಿ ಉದ್ದೇಶಿತ ಯೋಜನೆಗಳಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಿದೆ. ಈ ವರ್ಷದ ಮಾರ್ಚ್‌ ನಲ್ಲಿ ಆರಂಭವಾದ ವೈದ್ಯಕೀಯ ಆರೋಗ್ಯ ಶಿಬಿರಗಳನ್ನು ಈಗಾಗಲೇ ಆರು ನಗರಗಳ ವಿತರಣಾ ಕೇಂದ್ರಗಳಲ್ಲಿ ನಡೆಸಲಾಗಿದ್ದು, ಮೆಟ್ರೋ ಮತ್ತು ಎರಡನೇ ಹಂತದ ನಗರಗಳಲ್ಲಿಯೂ ಇವು ಮುಂದುವರಿಯಲಿವೆ. ಈ ಶಿಬಿರಗಳು ವಿತರಣಾ ಸಿಬ್ಬಂದಿಗಳ ಆರೋಗ್ಯ ತಪಾಸಣೆ ಮತ್ತು ವಿಶೇಷವಾಗಿ ಬೇಸಿಗೆಯ ತಿಂಗಳುಗಳಲ್ಲಿ ಉಂಟಾಗುವ ಶಾಖದ ಅಪಾಯವನ್ನು ಪತ್ತೆಹಚ್ಚುವತ್ತ ಗಮನಹರಿಸುತ್ತವೆ. ವಿಶೇಷವಾಗಿ ಆರೋಗ್ಯವಂತ ಕಾರ್ಯಪಡೆಯನ್ನು ರೂಪಿಸಲು ಈ ಯೋಜನೆಗಳು ಸಹಾಯ ಮಾಡುತ್ತದೆ. ಇದರ ಜೊತೆಗೆ, ಆರೋಗ್ಯ ಮತ್ತು ವಿಮಾ ಸೌಲಭ್ಯಗಳನ್ನು ವಿತರಣಾ ಸಿಬ್ಬಂದಿಗಳಿಗೆ ಆರೋಗ್ಯ ರಕ್ಷಣೆ ಮತ್ತು ಆರ್ಥಿಕ ರಕ್ಷಣೆ ಎರಡನ್ನೂ ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ.

*ಅಮೆಜಾನ್ ಇಂಡಿಯಾ ತನ್ನ ಡೆಲಿವರಿ ಸಿಬ್ಬಂದಿಗಳ ಕ್ಷೇಮ ಕಾಪಾಡಲು ಹೇಗೆ ನೆರವಾಗುತ್ತದೆ ಎಂಬ ವಿವರಗಳು ಇಲ್ಲಿವೆ:*

*ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಮಹತ್ವದ ಹೂಡಿಕೆ:* ಅಮೆಜಾನ್ ಇಂಡಿಯಾ ಇತ್ತೀಚೆಗೆ ತನ್ನ ಸಿಬ್ಬಂದಿಗಳ ಸುರಕ್ಷತೆ, ಆರೋಗ್ಯ ಮತ್ತು ಆರ್ಥಿಕ ಕ್ಷೇಮ ಕ್ರಮಗಳನ್ನು ಮತ್ತಷ್ಟು ಬಲಪಡಿಸಲು ಸುಮಾರು ₹2,800 ಕೋಟಿ (ಅಂದಾಜು 300 ಮಿಲಿಯನ್ ಯುಎಸ್ ಡಾಲರ್) ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಇದರೊಂದಿಗೆ ದೇಶದ ಅತ್ಯಂತ ಸುರಕ್ಷಿತ, ವೇಗವಾದ ಮತ್ತು ವಿಶ್ವಾಸಾರ್ಹ ಲಾಜಿಸ್ಟಿಕ್ಸ್ ಜಾಲವನ್ನು ರೂಪಿಸುತ್ತಿದೆ. ಈ ಹೂಡಿಕೆಯು 2030ರ ವೇಳೆಗೆ ಭಾರತದಲ್ಲಿ 35 ಬಿಲಿಯನ್ ಡಾಲರ್‌ ಗಿಂತಲೂ ಹೆಚ್ಚು ಹೂಡಿಕೆ ಮಾಡುವ ಕಂಪನಿಯ ಬೃಹತ್ ಬದ್ಧತೆಯ ಭಾಗವಾಗಿದೆ. ಇದು ವ್ಯವಹಾರ ವಿಸ್ತರಣೆಯ ಜೊತೆಗೆ ಮೂರು ಆಯಕಟ್ಟಿನ ಸ್ತಂಭಗಳ ಮೇಲೆ ಗಮನಹರಿಸುತ್ತದೆ, ಅದೇನೆಂದರೆ ಎಐ-ಚಾಲಿತ ಡಿಜಿಟಲೀಕರಣ, ರಫ್ತು ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿ. ಭಾರತದಾದ್ಯಂತ ಗ್ರಾಹಕರಿಗೆ ನಿಮಿಷಗಳಲ್ಲಿ, ಗಂಟೆಗಳಲ್ಲಿ ಮತ್ತು ದಿನಗಳಲ್ಲಿ ಸೇವೆ ನೀಡುವುದನ್ನು ಮುಂದುವರಿಸಲು ಅಮೆಜಾನ್ ತನ್ನ ಪ್ರಮುಖ ವ್ಯವಹಾರ ಮತ್ತು ಕ್ವಿಕ್ ಕಾಮರ್ಸ್ ವ್ಯಾಪ್ತಿಯನ್ನು ವಿಸ್ತರಿಸುವುದನ್ನು ಮುಂದುವರಿಸಲಿದೆ.

*ಪ್ರಾಜೆಕ್ಟ್ ಆಶ್ರಯ್*: ಉದ್ಯಮದಲ್ಲೇ ಮೊದಲ ಬಾರಿಗೆ ಕೈಗೊಳ್ಳಲಾದ ಈ ಯೋಜನೆ ಅಡಿಯಲ್ಲಿ, ಅತಿ ಹೆಚ್ಚು ಜನಸಂದಣಿ ಇರುವ ಸ್ಥಳಗಳಲ್ಲಿ ವಿತರಣಾ ಸಿಬ್ಬಂದಿಗಳಿಗಾಗಿ ವಿಶೇಷ ವಿಶ್ರಾಂತಿ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಈ ಕೇಂದ್ರಗಳು ಯಾವುದೇ ಕಂಪನಿಯಲ್ಲಿ ಕೆಲಸ ಮಾಡುವ ವಿತರಣಾ ಸಿಬ್ಬಂದಿಗಾದರೂ ಉಚಿತವಾಗಿ ಲಭ್ಯವಿರುತ್ತವೆ. ಈ ವಿಶ್ರಾಂತಿ ಕೇಂದ್ರಗಳಲ್ಲಿ ಹವಾನಿಯಂತ್ರಿತ ಆಸನ ವ್ಯವಸ್ಥೆ, ಕುಡಿಯುವ ನೀರು, ಎಲೆಕ್ಟ್ರೋಲೈಟ್‌ ಗಳು, ಶೌಚಾಲಯಗಳು, ಚಾರ್ಜಿಂಗ್ ಪಾಯಿಂಟ್‌ ಗಳು ಮತ್ತು ಪ್ರಥಮ ಚಿಕಿತ್ಸಾ ಕಿಟ್‌ ಗಳ ಸೌಲಭ್ಯ ಲಭ್ಯವಿದೆ. ಅಮೆಜಾನ್ ಕಳೆದ ವಾರವಷ್ಟೇ ತನ್ನ ಆಶ್ರಯ್ ಕೇಂದ್ರಗಳ ಜಾಲವನ್ನು 2026ರ ವೇಳೆಗೆ 250ಕ್ಕೆ ವಿಸ್ತರಿಸುವುದಾಗಿ ಘೋಷಿಸಿದೆ (ಪ್ರಸ್ತುತ 100 ಕೇಂದ್ರಗಳಿವೆ). ಈ ವಿಸ್ತರಣೆಯ ಭಾಗವಾಗಿ, ಕಂಪನಿಯು ಮೇ ಅಂತ್ಯದ ವೇಳೆಗೆ 50 ಹೊಸ ಕೇಂದ್ರಗಳನ್ನು ತೆರೆಯಲು ಯೋಜಿಸಿದೆ.

