Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಯುದ್ಧದ ಪರಿಣಾಮ: ವಾಣಿಜ್ಯ ಗ್ಯಾಸ್ ಸರಬರಾಜು ವ್ಯತ್ಯಯ, ಪರ್ಯಾಯ ಇಂಧನ ಬಳಕೆ ಅಗತ್ಯ – ಡಿಸಿ….!

Dhrishya News by Dhrishya News
14/03/2026
in ಕರಾವಳಿ, ಸುದ್ದಿಗಳು
0
ಯುದ್ಧದ ಪರಿಣಾಮ: ವಾಣಿಜ್ಯ ಗ್ಯಾಸ್ ಸರಬರಾಜು ವ್ಯತ್ಯಯ, ಪರ್ಯಾಯ ಇಂಧನ ಬಳಕೆ ಅಗತ್ಯ – ಡಿಸಿ….!
0
SHARES
9
VIEWS
Share on FacebookShare on Twitter

ಉಡುಪಿ, ಮಾ.14: ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯಿಂದಾಗಿ ದೇಶದಲ್ಲಿ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇದರ ಪರಿಣಾಮವಾಗಿ ಹೋಟೆಲ್ ಉದ್ಯಮಿಗಳು ಸಂಕಷ್ಟ ಎದುರಿಸುತ್ತಿದ್ದು, ಪರ್ಯಾಯವಾಗಿ ಕಟ್ಟಿಗೆ ಹಾಗೂ ವಿದ್ಯುತ್ ಉರುವಲುಗಳನ್ನು ಬಳಸುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸಲಹೆ ನೀಡಿದ್ದಾರೆ.

ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಾಣಿಜ್ಯ ಅನಿಲ ಸಿಲಿಂಡರ್‌ಗಳ ಸರಬರಾಜು ಸಮಸ್ಯೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗೃಹ ಬಳಕೆಯ ಅನಿಲ ಸಿಲಿಂಡರ್‌ಗಳ ಸರಬರಾಜಿನಲ್ಲಿ ಯಾವುದೇ ತೊಂದರೆ ಇಲ್ಲ. ಆದರೆ ವಾಣಿಜ್ಯ ಬಳಕೆಯ ಅನಿಲವನ್ನು ಹೆಚ್ಚಿನ ಪ್ರಮಾಣದಲ್ಲಿ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದು, ಯುದ್ಧದ ಪರಿಣಾಮದಿಂದ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇದು ತಾತ್ಕಾಲಿಕ ಸಮಸ್ಯೆಯಾಗಿದ್ದು, ಪರ್ಯಾಯ ಇಂಧನ ಬಳಕೆಯೇ ಪ್ರಸ್ತುತ ಪರಿಹಾರ ಮಾರ್ಗ ಎಂದು ಅವರು ಹೇಳಿದರು.

ಜಿಲ್ಲೆಯ ಕೆಲ ಹೋಟೆಲ್‌ಗಳು ಈಗಾಗಲೇ ಕಟ್ಟಿಗೆ ಸೇರಿದಂತೆ ಇತರೆ ಉರುವಲುಗಳನ್ನು ಬಳಸಿ ಆಹಾರ ತಯಾರಿಕೆ ನಡೆಸುತ್ತಿವೆ. ಜಿಲ್ಲೆಯ ಎಲ್ಲಾ ಹೋಟೆಲ್‌ಗಳು ಇದೇ ಕ್ರಮ ಅನುಸರಿಸುವ ಮೂಲಕ ಉದ್ಯಮ ಮುಂದುವರೆಸುವುದರ ಜೊತೆಗೆ ಕಾರ್ಮಿಕರ ಉದ್ಯೋಗವನ್ನು ಕಾಪಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿ ಸುಮಾರು 25,000 ರಿಂದ 30,000ಕ್ಕೂ ಹೆಚ್ಚು ಮಂದಿ ಹೋಟೆಲ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಬಹುತೇಕರು ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬಂದವರಾಗಿದ್ದು, ಉದ್ಯಮ ಸ್ಥಗಿತಗೊಂಡರೆ ಅವರು ಬೇರೆ ಉದ್ಯೋಗ ಹುಡುಕುವ ಸಾಧ್ಯತೆ ಇದೆ. ಇದರಿಂದ ಮುಂದಿನ ದಿನಗಳಲ್ಲಿ ಹೋಟೆಲ್‌ಗಳಿಗೆ ಕಾರ್ಮಿಕರ ಕೊರತೆ ಉಂಟಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ 80ಕ್ಕೂ ಹೆಚ್ಚು ಸಾಮಿಲ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಹೋಟೆಲ್ ಉದ್ಯಮಕ್ಕೆ ಅಗತ್ಯ ಕಟ್ಟಿಗೆ ಲಭ್ಯವಾಗುವಂತೆ ಸಹಕಾರ ನೀಡಬೇಕು. ಜೊತೆಗೆ ಹೋಟೆಲ್ ಉದ್ಯಮಿಗಳು ವಿದ್ಯುತ್ ಸ್ಟವ್ ಬಳಕೆಗೆ ಮುಂದಾದರೆ ಅಗತ್ಯ ನೆರವು ನೀಡುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ರವೀಂದ್ರ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Previous Post

ಕಮರ್ಷಿಯಲ್ ಗ್ಯಾಸ್ ಕೊರತೆ: ಜಿಲ್ಲಾಧಿಕಾರಿಗೆ ಹೋಟೆಲ್ ಮಾಲೀಕರ ಮನವಿ….!

Next Post

ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ನಗ ಕಳವು; 12 ಗಂಟೆಯಲ್ಲೇ ಆರೋಪಿಗಳನ್ನು ಹಿಡಿದ ಮಣಿಪಾಲ ಪೊಲೀಸರು….!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ನಗ ಕಳವು; 12 ಗಂಟೆಯಲ್ಲೇ ಆರೋಪಿಗಳನ್ನು ಹಿಡಿದ ಮಣಿಪಾಲ ಪೊಲೀಸರು….!

ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ನಗ ಕಳವು; 12 ಗಂಟೆಯಲ್ಲೇ ಆರೋಪಿಗಳನ್ನು ಹಿಡಿದ ಮಣಿಪಾಲ ಪೊಲೀಸರು....!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಏಪ್ರಿಲ್ 30 ಗುರುವಾರ)

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಏಪ್ರಿಲ್ 30 ಗುರುವಾರ)

30/04/2026
ಮಾಹೆ–ಟೆನ್ವಿಕ್ ಸ್ಪೋರ್ಟ್ಸ್ ಸಹಯೋಗಕ್ಕೆ ಚಾಲನೆ : ಕ್ರೀಡಾ ಶಿಕ್ಷಣ ಹಾಗೂ ಹೈ-ಪರ್ಫಾರ್ಮೆನ್ಸ್ ಸೆಂಟರ್‌ಗಳ ಲೋಕಾರ್ಪಣೆ..!

ಮಾಹೆ–ಟೆನ್ವಿಕ್ ಸ್ಪೋರ್ಟ್ಸ್ ಸಹಯೋಗಕ್ಕೆ ಚಾಲನೆ : ಕ್ರೀಡಾ ಶಿಕ್ಷಣ ಹಾಗೂ ಹೈ-ಪರ್ಫಾರ್ಮೆನ್ಸ್ ಸೆಂಟರ್‌ಗಳ ಲೋಕಾರ್ಪಣೆ..!

29/04/2026
ಕುಸಿದುಬಿದ್ದ ಅಪರಿಚಿತ ಸಾವು; ಸೂಚನೆ..!

ಕುಸಿದುಬಿದ್ದ ಅಪರಿಚಿತ ಸಾವು; ಸೂಚನೆ..!

29/04/2026
ನಿಟ್ಟೆಯಲ್ಲಿ ಬ್ರಹ್ಮಕುಮಾರೀಸ್ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ ಆರಂಭ..!!

ನಿಟ್ಟೆಯಲ್ಲಿ ಬ್ರಹ್ಮಕುಮಾರೀಸ್ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ ಆರಂಭ..!!

29/04/2026

Recent News

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಏಪ್ರಿಲ್ 30 ಗುರುವಾರ)

ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ(ಏಪ್ರಿಲ್ 30 ಗುರುವಾರ)

30/04/2026
ಮಾಹೆ–ಟೆನ್ವಿಕ್ ಸ್ಪೋರ್ಟ್ಸ್ ಸಹಯೋಗಕ್ಕೆ ಚಾಲನೆ : ಕ್ರೀಡಾ ಶಿಕ್ಷಣ ಹಾಗೂ ಹೈ-ಪರ್ಫಾರ್ಮೆನ್ಸ್ ಸೆಂಟರ್‌ಗಳ ಲೋಕಾರ್ಪಣೆ..!

ಮಾಹೆ–ಟೆನ್ವಿಕ್ ಸ್ಪೋರ್ಟ್ಸ್ ಸಹಯೋಗಕ್ಕೆ ಚಾಲನೆ : ಕ್ರೀಡಾ ಶಿಕ್ಷಣ ಹಾಗೂ ಹೈ-ಪರ್ಫಾರ್ಮೆನ್ಸ್ ಸೆಂಟರ್‌ಗಳ ಲೋಕಾರ್ಪಣೆ..!

29/04/2026
ಕುಸಿದುಬಿದ್ದ ಅಪರಿಚಿತ ಸಾವು; ಸೂಚನೆ..!

ಕುಸಿದುಬಿದ್ದ ಅಪರಿಚಿತ ಸಾವು; ಸೂಚನೆ..!

29/04/2026
ನಿಟ್ಟೆಯಲ್ಲಿ ಬ್ರಹ್ಮಕುಮಾರೀಸ್ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ ಆರಂಭ..!!

ನಿಟ್ಟೆಯಲ್ಲಿ ಬ್ರಹ್ಮಕುಮಾರೀಸ್ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ ಆರಂಭ..!!

29/04/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved