Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಕಾರ್ಕಳ: 2027 ಫೆಬ್ರವರಿ 18ರಿಂದ ಗೊಮ್ಮಟೇಶ್ವರ ಮಹಾಮಸ್ತಕಾಭಿಷೇಕ

Dhrishya News by Dhrishya News
20/04/2026
in ಸುದ್ದಿಗಳು
0
ಕಾರ್ಕಳ: 2027 ಫೆಬ್ರವರಿ 18ರಿಂದ ಗೊಮ್ಮಟೇಶ್ವರ ಮಹಾಮಸ್ತಕಾಭಿಷೇಕ
0
SHARES
3
VIEWS
Share on FacebookShare on Twitter

ಕಾರ್ಕಳ: ಕಾರ್ಕಳದ ಗೊಮ್ಮಟೇಶ್ವರ ಬೆಟ್ಟದ ಮೇಲಿರುವ ಏಕಶಿಲಾ ವಿಗ್ರಹವಾದ ಭಗವಾನ್ ಬಾಹುಬಲಿ ಸ್ವಾಮಿಗೆ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕವು 2027 ಫೆಬ್ರವರಿ 18ರಿಂದ 28ರವರೆಗೆ ನಡೆಯಲಿದೆ ಎಂದು ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿ ಘೋಷಿಸಿದೆ.

ಈ ಸಂಬಂಧ ಕಾರ್ಕಳದ ದಾನಶಾಲಿ ಬಾಹುಬಲಿ ಪ್ರವಚನ ಮಂದಿರದಲ್ಲಿ ರವಿವಾರ ಮಹಾಮಸ್ತಕಾಭಿಷೇಕ ಕಾರ್ಯಾಲಯ ಉದ್ಘಾಟನೆ ಹಾಗೂ ಘೋಷಣೆ ಕಾರ್ಯಕ್ರಮ ನಡೆಯಿತು.

ಜೈನ ಮಠದ ಸ್ವಸ್ತಿ ಶ್ರೀ ಲಲಿತ ಕೀರ್ತಿ ಭಟ್ಟರಕ ಪಟ್ಟಾಚಾರ್ಯ ವರಿಯ ಸ್ವಾಮೀಜಿ ಆಶೀರ್ವಚನ ನೀಡಿ, ಮಹಾಮಸ್ತಕಾಭಿಷೇಕವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜಗತ್ತಿಗೆ ಶಾಂತಿ ಮತ್ತು ಅಹಿಂಸೆಯ ಸಂದೇಶ ಸಾರುವ ಮಹೋತ್ಸವವಾಗಿದ್ದು, ವಿಶ್ವಕ್ಕೆ ಒಳಿತು ತರಲಿ ಎಂದು ಹಾರೈಸಿದರು.

ಮಹಾಮಸ್ತಕಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಇನ್ನೂ ಸುಮಾರು 305 ದಿನಗಳು ಬಾಕಿ ಇರುವ ಈ ಐತಿಹಾಸಿಕ ಕ್ಷಣವನ್ನು ಸ್ಮರಣೀಯವಾಗಿಸಲು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕೆಂದು ಹೇಳಿದರು.

ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಮಾತನಾಡಿ, 21ನೇ ಶತಮಾನದಲ್ಲಿ ವೇಣೂರು, ಧರ್ಮಸ್ಥಳ ಹಾಗೂ ಕಾರ್ಕಳದ ಗೊಮ್ಮಟೇಶ್ವರ ಮಹಾಮಸ್ತಕಾಭಿಷೇಕವನ್ನು ಕಣ್ತುಂಬಿಕೊಳ್ಳುವುದು ಪುಣ್ಯದ ವಿಷಯ ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮಹಾಮಸ್ತಕಾಭಿಷೇಕವನ್ನು ರಾಷ್ಟ್ರೀಯ ಹಬ್ಬದಂತೆ ಆಚರಿಸಬೇಕು ಎಂದು ತಿಳಿಸಿ, ಕೇಂದ್ರ ಸರ್ಕಾರದಿಂದ ಅಗತ್ಯ ಸಹಕಾರ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.

ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, ಸಮಿತಿ ಕಾರ್ಯಾಧ್ಯಕ್ಷ ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ನಡೆಯುವ ಈ ಮಹೋತ್ಸವಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿ, ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಜಿಲ್ಲಾ ಪಂಚಾಯತ್ ಸಿಇಒ ಪ್ರತಿಕ್ ಬಾಯಲ್, ಹೆಚ್ಚುವರಿ ಎಸ್‌ಪಿ ಸುಧಾಕರ್ ನಾಯಕ್, ಸಮಿತಿ ಪ್ರಮುಖರಾದ ಯುವರಾಜ ಜೈನ್, ಪದ್ಮಪ್ರಸಾದ್ ಅಜೀಲ, ವೈ. ಸುರಜ್ ಕುಮಾರ್, ಜೀವಂಧರ್ ಬಳ್ಳಾಲ್, ನರೇಂದ್ರ ಕಳಸ, ಗುಣಪಾಲ ಜೈನ್, ಪರಂತ ರಾಜಪೊವಣಿ, ಸಿಎ ಪ್ರಭಾತ್ ಕುಮಾರ್, ಸುನಿಲ್ ಕುಮಾರ್ ಬಜಗೋಳಿ, ಮಹಾವೀರ ಹೆಗಡೆ, ರತ್ನಾಕರ ಅರಸು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪುಷ್ಪರಾಜ್ ಸ್ವಾಗತಿಸಿ, ಮೋಹನ್ ಪಡಿವಾಳ್ ವಂದಿಸಿದರು. ಕಾರ್ಯಕ್ರಮವನ್ನು ಅಜಿತ್ ಕೊಕ್ರಡಿ ನಿರೂಪಿಸಿದರು.

Previous Post

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಏಪ್ರಿಲ್ 20 ಸೋಮವಾರ )

Next Post

ಮಹಿಳಾ ಮೀಸಲಾತಿಯ ಮೊಸಳೆ ಕಣ್ಣೀರು ಸುರಿಸುವ ಹಿಂದೆ ಬಿಜೆಪಿ ನಿಗೂಡ ಕಾರ್ಯಸೂಚಿಯನ್ನು ಹೊಂದಿದೆ :ಶುಭದರಾವ್..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಮಹಿಳಾ ಮೀಸಲಾತಿಯ ಮೊಸಳೆ ಕಣ್ಣೀರು ಸುರಿಸುವ ಹಿಂದೆ ಬಿಜೆಪಿ ನಿಗೂಡ ಕಾರ್ಯಸೂಚಿಯನ್ನು ಹೊಂದಿದೆ :ಶುಭದರಾವ್..!

ಮಹಿಳಾ ಮೀಸಲಾತಿಯ ಮೊಸಳೆ ಕಣ್ಣೀರು ಸುರಿಸುವ ಹಿಂದೆ ಬಿಜೆಪಿ ನಿಗೂಡ ಕಾರ್ಯಸೂಚಿಯನ್ನು ಹೊಂದಿದೆ :ಶುಭದರಾವ್..!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಶ್ರೀ ಪುತ್ತಿಗೆ ಸುಗುಣ ಶಿಬಿರದ ಉದ್ಘಾಟನೆ..!!

ಶ್ರೀ ಪುತ್ತಿಗೆ ಸುಗುಣ ಶಿಬಿರದ ಉದ್ಘಾಟನೆ..!!

20/04/2026
ಮಹಿಳಾ ಮೀಸಲಾತಿಯ ಮೊಸಳೆ ಕಣ್ಣೀರು ಸುರಿಸುವ ಹಿಂದೆ ಬಿಜೆಪಿ ನಿಗೂಡ ಕಾರ್ಯಸೂಚಿಯನ್ನು ಹೊಂದಿದೆ :ಶುಭದರಾವ್..!

ಮಹಿಳಾ ಮೀಸಲಾತಿಯ ಮೊಸಳೆ ಕಣ್ಣೀರು ಸುರಿಸುವ ಹಿಂದೆ ಬಿಜೆಪಿ ನಿಗೂಡ ಕಾರ್ಯಸೂಚಿಯನ್ನು ಹೊಂದಿದೆ :ಶುಭದರಾವ್..!

20/04/2026
ಕಾರ್ಕಳ: 2027 ಫೆಬ್ರವರಿ 18ರಿಂದ ಗೊಮ್ಮಟೇಶ್ವರ ಮಹಾಮಸ್ತಕಾಭಿಷೇಕ

ಕಾರ್ಕಳ: 2027 ಫೆಬ್ರವರಿ 18ರಿಂದ ಗೊಮ್ಮಟೇಶ್ವರ ಮಹಾಮಸ್ತಕಾಭಿಷೇಕ

20/04/2026
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಏಪ್ರಿಲ್ 20 ಸೋಮವಾರ )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಏಪ್ರಿಲ್ 20 ಸೋಮವಾರ )

20/04/2026

Recent News

ಶ್ರೀ ಪುತ್ತಿಗೆ ಸುಗುಣ ಶಿಬಿರದ ಉದ್ಘಾಟನೆ..!!

ಶ್ರೀ ಪುತ್ತಿಗೆ ಸುಗುಣ ಶಿಬಿರದ ಉದ್ಘಾಟನೆ..!!

20/04/2026
ಮಹಿಳಾ ಮೀಸಲಾತಿಯ ಮೊಸಳೆ ಕಣ್ಣೀರು ಸುರಿಸುವ ಹಿಂದೆ ಬಿಜೆಪಿ ನಿಗೂಡ ಕಾರ್ಯಸೂಚಿಯನ್ನು ಹೊಂದಿದೆ :ಶುಭದರಾವ್..!

ಮಹಿಳಾ ಮೀಸಲಾತಿಯ ಮೊಸಳೆ ಕಣ್ಣೀರು ಸುರಿಸುವ ಹಿಂದೆ ಬಿಜೆಪಿ ನಿಗೂಡ ಕಾರ್ಯಸೂಚಿಯನ್ನು ಹೊಂದಿದೆ :ಶುಭದರಾವ್..!

20/04/2026
ಕಾರ್ಕಳ: 2027 ಫೆಬ್ರವರಿ 18ರಿಂದ ಗೊಮ್ಮಟೇಶ್ವರ ಮಹಾಮಸ್ತಕಾಭಿಷೇಕ

ಕಾರ್ಕಳ: 2027 ಫೆಬ್ರವರಿ 18ರಿಂದ ಗೊಮ್ಮಟೇಶ್ವರ ಮಹಾಮಸ್ತಕಾಭಿಷೇಕ

20/04/2026
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಏಪ್ರಿಲ್ 20 ಸೋಮವಾರ )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಏಪ್ರಿಲ್ 20 ಸೋಮವಾರ )

20/04/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved