Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ನಾಗ್ಪುರ ಚಲನಚಿತ್ರೋತ್ಸವ 2026: ಮಾಹೆ ನಿರ್ಮಾಣದ ‘ಡಿಸರ್ನಿಂಗ್ ಇಂಡಿಯಾ: ಯಕ್ಷಗಾನ’ಕ್ಕೆ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ ಗರಿ

Dhrishya News by Dhrishya News
02/04/2026
in ಸುದ್ದಿಗಳು
0
ನಾಗ್ಪುರ ಚಲನಚಿತ್ರೋತ್ಸವ 2026: ಮಾಹೆ ನಿರ್ಮಾಣದ ‘ಡಿಸರ್ನಿಂಗ್ ಇಂಡಿಯಾ: ಯಕ್ಷಗಾನ’ಕ್ಕೆ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ ಗರಿ
0
SHARES
13
VIEWS
Share on FacebookShare on Twitter

ಮಣಿಪಾಲ್‌, ಏಪ್ರಿಲ್ 02, 2026: ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯಿಂದ ನಿರ್ಮಿಸಲಾದ ‘ಡಿಸರ್ನಿಂಗ್ ಇಂಡಿಯಾ: ಯಕ್ಷಗಾನ’ ಸಾಕ್ಷ್ಯಚಿತ್ರವು ‘ನಾಗ್ಪುರ ಚಲನಚಿತ್ರೋತ್ಸವ 2026’ರಲ್ಲಿ ವೃತ್ತಿಪರ ವಿಭಾಗದ ‘ಅತ್ಯುತ್ತಮ ಸಾಕ್ಷ್ಯಚಿತ್ರ’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಮಾಹೆಯ ‘ಅಂತರಸಾಂಸ್ಕೃತಿಕ ಅಧ್ಯಯನ ಮತ್ತು ಸಂವಾದ ಕೇಂದ್ರ’ (ಸಿಐಎಸ್‌ಡಿ) ಈ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದು, ಕರಾವಳಿ ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನದ ಐತಿಹಾಸಿಕ ವಿಕಸನ ಮತ್ತು ಸಾಂಸ್ಕೃತಿಕ ಮಹತ್ವವನ್ನು ಇದು ಜಗತ್ತಿಗೆ ಪರಿಚಯಿಸಿದೆ.

ಈ ಬಾರಿಯ ನಾಗ್ಪುರ ಚಲನಚಿತ್ರೋತ್ಸವಕ್ಕೆ ದೇಶದಾದ್ಯಂತ ವಿವಿಧ ವಿಭಾಗಗಳಲ್ಲಿ ಒಟ್ಟು 304 ಪ್ರವೇಶಾತಿಗಳು ಬಂದಿದ್ದವು. ಕಠಿಣ ಆಯ್ಕೆ ಪ್ರಕ್ರಿಯೆಯ ನಂತರ 189 ಚಿತ್ರಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಮಾಹೆಯ ‘ಯಕ್ಷಗಾನ’ ಸಾಕ್ಷ್ಯಚಿತ್ರವು ಕಲಾತ್ಮಕ ಮೌಲ್ಯ ಮತ್ತು ಆಳವಾದ ಸಂಶೋಧನೆಯಿಂದಾಗಿ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ನಾಗ್ಪುರದ ರಾಷ್ಟ್ರಸಂತ ತುಕಾಡೋಜಿ ಮಹಾರಾಜ್ ವಿಶ್ವವಿದ್ಯಾಲಯದಲ್ಲಿ ಮಾರ್ಚ್ 29 ರಂದು ಈ ಚಿತ್ರದ ಪ್ರದರ್ಶಿಸಲಾಯಿತು.

ಸಿಐಎಸ್‌ಡಿ ಸಂಸ್ಥೆಯ ‘ಲಿವಿಂಗ್ ಕಲ್ಚರ್ಸ್ ಆಫ್ ತುಳುನಾಡು’ ಎಂಬ ಮಹತ್ವಾಕಾಂಕ್ಷೆಯ ಸಂಶೋಧನಾ ಯೋಜನೆಯ ಭಾಗವಾಗಿ ಈ ಸಾಕ್ಷ್ಯಚಿತ್ರವನ್ನು ಸಿದ್ಧಪಡಿಸಲಾಗಿದೆ. ಕರಾವಳಿಯ ಸಂಪ್ರದಾಯಗಳನ್ನು ಸಂರಕ್ಷಿಸುವ ಮತ್ತು ವಿಶ್ಲೇಷಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.

ಈ ಪ್ರಶಸ್ತಿಯು ಸಾಕ್ಷ್ಯಚಿತ್ರದ ಸಾಧನೆಗೆ ಹೊಸ ಗರಿ ಸೇರಿದಂತಾಗಿದ್ದು, ಇದು ಈಗಾಗಲೇ ವಾರಣಾಸಿಯ ಅಂತರರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ‘ಜ್ಯೂರಿ ಪ್ರಶಸ್ತಿ’ ಪಡೆದಿದೆ. ಜತೆಗೆ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆದ ‘ವರ್ಲ್ಡ್ ಕಲ್ಚರ್ಸ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಸೆಮಿಫೈನಲಿಸ್ಟ್ ಹಂತಕ್ಕೆ ಆಯ್ಕೆಯಾಗಿತ್ತು.

ಈ ಕುರಿತು ಮಾತನಾಡಿದ ಸಿಐಎಸ್‌ಡಿ ಸಂಯೋಜಕ ಡಾ. ಪ್ರವೀಣ್ ಕೆ. ಶೆಟ್ಟಿ ಅವರು, ‘ಈ ಪ್ರಶಸ್ತಿಯು ಶೈಕ್ಷಣಿಕ ಸಂಶೋಧನೆ ಮತ್ತು ಸಾಂಸ್ಕೃತಿಕ ದಾಖಲೀಕರಣದ ನಡುವೆ ಅರ್ಥಪೂರ್ಣ ಸೇತುವೆಯನ್ನು ನಿರ್ಮಿಸುವ ಹಾಗೂ ಅಂತರಶಿಸ್ತೀಯ ಸಂಶೋಧನೆಗೆ ಉತ್ತೇಜನ ನೀಡಿದೆ. ಈ ಸಾಕ್ಷ್ಯಚಿತ್ರದ ಯಶಸ್ಸು, ಆಳವಾದ ಸಂಶೋಧನೆ ಮತ್ತು ನವೀನ ಕಥಾವಾಚನದ ಮೂಲಕ ಭಾರತದ ಪರಂಪರೆಗಳೊಂದಿಗೆ ನಿರಂತರ ಸಂಪರ್ಕವನ್ನು ಸಾಧಿಸುವಲ್ಲಿ ಸಿಐಎಸ್‌ಡಿ ವಹಿಸುತ್ತಿರುವ ಮಹತ್ವದ ಪಾತ್ರವನ್ನು ಪುನರುಚ್ಚರಿಸುತ್ತದೆʼ ಎಂದು ತಿಳಿಸಿದ್ದಾರೆ.

Previous Post

ಇಂದಿನ ರಾಶಿಭವಿಷ್ಯ: ದ್ವಾದಶ ರಾಶಿಗಳ ದಿನಫಲ (02-04-2026,ಗುರುವಾರ )

Next Post

ರೈಲ್ವೆ ಹಳಿಗಳ ಮೇಲೆ ಪ್ರಾಣ ಉಳಿಸಿದ ಹೆಡ್ ಕಾನ್‌ಸ್ಟೆಬಲ್ ಶ್ರೀಧರ್ ಮೂರ್ತಿ ಅವರಿಗೆ ಹೊಸ್ಮತ್ ಆಸ್ಪತ್ರೆಯಿಂದ ‘ಗುಡ್ ಸಮಾರಿಟನ್’ ಪ್ರಶಸ್ತಿ ಗೌರವ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ರೈಲ್ವೆ ಹಳಿಗಳ ಮೇಲೆ ಪ್ರಾಣ ಉಳಿಸಿದ ಹೆಡ್ ಕಾನ್‌ಸ್ಟೆಬಲ್ ಶ್ರೀಧರ್ ಮೂರ್ತಿ ಅವರಿಗೆ ಹೊಸ್ಮತ್ ಆಸ್ಪತ್ರೆಯಿಂದ ‘ಗುಡ್ ಸಮಾರಿಟನ್’ ಪ್ರಶಸ್ತಿ ಗೌರವ

ರೈಲ್ವೆ ಹಳಿಗಳ ಮೇಲೆ ಪ್ರಾಣ ಉಳಿಸಿದ ಹೆಡ್ ಕಾನ್‌ಸ್ಟೆಬಲ್ ಶ್ರೀಧರ್ ಮೂರ್ತಿ ಅವರಿಗೆ ಹೊಸ್ಮತ್ ಆಸ್ಪತ್ರೆಯಿಂದ 'ಗುಡ್ ಸಮಾರಿಟನ್' ಪ್ರಶಸ್ತಿ ಗೌರವ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಪ್ರತಿಷ್ಠಿತ ‘ಎಫ್‌ಆರ್‌ಸಿಪಿ ಎಡಿನ್‌ಬರ್ಗ್’ ಫೆಲೋಶಿಪ್ ಗೌರವ ಪಡೆದ ಡಾ| ಉನ್ನಿಕೃಷ್ಣನ್ ಹಾಗೂ ಡಾ|ಶಿರನ್ ಶೆಟ್ಟಿ ಅವರಿಗೆ ಮಾಹೆಯಲ್ಲಿ ಸನ್ಮಾನ

ಪ್ರತಿಷ್ಠಿತ ‘ಎಫ್‌ಆರ್‌ಸಿಪಿ ಎಡಿನ್‌ಬರ್ಗ್’ ಫೆಲೋಶಿಪ್ ಗೌರವ ಪಡೆದ ಡಾ| ಉನ್ನಿಕೃಷ್ಣನ್ ಹಾಗೂ ಡಾ|ಶಿರನ್ ಶೆಟ್ಟಿ ಅವರಿಗೆ ಮಾಹೆಯಲ್ಲಿ ಸನ್ಮಾನ

09/06/2026
​ಶ್ರೀ ಅಂಬಾಭವಾನಿ ಗಾಲಿಮಾರಿ ದೇವಸ್ಥಾನದ ಭಕ್ತರ ಪ್ರತಿಭಟನೆ: ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್ ಮತ್ತು ಮುಖ್ಯಾಧಿಕಾರಿ

​ಶ್ರೀ ಅಂಬಾಭವಾನಿ ಗಾಲಿಮಾರಿ ದೇವಸ್ಥಾನದ ಭಕ್ತರ ಪ್ರತಿಭಟನೆ: ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್ ಮತ್ತು ಮುಖ್ಯಾಧಿಕಾರಿ

09/06/2026
ರೋಟರಿ ಕ್ಲಬ್ ಕಾರ್ಕಳ :ನೋಟ್ ಪುಸ್ತಕ ವಿತರಣೆ 

ರೋಟರಿ ಕ್ಲಬ್ ಕಾರ್ಕಳ :ನೋಟ್ ಪುಸ್ತಕ ವಿತರಣೆ 

09/06/2026
ನಿಟ್ಟೆ: ಮಹಿಳಾ ಸಬಲೀಕರಣ, ಮಾಹಿತಿ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರದೊಂದಿಗೆ ಸಂಪನ್ನಗೊಂಡ ‘ದೀಪ ಸಂಜೀವಿನಿ ಒಕ್ಕೂಟ’ದ ವಾರ್ಷಿಕ ಮಹಾಸಭೆ!

ನಿಟ್ಟೆ: ಮಹಿಳಾ ಸಬಲೀಕರಣ, ಮಾಹಿತಿ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರದೊಂದಿಗೆ ಸಂಪನ್ನಗೊಂಡ ‘ದೀಪ ಸಂಜೀವಿನಿ ಒಕ್ಕೂಟ’ದ ವಾರ್ಷಿಕ ಮಹಾಸಭೆ!

09/06/2026

Recent News

ಪ್ರತಿಷ್ಠಿತ ‘ಎಫ್‌ಆರ್‌ಸಿಪಿ ಎಡಿನ್‌ಬರ್ಗ್’ ಫೆಲೋಶಿಪ್ ಗೌರವ ಪಡೆದ ಡಾ| ಉನ್ನಿಕೃಷ್ಣನ್ ಹಾಗೂ ಡಾ|ಶಿರನ್ ಶೆಟ್ಟಿ ಅವರಿಗೆ ಮಾಹೆಯಲ್ಲಿ ಸನ್ಮಾನ

ಪ್ರತಿಷ್ಠಿತ ‘ಎಫ್‌ಆರ್‌ಸಿಪಿ ಎಡಿನ್‌ಬರ್ಗ್’ ಫೆಲೋಶಿಪ್ ಗೌರವ ಪಡೆದ ಡಾ| ಉನ್ನಿಕೃಷ್ಣನ್ ಹಾಗೂ ಡಾ|ಶಿರನ್ ಶೆಟ್ಟಿ ಅವರಿಗೆ ಮಾಹೆಯಲ್ಲಿ ಸನ್ಮಾನ

09/06/2026
​ಶ್ರೀ ಅಂಬಾಭವಾನಿ ಗಾಲಿಮಾರಿ ದೇವಸ್ಥಾನದ ಭಕ್ತರ ಪ್ರತಿಭಟನೆ: ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್ ಮತ್ತು ಮುಖ್ಯಾಧಿಕಾರಿ

​ಶ್ರೀ ಅಂಬಾಭವಾನಿ ಗಾಲಿಮಾರಿ ದೇವಸ್ಥಾನದ ಭಕ್ತರ ಪ್ರತಿಭಟನೆ: ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್ ಮತ್ತು ಮುಖ್ಯಾಧಿಕಾರಿ

09/06/2026
ರೋಟರಿ ಕ್ಲಬ್ ಕಾರ್ಕಳ :ನೋಟ್ ಪುಸ್ತಕ ವಿತರಣೆ 

ರೋಟರಿ ಕ್ಲಬ್ ಕಾರ್ಕಳ :ನೋಟ್ ಪುಸ್ತಕ ವಿತರಣೆ 

09/06/2026
ನಿಟ್ಟೆ: ಮಹಿಳಾ ಸಬಲೀಕರಣ, ಮಾಹಿತಿ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರದೊಂದಿಗೆ ಸಂಪನ್ನಗೊಂಡ ‘ದೀಪ ಸಂಜೀವಿನಿ ಒಕ್ಕೂಟ’ದ ವಾರ್ಷಿಕ ಮಹಾಸಭೆ!

ನಿಟ್ಟೆ: ಮಹಿಳಾ ಸಬಲೀಕರಣ, ಮಾಹಿತಿ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರದೊಂದಿಗೆ ಸಂಪನ್ನಗೊಂಡ ‘ದೀಪ ಸಂಜೀವಿನಿ ಒಕ್ಕೂಟ’ದ ವಾರ್ಷಿಕ ಮಹಾಸಭೆ!

09/06/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved