ಉಡುಪಿ : ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉಡುಪಿ ಶ್ರೀ ಪುತ್ತಿಗೆ ಮಠದ ವಿಶ್ವಮಾನ್ಯ ಯತಿಕುಲ ಚಕ್ರವರ್ತಿ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಅವರ ಶಿಷ್ಯ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರ ಸಂಕಲ್ಪ ಮತ್ತು ಮಾರ್ಗದರ್ಶನದಂತೆ 8 ರಿಂದ 12 ವಯೋಮಾನದ ಬಾಲಕ,ಬಾಲಕಿಯರಿಗಾಗಿ ಮೇ 14 ರಿಂದ ಮೇ 18 ರವರೆಗೆ ನಡೆಯಲಿರುವ ಸನಿವಾಸ ಮೊಬೈಲ್ ವರ್ಜನ ಶಿಬಿರಕ್ಕೆ ನೋಂದಣಿ ಮಾಡಿಕೊಳ್ಳಲು ಮೇ 11 ಕೊನೆಯ ದಿನಾಂಕವಾಗಿರುತ್ತದೆ.
ಕೇವಲ 50 ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶವಿದ್ದು ಮೇ 17 ನೇ ತಾರೀಕಿನಂದು ಶಿಬಿರಾರ್ಥಿಗಳ ಹೆತ್ತವರು ಕಡ್ಡಾಯವಾಗಿ ಭಾಗವಹಿಸಬೇಕಿರುತ್ತದೆ .
ಮಣಿಪಾಲದ ಕೆ ಎಂ ಸಿ ಯ ಮನೋಚಿಕಿತ್ಸಾ ವಿಭಾಗ ಮತ್ತು ಉಡುಪಿಯ ಪತಂಜಲಿ ಯೋಗ ಸಮಿತಿಗಳ ಸಹಯೋಗದೊಂದಿಗೆ ಹಿರಿಯಡ್ಕದಲ್ಲಿರುವ ಶ್ರೀ ಪುತ್ತಿಗೆ ಮೂಲಮಠದಲ್ಲಿ ನಡೆಯಲಿರುವ ಈ ಶಿಬಿರವು, ಮೊಬೈಲ್ ಬಳಕೆಯ ಪ್ರಮಾಣವು ಅತ್ಯವಶ್ಯಕ ಮತ್ತು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಆಗುವಂತೆ ಪ್ರೇರೇಪಣೆ ನೀಡುವತ್ತ ಲಕ್ಷ್ಯವಿರಿಸಿದೆ.
ಆರೋಗ್ಯಪೂರ್ಣ ದಿನಚರಿ,ಒಳಾಂಗಣ – ಹೊರಾಂಗಣ ಕ್ರೀಡೆಗಳು,ಯೋಗ,ಓದು,ಭಜನೆ,ಭಗವದ್ಗೀತೆ,ಚರ್ಚೆ, ಕರಕುಶಲ ಚಟುವಟಿಕೆ, ಪೇಂಟಿಂಗ್,ಮ್ಯಾಜಿಕ್ ,ಅಡುಗೆ,ಕುಣಿತಭಜನೆ,ನೃತ್ಯ,ಯಕ್ಷಗಾನ ಮುಂತಾದ ಆಯ್ದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಪ್ರೇರಣೆ ನೀಡಲಾಗುವುದು . ಮೊಬೈಲ್ ನಿಂದ ಆಗುವ ದುಷ್ಪರಿಣಾಮಗಳು , ಜಂಕ್ ಫುಡ್ ಅಪಾಯ, ಕೌನ್ಸೆಲಿಂಗ್, ಕುಟುಂಬ ಬಾಂಧವ್ಯ, ಹೆತ್ತವರ ಜವಾಬ್ದಾರಿ ಮುಂತಾದ ವಿಷಯಗಳ ಕುರಿತು ತಜ್ಞರಿಂದ ಮಾಹಿತಿ ಒದಗಿಸಲಾಗುವುದು . ಡಾ . ಸುಮಾ ಉಡುಪ ಮಣಿಪಾಲ್ ,ಉಡುಪಿಯ ಗಾಂಧೀ ಆಸ್ಪತ್ರೆಯ ಡಾ. ವ್ಯಾಸರಾಜ ತಂತ್ರಿ, ಡಾ . ಸುಧೀರ್ ರಾಜ್ ನಿಟ್ಟೆ , ಡಾ . ಶ್ರುತಿ ಬಲ್ಲಾಳ್ , ರಾಘವೇಂದ್ರ ಭಟ್ ಪಣಿಯಾಡಿ , ವಿದುಷಿ ಉಷಾ ಹೆಬ್ಬಾರ್ , ಗೋವರ್ಧನ ಆಚಾರ್ಯ , ಆಕಾಶ್ ಉಪಾಧ್ಯಾಯ, ವಿದ್ವಾನ್ ಕೆ ವಿ ರಮಣಾಚಾರ್ಯ, ವಿದುಷಿ ಅಯನಾ ವಿ ರಮಣ್ ಮೂಡುಬಿದಿರೆ ಮತ್ತು ಇನ್ನೂ ಅನೇಕರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ .
ಶ್ರೀ ಪುತ್ತಿಗೆ ಮಠದ ಆಡಳಿತ ಮಂಡಳಿಯು ಶಿಬಿರದ ಯಶಸ್ಸಿಗೆ ಶ್ರಮಿಸುತ್ತಿದ್ದು ವಿದ್ವಾನ್ ಕೆ ವಿ ರಮಣಾಚಾರ್ಯ ಹಾಗೂ ಶ್ರೀಮತಿ ಉಮಾ ಪ್ರಸಾದ್ ಅವರು ಶಿಬಿರದ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ 8792158946/9880605691. https://forms.gle/Y1hXy2b6Tv9aQjwf8 ಈ ಗೂಗಲ್ ಲಿಂಕ್ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದು ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ .







