ಉಡುಪಿ:ಮೇ 11:ಇಂದಿನ ದಿನವು ದ್ವಾದಶ ರಾಶಿಗಳವರಿಗೂ ವಿಭಿನ್ನ ಫಲಿತಾಂಶಗಳನ್ನು ತರಲಿದೆ. ಗ್ರಹಗಳ ಚಲನೆ ಮತ್ತು ನಕ್ಷತ್ರಗಳ ಪ್ರಭಾವದ ಹಿನ್ನೆಲೆಯಲ್ಲಿ, ಕೆಲವರಿಗೆ ಯಶಸ್ಸಿನ ಸೂಚನೆಗಳು ಕಂಡುಬಂದರೆ, ಇನ್ನೂ ಕೆಲವರಿಗೆ ಎಚ್ಚರಿಕೆ ಅಗತ್ಯವಿದೆ. ನಿಮ್ಮ ರಾಶಿಗೆ ಇಂದು ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ ಮತ್ತು ದಿನವನ್ನು ಉತ್ತಮವಾಗಿ ರೂಪಿಸಿಕೊಳ್ಳಿ.
*01,🐏ಮೇಷರಾಶಿ🐏*
📃,ಈ ರಾಶಿಯವರಿಗೆ ಇಂದು, ಧಾರ್ಮಿಕ ಕಾರ್ಯಗಳಲ್ಲಿ ನಂಬಿಕೆಯ ಹೆಚ್ಚಳದಿಂದಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾಕಷ್ಟು ಸಮಯವನ್ನು ಕಳೆಯುತ್ತಾರೆ.ಇಂದು ರಾಜಕೀಯ ಕಾರ್ಯಕ್ರಮದಲ್ಲಿ ನಾಯಕರನ್ನು ಭೇಟಿ ಮಾಡಬಹುದು,
ಗಮನಿಸಿ:- ಇಂದು ನಿಮ್ಮ ವ್ಯವಹಾರದ ಕೆಲವು ಸ್ಥಗಿತಗೊಂಡ ಯೋಜನೆಗಳನ್ನು ಪುನರಾರಂಭಿಸುವುದು ಉತ್ತಮ,
ಪರಿಹಾರ:-ಗುರು ರಾಘವೇಂದ್ರರ ದರ್ಶನ ಮಾಡಿ,
*02,🐂ವೃಷಭರಾಶಿ🐂*
📃, ಈ ರಾಶಿಯವರಿಗೆ ಈ ದಿನ ಯಾರಾದರೂ ನಿಮ್ಮನ್ನು ಬಲಿಪಶುವನ್ನಾಗಿ ಮಾಡಲು ಪ್ರಯತ್ನಿಸಬಹುದಾದ್ದರಿಂದ ಎಚ್ಚರಿಕೆಯಿಂದಿರಿ. ಒತ್ತಡ ಹೆಚ್ಚಾಗಬಹುದು. ಹಣಕಾಸಿನಲ್ಲಿ ಸುಧಾರಣೆ ಇರಲಿ,
ಗಮನಿಸಿ:- ಇಂದು ನಿಮ್ಮ ಪ್ರಮುಖ ಖರೀದಿಗಳನ್ನು ಮಾಡುವುದು ಅನುಕೂಲಕರವಾಗಿಸುತ್ತದೆ,
ಪರಿಹಾರ:-ಲಕ್ಷ್ಮೀವೆಂಕಟೇಶ್ವರನ ಪ್ರಾರ್ಥನೆ ಮಾಡಿ,
*03,👥ಮಿಥುನ ರಾಶಿ👥*
📃,ಈ ರಾಶಿಯವರು ಇಂದು ಪ್ರೀತಿಸುವ ಮತ್ತು ಕಾಳಜಿ ತೋರಿಸುವ ಜನರೊಂದಿಗೆ ಸಕಾರಣವಾಗಿರಲು ಪ್ರಯತ್ನಿಸಿ. ಹೊಸ ಪ್ರಸ್ತಾಪಗಳ ಅಕರ್ಷಕವಾಗಿದ್ದರೂ ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬುದ್ಧಿವಂತಿಕೆಯ ಲಕ್ಷಣವಲ್ಲ. ಸಮಯ ಹಾಳು,