*ಆಂಬ್ಯುಲೆನ್ಸ್ ಸೇವೆಗಳು, ತುರ್ತು ಬೆಂಬಲ ಮತ್ತು ಪಾಲುದಾರರ ಸುರಕ್ಷತೆ:* ಅಮೆಜಾನ್ ಇಂಡಿಯಾವು ವಿತರಣಾ ಸಿಬ್ಬಂದಿಗಳಿಗೆ 24/7 ತುರ್ತು ಸುರಕ್ಷತಾ ನೆರವನ್ನು ನೀಡುತ್ತದೆ. ಇದರಲ್ಲಿ ಡಯಲ್ 4242 ಸಹಯೋಗದೊಂದಿಗೆ 730ಕ್ಕೂ ಹೆಚ್ಚು ನಗರಗಳಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆಗಳು (ಪ್ರಾಥಮಿಕ ಮತ್ತು ಸುಧಾರಿತ ಜೀವ ರಕ್ಷಣಾ ವ್ಯವಸ್ಥೆಯೊಂದಿಗೆ), ಮೀಸಲಾದ ಸಹಾಯವಾಣಿಗಳು ಮತ್ತು ತುರ್ತು ನೆರವು ಸೇರಿವೆ. ಇದರ ಜೊತೆಗೆ ಮುನ್ನೆಚ್ಚರಿಕೆಯ ಆರೋಗ್ಯ ಅಭಿಯಾನಗಳು, ಕಡ್ಡಾಯ ವಾಹನ ತಪಾಸಣೆ ಮತ್ತು ನೈಜ-ಸಮಯದ ಹವಾಮಾನ ಮುನ್ಸೂಚನೆಗಳನ್ನು ನೀಡಲಾಗುತ್ತದೆ. ಇದು ಮಳೆಗಾಲದಲ್ಲಿ ಸುರಕ್ಷಿತ ಚಾಲನಾ ತರಬೇತಿ ಮತ್ತು ವಿಪರೀತ ಶಾಖದ ಸಮಯದಲ್ಲಿ ಹೆಚ್ಚಿನ ವಿಶ್ರಾಂತಿ ಹೊಂದಲು ಸಹಕಾರಿಯಾಗಿದೆ.

*ವಿತರಣಾ ಸಿಬ್ಬಂದಿ ಮತ್ತು ಚಾಲಕರಿಗೆ ರಸ್ತೆ ಸುರಕ್ಷತೆ ತರಬೇತಿ:* ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸದ ಅಂಗವಾಗಿ, ಅಮೆಜಾನ್ ಈ ವರ್ಷದ ಆರಂಭದಲ್ಲಿ ದೇಶಾದ್ಯಂತ ರಸ್ತೆ ಸುರಕ್ಷತಾ ಜಾಗೃತಿ ಮತ್ತು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಯೋಜನೆಯು ತನ್ನ ಲಾಸ್ಟ್- ಮೈಲ್ (ಕೊನೆಯ ಹಂತದ) ಮತ್ತು ಮಿಡಲ್-ಮೈಲ್ (ಮಧ್ಯಮ ಹಂತದ) ವಿತರಣಾ ಕಾರ್ಯಾಚರಣೆಗಳಾದ್ಯಂತ ಲಕ್ಷಾಂತರ ಡೆಲಿವರಿ ಸಿಬ್ಬಂದಿಗಳು, ಪಾಲುದಾರರು ಮತ್ತು ಟ್ರಕ್ ಚಾಲಕರಿಗೆ ಜಾಗೃತಿ ಮೂಡಿಸಿದೆ. ಕಡ್ಡಾಯ ಆನ್ ಗ್ರೌಂಡ್ ತರಬೇತಿ ಮತ್ತು ಸಂವಾದಾತ್ಮಕ ಕಲಿಕಾ ಅವಧಿಗಳ ಮೂಲಕ ಈ ಕಾರ್ಯಕ್ರಮವು ಸುರಕ್ಷಿತ ಚಾಲನಾ ಅಭ್ಯಾಸಗಳನ್ನು ಹೊಂದಲು ಪ್ರೇರೇಪಿಸಿತು. ದೈನಂದಿನ ರಸ್ತೆ ಸುರಕ್ಷತೆಯ ಪ್ರಮುಖ ಅಂಶಗಳಾದ ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸುವುದು, ವೇಗದ ನಿರ್ವಹಣೆ, ಗಮನ ವಿಚಲಿತವಾಗದಂತೆ ತಡೆಯುವುದು, ತುರ್ತು ಸನ್ನದ್ಧತೆ ಮತ್ತು ವಾಹನವನ್ನು ಸುರಕ್ಷಿತವಾಗಿ ನಿರ್ವಹಿಸುವುದರ ಮೇಲೆ ಈ ಕಾರ್ಯಕ್ರಮವು ಗಮನಹರಿಸಿದೆ.

*ಪ್ರತಿಧಿ ವಿದ್ಯಾರ್ಥಿವೇತನ:* ಪ್ರತಿಧಿ ಅಮೆಜಾನ್ ಇಂಡಿಯಾದ ಪ್ರಮುಖ ವಿದ್ಯಾರ್ಥಿವೇತನ ಕಾರ್ಯಕ್ರಮವಾಗಿದ್ದು, ವಿತರಣಾ ಸಿಬ್ಬಂದಿಗಳು ಮತ್ತು ಸಹವರ್ತಿಗಳ ಮಕ್ಕಳಿಗೆ ಶೈಕ್ಷಣಿಕ ಅವಕಾಶಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡುವ ಮೂಲಕ, ಪ್ರತಿಧಿಯು ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ವ್ಯಾಸಂಗ ಮಾಡಲು ಸಹಾಯ ಮಾಡುತ್ತದೆ. ಆರ್ಥಿಕ ಅಡೆತಡೆಗಳನ್ನು ನಿವಾರಿಸಿ ಹೊಸ ಅವಕಾಶಗಳತ್ತ ದಾರಿ ಮಾಡಿಕೊಡುವ ಮೂಲಕ, ಅಮೆಜಾನ್ ಮುಂದಿನ ಪೀಳಿಗೆಯ ಪ್ರತಿಭೆಗಳ ಮೇಲೆ ಹೂಡಿಕೆ ಮಾಡುತ್ತಿದೆ. ಇದು ಮುಂಚೂಣಿಯ ವಿತರಣಾ ಸಿಬ್ಬಂದಿಗಳ ಸಮರ್ಪಣಾ ಮನೋಭಾವವನ್ನು ಗೌರವಿಸುವ ಮತ್ತು ಸಮುದಾಯದ ಏಳಿಗೆಗೆ ಕಂಪನಿ ಹೊಂದಿರುವ ದೀರ್ಘಕಾಲದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಒಳಗೊಳ್ಳುವಿಕೆಯ ನೀತಿಗಳು: ಅಮೆಜಾನ್ ತನ್ನ ಫುಲ್‌ ಫಿಲ್‌ ಮೆಂಟ್ ಕೇಂದ್ರಗಳಲ್ಲಿ ಮುಟ್ಟಿನ ರಜೆ, ಸ್ಥಳದಲ್ಲೇ ವೈದ್ಯಕೀಯ ಮತ್ತು ವಿಶ್ರಾಂತಿ ಸೌಲಭ್ಯಗಳು ಹಾಗೂ ಸ್ಯಾನಿಟರಿ ಪ್ಯಾಡ್ ವಿತರಣಾ ಯಂತ್ರಗಳನ್ನು ಒದಗಿಸುವ ಮೂಲಕ ಮಹಿಳೆಯರ ಆರೋಗ್ಯಕ್ಕೆ ಗೌರವ ನೀಡುತ್ತಿದೆ ಮತ್ತು ಕಾಳಜಿಯನ್ನು ವಹಿಸುತ್ತಿದೆ. ಕೆಲಸ ಮಾಡುವ ತಾಯಂದಿರಿಗಾಗಿ ಡೇ-ಕೇರ್ (ಶಿಶುಪಾಲನಾ) ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಇದು ಅವರು ಆತ್ಮವಿಶ್ವಾಸ ಮತ್ತು ಸಮತೋಲನದೊಂದಿಗೆ ಕೆಲಸ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಅಮೆಜಾನ್ ಉದ್ಯೋಗಿಗಳಿಗೆ ಕೌಶಲ್ಯ ವೃದ್ಧಿಯ ಅವಕಾಶಗಳನ್ನು ನೀಡುತ್ತಿದ್ದು, ಅವರು ತಮ್ಮ ಪ್ರಸ್ತುತ ಕೆಲಸವನ್ನು ಲೆಕ್ಕಿಸದೆ, ತಮ್ಮ ಆಸಕ್ತಿಗಳಿಗೆ ಅನುಗುಣವಾಗಿ ಕಂಪನಿಯ ಒಳಗಿನ ಇತರ ಉನ್ನತ ಹುದ್ದೆಗಳನ್ನು ಪಡೆಯಲು ಸಬಲೀಕರಣಗೊಳಿಸುತ್ತಿದೆ.

Previous Post

ದೇಶದ ಆರ್ಥಿಕ ಸುರಕ್ಷತೆಗಾಗಿ ಪ್ರಧಾನಿಯವರ ದೂರದೃಷ್ಟಿಯ ರಾಷ್ಟ್ರೀಯ ಕರೆ- ಶಶಾಂಕ್ ಶಿವತ್ತಾಯ

Next Post

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 13 ಬುಧವಾರ )

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 13 ಬುಧವಾರ )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 13 ಬುಧವಾರ )

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ನಟ-ನಿರ್ಮಾಪಕ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ..!!

ನಟ-ನಿರ್ಮಾಪಕ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ..!!

13/05/2026
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 13 ಬುಧವಾರ )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 13 ಬುಧವಾರ )

13/05/2026
ಅಮೆಜಾನ್ ಡೆಲಿವರಿ ಸಿಬ್ಬಂದಿಗಳಿಗೆ ಭರ್ಜರಿ ಕೊಡುಗೆ: 90,000 ಸಿಬ್ಬಂದಿಗೆ ಉತ್ಕೃಷ್ಟ ಆರೋಗ್ಯ ವಿಮೆ ಸೌಲಭ್ಯ

ಅಮೆಜಾನ್ ಡೆಲಿವರಿ ಸಿಬ್ಬಂದಿಗಳಿಗೆ ಭರ್ಜರಿ ಕೊಡುಗೆ: 90,000 ಸಿಬ್ಬಂದಿಗೆ ಉತ್ಕೃಷ್ಟ ಆರೋಗ್ಯ ವಿಮೆ ಸೌಲಭ್ಯ

12/05/2026
ದೇಶದ ಆರ್ಥಿಕ ಸುರಕ್ಷತೆಗಾಗಿ ಪ್ರಧಾನಿಯವರ ದೂರದೃಷ್ಟಿಯ ರಾಷ್ಟ್ರೀಯ ಕರೆ- ಶಶಾಂಕ್ ಶಿವತ್ತಾಯ

ದೇಶದ ಆರ್ಥಿಕ ಸುರಕ್ಷತೆಗಾಗಿ ಪ್ರಧಾನಿಯವರ ದೂರದೃಷ್ಟಿಯ ರಾಷ್ಟ್ರೀಯ ಕರೆ- ಶಶಾಂಕ್ ಶಿವತ್ತಾಯ

12/05/2026

Recent News

ನಟ-ನಿರ್ಮಾಪಕ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ..!!

ನಟ-ನಿರ್ಮಾಪಕ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ..!!

13/05/2026
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 13 ಬುಧವಾರ )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಮೇ 13 ಬುಧವಾರ )

13/05/2026
ಅಮೆಜಾನ್ ಡೆಲಿವರಿ ಸಿಬ್ಬಂದಿಗಳಿಗೆ ಭರ್ಜರಿ ಕೊಡುಗೆ: 90,000 ಸಿಬ್ಬಂದಿಗೆ ಉತ್ಕೃಷ್ಟ ಆರೋಗ್ಯ ವಿಮೆ ಸೌಲಭ್ಯ

ಅಮೆಜಾನ್ ಡೆಲಿವರಿ ಸಿಬ್ಬಂದಿಗಳಿಗೆ ಭರ್ಜರಿ ಕೊಡುಗೆ: 90,000 ಸಿಬ್ಬಂದಿಗೆ ಉತ್ಕೃಷ್ಟ ಆರೋಗ್ಯ ವಿಮೆ ಸೌಲಭ್ಯ

12/05/2026
ದೇಶದ ಆರ್ಥಿಕ ಸುರಕ್ಷತೆಗಾಗಿ ಪ್ರಧಾನಿಯವರ ದೂರದೃಷ್ಟಿಯ ರಾಷ್ಟ್ರೀಯ ಕರೆ- ಶಶಾಂಕ್ ಶಿವತ್ತಾಯ

ದೇಶದ ಆರ್ಥಿಕ ಸುರಕ್ಷತೆಗಾಗಿ ಪ್ರಧಾನಿಯವರ ದೂರದೃಷ್ಟಿಯ ರಾಷ್ಟ್ರೀಯ ಕರೆ- ಶಶಾಂಕ್ ಶಿವತ್ತಾಯ

12/05/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved