Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಏಪ್ರಿಲ್ 13 ಸೋಮವಾರ )

Dhrishya News by Dhrishya News
13/04/2026
in ಮುಖಪುಟ
0
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಏಪ್ರಿಲ್ 13 ಸೋಮವಾರ )
0
SHARES
48
VIEWS
Share on FacebookShare on Twitter

ಉಡುಪಿ: ಏಪ್ರಿಲ್ 13:ಇಂದಿನ ದಿನವು ದ್ವಾದಶ ರಾಶಿಗಳವರಿಗೂ ವಿಭಿನ್ನ ಫಲಿತಾಂಶಗಳನ್ನು ತರಲಿದೆ. ಗ್ರಹಗಳ ಚಲನೆ ಮತ್ತು ನಕ್ಷತ್ರಗಳ ಪ್ರಭಾವದ ಹಿನ್ನೆಲೆಯಲ್ಲಿ, ಕೆಲವರಿಗೆ ಯಶಸ್ಸಿನ ಸೂಚನೆಗಳು ಕಂಡುಬಂದರೆ, ಇನ್ನೂ ಕೆಲವರಿಗೆ ಎಚ್ಚರಿಕೆ ಅಗತ್ಯವಿದೆ. ನಿಮ್ಮ ರಾಶಿಗೆ ಇಂದು ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ ಮತ್ತು ದಿನವನ್ನು ಉತ್ತಮವಾಗಿ ರೂಪಿಸಿಕೊಳ್ಳಿ.


  • 01,🐏ಮೇಷರಾಶಿ🐏

📃,ಸಾಮಾಜಿಕ ಕಾರ್ಯಕ್ರಮದಲ್ಲಿ, ಅಧಿಕಾರಿಗಳು ನಿಮ್ಮ ಕೆಲಸದಿಂದ ಸಂತೋಷಪಡುತ್ತಾರೆ ಮತ್ತು ನಿಮಗೆ ಹೊಸ ಹುದ್ದೆಯನ್ನು ನೀಡಬಹುದು, ಆದರೆ ಕೆಲವು ವಿರೋಧಿಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಾರೆ. ಹಣಕಾಸಿನ ವ್ಯವಹಾರಗಳು ಕೂಡಿ ಬರುತ್ತವೆ. ದೀರ್ಘಾವಧಿಯ ಸಾಲ ಸ್ವಲ್ಪ ಮಟ್ಟಿಗೆ ಪರಿಹಾರವಾಗುತ್ತದೆ. ಹೊಸ ಉದ್ಯೋಗ ಪ್ರಯತ್ನಗಳು ಫಲ ನೀಡುತ್ತವೆ. ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ,

ಗಮನಿಸಿ:- ಇಂದು ಮನೆಯಲ್ಲಿ ಶುಭ ಕಾರ್ಯಗಳ ಪ್ರಸ್ಥಾಪವಿರುತ್ತದೆ,

ಪರಿಹಾರ:-ಶ್ರೀ ಗಣಪತಿ ದೇವರಿಗೆ ಗರಿಕೆ ನೀಡಿ,


  • 02,🐂ವೃಷಭರಾಶಿ🐂

📃,ಈ ದಿನ ಯಾವುದಾದರು ಒಂದು ಕ್ಷೇತ್ರ ದರ್ಶನ ಮಾಡುವಿರಿ, ಕುಟುಂಬದ ವಿಚಾರಗಳಿಗೆ ಸಮಯವನ್ನು ಕೊಡುತ್ತೀರ ಹಾಗು ಕುಟುಂಬದ ವಿಚಾರಗಳಿಗೆ ಹಣ ಖರ್ಚು ಮಾಡುತ್ತೀರಾ, ಕೆಲಸದ ಒತ್ತಡದಿಂದ ಮೈಕೈ ನೋವು ಬರುವ ಸಾಧ್ಯತೆ ಇದೆ. ಬಂಧುಗಳು ಕಷ್ಟದಲ್ಲಿದ್ದಾರೆಂದು ಸಹಾಯ ಮಾಡಲು ಹೋಗಿ ನೀವೇ ಸಮಸ್ಯೆಗೆ ಸಿಲುಕಿಕೊಳ್ಳುವಿರಿ,

ಗಮನಿಸಿ:- ಇಂದು ನೀವು ಸ್ನೇಹಿತರು ಮತ್ತು ಬಂಧುಗಳ ಲೇವಾದೇವಿ ವ್ಯವಹಾರದಲ್ಲಿ ಮೂಗು ತೂರಿಸಬೇಡಿ,

ಪರಿಹಾರ:-ದುರ್ಗಾ ದೇವಿ ಪ್ರಾರ್ಥನೆಯಿಂದ ಶುಭವಾಗುವುದು,


  • 03,👥ಮಿಥುನ ರಾಶಿ👥

📃,ಸಮಾಜದಲ್ಲಿ ನಿಮ್ಮ ಮಾತಿಗೆ ಬೆಲೆ ಹೆಚ್ಚಾಗುತ್ತದೆ, ಸಹೋದರರೊಂದಿಗಿನ ಸ್ಥಿರಾಸ್ತಿ ಸಮಸ್ಯೆಗಳು ದೂರವಾಗುತ್ತವೆ.ಹೊಸ ವ್ಯವಹಾರಕ್ಕೆ ಸಂಬಂಧಿಸಿದಂತೆ ಆತ್ಮೀಯ ಸ್ನೇಹಿತರಿಂದ ಸಲಹೆಗಳು ದೊರೆಯುತ್ತವೆ.ಹೊಸ ಆಹ್ವಾನಗಳು ಬರುತ್ತವೆ.ವ್ಯಾಪಾರ ವಿಸ್ತರಣೆ ಕಾರ್ಯಗಳನ್ನು ವೇಗಗೊಳಿಸುತ್ತೀರಿ,

ಗಮನಿಸಿ:- ಇಂದು ಉದ್ಯೋಗಗಳಲ್ಲಿನ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತೀರಿ,

ಪರಿಹಾರ:-ಶ್ರೀ ಹನುಮಾನ್ ಚಾಲೀಸಾ ಪಠಿಸಿ,


  • 04,🦀ಕಟಕ ರಾಶಿ🦀

📃,ಈ ದಿನ ನಿಮಗೆ ಶುಭ ಸುದ್ದಿಯೊಂದಿಗೆ ಆರಂಭವಾಗಲಿದೆ ನಿಮ್ಮ ಸಕಾರಾತ್ಮಕ ಚಿಂತನೆಯು ನಿಮ್ಮ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತದೆ. ಮಕ್ಕಳ ಅಧ್ಯಯನ ಪರೀಕ್ಷೆ ಮತ್ತು ಸ್ಪರ್ಧೆಗಳ ಬಗ್ಗೆ ಸಂಪೂರ್ಣ ಗಮನ ಕೊಡಿ. ನಿಮ್ಮ ಮುಂದಿನ ಕನಸುಗಳ ಬಗ್ಗೆ ಯಾರಿಗೂ ಹೇಳಬೇಡಿ. ಕಚೇರಿಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ವಿನೋದದಿಂದ ಸಮಯವನ್ನು ಕಳೆಯಬಹುದು,

ಗಮನಿಸಿ:-ಈ ದಿನ ಯಾರಾದರೂ ನಿರ್ಗತಿಕರಿಗೆ ಸಹಾಯ ಮಾಡಿ,

ಪರಿಹಾರ:-ತಂದೆ ತಾಯಿಯ ಆಶೀರ್ವಾದವನ್ನು ತಪ್ಪದೆ ಪಡೆಯಿರಿ,


  • 05,🦁ಸಿಂಹ ರಾಶಿ🦁

📃,ಇಂದು ನಿಮಗೆ ಸ್ವಲ್ಪ ಚಿಂತೆಯ ದಿನವಾಗಲಿದೆ. ನಿಮ್ಮ ಶತ್ರುಗಳು ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ತಡೆಯಲು ಪ್ರಯತ್ನಿಸಬಹುದು. ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ, ಆದರೆ ನೀವು ಕೆಲವು ಹೂಡಿಕೆಗೆ ಸಂಬಂಧಿಸಿದ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ನೀವು ಧಾರ್ಮಿಕ ಪ್ರವಾಸಕ್ಕೆ ಹೋಗಲು ತಯಾರಿ ನಡೆಸುತ್ತಿದ್ದರೆ, ಅದು ಒಳ್ಳೆಯದು,

ಗಮನಿಸಿ:- ಇಂದು ನೀವು ಕುಟುಂಬದ ಯಾವುದೇ ಸದಸ್ಯರೊಂದಿಗೆ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಬಹುದು,

ಪರಿಹಾರ:- ಶ್ರೀ ದುರ್ಗಾ ಸ್ತೋತ್ರ ಪಠಿಸಿ ಶುಭವಾಗುವುದು,


  • 06,👩‍🦳ಕನ್ಯಾ ರಾಶಿ👩‍🦳

📃,ವ್ಯವಹಾರಕ್ಕೆ ಸಂಬಂಧಿಸಿದಂತೆ ಜನರೊಂದಿಗೆ ಸಂಪರ್ಕ ಬೆಳೆಸುವುದು ಉತ್ತಮ. ನೀವು ಇಂದು ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಆರೋಗ್ಯ ಗಮನಿಸಿ, ಪಾಲುದಾರಿಕೆ ವ್ಯವಹಾರ ಉದ್ಯೋಗದಲ್ಲಿ ಅಭಿವೃದ್ಧಿ ತೋರಿದರು ತಾಳ್ಮೆಯಿಂದ ವ್ಯವಹರಿಸಿ, ದೂರ ಪ್ರಯಾಣ ಸಂಭವ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಲಭಿಸುವ ಕಾಲ, ಗಮನಿಸಿ:- ಇಂದು ಮಹಿಳಾ ಕಾರ್ಮಿಕರಿಗೆ ಹೆಚ್ಚು ಲಾಭ ಸಿಗಲಿದೆ, 

ಪರಿಹಾರ:-ಆಂಜನೇಯ ಸ್ವಾಮಿಯನ್ನು ಪೂಜಿಸಿ,


  • 07,⚖️ತುಲಾ ರಾಶಿ⚖️

📃,ಅನ್ಯಾಯವನ್ನು ಕಂಡು ಸಹಿಸಲಾರದ ನೀವು ನಿಮ್ಮ ಎದುರಾಳಿಯನ್ನು ಎದುರಿಸಲು ಹೆಚ್ಚಿನ ಆತ್ಮಸ್ಥೈರ್ಯದಿಂದ ಹೋರಾಟ ಮಾಡುವಿರಿ ಮತ್ತು

ಅದರಲ್ಲಿ ಜಯವನ್ನು ಸಂಪಾದಿಸುವಿರಿ, ಜನರು ಸಮಸ್ಯೆಗಳೊಡನೆ ನಿಮ್ಮನ್ನು ಸಮೀಪಿಸಿದರೆ ಅವರನ್ನು ನಿರ್ಲಕ್ಷಿಸಿ. ಇಂದು ನೀವು ನಿಮ್ಮ ಕನಸುಗಳ ಕೆಲಸವನ್ನು ಮಾಡಬಹುದು,

ಗಮನಿಸಿ:-ಇಂದುಸಾಮಾನ್ಯಕ್ಕಿಂತ ಸ್ವಲ್ಪ ಮುಂಚಿತವಾಗಿ ಮಲಗಲು ಪ್ರಯತ್ನಿಸಿ,

ಪರಿಹಾರ:-ಶ್ರೀ ಕಾಲಭೈರವ ಸ್ವಾಮಿಯನ್ನು ಪೂಜಿಸಿ,


  • 08,🦂ವೃಶ್ಚಿಕ ರಾಶಿ🦂

📃,ಸಂಬಂಧಿಕರಿಂದ ಅಪರೂಪದ ಆಹ್ವಾನಗಳು ಬರುತ್ತವೆ. ಆರೋಗ್ಯ ಸಮಸ್ಯೆಗಳು ಸ್ವಲ್ಪ ನೋವುಂಟು ಮಾಡುತ್ತವೆ. ಕೈಗೆತ್ತಿಕೊಂಡ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತವೆ. ಆರ್ಥಿಕ ಪರಿಸ್ಥಿತಿ ನಿಧಾನವಾಗುತ್ತದೆ. ಹಠಾತ್ ಪ್ರಯಾಣದಿಂದ ದೈಹಿಕ ಶ್ರಮ ಉಂಟಾಗುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅನಿರೀಕ್ಷಿತ ಕಿರಿಕಿರಿಗಳು ಉಂಟಾಗುತ್ತವೆ.

ನಿಮ್ಮ ಪೋಷಕರಿಂದ ನೀವು ಬೆಂಬಲವನ್ನು ಪಡೆಯುತ್ತೀರಿ,

ಗಮನಿಸಿ:- ಇಂದು ವ್ಯಾಪಾರಸ್ಥರಿಗೆ ಶುಭ ದಿನವಾಗಲಿದೆ,

ಪರಿಹಾರ:-ತಾಯಿ ಶ್ರೀ ಲಲಿತಾ ತ್ರಿಪುರ ಸುಂದರಿಯನ್ನು ಪ್ರಾರ್ಥಿಸಿ,


  • 09,🏹ಧನುಸ್ಸು ರಾಶಿ🏹

📃,ಮಿತ್ರರೊಂದಿಗೆ ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಹಳೆ ಸಾಲಗಳನ್ನು ವಸೂಲಿ ಮಾಡಲಾಗುತ್ತದೆ. ವೃತ್ತಿ ಮತ್ತು ವ್ಯಾಪಾರಗಳು ವಿಶೇಷವಾಗಿ ಕಾರ್ಯ ನಿರ್ವಹಿಸುತ್ತದೆ. ನಿರುದ್ಯೋಗಿಗಳಿಗೆ ಹಿರಿಯರ ಕೃಪೆಯಿಂದ ಹೊಸ ಅವಕಾಶಗಳು, ದೊರೆಯುತ್ತವೆ ಕೈಗೊಂಡ ಕಾರ್ಯಗಳು ನಿರಾಯಾಸವಾಗಿ ಪೂರ್ಣಗೊಳ್ಳುತ್ತವೆ. ಉದ್ಯೋಗದಲ್ಲಿ ಪ್ರಗತಿ ಕಂಡು ಬರುತ್ತದೆ,

ಗಮನಿಸಿ:- ಇಂದು ನಿಮ್ಮ ಗೌರವ ಪ್ರತಿಷ್ಟೆಗಳು ಹೆಚ್ಚಾಗುತ್ತದೆ,

ಪರಿಹಾರ:-ಶ್ರೀದಕ್ಷಿಣಾಮೂರ್ತಿಯನ್ನು ಪ್ರಾರ್ಥಿಸಿ,


  • 10,🐊ಮಕರ ರಾಶಿ🐊

📃,ಇಂದು ಧರ್ಮದ ಕಡೆಗೆ ಒಲವು ತೋರುತ್ತೀರಿ.ಗೃಹ ಸಂತೋಷ ಹೆಚ್ಚಲಿದೆ. ಅನಾರೋಗ್ಯದ ಸಮಸ್ಯೆಗಳು ಬಾಧಿಸುತ್ತವೆ.ಪ್ರಮುಖಕಾರ್ಯಗಳನ್ನು, ಮುಂದೂಡುವುದು ಉತ್ತಮ. ಆಧ್ಯಾತ್ಮಿಕ ಸೇವಾ ಕಾರ್ಯಕ್ರಮಗಳಲ್ಲಿವಿಶೇಷವಾಗಿ ಭಾಗವಹಿಸುತ್ತೀರಿ. ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ವಿವಾದಗಳು ಉಂಟಾಗುತ್ತವೆ. ವ್ಯವಹಾರದ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು,

ಗಮನಿಸಿ:- ಇಂದು ಉದ್ಯೋಗದಲ್ಲಿ ಸ್ವಲ್ಪ ಕಿರಿಕಿರಿ ಉಂಟಾಗುತ್ತದೆ,

ಪರಿಹಾರ:-ಗ್ರಾಮ ದೇವತೆಗೆ ಪೂಜೆ ಸಲ್ಲಿಸಿ,


  • 11,⚱️ಕುಂಭ ರಾಶಿ⚱️

📃,ಹಣಕಾಸಿನ ಪರಿಸ್ಥಿತಿ ಅಸ್ತವ್ಯಸ್ತವಾಗಿರುತ್ತದೆ. ಸಹೋದರರೊಂದಿಗೆ ವಿವಾದ ಉಂಟಾಗುತ್ತದೆ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಕೈಗೊಂಡ ವ್ಯವಹಾರಗಳು ನಿರಾಶಾದಾಯಕವಾಗಿರುತ್ತವೆ. ವ್ಯಾಪಾರ-ವ್ಯವಹಾರಗಳು ಸುಗಮವಾಗಿ ಸಾಗುತ್ತವೆ,

ಗಮನಿಸಿ:- ಇಂದು ಉದ್ಯೋಗದಲ್ಲಿ ಅಧಿಕಾರಿಗಳ ಒತ್ತಡ ಹೆಚ್ಚಾಗುತ್ತದೆ,

ಪರಿಹಾರ:-ನಿಮ್ಮ ಕುಲದೇವರ ದರ್ಶನ ಮಾಡಿ,


  • 12,🐬ಮೀನ ರಾಶಿ🐬

📃,ಬೆಲೆಬಾಳುವ ವಸ್ತ್ರಆಭರಣಗಳನ್ನು ಇಂದು ನೀವು ಖರೀದಿಸಬಹುದು. ನಿರುದ್ಯೋಗ ಪ್ರಯತ್ನಗಳಲ್ಲಿ ಧನಾತ್ಮಕ ಫಲಿತಾಂಶಗಳಿರುತ್ತವೆ ಹಠಾತ್ ಆರ್ಥಿಕ ಲಾಭದ ಸೂಚನೆಗಳಿವೆ. ಕೈಗೊಂಡ ಕೆಲಸದಲ್ಲಿ ಕಾರ್ಯಸಿದ್ಧಿ ಉಂಟಾಗುತ್ತದೆ. ದೈವಿಕ ಚಿಂತನೆ ಹೆಚ್ಚಾಗುತ್ತದೆ. ಕೆಲವು ವ್ಯವಹಾರಗಳು ನಿಧಾನಗತಿಯಲ್ಲಿ ಸಾಗುತ್ತವೆ,

ಗಮನಿಸಿ:-ಉದ್ಯೋಗದಲ್ಲಿ ನಿರೀಕ್ಷಿತ ಬದಲಾವಣೆಗಳಿರುತ್ತವೆ, 

ಪರಿಹಾರ:- ನವಗ್ರಹ ಪ್ರಾರ್ಥನೆ ಮಾಡಿ,


ಇವು ಇಂದಿನ ದ್ವಾದಶ ರಾಶಿಗಳ ದಿನಭವಿಷ್ಯ. ಗ್ರಹಗಳ ಪ್ರಭಾವವು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬ ನಂಬಿಕೆಯಲ್ಲಿ, ಈ ಮಾಹಿತಿಯನ್ನು ಮಾರ್ಗದರ್ಶನವಾಗಿ ಪಡೆದುಕೊಳ್ಳಿ. ನಾಳೆಯ ದಿನಭವಿಷ್ಯಕ್ಕಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡುವುದನ್ನು ಮರೆಯಬೇಡಿ. ಶುಭ ದಿನ! 🌟

 

ಮೂಲ : ಜೋತಿಷ್ಯರು ಪ್ರಾಚೀನ ಶಾಸ್ತ್ರಾಸಕ್ತ,ಎಲ್ ವಿವೇಕಾನಂದ ಆಚಾರ್ಯ

ಮೂಲ : ಜೋತಿಷ್ಯರು ಶಾಸ್ತ್ರಾಸಕ್ತ,ಎಲ್ ವಿವೇಕಾನಂದ ಆಚಾರ್ಯ
Previous Post

ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನ..!

Next Post

ಜಿಲ್ಲಾ ಬಿಜೆಪಿಯಿಂದ ‘ನಾರಿ ಶಕ್ತಿ ವಂದನ ಸಮ್ಮೇಳನ’ದ ನೇರ ಪ್ರಸಾರ ವೀಕ್ಷಣೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಜಿಲ್ಲಾ ಬಿಜೆಪಿಯಿಂದ ‘ನಾರಿ ಶಕ್ತಿ ವಂದನ ಸಮ್ಮೇಳನ’ದ ನೇರ ಪ್ರಸಾರ ವೀಕ್ಷಣೆ

ಜಿಲ್ಲಾ ಬಿಜೆಪಿಯಿಂದ 'ನಾರಿ ಶಕ್ತಿ ವಂದನ ಸಮ್ಮೇಳನ'ದ ನೇರ ಪ್ರಸಾರ ವೀಕ್ಷಣೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕರಾಯ ಬ್ರಹ್ಮಕಲಶೋತ್ಸವ: ದ್ವಾದಶ ಜ್ಯೋತಿರ್ಲಿಂಗ ದರ್ಶನ ಮೇಳಕ್ಕೆ ಚಾಲನೆ

ಕರಾಯ ಬ್ರಹ್ಮಕಲಶೋತ್ಸವ: ದ್ವಾದಶ ಜ್ಯೋತಿರ್ಲಿಂಗ ದರ್ಶನ ಮೇಳಕ್ಕೆ ಚಾಲನೆ

15/04/2026
ತೇಜಸ್ F404-IN20 ಇಂಜಿನ್‌ ನಿರ್ವಹಣೆಗೆ ದೇಶೀಯ ಡಿಪೋ: ಜಿಇ–ವಾಯುಪಡೆ ಒಪ್ಪಂದ..!

ತೇಜಸ್ F404-IN20 ಇಂಜಿನ್‌ ನಿರ್ವಹಣೆಗೆ ದೇಶೀಯ ಡಿಪೋ: ಜಿಇ–ವಾಯುಪಡೆ ಒಪ್ಪಂದ..!

15/04/2026
ಉಡುಪಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಹೆಚ್ಚಿಸಲು: ಆಗ್ರಹಿಸಿ ಸಿಪಿಎಂ ಮನವಿ

ಉಡುಪಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಹೆಚ್ಚಿಸಲು: ಆಗ್ರಹಿಸಿ ಸಿಪಿಎಂ ಮನವಿ

15/04/2026
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಏಪ್ರಿಲ್ 15 ಬುಧವಾರ  )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಏಪ್ರಿಲ್ 15 ಬುಧವಾರ  )

15/04/2026

Recent News

ಕರಾಯ ಬ್ರಹ್ಮಕಲಶೋತ್ಸವ: ದ್ವಾದಶ ಜ್ಯೋತಿರ್ಲಿಂಗ ದರ್ಶನ ಮೇಳಕ್ಕೆ ಚಾಲನೆ

ಕರಾಯ ಬ್ರಹ್ಮಕಲಶೋತ್ಸವ: ದ್ವಾದಶ ಜ್ಯೋತಿರ್ಲಿಂಗ ದರ್ಶನ ಮೇಳಕ್ಕೆ ಚಾಲನೆ

15/04/2026
ತೇಜಸ್ F404-IN20 ಇಂಜಿನ್‌ ನಿರ್ವಹಣೆಗೆ ದೇಶೀಯ ಡಿಪೋ: ಜಿಇ–ವಾಯುಪಡೆ ಒಪ್ಪಂದ..!

ತೇಜಸ್ F404-IN20 ಇಂಜಿನ್‌ ನಿರ್ವಹಣೆಗೆ ದೇಶೀಯ ಡಿಪೋ: ಜಿಇ–ವಾಯುಪಡೆ ಒಪ್ಪಂದ..!

15/04/2026
ಉಡುಪಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಹೆಚ್ಚಿಸಲು: ಆಗ್ರಹಿಸಿ ಸಿಪಿಎಂ ಮನವಿ

ಉಡುಪಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಹೆಚ್ಚಿಸಲು: ಆಗ್ರಹಿಸಿ ಸಿಪಿಎಂ ಮನವಿ

15/04/2026
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಏಪ್ರಿಲ್ 15 ಬುಧವಾರ  )

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಏಪ್ರಿಲ್ 15 ಬುಧವಾರ  )

15/04/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved