ಮಂಗಳೂರು, ಮಾ.14: ಮಂಗಳೂರು ಮತ್ತು ರಾಮೇಶ್ವರ ನಡುವಿನ ವಾರಂತ್ಯ ರೈಲು ಸೇವೆ ಆರಂಭವಾಗುತ್ತಿದೆ. ಮಂಗಳೂರು ಸೆಂಟ್ರಲ್‌ನಿಂದ ರಾಮೇಶ್ವರಕ್ಕೆ ರೈಲು ಸಂಚಾರ ಮಾ.14ರಂದು ಪ್ರಾರಂಭವಾಗಲಿದ್ದು, ರಾಮೇಶ್ವರದಿಂದ ಮಂಗಳೂರಿಗೆ ಮಾ.15ರಿಂದ ಸೇವೆ ಆರಂಭವಾಗಲಿದೆ.
ಮಂಗಳೂರು ಸೆಂಟ್ರಲ್–ರಾಮೇಶ್ವರ ವಾರಂತ್ಯ ಎಕ್ಸ್‌ಪ್ರೆಸ್ (16622) ರೈಲು ಪ್ರತಿ ಶನಿವಾರ ರಾತ್ರಿ 7.30ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಟು, ಮರುದಿನ ಬೆಳಗ್ಗೆ 10.50ಕ್ಕೆ ರಾಮೇಶ್ವರ ತಲುಪಲಿದೆ.
ಇನ್ನೊಂದೆಡೆ, ರಾಮೇಶ್ವರ–ಮಂಗಳೂರು ಸೆಂಟ್ರಲ್ ವಾರಂತ್ಯ ಎಕ್ಸ್‌ಪ್ರೆಸ್ (16621) ರೈಲು ಪ್ರತಿ ರವಿವಾರ ಮಧ್ಯಾಹ್ನ 3.30ಕ್ಕೆ ರಾಮೇಶ್ವರದಿಂದ ಹೊರಟು, ಮರುದಿನ ಬೆಳಗ್ಗೆ 6.55ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ ಎಂದು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.







