Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ನೇತ್ರ ಮೈಕ್ರೋಸರ್ಜಿಕಲ್ ಸಿಮ್ಯುಲೇಶನ್ ಲ್ಯಾಬ್ ಉದ್ಘಾಟನೆ..!

ನೇತ್ರಶಾಸ್ತ್ರ ಸ್ನಾತಕೋತ್ತರ ತರಬೇತಿಗಾಗಿ ಈ ಸೌಲಭ್ಯವನ್ನು ನೀಡುತ್ತಿರುವ ಕರ್ನಾಟಕದ ಮೊದಲ ವೈದ್ಯಕೀಯ ಕಾಲೇಜು ಇದಾಗಿದೆ

Dhrishya News by Dhrishya News
24/03/2026
in ಮುಖಪುಟ, ಸುದ್ದಿಗಳು
0
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ನೇತ್ರ ಮೈಕ್ರೋಸರ್ಜಿಕಲ್ ಸಿಮ್ಯುಲೇಶನ್ ಲ್ಯಾಬ್ ಉದ್ಘಾಟನೆ..!
0
SHARES
10
VIEWS
Share on FacebookShare on Twitter

ಮಣಿಪಾಲ, ಮಾರ್ಚ್ 24, 2026: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ (KMC)ದ ನೇತ್ರಶಾಸ್ತ್ರ ವಿಭಾಗವು ಕಸ್ತೂರ್ಬಾ ಆಸ್ಪತ್ರೆಯಲ್ಲಿ ನೇತ್ರ ಮೈಕ್ರೋಸರ್ಜಿಕಲ್ ಕೌಶಲ್ಯ ಮತ್ತು ಸಿಮ್ಯುಲೇಶನ್ ಲ್ಯಾಬ್ ಅನ್ನು ಇಂದು ಉದ್ಘಾಟಿಸಿದ್ದು, ಇದು ಸಿಮ್ಯುಲೇಶನ್ ಆಧಾರಿತ ಶಸ್ತ್ರಚಿಕಿತ್ಸಾ ಶಿಕ್ಷಣ ಮತ್ತು ತರಬೇತಿಯಲ್ಲಿ ಮಹತ್ವದ ಹೆಜ್ಜೆಯಾಗಿದೆ. “ನೇತ್ರಶಾಸ್ತ್ರ ಸ್ನಾತಕೋತ್ತರ ತರಬೇತಿಗಾಗಿ ಈ ಸೌಲಭ್ಯವನ್ನು ನೀಡುತ್ತಿರುವ ಕರ್ನಾಟಕದ ಮೊದಲ ವೈದ್ಯಕೀಯ ಕಾಲೇಜು ಇದಾಗಿದೆ.”

ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಲ್ಯಾಬ್ ಅನ್ನು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ನ ಸಹ ಉಪ ಕುಲಪತಿ ಡಾ ಶರತ್ ಕೆ ರಾವ್ ಉದ್ಘಾಟಿಸಿದರು. ನವೀನತೆ ಮತ್ತು ಸಿಮ್ಯುಲೇಶನ್ ಮೂಲಕ ಭವಿಷ್ಯದ ಶಸ್ತ್ರಚಿಕಿತ್ಸಕರ ತರಬೇತಿ ಉದ್ದೇಶದಿಂದ ಈ ಲ್ಯಾಬ್ ಸ್ಥಾಪಿಸಲಾಗಿದ್ದು, ಸುರಕ್ಷಿತ ಮತ್ತು ಸಂರಚಿತ ವಾತಾವರಣದಲ್ಲಿ ಕೈಚಳಕದ ಮೈಕ್ರೋಸರ್ಜಿಕಲ್ ಕೌಶಲ್ಯಗಳನ್ನು ವೃದ್ಧಿಸುವುದಕ್ಕೆ ಇದು ಸಹಕಾರಿಯಾಗಲಿದೆ.

ಕೆಎಂಸಿ ಮಣಿಪಾಲದ ಡೀನ್ ಡಾ. ಅನಿಲ್ ಕೆ. ಭಟ್, ಕಸ್ತೂರ್ಬಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ,ಹಾಗೂ ನೇತ್ರ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಯೋಗಿಶ್ ಎಸ್. ಕಾಮತ್ ಉಪಸ್ಥಿತರಿದ್ದರು. ವಿಭಾಗದ ಅಧ್ಯಾಪಕರು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಯ ಆಡಳಿತ ಸಿಬ್ಬಂದಿಯೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹೊಸ ಲ್ಯಾಬ್‌ನಲ್ಲಿ ಅತ್ಯಾಧುನಿಕ ಸಿಮ್ಯುಲೇಶನ್ ಮತ್ತು ವೆಟ್ ಲ್ಯಾಬ್ ಸೌಲಭ್ಯಗಳು ಲಭ್ಯವಿದ್ದು, ಇದರಲ್ಲಿ ಕಣ್ಣಿನ ಪೊರೆ ಹಾಗೂ ವಿಟ್ರಿಯೋರೆಟಿನಲ್ ಶಸ್ತ್ರಚಿಕಿತ್ಸಾ ಮಾಡ್ಯೂಲ್‌ಗಳನ್ನು ಹೊಂದಿರುವ ಐ ಸಿ ಸರ್ಜಿಕಲ್ ಸಿಮ್ಯುಲೇಟರ್ (Haag Streit), ಉನ್ನತ ಮಟ್ಟದ ಮೈಕ್ರೋಸರ್ಜಿಕಲ್ ವೆಟ್ ಲ್ಯಾಬ್, ಅಲ್ಕೋನ್ ಲಾರಿಯೇಟ್ ಫೇಕೋ ಸಿಸ್ಟಮ್, ಹಾಗೂ ಝೆಯಿಸಿಸ್ ಒಪ್ಮಿ ವಿಸು ಎಸ್7 ಆಪರೇಟಿಂಗ್ ಮೈಕ್ರೋಸ್ಕೋಪ್ ಸೇರಿವೆ.

ಈ ಸಂದರ್ಭದಲ್ಲಿ ಮಾತನಾಡಿದ ಡಾ ಶರತ್ ರಾವ್, ನೈಜ ಶಸ್ತ್ರಚಿಕಿತ್ಸೆಗೆ ಮುನ್ನ ತರಬೇತಿಗಾರರ ನಿಖರತೆ, ರೋಗಿ ಸುರಕ್ಷತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಸಿಮ್ಯುಲೇಶನ್ ಆಧಾರಿತ ತರಬೇತಿಯ ಮಹತ್ವವನ್ನು ಒತ್ತಿ ಹೇಳಿದರು. ಈ ಸೌಲಭ್ಯವು ಕೆಎಂಸಿ ಮಣಿಪಾಲದಲ್ಲಿ ನೇತ್ರವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ವೈದ್ಯಕೀಯ ಶಿಕ್ಷಣದಲ್ಲಿ ಶೈಕ್ಷಣಿಕ ಶ್ರೇಷ್ಠತೆ ಮತ್ತು ನವೀನತೆಗೆ ಮಾಹೆ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.

ಲ್ಯಾಬ್ ಸೌಲಭ್ಯಗಳ ವಿವರ ಮತ್ತು ಮುಂದಿನ ಶೈಕ್ಷಣಿಕ ಕಾರ್ಯಕ್ರಮಗಳ ರೂಪುರೇಷೆಯನ್ನು ಡಾ. ಸೌಮ್ಯ ಎಸ್., ಸಹ ಪ್ರಾಧ್ಯಾಪಕರು ಹಾಗೂ ಕೋರ್ಸ್ ಸಂಯೋಜಕರು, ಡಾ. ಯೋಗಿಶ್ ಎಸ್. ಕಾಮತ್, ಮತ್ತು ಡಾ. ರುತ್ವಿ ದೋಷಿ, ಸ್ನಾತಕೋತ್ತರ ವಿದ್ಯಾರ್ಥಿ ಪ್ರತಿನಿಧಿ ಮಂಡಿಸಿದರು. ಇವರು ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಫೆಲೋಗಳ ಕೌಶಲ್ಯಾಭಿವೃದ್ಧಿಯಲ್ಲಿ ಈ ಲ್ಯಾಬ್‌ನ ಪಾತ್ರವನ್ನು ವಿವರಿಸಿದರು.

Previous Post

ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗ ವಿಜಯ್ ಭಾರದ್ವಾಜ್ ಕೃಷ್ಣ ಮಠಕ್ಕೆ ಭೇಟಿ

Next Post

ಧರ್ಮಾಂತರಗೊಂಡವರಿಗೆ ಎಸ್‌ಸಿ, ಎಸ್ಟಿ ಸ್ಥಾನಮಾನ ಅನ್ವಯಿಸುವುದಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಧರ್ಮಾಂತರಗೊಂಡವರಿಗೆ ಎಸ್‌ಸಿ, ಎಸ್ಟಿ ಸ್ಥಾನಮಾನ ಅನ್ವಯಿಸುವುದಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

ಧರ್ಮಾಂತರಗೊಂಡವರಿಗೆ ಎಸ್‌ಸಿ, ಎಸ್ಟಿ ಸ್ಥಾನಮಾನ ಅನ್ವಯಿಸುವುದಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕ್ರೈಸ್ಟ್ ವಿವಿ ಸಹಭಾಗಿತ್ವದಲ್ಲಿ ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಸ್ಥಾಪನೆ: ಎಐ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ, ಪ್ರತಿಭಾ ಸಂಪನ್ಮೂಲ ಅಭಿವೃದ್ಧಿಗೆ ಬಲ

ಕ್ರೈಸ್ಟ್ ವಿವಿ ಸಹಭಾಗಿತ್ವದಲ್ಲಿ ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಸ್ಥಾಪನೆ: ಎಐ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ, ಪ್ರತಿಭಾ ಸಂಪನ್ಮೂಲ ಅಭಿವೃದ್ಧಿಗೆ ಬಲ

13/08/2026
ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ನಟಿ ಕೃತಿ ಶೆಟ್ಟಿ ಇಂದ್ರಿಯಾ ಬ್ರ್ಯಾಂಡ್ ರಾಯಭಾರಿ: ನೂತನ ವರಮಹಾಲಕ್ಷ್ಮಿ ಅಭಿಯಾನ ಅನಾವರಣ

ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ನಟಿ ಕೃತಿ ಶೆಟ್ಟಿ ಇಂದ್ರಿಯಾ ಬ್ರ್ಯಾಂಡ್ ರಾಯಭಾರಿ: ನೂತನ ವರಮಹಾಲಕ್ಷ್ಮಿ ಅಭಿಯಾನ ಅನಾವರಣ

13/08/2026
ಮಾಹೆಯ 5 ಅಂಗಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್ ಲ್ಯಾಬ್‌: ಎಐ ಹಾಗೂ ನಾವೀನ್ಯತೆಯತ್ತ ದೃಢ ಹೆಜ್ಜೆ

ಮಾಹೆಯ 5 ಅಂಗಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್ ಲ್ಯಾಬ್‌: ಎಐ ಹಾಗೂ ನಾವೀನ್ಯತೆಯತ್ತ ದೃಢ ಹೆಜ್ಜೆ

13/08/2026
ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

13/08/2026

Recent News