ಗಮನಿಸಿ:-ಇಂದು ದಿನವಿಡೀ ಅಸಮಧಾನ ದಿಂದ ಕೂಡಿರುತ್ತದೆ,
ಪರಿಹಾರ:- ಶ್ರೀ ಆಂಜನೇಯನ ಧ್ಯಾನ ಮಾಡಿರಿ,
*04,🦀ಕಟಕ ರಾಶಿ🦀*
📃, ಈ ರಾಶಿಯವರಿಗೆ ಇಂದು ಇವರ ಹಾಸ್ಯಪ್ರಜ್ಞೆ ಇನ್ನೊಬ್ಬರಿಗೆ ಸಂತೋಷ ತರುತ್ತದೆ. ನಮ್ಮೊಳಗೇ ಇದೆಯೆಂದು ಅರ್ಥ ಮಾಡಿಸುವುದರಿಂದ ಅವರು ಸ್ವತಃ ಈ ಕೌಶಲ್ಯವನ್ನು ಹೊಂದಲು ಪ್ರೋತ್ಸಾಹಿಸಿದಂತಾಗುತ್ತದೆ. ಇಂದು ನಿಮಗೆ ಆರ್ಥಿಕ ಲಾಭ ಆಗುತ್ತದೆ. ಧರ್ಮಕಾರ್ಯಗಳು ಅಥವಾ ಶುಭಕರವಾದ ಸಮಾರಂಭಗಳನ್ನು ಮನೆಯಲ್ಲಿ ನಡೆಸುವಿರಿ,
ಗಮನಿಸಿ:- ಇಂದು ನಿಮಗೆ ಸಂತೋಷದ ದಿನವಾಗಲಿದೆ,
ಪರಿಹಾರ:-ಬಡವರಿಗೆ ಅನ್ನದಾನ ಮಾಡಿ,
*05,🦁ಸಿಂಹ ರಾಶಿ🦁*
📃, ಈ ರಾಶಿಯವರಿಗೆ ಇಂದು ಹೆಚ್ಚುವರಿ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆಯುವಲ್ಲಿ ಸ್ವಲ್ಪ ಹೆಚ್ಚುವರಿ ಸಮಯ ಮತ್ತು ಶಕ್ತಿ ವ್ಯಯಿಸಿದರೆ ಅಗಾಧ ಪ್ರಯೋಜನ ಪಡೆಯುತ್ತೀರಿ. ಹೊಸ ಆಲೋಚನೆಗಳನ್ನು ಪರೀಕ್ಷಿಸಲು ಪರಿಪೂರ್ಣ ದಿನ. ಧನ ಹಾನಿ ಆಗುವುದು,
ಗಮನಿಸಿ:- ನಿಮ್ಮ ಹಣದ ಬಗ್ಗೆ ಎಚ್ಚರವಹಿಸಿ,
ಪರಿಹಾರ:-ಪಿತೃಗಳನ್ನು ನೆನೆಯುತ್ತಾ ಕಾಗೆಗಳಿಗೆ ಆಹಾರ ನೀಡಿ,
*06,👩🦳ಕನ್ಯಾ ರಾಶಿ👩🦳*
📃, ಈ ರಾಶಿಯವರಿಗೆ ಇಂದು ಕೆಲಸಗಳಲ್ಲಿ ಅಡೆತಡೆ, ಆದರೆ ನೀವು ಹೇಗಾದರೂ ಮಾಡಿ ಎಲ್ಲವನ್ನೂ ನಿರ್ವಹಿಸುತ್ತೀರಿ. ಅನಿರೀಕ್ಷಿತ ಧನಲಾಭ ಆಗುವುದು, ಮನೆಯಲ್ಲಿ ನೆಮ್ಮದಿಯ ವಾತಾವರಣ, ಆರೋಗ್ಯದಲ್ಲಿ ಸಮತೋಲನ ಕಾಣುವಿರಿ,
ಗಮನಿಸಿ:- ಇಂದು ನೀವು ಹೊಸ ವಸ್ತುಗಳನ್ನು ಖರೀದಿ ಮಾಡಬಹುದು,
ಪರಿಹಾರ:-ವೃದ್ಧರಿಗೆ ಸಹಾಯ ಮಾಡಿ,
*07,⚖️ತುಲಾ ರಾಶಿ⚖️*
📃, ಈ ರಾಶಿಯವರಿಗೆ ಇಂದು ಬೆಂಬಲ ನೀಡುವ ಸ್ನೇಹಿತರು ನಿಮ್ಮನ್ನು ಸಂತೋಷವಾಗಿರಿಸುತ್ತಾರೆ. ನೀವು ತ್ವರಿತ ಹಣ ಪಡೆಯುವ ಬಯಕೆ ಹೊಂದಿರುತ್ತೀರಿ. ಬಂಧು ಮಿತ್ರರಿಂದ ಲಾಭ, ಧನ ಲಾಭ, ಮನೆಯಲ್ಲಿ ಶಾಂತಿಯಿಂದ ಆರೋಗ್ಯ ಸುಧಾರಣೆ,
ಗಮನಿಸಿ:- ಇಂದು ನಿಮ್ಮ
ಪಿತ್ರಾರ್ಜಿತ ಅಸ್ತಿಯಿಂದ ಅನುಕೂಲವಿದೆ,
ಪರಿಹಾರ:- ಇಂದು ಗಣಪತಿಗೆ ಗರಿಕೆ ನೀಡಿ,
*08,🦂ವೃಶ್ಚಿಕ ರಾಶಿ🦂*
📃, ಈ ರಾಶಿಯವರಿಗೆ ಇಂದು ಸಂಬಂಧಿಗಳು ನಿಮ್ಮ ಅತೀ ಉದಾರ ವರ್ತನೆಯ ಅನುಚಿತ ಲಾಭ ಪಡೆಯಲು ಪ್ರಯತ್ನಿಸುತ್ತಾರೆ. ನಿಮ್ಮನ್ನು ನೀವುನಿಯಂತ್ರಿಸಕೊಳ್ಳದಿದ್ದರೆ ಮೋಸಹೋಗಬಹುದು. ಉದಾರತೆ ಸ್ವಲ್ಪ ಮಟ್ಟಿಗೆ ಒಳ್ಳೆಯದಾದರೂ ಅದು ಒಂದು ಮಿತಿ ದಾಟಿದರೆ ಅದು ಸಮಸ್ಯೆಗಳು ಆಗುತ್ತದೆ,
ಗಮನಿಸಿ:- ಇಂದು ನೀವೇ ಸಮಸ್ಯೆಗಳನ್ನು ತಂದುಕೊಳ್ಳಬೇಡಿ,
ಪರಿಹಾರ:-ಪ್ರಾಣಿಗಳಿಗೆ ಆಹಾರ ನೀಡಿ,
*09,🏹ಧನುಸ್ಸು ರಾಶಿ🏹*
📃, ಈ ರಾಶಿಯವರು ಇಂದು ನಿಜವಾಗಿಯೂ ಏನಾದರೂ ಅದ್ಭುತವಾದದ್ದನ್ನು ಮಾಡಬಹುದು. ನಿಮ್ಮ ಗತಕಾಲದ ಸ್ನೇಹಿತರು
ನಿಮ್ಮನ್ನು ಸಂಪರ್ಕಿಸಬಹುದು ಇದು ನಿಮಗೆ ಒಂದು ಸ್ಮರಣೀಯ ದಿನವಾಗಬಹುದು,
ಗಮನಿಸಿ:- ಇಂದು ನಿಮ್ಮ ವೈವಾಹಿಕ ಜೀವನ ಸಂತೋಷದಿಂದ ಕೂಡಿರುತ್ತದೆ,
ಪರಿಹಾರ:-ಈಶ್ವರನ ದರ್ಶನ ಪಡೆಯಿರಿ,
*10,🐊ಮಕರ ರಾಶಿ🐊*
📃, ಈ ರಾಶಿಯವರಿಗೆ ಈ ದಿನ ಆತ್ಮವಿಶ್ವಾಸ ತುಂಬಿದ ದಿನವಾಗಿರುತ್ತದೆ. ನಿಮ್ಮ ವಿರೋಧಿಗಳ ಬಗ್ಗೆ ಎಚ್ಚರದಿಂದಿರಬೇಕು, ಆದರೆ ಉದ್ಯೋಗ ಆಕಾಂಕ್ಷಿಗಳು ಕಠಿಣ ಪರಿಶ್ರಮದ ನಂತರವೇ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ. ನೀವು ಯಾವುದೇ ಕಾನೂನು ಕೆಲಸವನ್ನು ಶಿಸ್ತು ಮತ್ತು ನಿಯಮಗಳನ್ನು ಪರಿಶೀಲಿಸಿ ನಂತರ ಮುಂದುವರೆಯಿರಿ, ಗಮನಿಸಿ:- ಇಂದು ನಿಮ್ಮ ಕೆಲಸ ಕಾಳಜಿಯಿಂದ ಕೂಡಿರಲಿ,
ಪರಿಹಾರ:-ಶ್ರೀ ಗುರು ದತ್ತಾತ್ರೇಯರ ಪ್ರಾರ್ಥನೆ ಮಾಡಿ,
*11,⚱️ಕುಂಭ ರಾಶಿ⚱️*
📃, ಈ ರಾಶಿಯವರಿಗೆ ಈ ದಿನಪ್ರಯೋಜನಕಾರಿಯಾಗಲಿದೆ. ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಹೆಸರನ್ನು ಗಳಿಸುತ್ತಿರ ಸಾಮಾಜಿಕ ದೃಷ್ಟಿಕೋನದಿಂದ ಈ ದಿನವು ಮಿಶ್ರವಾಗಿರುತ್ತದೆ, ಏಕೆಂದರೆ ನೀವು ನಿಮ್ಮ ಕೆಲಸಕ್ಕೆ ಹೆಸರುವಾಸಿಯಾಗುತ್ತೀರಿ, ಗಮನಿಸಿ:-ನೀವು ಇಂದು ದೂರದ ಕುಟುಂಬದ ಸದಸ್ಯರನ್ನು ಭೇಟಿಯಾಗಬಹುದು,
ಪರಿಹಾರ:-ಶ್ರೀಗುರು ವೀರಬ್ರಹ್ಮಂದ್ರ ಸ್ವಾಮಿಗಳ ಪ್ರಾರ್ಥನೆ ಮಾಡಿ,
*12,🐬ಮೀನ ರಾಶಿ🐬*
📃, ಈ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಸ್ವಲ್ಪ ಗೊಂದಲದ ದಿನವಾಗಿರುತ್ತದೆ. ನಿಮ್ಮ ಜೀವನ ಸಂಗಾತಿಯ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ, ನೀವು ಅವರಿಗಾಗಿ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಇಂದು ನೀವು ಮನೆಯಲ್ಲಿ ಮತ್ತು ಹೊರಗೆ ತಾಳ್ಮೆಯಿಂದಿರಬೇಕು, ಗಮನಿಸಿ:-ಇಂದು ನಿಮ್ಮ ವಿರೋಧಿಗಳು ನಿಮಗೆ ಕಿರುಕುಳ ನೀಡಲು ಪ್ರಯತ್ನಿಸುತ್ತಾರೆ,
ಪರಿಹಾರ:-ಈ ದಿನ ದಕ್ಷಣಾ ಮೂರ್ತಿಯನ್ನು ಪ್ರಾರ್ಥಿಸಿ,
ಇವು ಇಂದಿನ ದ್ವಾದಶ ರಾಶಿಗಳ ದಿನಭವಿಷ್ಯ. ಗ್ರಹಗಳ ಪ್ರಭಾವವು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬ ನಂಬಿಕೆಯಲ್ಲಿ, ಈ ಮಾಹಿತಿಯನ್ನು ಮಾರ್ಗದರ್ಶನವಾಗಿ ಪಡೆದುಕೊಳ್ಳಿ. ನಾಳೆಯ ದಿನಭವಿಷ್ಯಕ್ಕಾಗಿ ದ್ರಶ್ಯ ನ್ಯೂಸ್ ವೆಬ್ ಸೈಟ್ ಭೇಟಿ ನೀಡುವುದನ್ನು ಮರೆಯಬೇಡಿ. ಶುಭ ದಿನ! 🌟
ಮೂಲ :ಪ್ರಾಚೀನ ಶಾಸ್ತ್ರಾಸಕ್ತ,ಎಲ್ ವಿವೇಕಾನಂದ ಆಚಾರ್ಯ








