ಉಡುಪಿ,ಮಾ.11; ಕುಸಿದುಬಿದ್ದು ಗಾಯಾಳಾಗಿರುವ ಅಪರಿಚಿತ ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಿ, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ಬುಧವಾರ ನಡೆದಿದೆ.
ನಗರದ ನರ್ಮ್ ಬಸ್ಸು ನಿಲ್ದಾಣದಲ್ಲಿ ಗಾಯಾಳುವನ್ನು ಗಮನಿಸಿದ ದಯಾನಂದ ಕೋಟ್ಯಾನ್ ಎನ್ನುವರು ಒಳಕಾಡುವರ ಗಮನಕ್ಕೆ ತಂದಿದ್ದರು. ಗಾಯಾಳು ಕಾಪುವಿನ ಇಸ್ಮಾಯೀಲ್ ಆಲಿ ಮೊಹಮ್ಮದ್ ಶೇಖ್ (62ವ) ಎಂದು ತಿಳಿದುಬಂದಿದೆ. ವಾರಸುದಾರರು ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ







