Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಆರೋಗ್ಯ

ಬೇಸಿಗೆ ಬಿಸಿಲಿಗೆ ನೈಸರ್ಗಿಕ ಪರಿಹಾರ: ಆರೋಗ್ಯಕ್ಕೆ ಅದ್ಭುತ ‘ಬಾರ್ಲಿ ನೀರು’….!

Dhrishya News by Dhrishya News
11/03/2026
in ಆರೋಗ್ಯ
0
ಬೇಸಿಗೆ ಬಿಸಿಲಿಗೆ ನೈಸರ್ಗಿಕ ಪರಿಹಾರ: ಆರೋಗ್ಯಕ್ಕೆ ಅದ್ಭುತ ‘ಬಾರ್ಲಿ ನೀರು’….!
0
SHARES
3
VIEWS
Share on FacebookShare on Twitter

ಮಾ. 11: ರಾಜ್ಯದಲ್ಲಿ ಬೇಸಿಗೆಯ ಬಿಸಿಲು ದಿನೇ ದಿನೇ ತೀವ್ರವಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದೆ. ಉರಿಯುವ ಬಿಸಿಲಿನಿಂದ ಜನರು ತೀವ್ರವಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನೂ ಮೇ ತಿಂಗಳು ಬಾರದಿದ್ದರೂ ಹವಾಮಾನ ಇಲಾಖೆ ಈಗಾಗಲೇ ಮುನ್ನೆಚ್ಚರಿಕೆ ನೀಡಿದ್ದು, ಮುಂದಿನ ದಿನಗಳಲ್ಲಿ ಸೂರ್ಯನ ತಾಪ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಈ ಸಂದರ್ಭದಲ್ಲಿ ಜನರಲ್ಲಿ ನಿರ್ಜಲೀಕರಣ (ಡಿಹೈಡ್ರೇಷನ್) ಹಾಗೂ ಸನ್‌ಬರ್ನ್‌ ಸಮಸ್ಯೆಗಳು ಹೆಚ್ಚುತ್ತಿರುವುದು ಕಂಡು ಬರುತ್ತಿದೆ. ಎಳನೀರು ಅಥವಾ ತಂಪು ಪಾನೀಯಗಳನ್ನು ಸೇವಿಸಿದರೂ ದಾಹ ಸಂಪೂರ್ಣವಾಗಿ ತಣಿಯದ ಪರಿಸ್ಥಿತಿ ಉಂಟಾಗಿದೆ. ಜೊತೆಗೆ ಕೃತಕ ಕೂಲ್‌ಡ್ರಿಂಕ್ಸ್‌ಗಳ ಅತಿಯಾದ ಸೇವನೆ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಆರೋಗ್ಯ ತಜ್ಞರು ಸರಳ ಹಾಗೂ ಪೌಷ್ಟಿಕ ಪಾನೀಯವಾಗಿ ಬಾರ್ಲಿ ನೀರನ್ನು ಸೇವಿಸುವಂತೆ ಸಲಹೆ ನೀಡುತ್ತಿದ್ದಾರೆ.

ಪೋಷಕಾಂಶಗಳ ಭಂಡಾರ ಬಾರ್ಲಿ

ಬಾರ್ಲಿ ಸಾಮಾನ್ಯ ಧಾನ್ಯವಷ್ಟೇ ಅಲ್ಲ, ಅನೇಕ ಆರೋಗ್ಯಕರ ಗುಣಗಳನ್ನು ಒಳಗೊಂಡಿರುವ ಆಹಾರ ಪದಾರ್ಥವಾಗಿದೆ. ಇದರಲ್ಲಿ ಕ್ಯಾಲ್ಸಿಯಂ, ನಾರಿನಾಂಶ, ಕಬ್ಬಿಣ, ಮೆಗ್ನೀಸಿಯಮ್, ಮ್ಯಾಂಗನೀಸ್, ಸತು, ತಾಮ್ರ ಸೇರಿದಂತೆ ವಿವಿಧ ವಿಟಮಿನ್‌ಗಳು ಸಮೃದ್ಧವಾಗಿವೆ. ಬಾರ್ಲಿ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದ್ದು, ತಕ್ಷಣ ಶಕ್ತಿ ನೀಡುವ ಗುಣವನ್ನೂ ಹೊಂದಿದೆ.

ಬಾರ್ಲಿ ನೀರಿನ ಪ್ರಮುಖ ಲಾಭಗಳು

ಹೃದಯ ಆರೋಗ್ಯಕ್ಕೆ ಸಹಕಾರಿ: ಬಾರ್ಲಿಯಲ್ಲಿ ಇರುವ ಬೀಟಾ-ಗ್ಲುಕನ್ ಎಂಬ ನಾರಿನಾಂಶ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ (LDL) ಪ್ರಮಾಣವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ.

ಜೀರ್ಣಕ್ರಿಯೆಗೆ ಸಹಾಯ: ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಅಸಿಡಿಟಿ, ಗ್ಯಾಸ್ಟ್ರಿಕ್, ಎದೆಯುರಿ ಹಾಗೂ ಮಲಬದ್ಧತೆ ಸಮಸ್ಯೆಗಳನ್ನು ನಿವಾರಿಸಲು ಬಾರ್ಲಿ ನೀರು ಸಹಕಾರಿ. ಇದು ಜೀರ್ಣಾಂಗವನ್ನು ಶುದ್ಧವಾಗಿರಿಸಲು ನೆರವಾಗುತ್ತದೆ.

ನಿರ್ಜಲೀಕರಣ ತಡೆ: ಬಿಸಿಲಿನ ತಾಪದಿಂದ ದೇಹದಲ್ಲಿನ ಎಲೆಕ್ಟ್ರೋಲೈಟ್ ಮಟ್ಟ ಕುಸಿಯುತ್ತದೆ. ಬಾರ್ಲಿಯಲ್ಲಿರುವ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಅಂಶಗಳು ದೇಹದಲ್ಲಿ ನೀರಿನ ಸಮತೋಲನವನ್ನು ಕಾಪಾಡಲು ನೆರವಾಗುತ್ತವೆ.

ಮಧುಮೇಹ ನಿಯಂತ್ರಣ: ಬಾರ್ಲಿ ನೀರು ರಕ್ತದಲ್ಲಿನ ಸಕ್ಕರೆ ಮಟ್ಟ ತಕ್ಷಣ ಏರಿಕೆಯಾಗದಂತೆ ನಿಯಂತ್ರಿಸಲು ಸಹಕಾರಿ.

ತೂಕ ನಿಯಂತ್ರಣ: ಬಾರ್ಲಿ ನೀರು ಕುಡಿಯುವುದರಿಂದ ಹೊಟ್ಟೆ ತುಂಬಿದ ಅನುಭವ ಉಂಟಾಗಿ ಪದೇ ಪದೇ ತಿನ್ನುವ ಅಭ್ಯಾಸ ಕಡಿಮೆಯಾಗುತ್ತದೆ. ಇದರಿಂದ ತೂಕ ಇಳಿಕೆಗೆ ಸಹಾಯವಾಗುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಳ: ಬಾರ್ಲಿಯಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ದೇಹದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿ ಸೋಂಕುಗಳ ವಿರುದ್ಧ ಹೋರಾಡಲು ನೆರವಾಗುತ್ತವೆ.

ಬಾರ್ಲಿ ನೀರು ತಯಾರಿಸುವ ವಿಧಾನ

ಮೊದಲು ಬಾರ್ಲಿ ಕಾಳುಗಳನ್ನು ಸ್ವಲ್ಪ ಹುರಿದು ಅಥವಾ ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಬೇಕು. ನಂತರ ಒಂದು ಪಾತ್ರೆ ನೀರಿಗೆ ಎರಡು ಚಮಚ ಬಾರ್ಲಿ ಪುಡಿ ಹಾಕಿ ಚೆನ್ನಾಗಿ ಕಲಸಿ ಕುದಿಸಬೇಕು. ಬಳಿಕ ಅದನ್ನು ಫಿಲ್ಟರ್ ಮಾಡಿ ತಣ್ಣಗಾಗಲು ಬಿಡಬೇಕು. ರುಚಿಗಾಗಿ ಸ್ವಲ್ಪ ಉಪ್ಪು ಮತ್ತು ಮಜ್ಜಿಗೆ ಸೇರಿಸಿ ಸೇವಿಸಬಹುದು.

ಬೇಸಿಗೆಯ ತೀವ್ರ ಬಿಸಿಲಿನಲ್ಲಿ ಕೃತಕ ಕೂಲ್‌ಡ್ರಿಂಕ್ಸ್‌ಗಳಿಗೆ ಮೊರೆ ಹೋಗುವುದಕ್ಕಿಂತ ಮನೆಯಲ್ಲೇ ತಯಾರಿಸಿದ ಈ ನೈಸರ್ಗಿಕ ಪಾನೀಯವನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವೆಂದು ತಜ್ಞರು ಸಲಹೆ ನೀಡಿದ್ದಾರೆ.

Previous Post

ಬಸ್ ನಿಲ್ದಾಣದಲ್ಲಿ ಕುಸಿದು ಬಿದ್ದ ವ್ಯಕ್ತಿ: ಸಮಾಜಸೇವಕರಿಂದ ಆಸ್ಪತ್ರೆಗೆ ದಾಖಲು..!

Next Post

ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ: ಉಳ್ಳಾಲದ ವ್ಯಕ್ತಿಗೆ 20 ವರ್ಷ ಕಠಿಣ ಸಜೆ…..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ: ಉಳ್ಳಾಲದ ವ್ಯಕ್ತಿಗೆ 20 ವರ್ಷ ಕಠಿಣ ಸಜೆ…..!

ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ: ಉಳ್ಳಾಲದ ವ್ಯಕ್ತಿಗೆ 20 ವರ್ಷ ಕಠಿಣ ಸಜೆ.....!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಬ್ರಹ್ಮಾವರ:ಅಯೋದ್ಯೆ ರಾಮ ಮಂದಿರ ಹುಂಡಿ ಕಳವು ವಿಷಯದಲ್ಲಿ ವಿಶ್ವಕರ್ಮ ಸಮಾಜಕ್ಕೆ ಜಾಲತಾಣದಲ್ಲಿ ಅವಹೇಳನ ಉಡುಪಿ ಎಸ್ ಪಿಗೆ ಮನವಿ…!

ಬ್ರಹ್ಮಾವರ:ಅಯೋದ್ಯೆ ರಾಮ ಮಂದಿರ ಹುಂಡಿ ಕಳವು ವಿಷಯದಲ್ಲಿ ವಿಶ್ವಕರ್ಮ ಸಮಾಜಕ್ಕೆ ಜಾಲತಾಣದಲ್ಲಿ ಅವಹೇಳನ ಉಡುಪಿ ಎಸ್ ಪಿಗೆ ಮನವಿ…!

31/07/2026
‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ₹11 ಲಕ್ಷ ವಂಚನೆ; ಪ್ರಕರಣ ದಾಖಲು

‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ₹11 ಲಕ್ಷ ವಂಚನೆ; ಪ್ರಕರಣ ದಾಖಲು

31/07/2026
ಉಡುಪಿ ಜಿಲ್ಲಾ ಬಿಜೆಪಿಯ ನೂತನ ಕಛೇರಿಯ ಕಟ್ಟಡ ಕಾಮಗಾರಿ ವೀಕ್ಷಿಸಿದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್..!

ಉಡುಪಿ ಜಿಲ್ಲಾ ಬಿಜೆಪಿಯ ನೂತನ ಕಛೇರಿಯ ಕಟ್ಟಡ ಕಾಮಗಾರಿ ವೀಕ್ಷಿಸಿದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್..!

31/07/2026
ಕನ್ನಡ ಚಿತ್ರನಟ ರಾಜೇಶ್ ನಟರಂಗ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ

ಕನ್ನಡ ಚಿತ್ರನಟ ರಾಜೇಶ್ ನಟರಂಗ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ

31/07/2026

Recent News